ಆಸ್ಪತ್ರೆ ಬೆಡ್ಡಲ್ಲಿದ್ದೇ ಲಕ್ಷಾಂತರ ಗಳಿಸಿದ ಕ್ಯಾನ್ಸರ್ ಪೀಡಿತೆ!

By Suvarna News  |  First Published Oct 7, 2023, 12:54 PM IST

ಸಾವು ಹತ್ತಿರ ಬರ್ತಿದೆ ಎಂಬುದು ಗೊತ್ತಿದ್ರೂ ಧೈರ್ಯ ಕಳೆದುಕೊಳ್ಳದೆ ಹೋರಾಡುವ ವ್ಯಕ್ತಿ ಸಾವನ್ನು ಕೂಡ ಗೆಲ್ಲಬಲ್ಲ. ಚಿಕಿತ್ಸೆಗೆ ಹಣವಿಲ್ಲ ಎಂದಾಗ ಕುಗ್ಗದೆ, ಬುದ್ದಿ ಉಪಯೋಗಿಸಿ ಹಣ ಸಂಪಾದನೆ ಮಾಡಿದ ಈ ಮಹಿಳೆಗೆ ಮೆಚ್ಚಲೇಬೇಕು.
 


ಕ್ಯಾನ್ಸರ್ ಒಂದು ಗಂಭೀರ ರೋಗ. ಅದು ಬಂದ್ರೆ ಜನರು ತಮ್ಮ ಬದುಕಿನ ಆಸೆ ಕಳೆದುಕೊಳ್ತಾರೆ. ಇಲ್ಲಿಗೆ ತಮ್ಮ ಜೀವನ ಮುಗೀತು ಎಂದುಕೊಳ್ತಾರೆ. ಹಾಗಂತ ಆ ಕ್ಷಣ ಸಾವು ಬರೋದಿಲ್ಲ. ಕ್ಯಾನ್ಸರ್ ಪೀಡಿತ ವ್ಯಕ್ತಿ ತಾನೇ ಎಲ್ಲ ಕೆಲಸ ಮಾಡಿಕೊಳ್ಳಲು ಸಾಧ್ಯವಾಗೋದಿಲ್ಲ. ಸಂಬಂಧಿಕರು, ಆಪ್ತರ ಸಹಾಯ ಅವರಿಗೆ ಅಗತ್ಯವಾಗುತ್ತದೆ. ಅಲ್ಲದೆ ಕ್ಯಾನ್ಸರ್ ಚಿಕಿತ್ಸೆಗೆ ಹೆಚ್ಚು ಹಣ ಖರ್ಚಾಗುತ್ತದೆ. ಕೆಲವು ಬಾರಿ ರೋಗಿ ಬದುಕೋದಿಲ್ಲ ಎನ್ನುವುದು ಗೊತ್ತಿದ್ರೂ ಚಿಕಿತ್ಸೆ ಕೊಡಿಸುವುದು ಅಗತ್ಯವಾಗುತ್ತದೆ. ಹಣವನ್ನು ಹೊಂದಿಸೋದು ಕುಟುಂಬಸ್ಥರಿಗೆ ಕಷ್ಟವಾಗುತ್ತದೆ. ಸಾಲದ ಮೇಲೆ ಸಾಲ ಆಗೋದಿದೆ. ಬಹುತೇಕ ಕ್ಯಾನ್ಸರ್ ರೋಗಿಗಳು, ಅವರ ಕುಟುಂಬ ಚಿಕಿತ್ಸೆಗೆ ಹಣವಿಲ್ಲದೆ ಪರದಾಡುತ್ತದೆ. ಯುಕೆಯ ಯುವತಿ ಜೀವನದಲ್ಲೂ ಇದೇ ಆಗಿದೆ. ಕ್ಯಾನ್ಸರ್  ಚಿಕಿತ್ಸೆಗೆ ಹಣವಿಲ್ಲದ ಆಕೆ ಕ್ಯಾನ್ಸರ್ ಗೆ ಶರಣಾಗುವವಳಿದ್ದಳು. ಆದ್ರೆ ಎಲ್ಲವೂ ಬದಲಾಯ್ತು.

ಚಿಕಿತ್ಸೆ (Treatment)ಗೆ ಎಲ್ಲ ಹಣ ಖರ್ಚಾಗಿತ್ತು : ಬ್ರಿಟನ್ (Britain) ನ ವ್ಯಾಲೆಂಟಿನಾಗೆ ಕ್ಯಾನ್ಸರ್ (Cancer) ಕಾಣಿಸಿಕೊಂಡಿದೆ. ಆಕೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಳು. ಚಿಕಿತ್ಸೆಗೆ ಕೂಡಿಟ್ಟಿದ್ದ ಹಣವೆಲ್ಲ ಖರ್ಚಾಗ್ತಾ ಬಂದಿತ್ತು. ಕ್ಯಾನ್ಸರ್ ಗೆ ಇನ್ಮುಂದೆ ಚಿಕಿತ್ಸೆ ಪಡೆಯಲು ಸಾಧ್ಯವಿಲ್ಲ, ನನ್ನ ಸಾವು ಸಮೀಪಿಸುತ್ತಿದೆ ಎಂದೇ ಆಕೆ ಭಾವಿಸಿದ್ದಳು. ಆದ್ರೆ ಆಸ್ಪತ್ರೆ ಬೆಡ್ ಮೇಲೆಯೇ ಆಕೆಗೆ 15,000 ಡಾಲರ್ ಅಂದ್ರೆ ಸುಮಾರು 15.20 ಲಕ್ಷ ರೂಪಾಯಿ ಸಿಕ್ಕಿದೆ. 

Tap to resize

Latest Videos

ರಾತ್ರಿ ಮಲಗೋ ಮೊದಲು ಈ ಕೆಲಸ ಮಾಡಿದ್ರೆ ರೋಗವೆಲ್ಲ ಹತ್ತಿರವೂ ಬರೋಲ್ಲ

ಆಸ್ಪತ್ರೆಯಲ್ಲೇ ಗಳಿಕೆ ಶುರು ಮಾಡಿದ ವ್ಯಾಲೆಂಟಿನಾ : ವ್ಯಾಲೆಂಟಿನಾಗೆ 2021 ರಲ್ಲಿ ತೀವ್ರವಾದ ಮೈಲೋಯ್ಡ್ ಲ್ಯುಕೇಮಿಯಾ - ರಕ್ತ ಮತ್ತು ಮೂಳೆ ಮಜ್ಜೆಯ ಕ್ಯಾನ್ಸರ್ ಇರುವುದು ಪತ್ತೆಯಾಗಿತ್ತು. ಒಂದು ಬಾರಿ ವ್ಯಾಲೆಂಟಿನಾ ಕೋಮಾಕ್ಕೆ ಹೋಗಿದ್ಲು. ಅವಳಿಗೆ ನಡೆಯೋಕೆ, ಮಾತನಾಡೋಕೂ ಸಾಧ್ಯವಾಗ್ತಾ ಇರಲಿಲ್ಲ. ಆಕೆಗೆ ಕಿಮೋಥೆರಪಿ ನಡೀತಾ ಇತ್ತು. ಕ್ಯಾನ್ಸರ್ ಕಾರಣದಿಂದ ವ್ಯಾಲೆಂಟಿನಾಗೆ ನೌಕರಿ ಮಾಡಲು ಸಾಧ್ಯವಾಗಿರಲಿಲ್ಲ. ಹಾಗಾಗಿ ಆಕೆಗೆ ಯಾವುದೇ ಆದಾಯವಿರಲಿಲ್ಲ. ಚಿಕಿತ್ಸೆಗೆ ಹಣ ಹೊಂದಿಸುವುದು ಕಷ್ಟವಾಗಿತ್ತು. ಈ ಮಧ್ಯೆ ಆಕೆಗೆ ಒಂದು ಆಲೋಚನೆ ಬಂತು. ಸೆಕ್ಸಿ ಫೋಟೋಗಳನ್ನು ಹಂಚಿಕೊಳ್ಳುವ ಮೂಲಕ ಆಸ್ಪತ್ರೆಯಿಂದ್ಲೇ ಹಣಗಳಿಸುವ ಉಪಾಯ ಮಾಡಿದ್ಲು. ಕಿಮೋಥೆರಪಿ ಇಲ್ಲದೆ ಹೋದ ಸಮಯದಲ್ಲಿ ಸೆಕ್ಸಿ ಫೋಟೋಗಳನ್ನು ಕ್ಲಿಕ್ಕಿಸಿ ಅದನ್ನು ಮಾರಾಟ ಮಾಡ್ತಿದ್ದಳು ವ್ಯಾಲೆಂಟಿನಾ.

ಅವಳು ತಿಂಗಳಿಗೊಮ್ಮೆ ಅಥವಾ ವಾರಾಂತ್ಯದಲ್ಲಿ ಸ್ವಲ್ಪ ಪ್ರಯತ್ನಪಟ್ಟು ಆನ್‌ಲೈನ್ ವಿಷಯವನ್ನು ರಚಿಸಲು ಪ್ರಾರಂಭಿಸಿದಳು. ವ್ಯಾಲೆಂಟಿನಾ ತನ್ನ ಆನ್ಲೈನ್ ಖಾತೆಗೆ ಕಿಮೋಥೆರಪಿ ಮಾಡ್ತಿದ್ದ ನರ್ಸ್ ಗಳಲ್ಲಿ ಒಬ್ಬರ ಹೆಸರನ್ನು ಇಟ್ಟಿದ್ದಾಳೆ. ವಯಸ್ಕ ವೆಬ್‌ಸೈಟ್ ಓನ್ಲಿ ಫ್ಯಾನ್ಸ್ ನಲ್ಲಿ ಡಾಮಿನಾಟ್ರಿಕ್ಸ್ ಆಗಿ ವಿಷಯವನ್ನು ರಚಿಸಲು ವ್ಯಾಲೆಂಟಿನಾ ಶುರು ಮಾಡಿದ್ಲು. ಅಲ್ಲದೆ ತನ್ನ ಫ್ಯಾನ್ಸ್ ಜೊತೆ ಕ್ಯಾನ್ಸರ್ ಸ್ಥಿತಿಯ ಬಗ್ಗೆ ಮಾತನಾಡ್ತಿದ್ದಳು. ಈ ಕಂಟೆಂಟ್ ಇಟ್ಕೊಂಡೆ ವ್ಯಾಲೆಂಟಿನಾ ಪ್ರತಿ ತಿಂಗಳು ಸಾವಿರಾರು ರೂಪಾಯಿ ಗಳಿಸ್ತಿರೋದಾಗಿ ಹೇಳಿದ್ದಾಳೆ. 

ಲೋಗೋ, ವಿನ್ಯಾಸ ಬದಲಾವಣೆ ನಂತರ ಏರ್ ಇಂಡಿಯಾ ಫ್ಲೈಟ್‌ ಫಸ್ಟ್‌ ಲುಕ್ ರಿಲೀಸ್‌: ಹೊಸ ವಿಮಾನ ಸೂಪರ್‌ ಎಂದ ನೆಟ್ಟಿಗರು!

ಕೂದಲು ಉದುರಿದ ನಂತ್ರ ಹೊಸ ಲುಕ್ ಲಾಭಪಡೆದ ವ್ಯಾಲೆಂಟಿನಾ : ಆರು ತಿಂಗಳ ಕಿಮೋಥೆರಪಿ ನಂತ್ರ ಸಮಯ ಹೊಂದಿಸಿಕೊಂಡ ವ್ಯಾಲೆಂಟಿನಾ ಮಾದಕ ಸೆಲ್ಫಿಗಳಿಗೆ ಪೋಸ್ ನೀಡುತ್ತಿದ್ದಳು ಮತ್ತು ಸಾಫ್ಟ್ ಕೋರ್ ನ್ಯೂಡ್ ಫೋಟೋ ತಯಾರಿಸುತ್ತಿದ್ದಳು. ಇದೇ ಕಂಟೆಂಟ್ ಇಟ್ಕೊಂಡು ಆಕೆ ಆಸ್ಪತ್ರೆ ಖರ್ಚಿಗಾಗಿ ಸುಮಾರು 15 ಸಾವಿರ ಡಾಲರ್ ಅಂದ್ರೆ 15.20 ಲಕ್ಷ ಅಂದ್ರೆ ತಿಂಗಳಿಗೆ 2.53 ಲಕ್ಷ ರೂಪಾಯಿ ಗಳಿಸಿದ್ದಾಳೆ. ಕಿಮೋಥೆರಪಿ ನಂತ್ರ ಕೂದಲು ಕಳೆದುಕೊಂಡ ವ್ಯಾಲೆಂಟಿನಾ ಅದಕ್ಕೆ ಬೇಸರಗೊಳ್ಳದೆ ಬೇರೆ ಬೇರೆ ವಿಗ್ ಹಾಕಿ ಫೋಟೋ, ವಿಡಿಯೋ ಮಾಡಿದ್ದಾಳೆ.  ಇದೆಲ್ಲ ಆಗಿ ಈಗ್ಲೇ ಎರಡು ವರ್ಷ ಕಳೆದಿದೆ ಎನ್ನುವ ವ್ಯಾಲೆಂಟಿನಾ, ಈಗ ಚೇತರಿಸಿಕೊಂಡಿದ್ದಾಳೆ. ಈಗ ಓನ್ಲಿ ಫ್ಯಾನ್ಸ್, ವೆಬ್‌ಕ್ಯಾಮಿಂಗ್ ಮತ್ತು  ಡಾಮಿನಾಟ್ರಿಕ್ಸ್  ಮೂಲಕ ತಿಂಗಳಿಗೆ 10 ಲಕ್ಷ ರೂಪಾಯಿವರೆಗೆ ಸಂಪಾದನೆ ಮಾಡ್ತಿದ್ದಾಳೆ. 
 

click me!