Viral Video: ಸುನಾಮಿ ಜತೆಗೆ ಮಹಿಳೆಯ ಸೆಲ್ಫಿ, ಅದೃಷ್ಟ ಇತ್ತು ಬದುಕ್ಕೊಂಡ್ಲು

By Suvarna News  |  First Published Apr 4, 2024, 5:01 PM IST

ಜೀವವನ್ನೂ ಪಣಕ್ಕಿಟ್ಟು, ಅಪಾಯದ ಅಂಚಿನಲ್ಲಿ ನಿಂತು ಸೆಲ್ಫಿ ತೆಗೆದುಕೊಳ್ಳುವುದು ಹಲವರ ಅಭ್ಯಾಸ. ಸುನಾಮಿಯಂತಹ ಸುನಾಮಿ ಅಲೆಗಳ ಜತೆಗೇ ಮಹಿಳೆಯೊಬ್ಬರು ಸೆಲ್ಫಿ ತೆಗೆದುಕೊಂಡ ವೀಡಿಯೋವೊಂದು ಸೋಷಿಯಲ್‌ ಮೀಡಿಯಾದಲ್ಲೀಗ ವೈರಲ್‌ ಆಗಿದೆ. 
 


ಸೆಲ್ಫಿ ತೆಗೆದುಕೊಳ್ಳುವ ಗೀಳು ಎಷ್ಟರಮಟ್ಟಿಗೆ ಹೆಚ್ಚಾಗಿದೆ ಎಂದರೆ, ಸ್ವತಃ ಜೀವಕ್ಕೆ ಅಪಾಯ ಮಾಡಿಕೊಳ್ಳುವಷ್ಟು. ಇದನ್ನು ಅನೇಕರು ಆಗಾಗ ಸಾಬೀತುಪಡಿಸುತ್ತಿರುತ್ತಾರೆ. ಪ್ರವಾಹದಲ್ಲಿ, ಸೇತುವೆಯ ಅಂಚಿನಲ್ಲಿ, ಜಲಪಾತದ ಬುಡದಲ್ಲಿ, ಎತ್ತರದ ಬಂಡೆ ಏರಿ ನಿಂತು, ಕಟ್ಟಡದ ತುದಿಯಲ್ಲಿ, ಕೊನೆಗೆ ರೈಲ್ವೆ ಟ್ರ್ಯಾಕ್‌ ನಲ್ಲೂ ಸೆಲ್ಫಿ ತೆಗೆದುಕೊಳ್ಳುವ ಜನರಿದ್ದಾರೆ. ಸೋಷಿಯಲ್‌ ಮೀಡಿಯಾದಲ್ಲಿ ಇಂತಹ ನೂರಾರು ವೀಡಿಯೋಗಳು ಅಪ್‌ ಲೋಡ್‌ ಆಗುತ್ತಿರುತ್ತವೆ. ಇವುಗಳ ಮಧ್ಯೆ ಮಹಿಳೆಯೊಬ್ಬರ ಸೆಲ್ಫಿ ವೀಡಿಯೋವೊಂದು ವೈರಲ್‌ ಆಗಿದೆ. ಇದನ್ನು ನೋಡಿದರೆ ಮೈ ಜುಮ್‌ ಎನ್ನುವುದು ಗ್ಯಾರೆಂಟಿ. ನೀರಿನಲ್ಲಿ ತೇಲಿ ಹೋಗುವುದನ್ನೂ ಲೆಕ್ಕಿಸದೇ ಆಕೆ ಮೊಬೈಲ್‌ ಸೆಲ್ಫಿ ಸ್ಟಿಕ್‌ ಬಿಡದೇ ಹಿಡಿದುಕೊಂಡಿರುವುದು ಜನರ ಮನಸ್ಥಿತಿಯ ಬಗ್ಗೆ ಚಿಂತಿಸುವಂತೆ ಮಾಡುವುದು ಸುಳ್ಳಲ್ಲ. ಸುನಾಮಿಯ ಅಲೆಗಳೆಂದರೆ ಸಾಮಾನ್ಯವಾಗಿ ಯಾರೂ ಹತ್ತಿರ ಸುಳಿಯುವುದಿಲ್ಲ. ಜೀವ ಉಳಿದರೆ ಸಾಕು ಎಂದು ದೂರ ಓಡುತ್ತಾರೆ. ಆದರೆ, ಈ ಮಹಿಳೆ ಸುನಾಮಿಯ ಭೀಕರ ಅಲೆಗಳು ಬರುತ್ತಿದ್ದರೂ ಲೆಕ್ಕಿಸದೇ ಸೆಲ್ಫಿ ತೆಗೆಯಲು ಮುಂದಾಗಿರುವುದಕ್ಕೆ ನೆಟ್ಟಿಗರು ಅಚ್ಚರಿಗೊಂಡಿದ್ದಾರೆ, ಎಚ್ಚರಿಕೆಯನ್ನೂ ನೀಡಿದ್ದಾರೆ. ಇದು ಹುಚ್ಚುತನ ಎಂದೂ ಛೀಮಾರಿ ಹಾಕಿದ್ದಾರೆ.

ಸೋಷಿಯಲ್‌ ಮೀಡಿಯಾ (Social Media) ಎಕ್ಸ್‌ ಖಾತೆಯಲ್ಲಿ ಈ ವೀಡಿಯೋವನ್ನು (Video) ಪೋಸ್ಟ್‌ (Post) ಮಾಡಲಾಗಿದೆ. ಇದಕ್ಕೆ “ಸುನಾಮಿ (Tsunami) ಜತೆಗೆ ಮಹಿಳೆ ಸೆಲ್ಫಿʼ ಎನ್ನುವ ಕ್ಯಾಪ್ಷನ್‌ ನೀಡಲಾಗಿದೆ. ಇಂತಹ ಅಪಾಯಕಾರಿ (Risky) ವೀಡಿಯೋ ಜನರ ಗಮನ ಸೆಳೆಯದೆಯೇ ಇರುತ್ತದೆಯೇ? ಲಕ್ಷಾಂತರ ಜನ ವೀಕ್ಷಣೆ ಮಾಡಿದ್ದಾರೆ. ಈ ವೀಡಿಯೋದಲ್ಲಿ ಮಹಿಳೆಯೊಬ್ಬರು ಸೆಲ್ಫಿ ಸ್ಟಿಕ್‌ (Selfie Stick)  ಹಿಡಿದು ನಿಂತಿರುವುದು, ಅವರ ಹಿಂಭಾಗದಲ್ಲಿರುವ ನೀರಿನ ಪ್ರದೇಶದಿಂದ (Water Body) ಬೃಹತ್‌ ಅಲೆಗಳು (Waves) ನುಗ್ಗಿ ಬರುವುದು ಕಾಣಿಸುತ್ತದೆ. ಆಕೆ ಕೆಸರಿನಿಂದ ತುಂಬಿರುವ ಪ್ರದೇಶದಲ್ಲಿ ನಿಂತಿದ್ದು, ಬಹುಶಃ ಆ ಜಾಗ ಸುರಕ್ಷಿತವೆಂದು ಆಕೆ ಭಾವಿಸಿರುವಂತಿದೆ. 

Tap to resize

Latest Videos

ಪೋರ್ಬ್ಸ್‌ ಬಿಲಿಯನೇರ್ ಲಿಸ್ಟ್‌: ವಿಶ್ವದ ಅತ್ಯಂತ ಶ್ರೀಮಂತ ಮಹಿಳೆ ಇವರು!

ಇಬ್ಬರು ಪುರುಷರು ಆಕೆಯ ಹಿಂದಿರುವ ನೀರಿನ ಪ್ರದೇಶದಿಂದ ಭೂಭಾಗದ ಕಡೆಗೆ  ಓಡಿ ಬರುತ್ತಿರುವುದು ವೀಡಿಯೋದಲ್ಲಿ ಕಂಡುಬರುತ್ತದೆ.  ಅಷ್ಟರಲ್ಲೇ ಅಪ್ಪಳಿಸುವ ಅಲೆ ಆಕೆಯನ್ನು ನೀರಿನತ್ತ ಸೆಳೆಯುತ್ತದೆ. ಕೆಸರಿನಲ್ಲಿ ನಿಂತಿದ್ದರೂ ಆಕೆ ಬಿದ್ದುಹೋಗುತ್ತಾಳೆ ಹಾಗೂ ನೀರಿನತ್ತ ಸಾಗುತ್ತಿರುತ್ತಾಳೆ. ಇಷ್ಟಾದರೂ ಆಕೆ ತನ್ನ ಕೈಲಿರುವ ಸ್ಟಿಕ್‌ ಬಿಡುವುದಿಲ್ಲ! ನೀರು ಜೋರಾಗಿ ಬಂದಾಗ ಆಕೆ ಸ್ವಲ್ಪ ಹಿಂದೆ ಹೋಗಿ ಬಿದ್ದುಬಿಡುತ್ತಾಳೆ. ಆಕೆಯ ಮೇಲೆಲ್ಲ ನೀರು ಹರಿಯುತ್ತದೆ. ಅದೃಷ್ಟವತಾಶ್‌ ಆಕೆ ಸಂಪೂರ್ಣವಾಗಿ ಕೊಚ್ಚಿಕೊಂಡು (Drown) ಹೋಗುವುದಿಲ್ಲ. ಕೆಸರಿನಿಂದ ಕೂಡಿರುವ ಅಲೆ ಅವರ ಮೇಲೆ ನುಗ್ಗುತ್ತಿರುವುದನ್ನು ನೋಡಿದರೆ ಮೈ ಜುಮ್‌ ಅನ್ನದೇ ಇರಲಾರದು. 

ಕ್ಯಾಮರಾ ಬಿಡೋದಿಲ್ಲ
ಇಂಥ ಅಪಾಯಕಾರಿ ಸನ್ನಿವೇಶದಲ್ಲೂ ಮಹಿಳೆ ಸೆಲ್ಫಿ ತೆಗೆದಯಲು ಮುಂದಾಗಿರುವುದು ಭಯಾನಕ ಎನಿಸಬಹುದು. ಅಲ್ಲದೆ, ಆಕೆ ಕ್ಯಾಮರಾವನ್ನು (Camera) ಕೈ ಬಿಡುವುದಿಲ್ಲ. ಕೆಸರಿನಿಂದ ಕೂಡಿದ ಅಲೆ ತನ್ನನ್ನು ಸೆಳೆದೊಯ್ದು, ಬೀಳಿಸಿದರೂ ಸ್ಟಿಕ್‌ ಅನ್ನು ಮಾತ್ರ ಬಿಡದೇ ರೆಕಾರ್ಡ್‌ (Record) ಮಾಡುತ್ತಲೇ ಇರುತ್ತಾಳೆ. ಈ ವೀಡಿಯೋ ನೋಡುತ್ತಿರುವಾಗ ಆಕೆ ಖಂಡಿತವಾಗಿ ಕೊಚ್ಚಿಕೊಂಡು ಹೋಗಿಬಿಡುತ್ತಾಳೆ ಎನ್ನುವ ಭಯ ಮೂಡುತ್ತದೆ.

Shes took a selfie with a tsunami pic.twitter.com/98k3QGLJOb

— Historic Vids (@historyinmemes)

 

ಕೆಸರಿನಲ್ಲಿ ಬಿದ್ದ ಆಕೆಯನ್ನು ಜತೆಗಿರುವ ಪುರುಷರು ಎಬ್ಬಿಸಿ ರಕ್ಷಿಸಲು ಯತ್ನಿಸುವುದು ವೀಡಿಯೋದಲ್ಲಿ ಸೆರೆಯಾಗಿದೆ. ಬಳಿಕ ಸ್ಪಷ್ಟತೆಯಿಲ್ಲದೇ ಕೊನೆಯಾಗುತ್ತದೆ. ಈ ಘಟನೆ ನಡೆದ ಸ್ಥಳ ಮತ್ತು ಸಮಯ ಬಹಿರಂಗವಾಗಿಲ್ಲ. 

ಈ ಮಹಿಳೆಗೆ ಬ್ರೇನ್ ಟ್ಯೂಮರ್ ಇರುವುದನ್ನು ತೋರಿಸಿಕೊಟ್ಟಿದ್ದೊಂದು ಸೆಲ್ಫೀ!

ಸೋಷಿಯಲ್‌ ಮೀಡಿಯಾ ಬಳಕೆದಾರರು ಇದಕ್ಕೆ ತೀಕ್ಷ್ಣವಾಗಿ ಪ್ರತಿಕ್ರಿಯೆ ನೀಡಿದ್ದಾರೆ. “ಈ ಮಹಿಳೆ (Woman) ತಾನು ಭಾರೀ ಬುದ್ಧಿವಂತೆ. ಸನ್ನಿವೇಶದಿಂದ ದೂರ ಹೋಗಲು ಸಾಧ್ಯವಾಗದೇ ಈ ಸಮಯವನ್ನೂ ಎಂಜಾಯ್‌ ಮಾಡಿದ್ದಾಳೆ. ಕ್ಯಾಮರಾ ಮುಳುಗಲು ಬಿಡದೇ ಕಾಪಾಡಿದ್ದಾಳೆʼ ಎನ್ನುವ ಮೆಚ್ಚುಗೆಯೂ ಬಂದಿದೆ. ಆದರೆ, ಬಹಳಷ್ಟು ಜನ ಇದರ ವಿರುದ್ಧ ಕಿಡಿಕಾರಿದ್ದಾರೆ. “ಇಂತಹ ವೈಲ್ಡ್‌ (Wild) ಸನ್ನಿವೇಶಗಳನ್ನು ಸೆರೆ ಹಿಡಿಯುವುದೆಂದರೆ ಅನೇಕರಿಗೆ ಭಾರೀ ಖುಷಿ, ಇದಕ್ಕಾಗಿ ಜೀವವನ್ನು ಬೇಕಾದರೂ ಪಣಕ್ಕಿಡುತ್ತಾರೆʼʼ ಎನ್ನುವ ಹೇಳಿಕೆಗಳೂ ಬಂದಿವೆ. ಇದು ಸುನಾಮಿಯಲ್ಲ, ದೊಡ್ಡ ಅಲೆಗಳು ಎಂದೂ ಹೇಳಲಾಗಿದೆ. 

click me!