46ರ ವಯಸ್ಸಿನಲ್ಲಿ 3 ಹೆಣ್ಣು ಮಕ್ಕಳಿಗೆ ಜನ್ಮ ನೀಡಿದ ಮಹಿಳೆ!

Published : Apr 11, 2025, 07:07 PM ISTUpdated : Apr 11, 2025, 07:16 PM IST
46ರ ವಯಸ್ಸಿನಲ್ಲಿ 3 ಹೆಣ್ಣು ಮಕ್ಕಳಿಗೆ ಜನ್ಮ ನೀಡಿದ ಮಹಿಳೆ!

ಸಾರಾಂಶ

ದೆಹಲಿ ವಿಶ್ವವಿದ್ಯಾಲಯದ 46 ವರ್ಷದ ಪ್ರಾಧ್ಯಾಪಕಿ, ಮಧುಮೇಹದಿಂದ ಬಳಲುತ್ತಿದ್ದರೂ ಐವಿಎಫ್ ಮೂಲಕ ಗರ್ಭಿಣಿಯಾದರು. 25 ವಾರಗಳಲ್ಲಿ ಮೂವರು ಹೆಣ್ಣು ಮಕ್ಕಳಿಗೆ ಜನ್ಮ ನೀಡಿದರು. ಮಕ್ಕಳು ಕಡಿಮೆ ತೂಕ ಹೊಂದಿದ್ದರು. ವೈದ್ಯರ ಪ್ರಯತ್ನದಿಂದ 225 ದಿನಗಳ NICU ಆರೈಕೆಯ ನಂತರ ಮಕ್ಕಳು ಗುಣಮುಖರಾಗಿ ಮನೆಗೆ ಮರಳಿದ್ದಾರೆ. ಮಹಿಳೆಯರು ಸೂಕ್ತ ವಯಸ್ಸಿನಲ್ಲಿ ಮಕ್ಕಳನ್ನು ಪಡೆಯುವುದು ಉತ್ತಮ ಎಂದು ವೈದ್ಯರು ಸಲಹೆ ನೀಡಿದ್ದಾರೆ.

ಭಾರತದಲ್ಲಿ ಮೊದಲ ಬಾರಿಗೆ 46 ವರ್ಷದ ವಯಸ್ಸಾದ ಮತ್ತು ಹೆಚ್ಚು ಅಪಾಯಕಾರಿ ಎಂದು ಪರಿಗಣಿಸಲ್ಪಟ್ಟ ಮಹಿಳೆಯೊಬ್ಬರು ನಿಗದಿತ ಸಮಯಕ್ಕಿಂತ (ಪ್ರಸವ ಪೂರ್ವ) ಮುಂಚಿತವಾಗಿ ಹೆರಿಗೆಯಾಗಿದ್ದು, 3 ಹೆಣ್ಣು ಮಕ್ಕಳಿಗೆ ಜನ್ಮ ನೀಡಿದ್ದಾರೆ. ಆದರೆ, ಜನನದ ಸಮಯದಲ್ಲಿ ಮಹಿಳೆಯ ಸ್ಥಿತಿ ತುಂಬಾ ಗಂಭೀರವಾಗಿತ್ತು. ಇದೀಗ 6 ತಿಂಗಳಿಗೆ ಹುಟ್ಟಿದ ಮೂವರು ಮಕ್ಕಳನ್ನು 225 ದಿನಗಳ ಎನ್‌ಐಸಿಯುನಲ್ಲಿ ಇಟ್ಟು ಪೋಷಣೆ ಮಾಡಿ ಆರೋಗ್ಯವಂತ ಮಕ್ಕಳನ್ನಾಗಿ ಮಾಡಿ ಆಸ್ಪತ್ರೆಯಿಂದ ಡಿಶ್ಚಾರ್ಜ್ ಮಾಡಲಾಗಿದೆ.

ಸರಿಯಾದ ವಯಸ್ಸಿನಲ್ಲಿ ಮದುವೆ ಮಾಡಿಕೊಂಡು, ಮಕ್ಕಳು ಮಾಡಿಕೊಳ್ಳುವುದಿದ್ದರೆ ಸರಿಯಾದ ವಯಸ್ಸಿನಲ್ಲಿಯೇ ಮಕ್ಕಳು ಮಾಡಿಕೊಂಡುಬಿಡಬೇಕು. ಇಲ್ಲವಾದರಲ್ಲಿ ದೈಹಿಕ ಸ್ಥಿತಿ ಹಾಗೂ ಮಾನಸಿಕ ಸ್ಥಿತಿ ಮಕ್ಕಳನ್ನು ಹೆರುವ ಸಾಮರ್ಥ್ಯವನ್ನು ಕಳೆದುಕೊಂಡ ನಂತರ ಮಕ್ಕಳು ಮಾಡಿಕೊಳ್ಳುವುದಕ್ಕೆ ಮುಂದಾದಲ್ಲಿ ದೊಡ್ಡ ಅನಾಹುತಗಳೇ ಸಂಭವಿಸುಯತ್ತದೆ. ಅವುಗಳಲ್ಲಿ ಗರ್ಭ ನಿಲ್ಲದಿರುವುದು, ಪ್ರಸವಪೂರ್ವ ಹೆರಿಗೆ, ತಾಯಿ ಸಾವು, ಮಕ್ಕಳ ಸಾವು, ಮಕ್ಕಳ ಅಂಗವಿಕಲತೆ ಹಾಗೂ ಅನಾರೋಗ್ಯವಂತ ಮಕ್ಕಳು ಜನಿಸುತ್ತಾರೆ. ಈ ಘಟನೆಯಲ್ಲಿಯೂ ಒಬ್ಬ ಮಹಿಳೆ ತನ್ನ 46ನೇ ವಯಸ್ಸಿಗೆ ಮಕ್ಕಳನ್ನು ಮಾಡಿಕೊಳ್ಳಲು ಮುಂದಾಗಿದ್ದು, ಇವರಿಗೂ ಪ್ರಸವಪೂರ್ವ ಹೆರಿಗೆ ಆಗಿದ್ದು, ಪ್ರಜ್ಞೆಯೇ ಇಲ್ಲದೆ 225 ದಿನಗಳ ಕಾಲ ಚಿಕಿತ್ಸೆ ಪಡೆದು ಇದೀಗ ವೈದ್ಯರ ನಿರಂತರ ಚಿಕಿತ್ಸೆಯ ಫಲವಾಗಿ ಚೇತರಿಕೆ ಕಾಣಿಸಿಕೊಂಡಿದ್ದಾರೆ. ಇದೀಗ ಮಹಿಳೆ ಮಕ್ಕಳಿಗೆ ಜನ್ಮ ನೀಡುವ ಅವಧಿ 30ಕ್ಕಿಂತ ಮೊದಲೇ ಆಗಿರಬೇಕು ಎಂಬುದನ್ನು ಹೇಳಿಕೊಂಡಿದ್ದಾರೆ.

25 ವಾರಗಳ ಗರ್ಭಾವಸ್ಥೆಯಲ್ಲಿ 3 ಹೆಣ್ಣು ಮಕ್ಕಳಿಗೆ ಜನ್ಮ: 
ದೆಹಲಿ ವಿಶ್ವವಿದ್ಯಾಲಯದ 46 ವರ್ಷದ ಪ್ರಾಧ್ಯಾಪಕಿ ಜ್ಯೋತ್ಸ್ನಾ ಅವರ ಜೀವನದಲ್ಲಿ ಈ ಗರ್ಭಧಾರಣೆ ಕೊನೆಯ ಭರವಸೆಯಾಗಿತ್ತು. ಹಲವು ವರ್ಷಗಳಿಂದ ಸಾಂಪ್ರದಾಯಿಕ ಪದ್ದತಿಯಲ್ಲಿ ಮಕ್ಕಳನ್ನು ಮಾಡಿಕೊಳ್ಳುವುದಕ್ಕೆ ಪ್ರಯತ್ನಿಸಿದರೂ ಫಲಿಸದ ಹಿನ್ನೆಲೆಯಲ್ಲಿ, ಕೊನೆಗೆ ಅವರು ಐವಿಎಫ್ ಸಹಾಯದಿಂದ ತಾಯಿಯಾದರು. ಮಹಿಳೆ ಈಗಾಗಲೇ ಮಧುಮೇಹ ಮತ್ತು ಅಧಿಕ ರಕ್ತದೊತ್ತಡದಂತಹ ಗಂಭೀರ ಕಾಯಿಲೆಗಳಿಂದ ಬಳಲುತ್ತಿದ್ದರು. ಇದರ ಜೊತೆಗೆ, ಗರ್ಭಧಾರಣೆಯ ಕೊನೆಯ ತಿಂಗಳಲ್ಲಿ ಜ್ಯೋತ್ಸ್ನಾ ಅವರ ಆರೋಗ್ಯ ಹದಗೆಟ್ಟಿತು. ಮಹಿಳೆಯ ಸ್ಥಿತಿ ಎಷ್ಟು ಗಂಭೀರವಾಯಿತೆಂದರೆ ಅವರನ್ನು ಐಸಿಯುಗೆ ದಾಖಲಿಸಬೇಕಾಯಿತು. ಅಂತಿಮವಾಗಿ, ಕೇವಲ 25 ವಾರಗಳ (6.3 ತಿಂಗಳು) ಗರ್ಭಾವಸ್ಥೆಯಲ್ಲಿ, ತುರ್ತು ಸಿ-ಸೆಕ್ಷನ್ ಶಸ್ತ್ರಚಿಕಿತ್ಸೆಯ ಮೂಲಕ ಅವರು ಮೂರು ಹೆಣ್ಣುಮಕ್ಕಳಿಗೆ ಜನ್ಮ ನೀಡಿದರು.

ಇದನ್ನೂ ಓದಿ: ಮುಖ ಚಿನ್ನದಂತೆ ಹೊಳೆಯಲು ಮಲಗೋ ವೇಳೆ ಎರಡೇ ಹನಿ ಇದನ್ನ ಹಚ್ಚಿ!

ಹುಟ್ಟುವಾಗ 3 ಮಕ್ಕಳು ಸೇರಿ ಕೇವಲ 2.5 ಕೆಜಿ ತೂಕ:
ಈ ಮೂವರು ಹೆಣ್ಣು ಮಕ್ಕಳ ಒಟ್ಟು ತೂಕ 2.5 ಕೆಜಿ ಇತ್ತು. ಅಂದರೆ, ಸಾಮಾನ್ಯವಾಗಿ ಒಂದು ಮಗು 2.5 ಕೆಜಿ ಇದ್ದರೆ ಕನಿಷ್ಠ ಆರೋಗ್ಯವಂತ ಮಗು ಎಂದು ಪರಿಗಣಿಸಲಾಗುತ್ತದೆ. ಆದರೆ, ಈ ಮಹಿಳೆಯ ಮೂವರು ಮಕ್ಕಳು ಸೇರಿ 2.5 ಕೆಜಿ ಇದ್ದರು. ಅಂದರೆ ತಲಾ ಒಂದೊಂದು ಮಗು 800 ಗ್ರಾಂನಿಂದ 900 ಗ್ರಾಂ ಇದ್ದವು. ಇದು ವೈದ್ಯಕೀಯವಾಗಿ ತುಂಬಾ ಕಡಿಮೆ ತೂಕ ಹೊಂದಿದ ಮಕ್ಕಳಾಗಿದ್ದಾರೆ. ಸಾಮಾನ್ಯವಾಗಿ, ಕಡಿಮೆ ತೂಕದ ಮತ್ತು ಅಕಾಲಿಕ ಅವಧಿಗೆ ಜನಿಸಿದ ಮಕ್ಕಳಿಗೆ ವೆಂಟಿಲೇಟರ್‌ನಲ್ಲಿ ಇಟ್ಟು, ಪದೇ ಪದೇ ಪ್ರತಿಜೀವಕಗಳು ಮತ್ತು ದೀರ್ಘಕಾಲದ ಔಷಧಿಗಳ ನೀಡಬೇಕಾಗುತ್ತದೆ. 

ಆದರೆ ಈ ಮಹಿಳೆಯ ವಿಚಾರದಲ್ಲಿ ಪರಿಸ್ಥಿತಿಗಳು ಭಿನ್ನವಾಗಿದ್ದವು. ಫರಿದಾಬಾದ್‌ನ ಅಮೃತಾ ಆಸ್ಪತ್ರೆಯಲ್ಲಿ ಡಾ. ಹೇಮಂತ್ ಶರ್ಮಾ ಅವರ ನೇತೃತ್ವದಲ್ಲಿ ಎನ್‌ಐಸಿಯು ತಂಡವು ಈ ನವಜಾತ ಶಿಶುಗಳ ಆರೈಕೆಯಲ್ಲಿ ವೈದ್ಯಕೀಯ ಜಗತ್ತಿಗೆ ಮಾತ್ರವಲ್ಲದೆ ಇಡೀ ಜಗತ್ತಿಗೆ ಹೊಸ ಉದಾಹರಣೆಯಾಯಿತು. ಜನನದ ಕೇವಲ 9 ಗಂಟೆಗಳಲ್ಲಿ ಅವರಿಗೆ ಹಾಲುಣಿಸಲು ಪ್ರಾರಂಭಿಸಲಾಯಿತು. ನಂತರ ಮಕ್ಕಳನ್ನು ಎನ್‌ಐಸಿಯುನಲ್ಲಿ 225 ದಿನಗಳ ಕಾಲ ಇರಿಸಿ ಮಕ್ಕಳನ್ನು ಪೋಷಣೆ ಮಾಡಲಾಯಿತು. ಮೂವರು ಹೆಣ್ಣುಮಕ್ಕಳಿಗೆ ಯಾವುದೇ ಕಾಯಿಲೆ ಅಥವಾ ಸೋಂಕು ತಗುಲಿಲ್ಲ ಮತ್ತು ಈಗ ಅವರು ಸಂಪೂರ್ಣವಾಗಿ ಗುಣಮುಖರಾಗಿ ಮನೆಗೆ ಮರಳಿದ್ದಾರೆ. ತಾಯಿ ಗರ್ಭದಲ್ಲಿ ಮಕ್ಕಳಿಗೆ ಇರುವಂತಹ ವ್ಯವಸ್ಥೆಯನ್ನು ಎನ್‌ಐಸಿಯುನಲ್ಲಿ ಒದಗಿಸಲಾಯಿತು ಎಂದು ಹೇಳಲಾಗುತ್ತಿದೆ.

ಇದನ್ನೂ ಓದಿ: ಈ ಭಂಗಿಯಲ್ಲಿ ದೈಹಿಕ ಸಂಬಂಧ ಬೆಳೆಸಿದರೆ ಮಹಿಳೆಯರಿಗೆ ಬರುತ್ತಂತೆ ಕ್ಯಾನ್ಸರ್

PREV

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಸ್ವೀಟ್ ಬಾಕ್ಸ್‌ಗೆ ಇರುವೆ ಮುತ್ತಿಕೊಂಡ್ರೆ ಓಡಿಸಲು ಇಲ್ಲಿದೆ ಸಿಂಪಲ್ ಟ್ರಿಕ್ಸ್
ಎಸ್‌ಟಿಡಿ ಟೆಸ್ಟ್ ಮಾಡುವಂತೆ ಪದೇ ಪದೇ ಪೀಡಿಸುತ್ತಿದ್ದ ಗರ್ಲ್‌ಫ್ರೆಂಡ್‌ ಕತೆ ಮುಗಿಸಿದ ವಿದ್ಯಾರ್ಥಿ