ಬುದ್ಧಿವಂತ ಮಗು ಬೇಕೆಂದ್ರೆ ಗರ್ಭಿಣಿ ಏನು ಮಾಡ್ಬೇಕು? ರವಿಶಂಕರ್ ಗುರೂಜಿ ನೀಡಿದ್ದಾರೆ ಟಿಪ್ಸ್

By Roopa Hegde  |  First Published May 29, 2024, 12:07 PM IST

ಗರ್ಭಿಣಿಯರು ಸಾಕಷ್ಟು ವಿಷ್ಯಗಳನ್ನು ಗಮನದಲ್ಲಿಟ್ಟುಕೊಳ್ಬೇಕು. ಮಕ್ಕಳ ಆರೋಗ್ಯ, ಮಾನಸಿಕ ಬೆಳವಣಿಗೆಗೆ ಅವರು ಆದ್ಯತೆ ನೀಡ್ಬೇಕು. ಮಗು ಚುರುಕಾಗ್ಬೇಕು, ಗುಣವಂತರಾಗ್ಬೇಕು ಅಂದ್ರೆ ಗರ್ಭಿಣಿ ಏನು ಮಾಡ್ಬೇಕು ಎಂಬುದನ್ನು ರವಿಶಂಕರ್ ಗುರೂಜಿ ಹೇಳಿದ್ದಾರೆ. 
 


ಮಹಿಳೆಗೆ ಗರ್ಭಾವಸ್ಥೆ ಬಹಳ ವಿಶೇಷವಾಗಿರುತ್ತದೆ. ಒಂಬತ್ತು ತಿಂಗಳು ಮಹಿಳೆ ಎಚ್ಚರಿಕೆಯಿಂದ ಕೆಲಸ ಮಾಡ್ಬೇಕಾಗುತ್ತದೆ. ಗರ್ಭಾವಸ್ಥೆಯಲ್ಲಿ ಏನು ಮಾಡ್ಬೇಕು, ಏನು ಮಾಡ್ಬಾರದು ಎಂಬುದನ್ನು ಮಹಿಳೆ ತಿಳಿದಿರಬೇಕು. ಈ ಸಮಯದಲ್ಲಿ ಮಹಿಳೆ ಮಾಡುವ ಕೆಲವೊಂದು ತಪ್ಪು ಗರ್ಭಿಣಿ ಹಾಗೂ ಆಕೆ ಮಗುವಿನ ಮೇಲೆ ಪರಿಣಾಮ ಬೀರುತ್ತದೆ. ಗರ್ಭಾವಸ್ಥೆಯಲ್ಲಿ ತಾಯಿ ಮಾಡುವ ಕೆಲಸಗಳು ಹೊಟ್ಟೆಯಲ್ಲಿರುವ ಮಗುವಿನ ಮಾನಸಿಕ ಹಾಗೂ ದೈಹಿಕ ಆರೋಗ್ಯವನ್ನು ಹದಗೆಡಿಸುವ ಸಾಧ್ಯತೆ ಇರುತ್ತದೆ. ಮಗು ಬುದ್ಧಿವಂತನಾಗ್ಬೇಕು, ಗುಣವಂತನಾಗ್ಬೇಕು ಎಂದಾಗ ಗರ್ಭಿಣಿಯಾಗಿದ್ದಾಗ್ಲೇ ಕೆಲ ಕೆಲಸವನ್ನು ಅವಶ್ಯಕವಾಗಿ ಮಾಡ್ಬೇಕು. ಗರ್ಭಿಣಿಯರು ಖುಷಿಯಾಗಿರೋದು ಬಹಳ ಮುಖ್ಯ. ಅದಕ್ಕೆ ಏನು ಮಾಡ್ಬೇಕು ಎಂದು ಅನೇಕರು ಸಲಹೆ ನೀಡ್ತಾರೆ. ಈಗ ಶ್ರೀ ಶ್ರೀ ರವಿಶಂಕರ್ ಜಿ, ಗರ್ಭಿಣಿಯರು ಏನು ಮಾಡಬೇಕು ಅಥವಾ ಅವರು ಯಾವ ವಿಷಯಗಳನ್ನು ನೆನಪಿನಲ್ಲಿಟ್ಟುಕೊಳ್ಳಬೇಕು ಎಂಬ ಬಗ್ಗೆ ಸಲಹೆ ನೀಡಿದ್ದಾರೆ. ನೀವೂ ಗರ್ಭಿಣಿಯಾಗಿದ್ದು ಅಥವಾ ಗರ್ಭಧರಿಸುವ ಪ್ಲಾನ್ ನಲ್ಲಿದ್ದರೆ ರವಿಶಂಕರ್ ಗುರೂಜಿ ಹೇಳುವ ಸಲಹೆಯನ್ನು ಪಾಲಿಸಿ.

ಗರ್ಭಿಣಿ (Pregnant) ಯರು ಮಾಡ್ಬೇಕು ಈ ಕೆಲಸ : 

Latest Videos

ಸಂಗೀತ (Music) ಆಲಿಸಿ : ಗರ್ಭಿಣಿಯಾದವಳು ಮಧುರ ಸಂಗೀತವನ್ನು ಹೇಳಬೇಕು ಎಂದು ರವಿಶಂಕರ್ ಗುರೂಜಿ (Ravi Shankar Guruji) ಹೇಳುತ್ತಾರೆ. ವಾದ್ಯ, ಸಂಗೀತವನ್ನು ಅವರು ಆಲಿಸಬಹುದು. ರಾತ್ರಿ ಮಲಗುವ ಸಮಯದಲ್ಲಿ ನೀವು ಸುಮಧುರ ಸಂಗೀತವನ್ನು ಕೇಳಬಹುದು. ಯಾವುದೇ ಕಾರಣಕ್ಕೂ ಗರ್ಭಿಣಿಯರು ಕ್ರೂರ, ಭಯಹುಟ್ಟಿಸುವ, ಹಿಂಸೆಯಿಂದ ಕೂಡಿದ ಸಂಗೀತವನ್ನು ಕೇಳಬಾರದು, ದೃಶ್ಯವನ್ನು ನೋಡಬಾರದು. ನಿಮ್ಮನ್ನು ಹೆದರಿಸುವ ವಿಷ್ಯದಿಂದ ದೂರ ಇರಬೇಕು ಎಂದು ಗುರೂಜಿ ಹೇಳಿದ್ದಾರೆ. ಗರ್ಭಾವಸ್ಥೆಯಲ್ಲಿ ಸಂಗೀತವನ್ನು ಕೇಳುವುದು ಮಗುವಿನ ಮೆದುಳಿನ ಬೆಳವಣಿಗೆಯನ್ನು ಉತ್ತೇಜಿಸುತ್ತದೆ. ಇದರಿಂದ ಗರ್ಭಿಣಿಗೆ ನಿರಾಳವಾಗುತ್ತದೆ. ಮೂರನೇ ತ್ರೈಮಾಸಿಕದಲ್ಲಿ ಮಗುವಿಗೆ ಸಂಗೀತವನ್ನು ಚೆನ್ನಾಗಿ ಕೇಳಲು ಸಾಧ್ಯವಾಗುತ್ತದೆ. ಈ ಸಮಯದಲ್ಲಿ ನೀವು ಶಾಸ್ತ್ರೀಯ ಸಂಗೀತ, ಲಾಲಿ, ಮಧುರ ಸಂಗೀತ ಇತ್ಯಾದಿಗಳನ್ನು ಕೇಳಬಹುದು. ಇದರಿಂದ ನಿಮಗೆ ಆರಾಮ ಮತ್ತು ಸಂತೋಷ ಸಿಗುತ್ತದೆ. ನೀವು ಸಂತೋಷವಾಗಿದ್ರೆ ಮಗು ಕೂಡ ಸಂತೋಷವನ್ನು ಅನುಭವಿಸುತ್ತದೆ. 

PRACHI NIGAM: ಟ್ರೋಲರ್ ಬಾಯಿಗೆ ಆಹಾರವಾಗಿದ್ದ ಯುಪಿ ಟಾಪರ್ ಮೇಕೋವರ್‌ ವಿಡಿಯೋ ವೈರಲ್!

ಹಸಿರು ಬಣ್ಣಕ್ಕೆ ಆದ್ಯತೆ : ಸಾಂಪ್ರದಾಯಿಕ ದೇಶವಾದ ಭಾರತದಲ್ಲಿ ಗರ್ಭಿಣಿಯರು ಸದಾ ತಮ್ಮ ಬಳಿ ಹಸಿರು ಬಣ್ಣವನ್ನು ಇಟ್ಟುಕೊಳ್ಳಬೇಕು ಎನ್ನುತ್ತಾರೆ ರವಿಶಂಕರ್ ಗುರೂಜಿ. ಹಸಿರು ಬಣ್ಣವನ್ನು ನೋಡ್ತಿರಬೇಕು. ಅದೇ ಬಣ್ಣದ ಬಟ್ಟೆಯನ್ನು ಗರ್ಭಿಣಿಯರು ಧರಿಸಬೇಕು. ಹಸಿರು ಬಣ್ಣ ನಿಮಗೆ ಸಾಕಷ್ಟು ಪ್ರಯೋಜನವನ್ನು ನೀಡುತ್ತದೆ. ಒಂದಲ್ಲ ಒಂದು ರೂಪದಲ್ಲಿ ಹಸಿರು ಬಣ್ಣ ನಿಮ್ಮ ಕಣ್ಮುಂದೆ ಇರುವಂತೆ ನೋಡಿಕೊಳ್ಳಿ ಎಂದು ಗುರೂಜಿ ಹೇಳಿದ್ದಾರೆ.  

ರವಿಶಂಕರ್ ಗುರೂಜಿ ಪ್ರಕಾರ, ಗರ್ಭಾವಸ್ಥೆಯಲ್ಲಿ ಕೆಂಪು ಮತ್ತು ಬೂದು ಬಣ್ಣದ ಬಟ್ಟೆಯನ್ನು ಧರಿಸಬಾರದು. ಅದನ್ನು ಮಹಿಳೆಯರು ತಮ್ಮ ಸುತ್ತ ಇಟ್ಟುಕೊಳ್ಳಬಾರದು. ಈ ಬಣ್ಣಗಳು ನಮ್ಮ ಮೆದುಳಿನ ಮೇಲೆ ಪರಿಣಾಮ ಬೀರುತ್ತವೆ.

ಮಹಿಳೆಯನ್ನು ಮೂಡ್‌ಗೆ ತರಲು ಸಂಗಾತಿ ಮಾಡಬೇಕೇನು?

ಗರ್ಭಾವಸ್ಥೆ ಮೇಲೆ ಹಸಿರು ಬಣ್ಣದ ಪರಿಣಾಮ : ಗರ್ಭಾವಸ್ಥೆಯಲ್ಲಿ ಸಮತೋಲನ ಮುಖ್ಯವಾಗುತ್ತದೆ. ಹಸಿರು ಬಣ್ಣ ಭಾವನಾತ್ಮಕ ಸಮತೋಲನವನ್ನುಂಟು ಮಾಡುತ್ತದೆ. ಬಣ್ಣ ಚಿಕಿತ್ಸೆ ಪ್ರಕಾರ, ಹಸಿರು ಬಣ್ಣವು ಮಕ್ಕಳ ಜೊತೆ ಪ್ರೀತಿ ಸಂಬಂಧವನ್ನು ಹೊಂದಿದೆ. ಫಲವತ್ತತೆ, ಮಣ್ಣು, ಭೂಮಿಗೆ ಇದು ಸಂಬಂಧಿಸಿದೆ. ಅಲ್ಲದೆ ಹಸಿರು ಬಣ್ಣವು ಜನ್ಮದ ಸಂಕೇತ ಎನ್ನಲಾಗುತ್ತದೆ. ಹಸಿರು ಬಣ್ಣವು ಶಕ್ತಿ ಹಾಗೂ ಆರೋಗ್ಯದ ಜೊತೆ ನಂಟು ಹೊಂದಿದೆ. ಗರ್ಭಿಣಿ ಹಾಗೂ ಮಕ್ಕಳ ಮನಸ್ಸಿನಲ್ಲಿ ಧನಾತ್ಮಕತೆ ಬೆಳೆಯಬೇಕು, ಬುದ್ಧಿವಂತ ಮಗು ಜನಿಸಬೇಕು ಎನ್ನುವವರು ಹಸಿರು ಬಣ್ಣವನ್ನು ಹೆಚ್ಚಾಗಿ ಬಳಸಬೇಕು ಎಂದು ತಜ್ಞರು ಹೇಳುತ್ತಾರೆ.   

click me!