
ಉದ್ದ ಕೂದಲ ಹುಡುಗಿ ಬಗ್ಗೆ ಸಾಕಷ್ಟು ಹಾಡು, ಕವಿತೆಗಳು ಬಂದಿವೆ. ಇವತ್ತಿಗೂ ಎಷ್ಟೋ ಹುಡುಗರು ತಮ್ಮ ಕನಸಿನ ಕನ್ಯೆ ಬಗ್ಗೆ ಹೇಳುವಾಗ ತನಗೆ ಉದ್ದ ಕೂದಲಿನ ಹುಡುಗಿ ಕಂಡ್ರೆ ಭಾಳ ಇಷ್ಟ ಅನ್ನೋದನ್ನು ಕೇಳಿರಬಹುದು. ಆದರೆ ಉದ್ದ ಕೂದಲಿನ ಹುಡುಗಿಯರು ಈಗ ಕಾಣ ಸಿಗೋದು ಅಪರೂಪದಲ್ಲಿ ಅಪರೂಪ. ಇದಕ್ಕೆ ಕಾರಣ ಏನೇನೋ ಇವೆ. ಆದರೆ ಹೆಚ್ಚಿನವರ ಕೂದಲು ತುಂಬ ತೆಳುವಾಗಲು, ಗಿಡ್ಡವಾಗಲು ಅನೇಕ ಕಾರಣ ಇದೆ. ವೆಸ್ಟನ್ ಲೈಫ್‌ಸ್ಟೈಲ್ ಪ್ರಭಾವದಿಂದ ಎಷ್ಟೋ ಹುಡುಗೀರು ಕೂದಲಿಗೆ ಕತ್ರಿ ಹಾಕ್ತಾರೆ. ಅದನ್ನು ತಪ್ಪು ಅಂತೆಲ್ಲ ಹೇಳಕ್ಕಾಗಲ್ಲ. ಅವರ ಕೂದಲು ಅವರಿಷ್ಟ. ಆದರೆ ಭಾರತೀಯರಲ್ಲಿ ಉದ್ದದ ಕೂದಲಿದ್ದರೆ ಲಕ್ಷಣ ಎಂಬ ಮಾತಿದೆ. ಸೋ, ಉದ್ದದ ಕೂದಲು ಯಾಕೆ ಕಡಿಮೆ ಆಗ್ತಿದೆ ಅಂತ ನೋಡಿದ್ರೆ ಇದೊಂದು ಕಾರಣವನ್ನು ಮೊದಲಿಗೆ ನೋಟ್ ಮಾಡಬಹುದು. ಇದು ಹುಡುಗೀರು ಅವರಿಷ್ಟದಂತೆ ಮಾಡೋ ಹೇರ್ ಕಟಿಂಗ್.
ಆದರೆ ಎಷ್ಟೋ ಮಂದಿಯ ಕೂದಲು ಅವರ ಇಷ್ಟಕ್ಕೆ ವಿರುದ್ಧವಾಗಿ ಗಿಡ್ಡ ತೆಳು ಆಗಿರುತ್ತೆ. ಬದಲಾದ ಜೀವನಶೈಲಿಯಲ್ಲಿ ಕಳಪೆ ಆಹಾರ, ಅಧಿಕ ಒತ್ತಡದಿಂದಾಗಿ ಕೂದಲು ಉದುರುವಿಕೆ, ಅಕಾಲಿಕ ಬಿಳಿ ಕೂದಲಿನ ಸಮಸ್ಯೆ ಎಲ್ಲ ಕಂಡುಬರ್ತಿದೆ ಅಂತ ಸ್ಟಡಿ ಹೇಳುತ್ತೆ. ಕಳಪೆ ಜೀವನಶೈಲಿ, ಆಹಾರ ಪದ್ಧತಿ ಮತ್ತು ಮಾಲಿನ್ಯದಿಂದಾಗಿ ಕೂದಲು ಉದುರುವಿಕೆ, ಚಿಕ್ಕ ವಯಸ್ಸಿನಲ್ಲೇ ಕೂದಲು ಬೆಳ್ಳಗಾಗುವುದು, ಬೋಳು ತಲೆ ಸಮಸ್ಯೆಗಳು ಹೆಚ್ಚಾಗಿವೆ ಅಂತ ಈ ಅಧ್ಯಯನಗಳು ಹೇಳುತ್ತವೆ. ಕೂದಲುದುರುವಿಕೆ, ಬಿಳಿ ಕೂದಲು ಸೇರಿದಂತೆ ಕೂದಲಿನ ಸಮಸ್ಯೆಗಳಿಂದ ಪರಿಹಾರ ಪಡೆಯಲು ಕೂದಲಿನ ಆರೈಕೆ ಬಹಳ ಮುಖ್ಯ ಅಂತೆ. ಆದರೆ ಈಗಿನ ಹೆಣ್ಮಕ್ಕಳಿಗೆ ರೀಲ್ಸ್ ನೋಡೋದೆ ಲೈಫ್ ಆಗಿರುವಾಗ ಹೀಗೆಲ್ಲ ಆರೈಕೆ ಮಾಡೋಕೆ ಎಲ್ ಟೈಮಿರುತ್ತೆ ಹೇಳಿ ಅಂತ ಕೆಲವು ಹಿರಿಯರು ಗೊಣಗೋದು ನಿಮ್ಮ ಕಿವಿಗೂ ಬಿದ್ದಿರಬಹುದು. ಆದರೆ ಇಲ್ಲೊಬ್ಬ ಹುಡುಗಿ ಇದ್ದಾಳೆ. ಅವಳ ಕೂದಲು ಸಾಕಷ್ಟು ದಪ್ಪ ಇದೆ, ಅವಳಿಗಿಂತಲೂ ಉದ್ದ ಇದೆ. ಹಾಗಂತ ಈ ಹುಡುಗೀನೇ ಗಿಡ್ಡ ಇರಬಹುದು ಅಂದರೆ ನಿಮ್ಮ ಊಹೆ ತಪ್ಪು. ಹುಡುಗಿ ಸಾಕಷ್ಟು ಉದ್ದ ಇದ್ದಾಳೆ, ನೋಡೋದಕ್ಕೂ ಸಖತ್ತಾಗಿದ್ದಾಳೆ. ಹಾಗಂತ ಪಡ್ಡೆಗಳು ಆಕೆ ಹಿಂದೆ ಬೀಳೋ ಹಾಗಿಲ್ಲ. ಅದಕ್ಕೆ ಕಾರಣ ಇದೆ.
ಇನ್ನೊಂದು ವಿಷ್ಯ ಅಂದರೆ ನಮ್ಮ ಕೂದಲು ನೈಸರ್ಗಿಕವಾಗಿ ದಿನಕ್ಕೆ 0.35 ಮಿಲಿಮೀಟರ್ ಬೆಳೆಯುತ್ತದೆ. ಇದು ವರ್ಷಕ್ಕೆ ಒಟ್ಟು 6 ಇಂಚುಗಳಷ್ಟು ಬೆಳೆಯುತ್ತದೆ. ಬಹುತೇಕ ಜನರು ಆಗಾಗ ಕೂದಲು ಕಟ್ ಮಾಡಿಸುತ್ತಾರೆ ಅಥವಾ ಟ್ರಿಮ್ ಮಾಡಿಸುತ್ತಾರೆ. ಆದರೂ ಸಹ ನಿಮ್ಮ ಕೂದಲು ವೇಗವಾಗಿ ಬೆಳೆಯುತ್ತದೆ. ಕೂದಲು ತೆಳುವಾಗಿದೆ ಎಂದೋ, ಕವಲೊಡೆದಿದೆ ಎಂದೋ ಕೂದಲು ಕಟ್ ಮಾಡಿಸಿದರೂ ಕೂಡ ಉದ್ದನೆಯ ಕೂದಲು ಎಲ್ಲರಿಗೂ ಇಷ್ಟ. ಈ ಹುಡುಗಿಗಂತೂ ತುಂಬ ಇಷ್ಟವಂತೆ. ಹೀಗಾಗಿ ಕೂದಲು ಉದ್ದ ಬಿಟ್ಟಿದ್ದಾಳೆ. ಅವಳ ಕೂದಲು ಸೋಷಲ್ ಮೀಡಿಯಾದಲ್ಲಿ ಸಖತ್ ಟ್ರೆಂಡಿಂಗ್ ಆಗಿದೆ.
ಶ್ರೀದೇವಿಯನ್ನು ಬಯಸಿದ್ದರು ಈ ಮೂರು ಪುರುಷರು; ಅವರಲ್ಲೊಬ್ಬರ ಕಥೆ ಏನಾಯ್ತು?
ಅಷ್ಟೇ ಆಗಿದ್ದರೆ ಪರವಾಗಿರ್ತಿರಲಿಲ್ಲ. ಆದರೆ ಒಂದಿಷ್ಟು ರೂಮರ್ಸ್ ಹಬ್ಬಿದೆ. ಅದು ಮಜವಾಗಿದೆ. ಏನಂದರೆ ಈ ಹುಡುಗಿಗೆ ಒಬ್ಬ ಬಾಯ್ ಫ್ರೆಂಡ್ ಇದ್ದಾನಂತೆ. ಎಷ್ಟೋ ಸಲ ಆಕೆ ಜೊತೆ ಆತ ಇದ್ದಾಗ ಮನೆಮಂದಿಗೆ ಗೊತ್ತಾಗದ ಹಾಗೆ ಕೂದಲಲ್ಲೇ ಅವನನ್ನು ಬಚ್ಚಿಟ್ಕೊಳ್ತಾಳೆ ಅನ್ನೋ ಮಾತು. ಆದರೆ ಇದು ಮಾತಷ್ಟೇ, ಈ ಹುಡುಗಿಯೇ ಹೇಳಿರೋ ಪ್ರಕಾರ ಅವಳಿಗಿನ್ನೂ ಯಾರೂ ಬಾಯ್ ಫ್ರೆಂಡ್ ಇಲ್ವಂತೆ. ಸೋ, ಇಂಥಾ ಮನೆಹಾಳ್ ಕೆಲ್ಸಕ್ಕೆಲ್ಲ ಕೈ ಹಾಕೋ ಸೀನೇ ಇಲ್ಲ ಅಂತಿದ್ದಾಳೆ ಈ ನೀಳಕೇಶ ಸುಂದರಿ.
ಗರ್ಲ್‌ಫ್ರೆಂಡ್ ಗೌರಿ ಕೈ ಹಿಡಿದು ಮೊದಲ ಬಾರಿಗೆ ಎಲ್ಲರೆದುರು ಬಂದ ಆಮೀರ್ ಖಾನ್!
ಅಷ್ಟಕ್ಕೂ ಈಕೆ ಯಾರು? ನಿಜಕ್ಕೂ ಅವಳಿಗೆ ಇಷ್ಟುದ್ದ ಕೂದಲಿದೆಯಾ ಅಥವಾ ಎಐ ಮೂಲಕ ಹೀಗೆ ಕೂದಲಿರುವ ಹಾಗೆ ತೋರಿಸಿದ್ದಾರ ಅನ್ನೋ ಪ್ರಶ್ನೆಗಳಿಗೆ ಸದ್ಯ ಉತ್ತರ ಇಲ್ಲ.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.