ಕೆಲವೊಮ್ಮೆ ಸಾಯ್ಬೇಕೆಂದ್ರು ಸಾಯೋಕೆ ಆಗಲ್ಲ. ಬಾಲ್ಯದಲ್ಲೇ ಕೊಲೆ ಯತ್ನ ನಡೆದ್ರೂ, ಮೆದುಳಿನಲ್ಲಿ ಅಪಾಯಕಾರಿ ವಸ್ತು ಸಿಕ್ಕಿ ಬಿದ್ರೂ ಈ ಮಹಿಳೆ ಗಟ್ಟಿಗಿತ್ತಿ. ಒಂದಲ್ಲ ಎರಡಲ್ಲ 80 ವರ್ಷ ಆರಾಮವಾಗಿ ಜೀವನ ಮಾಡಿದ್ದಾಳೆ.
ಆಯುಷ್ಯ ಗಟ್ಟಿಯಾಗಿದ್ದರೆ ಅಥವಾ ನಮ್ಮ ಲಕ್ ಚೆನ್ನಾಗಿದ್ದರೆ ಯಾವ ತೊಂದರೆಯೂ ನಮ್ಮನ್ನು ಬಾಧಿಸುವುದಿಲ್ಲ. ಆಯುಷ್ಯ ಗಟ್ಟಿಯಾಗಿದ್ದರೆ ಸಾಯಲು ಹೊರಟ ವ್ಯಕ್ತಿಯೂ ಬದುಕಿ ಬರುತ್ತಾನೆ. ಅದೇ ನಮ್ಮ ಆಯುಷ್ಯ ತೀರಿದಾಗ ಅಥವಾ ಲಕ್ ಕೈಕೊಟ್ಟಾಗ ಚಿಕ್ಕ ತೊಂದರೆಯೇ ನಮ್ಮ ಜೀವಕ್ಕೆ ಮಾರಕವಾಗುತ್ತದೆ.
ಇದಕ್ಕೆ ಉದಾಹರಣೆ (Example) ಯಾಗುವ ಅದೆಷ್ಟೋ ಘಟನೆಗಳು ನಮ್ಮ ಸುತ್ತ ನಡೆಯುತ್ತದೆ. ಕೆಲವೊಮ್ಮೆ ವೈದ್ಯ (doctor) ಲೋಕವನ್ನೂ ನಿಬ್ಬೆರಗುಗೊಳಿಸುವಂತಹ ಅಚ್ಚರಿಗಳು ನಡೆಯುತ್ತವೆ. ವ್ಯಕ್ತಿ ಸತ್ತಿದ್ದಾನೆಂದು ವೈದ್ಯರು ಘೋಷಿಸಿದ ಮೇಲೆ ಆತ ಎದ್ದು ಬಂದ ಉದಾಹರಣೆ ಇದೆ. ದಿನೇ ದಿನೇ ಹೊಸ ರೋಗಗಳು, ಹೊಸ ಸಂಗತಿಗಳು ವೈದ್ಯರನ್ನು ಇನ್ನಷ್ಟು ಕಾರ್ಯಪ್ರವೃತ್ತರಾಗುವಂತೆ ಮಾಡುತ್ತವೆ. ಇಂದು ನಾವು ಕೂಡ ಅಂತಹುದೇ ಒಂದು ಆಶ್ಚರ್ಯಕರ ಸಂಗತಿಗಳನ್ನು ನಿಮಗೆ ಹೇಳಲಿದ್ದೇವೆ.
undefined
ಪುಟ್ಟ ಕಂದನ ಜೀವ ಉಳಿಸಲು ತನ್ನದೇ ಬೋನ್‌ಮ್ಯಾರೋ ನೀಡಿದ ವೈದ್ಯ
ಮಹಿಳೆಯ ಮೆದುಳಿ (Brain) ನಲ್ಲಿತ್ತು ಸೂಜಿ: 80 ವರ್ಷದ ಒಬ್ಬ ವೃದ್ಧೆಗೆ ಆಗಾಗ ತಲೆ ನೋವು ಬರುತ್ತಿತ್ತು. ತಲೆನೋವಿನ ಸಮಸ್ಯೆಯ ಹೊರತಾಗಿ ಆಕೆಗೆ ಬೇರೆ ಯಾವ ಆರೋಗ್ಯ ಸಮಸ್ಯೆಯೂ ಇರಲಿಲ್ಲ. ತಲೆನೋವು ವಿಪರೀತವಾದ ಕಾರಣ ಆಕೆ ವೈದ್ಯರ ಬಳಿ ಹೋಗಿದ್ಲು. ವೃದ್ಧೆಯ ತಲೆಯ ಸ್ಕ್ಯಾನಿಂಗ್ ನಡೆಸಿದ ವೈದ್ಯರಿಗೆ ಆಶ್ಚರ್ಯ ಕಾದಿತ್ತು. ವೃದ್ಧೆಯ ಮೆದುಳಿನಲ್ಲಿ 3 ಸೆಂಟಿಮೀಟರ್ ಉದ್ದದ ಸೂಜಿ ಕಂಡಿದೆ. ಇದು ಇಡೀ ವೈದ್ಯಲೋಕಕ್ಕೆ ಅಚ್ಚರಿಯ ಸಂಗತಿಯಾಗಿತ್ತು. ಸುಮಾರು 75ರಿಂದ 80 ವರ್ಷಗಳ ಸಮಯ ಆಕೆ ಸೂಜಿಯನ್ನು ಮೆದುಳಿನಲ್ಲೇ ಇಟ್ಟುಕೊಂಡಿದ್ದಳು ಎಂದು ವೈದ್ಯರು ಹೇಳಿದ್ದಾರೆ.
80 ವರ್ಷದ ಈ ವೃದ್ಧೆಯ ಮೆದುಳಿನ ಪ್ಯಾರಿಯಲ್ ಲೋಬ್ ನಲ್ಲಿ ಸೂಜಿ ಅಂಟಿಕೊಂಡಿತ್ತು. ಅಷ್ಟು ವರ್ಷದ ತನಕ ಸೂಜಿ ಮೆದುಳಿನಲ್ಲಿದ್ದರೂ ಆಕೆಗೆ ಯಾವುದೇ ರೀತಿಯ ತೊಂದರೆ ಆಗದೇ ಇರುವುದು ವೈದ್ಯರಿಗೆ ಆಶ್ಚರ್ಯ ಹುಟ್ಟಿಸಿತ್ತು. ಈ ಅಪರೂಪದ ಘಟನೆಯನ್ನು ಸಕಾಲಿನ್ ಆರೋಗ್ಯ ಸಚಿವಾಲಯ ಟೆಲಿಗ್ರಾಂ ಪೋಸ್ಟ್ ನಲ್ಲಿ ಶೇರ್ ಮಾಡಿಕೊಂಡಿದೆ.
ಹೊಟ್ಟೆ ಕರಗಿಸುವ ಮ್ಯಾಜಿಕ್! ಎರಡು ಗಂಟೆಯ ಸೀಕ್ರೆಟ್ ಹೇಳಿದ ಜಗ್ಗೇಶ್ ಹೆಂಡತಿ ಪರಿಮಳ
ಬಾಲ್ಯದಲ್ಲಿ ನಡೆದಿತ್ತು ಕೊಲೆ ಯತ್ನ: ಬಡತನದ ಕಾರಣದಿಂದಲೋ ಅಥವಾ ಅನೈತಿಕ ಸಂಬಂಧದ ಕಾರಣದಿಂದಲೋ ಹುಟ್ಟಿದ ಮಕ್ಕಳನ್ನು ಅನಾಥರನ್ನಾಗಿ ಮಾಡುವುದು ಅಥವಾ ನಡು ರಸ್ತೆಯಲ್ಲಿ ಬಿಟ್ಟುಹೋಗುವ ಪ್ರಕರಣಗಳು ದಿನೇ ದಿನೇ ನಡೆಯುತ್ತಿರುತ್ತವೆ. ಕೆಲವೊಮ್ಮೆ ಬಡತನದ ಕಾರಣ ಮಕ್ಕಳನ್ನು ಸಾವಿನ ದವಡೆಗೆ ನೂಕುವ ಪರಿಸ್ಥಿತಿಯೂ ಎದುರಾಗುತ್ತದೆ.
1930 ರ ದಶಕದ ಸೋವಿಯತ್ ಒಕ್ಕೂಟದ ಯುಗದಲ್ಲಿ ಹೆಚ್ಚಿನ ಬರಗಾಲವಿತ್ತು. ಬಹುಪಾಲು ಜನರು ಬಡತನದ ಸಮಸ್ಯೆಯನ್ನು ಎದುರಿಸುತ್ತಿದ್ದರು. ಬಡತನದ ಸಮಸ್ಯೆಯ ಕಾರಣ ಚಿಕ್ಕಮಕ್ಕಳನ್ನು ಕೊಲ್ಲುವ ಪ್ರಯತ್ನ ನಡೆಯುತ್ತಿತ್ತು. ಮಕ್ಕಳನ್ನು ಸಾಯಿಸುವ ಸಲುವಾಗಿ ಮೆದುಳಿನ ಮೃದು ಭಾಗದಲ್ಲಿ ಅಂದರೆ ಫಾಂಟೋನೆಲ್ ಭಾಗಕ್ಕೆ ಸೂಜಿ ಚುಚ್ಚುತ್ತಿದ್ದರು. ಇದರಿಂದ ಫಾಂಟೊನೆಲ್ ಭಾಗ ಮುಚ್ಚಿ ಮಗುವಿನ ಸಾವಿನ ಕಾರಣ ಏನು ಎನ್ನುವುದು ಕೂಡ ತಿಳಿಯುತ್ತಿರಲಿಲ್ಲ. ಹಸಿವು ಮತ್ತು ಬರಗಾಲದ ಸಮಯದಲ್ಲಿ ತಮ್ಮ ಮಕ್ಕಳ ಜೀವ ತೆಗೆಯಲು ಅನೇಕ ಪೋಷಕರು ಈ ಮಾರ್ಗವನ್ನು ಆಯ್ಕೆ ಮಾಡಿಕೊಂಡಿದ್ದರು. ಈ ವೃದ್ಧೆಯ ತಂದೆ ತಾಯಿಗಳು ಕೂಡ ಈಕೆಯನ್ನು ಅದೇ ರೀತಿ ಸಾಯಿಸುವ ಪ್ರಯತ್ನ ಮಾಡಿರಬಹುದು. ಆದರೆ ಅದೃಷ್ಟವಶಾತ್ ಆಕೆ ಬದುಕುಳಿದಿದ್ದಾಳೆ ಎಂದು ವೈದ್ಯರು ಹೇಳಿದ್ದಾರೆ.
ಚಿಕ್ಕಂದಿನಿಂದಲೇ ಮೆದುಳಿನಲ್ಲಿ ಸೂಜಿ ಇದ್ದರೂ ವೃದ್ಧೆಗೆ ಯಾವುದೇ ರೀತಿಯ ಆರೋಗ್ಯ ಸಮಸ್ಯೆ ಕಾಡದೇ ಇರುವುದು ಸ್ವತಃ ವೈದ್ಯರನ್ನೇ ನಿಬ್ಬೆರಗಾಗಿಸಿದೆ. ಸ್ಕ್ಯಾನಿಂಗ್ ಮೂಲಕ ಸೂಜಿ ಇರುವುದನ್ನು ಪತ್ತೆಮಾಡಿದ ನಂತರ ವೈದ್ಯರು ವೃದ್ಧೆಯ ಶಸ್ತ್ರಚಿಕಿತ್ಸೆ ಮಾಡಿ ಸೂಜಿಯನ್ನು ಹೊರತೆಗೆಯುವಲ್ಲಿ ಯಶಸ್ವಿಯಾಗಿದ್ದಾರೆ. ಸೂಜಿಯನ್ನು ಹೊರತೆಗೆದ ನಂತರ ವೃದ್ಧೆಯ ಆರೋಗ್ಯ ಸ್ಥಿರವಾಗಿದೆ ಎಂದು ವೈದ್ಯರು ಹೇಳಿದ್ದಾರೆ.