
ಈಗ ಹೈಸ್ಕೂಲ್ ನಲ್ಲೇ ಪ್ರೀತಿ ಚಿಗುರುತ್ತೆ. ಹದಿಹರೆಯಕ್ಕೆ ಬರುವ ಮೊದಲೇ ಒಂದೋ ಎರಡೇ ಬಾಯ್ ಫ್ರೆಂಡ್, ಗರ್ಲ್ ಫ್ರೆಂಡ್ ಹೊಂದಿರುವ ಯುವಕರಿದ್ದಾರೆ. ವಯಸ್ಸು 20ರ ಮೇಲಾಗಿದೆ ಅಂದ್ರೆ ಅವರು ಸಿಂಗಲ್ ಆಗಿರೋದು ಬಹಳ ಅಪರೂಪ. ನಮ್ಮ ದೇಶದ ರಸ್ತೆ, ಪಾರ್ಕ್, ಸಾರ್ವಜನಿಕ ಪ್ರದೇಶದಲ್ಲಿ ನಾವು ಕೈ ಕೈ ಹಿಡಿದು ಸುತ್ತಾಡುವ ಯುವಕ – ಯುವತಿಯರನ್ನು ನೋಡ್ಬಹುದು. ವಿದೇಶಗಳಲ್ಲಂತೂ ಇದು ಮಾಮೂಲಿ. ಬಹುತೇಕ ಹುಡುಗ – ಹುಡುಗಿ ಬಾಯ್ ಫ್ರೆಂಡ್, ಗರ್ಲ್ ಫ್ರೆಂಡ್ ಹೊಂದಿರುತ್ತಾರೆ. ಪ್ರೀತಿಯಲ್ಲಿರುತ್ತಾರೆ. ಕೆಲವರು ಬಟ್ಟೆ ಬದಲಿಸಿದಂತೆ ಪ್ರೇಮಿಗಳನ್ನು ಬದಲಿಸೋದಿದೆ. ಹಾಗಂತ ಎಲ್ಲರಿಗೂ ಇದೆಲ್ಲ ಸಾಧ್ಯವಿಲ್ಲ. ಕೆಲವರು ಹರೆಯ, ಯೌವ್ವನ ಮುಗಿದ್ರೂ ಒಂದೇ ಒಂದು ಸಂಗಾತಿ ಹೊಂದಲು ಸಾಧ್ಯವಾಗೋದಿಲ್ಲ.
ಕೆಲವೊಮ್ಮೆ ಬಾಲ್ಯ (Childhood) ದಲ್ಲಿ ನಡೆದ ಘಟನೆ ಜೀವನ (Life) ಪರ್ಯಂತೆ ಜೊತೆಗೆ ಬರುತ್ತೆ. ಇದ್ರಿಂದ ಎಲ್ಲರಂತೆ, ಮಾಮೂಲಿ ಜೀವನ ನಡೆಸಲು ಅನೇಕರಿಗೆ ಸಾಧ್ಯವಾಗೋದಿಲ್ಲ. ಈ ಮಹಿಳೆ ಸ್ಥಿತಿ ಕೂಡ ಅದೇ ಆಗಿದೆ. ತನ್ನ 35ನೇ ವಯಸ್ಸಿನಲ್ಲೂ ಈಕೆ ವರ್ಜಿನ್ ಆಗಿದ್ದಾಳೆ. ಹುಡುಗ್ರನ್ನು ನೋಡಿದ್ರೆ ದೂರ ಹೋಗುವ ಹುಡುಗಿ ಇದಕ್ಕೆ ಕಾರಣವೇನು ಎಂಬುದನ್ನು ಹೇಳಿದ್ದಾಳೆ.
ಆಸ್ಪತ್ರೆ ಬೆಡ್ಡಲ್ಲಿದ್ದೇ ಲಕ್ಷಾಂತರ ಗಳಿಸಿದ ಕ್ಯಾನ್ಸರ್ ಪೀಡಿತೆ!
ಮದುವೆಯಾಗಲು ಈಗ ಅನ್ಯಾ ಸಿದ್ಧ : ಈ ಮಹಿಳೆಯ ಹೆಸರು ಅನ್ಯಾ ಪಾಂಚಾಲ್. ಆಕೆಗೆ 35 ವರ್ಷ ವಯಸ್ಸು. ಆಕೆ ಈಗ್ಲೂ ಸಿಂಗಲ್. ಪುರುಷರೊಂದಿಗೆ ಮಾತನಾಡಲು ಮತ್ತು ಅವರನ್ನು ಭೇಟಿಯಾಗಲು ಅನ್ಯಾ ಪಾಂಚಾಲ್ ಗೆ ಭಯವಂತೆ. ಪುರುಷರನ್ನು ಕಂಡ್ರೆ ಕೈ- ಕಾಲು ನಡುಗುತ್ತೆ. ಹಾಗಾಗಿ ನಾನು ಈವರೆಗೂ ಒಬ್ಬ ಪುರುಷನ ಬಳಿ ಹೋಗಿಲ್ಲ ಎನ್ನುತ್ತಾಳೆ ಅನ್ಯಾ ಪಾಂಚಾಲ್.
ಅನ್ಯಾ ಪಾಂಚಾಲ್ ಯಾವುದೇ ಸಂಬಂಧವನ್ನು ಹೊಂದಿಲ್ಲ. ಯಾರನ್ನೂ ಚುಂಬಿಸಿಲ್ಲ ಅಥವಾ ತಬ್ಬಿಕೊಂಡಿಲ್ಲ. ಅನ್ಯಾ ತನ್ನ ಹೆತ್ತವರೊಂದಿಗೆ ವಾಸಿಸುತ್ತಾಳೆ. ಆಕೆಗೆ ಸಾಮಾಜಿಕ ಭಯವಿದೆ. ಅವಳು ಪುರುಷರೊಂದಿಗೆ ಮಾತನಾಡಲು, ಅವರನ್ನು ಭೇಟಿ ಮಾಡಲು, ಅವರೊಂದಿಗೆ ವಾಸಿಸಲು ಅಥವಾ ಸಂಬಂಧವನ್ನು ಪಡೆಯಲು ಹೆದರುತ್ತಾಳೆ. ನನಗೆ ಮಾತನಾಡೋಕೂ ಭಯ ಎನ್ನುತ್ತಾಳೆ ಅನ್ಯಾ : ಪುರುಷರ ಜೊತೆ ಡೇಟಿಂಗ್ ಹೋಗೋದು, ಚುಂಬಿಸೋದು ಇರಲಿ ನನಗೆ ಅವರ ಜೊತೆ ಮಾತನಾಡಲೂ ಭಯ ಎನ್ನುತ್ತಾಳೆ ಅನ್ಯಾ. ನನಗೆ ಈ ವಿಷ್ಯದಲ್ಲಿ ಆತ್ಮವಿಶ್ವಾಸ ಕಡಿಮೆ ಇದೆ. ನನ್ನೆಲ್ಲ ಸ್ನೇಹಿತರು ಮದುವೆಯಾಗಿದ್ದಾರೆ, ಅವರಿಗೆ ಮಕ್ಕಳಿವೆ. ಆದ್ರೆ ನಾನು ಇನ್ನೂ ಕನ್ಯೆ. ಸಿನಿಮಾಗಳಲ್ಲಿ ನೋಡುವಂತೆ ನಾನು ಯಾರಿಗೂ ಮುತ್ತಿಟ್ಟಿಲ್ಲ. ನನ್ನ ತಂದೆ – ತಾಯಿಗೆ ಮದುವೆಯಾಗಿ 40 ವರ್ಷ ಕಳೆದಿದೆ. ಅವರು ನನ್ನಿಷ್ಟದ ವ್ಯಕ್ತಿ ಜೊತೆ ನಾನು ಜೀವನ ನಡೆಸಲಿ ಎಂದು ಬಯಸ್ತಿದ್ದಾರೆ ಎನ್ನುತ್ತಾಳೆ ಅನ್ಯಾ.
ರಾತ್ರಿ ಮಲಗೋ ಮೊದಲು ಈ ಕೆಲಸ ಮಾಡಿದ್ರೆ ರೋಗವೆಲ್ಲ ಹತ್ತಿರವೂ ಬರೋಲ್ಲ
ದೈಹಿಕ ಸಂಬಂಧಕ್ಕಿಂತ ಭಾವನಾತ್ಮಕ ಸಂಬಂಧಕ್ಕೆ (Emotional Relationship) ಬೆಲೆ ನೀಡುವ ವ್ಯಕ್ತಿಯನ್ನು ಅನ್ಯಾ ಬಯಸ್ತಿದ್ದಾಳೆ. ಅನ್ಯಾಗೆ ಡೇಟ್ ಗೆ ಹೋಗ್ಬೇಕು ಅಂದ್ರೆ ಭಯ ಶುರುವಾಗುತ್ತದೆ. ಬಾಲ್ಯದಲ್ಲಿ ನಡೆದ ಘಟನೆ ಇದಕ್ಕೆ ಕಾರಣವೆಂದು ಅನ್ಯಾ ಹೇಳಿದ್ದಾಳೆ. ಬಾಲ್ಯದಲ್ಲಿ ನಡೆದ ಹಿಂಸೆಯನ್ನು ಆಕೆ ಮರೆಯಲು ಆಗ್ತಿಲ್ಲ. ಪಬ್ ನಲ್ಲಿ ಡಾನ್ಸ್ ಮಾಡೋ ಬದಲು ಮನೆಯಲ್ಲಿ ಹಲ್ವಾ ತಿನ್ನೋದು ಬೆಸ್ಟ್ ಎಂಬುದನ್ನು ನಾನು ಕಂಡುಕೊಂಡೆ. ನಂತ್ರ ಅದೇ ನನ್ನ ಜೀವನವಾಯ್ತು ಎನ್ನುತ್ತಾಳೆ ಅನ್ಯಾ. ತನ್ನ 16ನೇ ವಯಸ್ಸಿನಿಂದಲೇ ಅನ್ಯಾಗೆ ಸೋಶಿಯಲ್ ಆಂಗ್ಸೈಟಿ ಶುರುವಾಗಿತ್ತಂತೆ. ವೃದ್ಧಾಪ್ಯದಲ್ಲಿ ತನ್ನ ಜೊತೆಗಿರಲು ಒಬ್ಬ ಸಂಗಾತಿಬೇಕೆಂದು ಅನ್ಯಾ ಬಯಸುತ್ತಿದ್ದಾಳೆ. ಒಂಟಿ ಜೀವನದಿಂದ ಜಂಟಿಯಾಗಲು ನಿರ್ಧರಿಸಿದ್ದಾಳೆ. ಆದ್ರೆ ಆಕೆ ಭಯ ಆಕೆಯನ್ನು ಮುಂದಿನ ಹೆಜ್ಜೆ ಇಡಲು ಬಿಡ್ತಿಲ್ಲ.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.