ವರ್ಷಕ್ಕೆ 4 ಲಕ್ಷ ಸಂಬಳ ಪಡೆಯುವ 37ರ ಯುವತಿಯ ಮದುವೆಯ ಡಿಮಾಂಡ್‌ ನೋಡಿದ್ರಾ!

Published : Apr 03, 2024, 08:43 PM ISTUpdated : Apr 03, 2024, 09:07 PM IST
ವರ್ಷಕ್ಕೆ 4 ಲಕ್ಷ ಸಂಬಳ ಪಡೆಯುವ 37ರ ಯುವತಿಯ ಮದುವೆಯ ಡಿಮಾಂಡ್‌ ನೋಡಿದ್ರಾ!

ಸಾರಾಂಶ

ವರ್ಷಕ್ಕೆ 4 ಲಕ್ಷ ಅಂದರೆ, ತಿಂಗಳಿಗೆ 33 ಸಾವಿರ ಸಂಬಳ ಪಡೆಯುವ 37 ವರ್ಷದ ಮಹಿಳೆಯೊಬ್ಬರು ತಾವು ಮದುವೆಯಾಗುವ ಹುಡುಗನಿಗಾಗಿ ಇಟ್ಟಿರುವ ಡಿಮಾಂಡ್‌ ಕೇಳಿ ಸೋಶಿಯಲ್‌ ಮೀಡಿಯಾ ಅಚ್ಚರಿಪಟ್ಟಿದೆ.

ಮುಂಬೈ (ಏ.3): ಸೋಶಿಯಲ್‌ ಮೀಡಿಯಾ ಜಮಾನದಲ್ಲಿ ಟ್ರೆಂಡ್‌ಗಳು ಮೀಮ್ಸ್‌ಗಳು ಕಾಡ್ಗಿಚ್ಚಿನಂತೆ ಹರಡುತ್ತದೆ. ಕೆಲವೊಮ್ಮೆ ತೀರಾ ಸಣ್ಣಪುಟ್ಟ ವಿಚಾರಗಳು ಹಾಗೂ ಕುತೂಹಲದ ಸಂಗತಿಗಳು ಇಂಟರ್ನೆಟ್ಟಿಗರ ಗಮನಸೆಳೆದು ವೈರಲ್‌ ಆಗುತ್ತದೆ. ಇತ್ತೀಚೆಗೆ ಮುಂಬೈ ಮೂಲಕದ ಮಹಿಳೆಯೊಬ್ಬರು ತಮ್ಮ ಜೀವನ ಸಂಗಾತಿ ಹೇಗಿರಬೇಕು ಎನ್ನುವ ನಿಟ್ಟಿನಲ್ಲಿ ತಮ್ಮ ಚೆಕ್‌ಲಿಸ್ಟ್‌ನಲ್ಲಿ ಹಂಚಿಕೊಂಡಿರುವ ಫೋಟೋ ಎಕ್ಸ್‌ನಲ್ಲಿ ವೈರಲ್‌ ಆಗಿದೆ. 37 ವರ್ಷದ ಮುಂಬೈ ಮೂಲದ ಮಹಿಳೆ ತನಗೆ ಯಾವ ರೀತಿಯ ವರ ಬೇಕು ಎಂದು ಹೇಳಿರುವ ಚೆಕ್‌ಲಿಸ್ಟ್‌ ಸೋಶಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿದೆ. 10 ವರ್ಷಗಳಿಂದ ಮುಂಬೈನಲ್ಲಿ ಕೆಲಸ ಮಾಡುತ್ತಿರುವುದಾಗಿ ಮಹಿಳೆ ತಿಳಿಸಿದ್ದು, ಮರಾಠಿಯಾಗಿರುವ ನನಗೆ ಮದುವೆಯಾಗಲು ಮರಾಠ ಹುಡುಗನನ್ನು ಹುಡುಕುತ್ತಿರುವುದಾಗಿ ತಿಳಿಸಿದ್ದಾರೆ. ತನಗೆ 37 ವರ್ಷವಾಗಿದ್ದು, ಮದುವೆಯ ಕುರಿತಾಗಿ ಕೆಲವು ಬೇಡಿಕೆಗಳು ಇರುವುದಾಗಿ ಹೇಳಿದ್ದಾರೆ.

ನನ್ನ ಬೇಡಿಕೆಗಳಿಗೆ ಒಪ್ಪುವ ಹುಡುಗನನ್ನು ಹಲವು ವರ್ಷಗಳಿಂದ ಹುಡುಕುತ್ತಿರುವುದಾಗಿ ತಿಳಿಸಿದ್ದಾರೆ. ಇದನ್ನು ನೋಡಿದ ಸೋಶಿಯಲ್‌ ಮೀಡಿಯಾ ಮಂದಿ ನಿಮ್ಮ ಬೇಡಿಕೆಗಳನ್ನು ನೋಡಿದರೆ, 37 ಅಲ್ಲ 67 ವರ್ಷವಾದರೂ ನಿಮಗೆ ಮದುವೆ ಆಗೋದಿಲ್ಲ ಎಂದು ಟೀಕೆ ಮಾಡಿದ್ದಾರೆ.

ಏಪ್ರಿಲ್‌ 2 ಎಂದು ಅಂಬರ್‌ (@Ambar_SIFF_MRA ) ಎನ್ನುವವರು ತಮ್ಮ ಟ್ವಿಟರ್‌ ಪೇಜ್‌ನಲ್ಲಿ ಹಂಚಿಕೊಂಡಿರುವ ಈ ಪೋಸ್ಟ್‌ ವೀಕ್ಷಕರ ಗಮನ ಸೆಳೆದಿದೆ. ಮುಂಬೈನಲ್ಲಿ ಕೆಲಸ ಮಾಡುತ್ತಿರುವ ನನಗೆ ಮುಂಬೈನಲ್ಲಿಯೇ ಕೆಲಸ ಮಾಡುವ ಹುಡುಗ ಬೇಕೆಂದು ಆಕೆ ಹೇಳಿದ್ದಾಳೆ. ಮರಾಠಿಯಲ್ಲಿ ಇರುವ ಮೂಲ ಪೋಸ್ಟರ್‌ಅನ್ನು ಇಂಗ್ಲೀಷ್‌ಗೆ ಅನುವಾದ ಮಾಡಲಾಗಿದೆ. ಹುಡುಗನಿಗೆ ಸ್ಥಿರವಾದ ಕೆಲಸ ಇರಬೇಕು ಎಂದು ಆಕೆ ಒತ್ತಿ ಹೇಳಿದ್ದಾಳೆ. ಸ್ವಂತ ಮನೆಯನ್ನು ಹೊಂದಿದ್ದವರಿಗೆ ಆದ್ಯತೆ ನೀಡುತ್ತೇನೆ ಎಂದಿದ್ದಾಳೆ. ಕೆಲಸಕ್ಕೆ ಹೋಗುವ ಅಥವಾ ಮುಂಬೈನಲ್ಲಿಯೇ ಉದ್ಯಮ ಹೊಂದಿರುವ ವ್ಯಕ್ತಿಯಾದರೆ ಒಳ್ಳೆಯದು ಎಂದಿದ್ದಾರೆ.

ಇನ್ನು ಹುಡುಗನ ಕುಟುಂಬ ಶಿಕ್ಷಿತವಾಗಿರಬೇಕು ಎಂದು ಹೇಳಿರುವ ಆಕೆ, ವೈದ್ಯಕೀಯ ಕ್ಷೇತ್ರದಲ್ಲಿ ಸರ್ಜನ್‌ ಆಗಿರುವವರು, ಅಥವಾ ಚಾರ್ಟೆಡ್‌ ಅಕೌಂಟೆಂಟ್‌ ವೃತ್ತಿಪರರಿಗೆ ಆದ್ಯತೆ ನೀಡುವುದಾಗಿ ತಿಳಿಸಿದ್ದಾರೆ. ಇದರೊಂದಿಗೆ ಹುಡುಗನಿಗೆ ವಾರ್ಷಿಕ ಸಂಬಳ ಕನಿಷ್ಠ 1 ಕೋಟಿ ರೂಪಾಯಿ ಇರಬೇಕು ಎಂದು ತಿಳಿಸಿದ್ದಾಳೆ. ಇನ್ನು ಈಕೆಯ ಸಂಬಳ ವಾರ್ಷಿಕ 4 ಲಕ್ಷ ರೂಪಾಯಿ ಅಂದರೆ, ತಿಂಗಳಿಗೆ 33 ಸಾವಿರ ಎಂದು ತಿಳಿಸಲಾಗಿದೆ.

ಲಿಪ್‌ಲಾಕ್‌, ರೋಮಾನ್ಸ್‌ ಮಾಡೋದಿದ್ರೆ ಈ ನಟನ ಜೊತೆ ಮಾತ್ರ ಎಂದ ಸ್ಟಾರ್‌ ನಟಿ

ಇಷ್ಟೆಲ್ಲಾ ಷರತ್ತುಗಳನ್ನು ವಿಧಿಸಿ ವರ ಬೇಕು ಎಂದಿರುವ ಆಕೆಯ ಪೋಸ್ಟ್‌ ದೊಡ್ಡ ಮಟ್ಟದಲ್ಲಿ ವೈರಲ್‌ ಆಗಿದ್ದು, 1 ಲಕ್ಷಕ್ಕೂ ಅಧಿಕ ವೀವ್ಸ್‌ ಪಡೆದುಕೊಂಡಿದೆ. 'ಮಾಹಿತಿಯ ಪ್ರಕಾರ, ಭಾರತದಲ್ಲಿ 1 ಕೋಟಿ ರೂ.ಗಿಂತ ಹೆಚ್ಚು ಗಳಿಸುವವರ ಸಂಖ್ಯೆ ಕೇವಲ 1.7 ಲಕ್ಷ. ಅಂತಹ ಪರಿಸ್ಥಿತಿಯಲ್ಲಿ, ಈ ಮಹಿಳೆ ತನ್ನ 37 ನೇ ವಯಸ್ಸಿನಲ್ಲಿ ತನ್ನ ‘ಕನಸಿನ ರಾಜಕುಮಾರ’ ಸಿಗುವುದು ಕಷ್ಟ” ಎಂದು ಟ್ವೀಟ್‌ ಮಾಡಿದ್ದಾರೆ.

ಹುಡುಗ್ರು ಸೊಂಟದ ಮೇಲೆ ಕೈಯಿಟ್ಟರೆ ಕಂಪ್ಲೇಟ್‌ ಕೊಡಬೇಡಿ, ಎಂಜಾಯ್‌ ಮಾಡಿ: ನಟಿ ರೇಖಾ ನಾಯರ್‌ ಮಾತು!

ಇದರಲ್ಲಿ ಆಕೆಯ ತಪ್ಪೇನೂ ಇಲ್ಲ. ಎಲ್ಲರಿಗೂ ಆಯ್ಕೆಯ ಸ್ವಾತಂತ್ರ್ಯವಿದೆ. ತನ್ನ ವರನನ್ನು ಆಯ್ಕೆ ಮಾಡಿಕೊಳ್ಳುವ ಸ್ವಾತಂತ್ರ್ಯ ಆಕೆಗಿದೆ. ಅದೇ ರೀತಿ ಆಕೆಯನ್ನು ರಿಜೆಕ್ಟ್‌ ಮಾಡುವ ಸ್ವಾತಂತ್ರ್ಯ ಕೂಡ ನಮಗಿದೆ' ಎಂದು ಬರೆದಿದ್ದಾರೆ.

 

 

PREV

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ವೇದಿಕೆಯಲ್ಲಿ ವಧು ಸದ್ದಿಲ್ಲದೆ ಮಾಡಿದ ಅದೊಂದು ಕೆಲಸ ಇಂಟರ್‌ನೆಟ್‌ನಲ್ಲಿ ಫುಲ್ ವೈರಲ್ ಆಯ್ತು..
ಬಾಲಿವುಡ್‌ ಈ ಸ್ಟಾರ್ ನಟಿಯರು ರಿಜೆಕ್ಟ್ ಮಾಡಿದ್ರು ಆ ಸಿನಿಮಾ; ಆದ್ರೆ ಮುಂದೆ ಅವರೆಲ್ಲರ ಲೈಫ್‌ನಲ್ಲಿ ಏನಾಯ್ತು?