ತಡರಾತ್ರಿಯವರೆಗೆ ಕೆಲಸ ಮಾಡೋದು ಈಗ ಅನಿವಾರ್ಯ. ಮತ್ತೆ ಕೆಲವರು ಕೆಲಸ ಮುಗಿದ್ರೂ ಸಾಮಾಜಿಕ ಜಾಲತಾಣದಲ್ಲಿ ಸ್ಕ್ರೋಲಿಂಗ್ ಮಾಡ್ತಾ ಕುಳಿತಿರ್ತಾರೆ. ಈ ನಿಮ್ಮ ನಿದ್ರಾಹೀನತೆ ನಿಮ್ಮ ಹಾಗೂ ಸಂಗಾತಿ ಸಂಬಂಧವನ್ನು ಹಾಳು ಮಾಡುತ್ತದೆ. ಹಾರ್ಮೋನುಗಳ ಅಸಮತೋಲನ ಲೈಂಗಿಕ ಆರೋಗ್ಯಕ್ಕೆ ಹಾನಿ ಮಾಡುತ್ತೆ.
ನಿದ್ರೆ ಮತ್ತು ಮಾನಸಿಕ ಆರೋಗ್ಯ ಒಂದೇ ನಾಣ್ಯದ ಎರಡು ಮುಖಗಳು. ನಿದ್ರಾಹೀನತೆಯಿಂದ ನಾನಾ ಆರೋಗ್ಯ ಸಮಸ್ಯೆ ಜನರನ್ನು ಕಾಡುತ್ತದೆ. ನಿದ್ರೆ ಕೊರತೆ ಜೀವನದ ಗುಣಮಟ್ಟದ ಮೇಲೆ ಪರಿಣಾಮ ಬೀರುತ್ತದೆ. ನಿದ್ರೆ ಸಂತಾನೋತ್ಪತ್ತಿ ಆರೋಗ್ಯದ ಮೇಲೂ ಪರಿಣಾಮ ಬೀರುತ್ತದೆ. ನಿದ್ರೆ ಕೊರತೆಯು ಲೈಂಗಿಕ ಹಾರ್ಮೋನುಗಳನ್ನು ಏರುಪೇರು ಮಾಡುತ್ತದೆ. ಈಗಿನ ದಿನಗಳಲ್ಲಿ ತಡರಾತ್ರಿಯವರೆಗೆ ಎಚ್ಚರವಿರುವವರ ಸಂಖ್ಯೆ ಹೆಚ್ಚಾಗಿದೆ. ಇದ್ರಲ್ಲಿ ಮಹಿಳೆಯರೂ ಸೇರಿದ್ದಾರೆ. ಮಹಿಳೆಯರು ತಡರಾತ್ರಿಯವರೆಗೆ ಎಚ್ಚರವಾಗಿದ್ದರೆ ಅದ್ರಿಂದ ಪ್ರೊಜೆಸ್ಟರಾನ್ ಮತ್ತು ಈಸ್ಟ್ರೊಜೆನ್ ಹಾರ್ಮೋನ್ ಬಿಡುಗಡೆಯಲ್ಲಿ ಏರುಪೇರಾಗುತ್ತದೆ. ಇದು ಸಂತಾನೋತ್ಪತ್ತಿ ಮೇಲೆ ಅಡ್ಡಪರಿಣಾಮ ಬೀರುತ್ತದೆ ಎಂದು ತಜ್ಞರು ಎಚ್ಚರಿಕೆ ನೀಡಿದ್ದಾರೆ.
ಹಾರ್ಮೋನ್ (Hormone) ಮೇಲೆ ನಿದ್ರೆ (Sleep)ಯ ಪ್ರಭಾವ : ಅತಿ ಹೆಚ್ಚು ಹಾರ್ಮೋನ್ ಸಮಸ್ಯೆಗೆ ಒಳಗಾಗುವವಳು ಮಹಿಳೆ. ಕೆಲ ಹಾರ್ಮೋನುಗಳು ನಿದ್ರೆ, ಆಹಾರ (Food) ಮತ್ತು ಸಾಮಾನ್ಯ ನಡವಳಿಕೆಯಿಂದ ಪ್ರಭಾವಕ್ಕೆ ಒಳಗಾಗುತ್ತವೆ. ಗ್ರೋಥ್ ಹಾರ್ಮೋನ್, ಮೆಲಟೋನಿನ್, ಕಾರ್ಟಿಸೋಲ್, ಲೆಪ್ಟಿನ್ ಮತ್ತು ಗ್ರೆಲಿನ್ ಮಟ್ಟಗಳು ನಿದ್ರೆ ಮತ್ತು ಸಿರ್ಕಾಡಿಯನ್ ಲಯಗಳಿಂದ ಬಲವಾಗಿ ಪ್ರಭಾವಿತವಾಗುತ್ತವೆ.
undefined
ನೀರಿಗೂ ಹೆದರೋ ಮಾನಸಿಕ ಕಾಯಿಲೆಯೊಂದಿದೆ, ಇಂಥ ಅನಾರೋಗ್ಯಕ್ಕೇನು ಕಾರಣ?
ಸಂತಾನೋತ್ಪತ್ತಿ (Reproduction) ಮೇಲೆ ನಿದ್ರೆಯ ಪ್ರಭಾವ : ಪ್ರತಿಯೊಬ್ಬ ಮನುಷ್ಯನಿಗೂ ಪ್ರತಿ ದಿನ ಆರರಿಂದ ಏಳು ಗಂಟೆಗಳ ನಿದ್ರೆಯ ಅವಶ್ಯಕತೆ ಇರುತ್ತದೆ. ಈ ನಿದ್ರೆ ಕಡಿಮೆಯಾದಲ್ಲಿ ಅದು ಹಾರ್ಮೋನ್ ಗಳನ್ನು ಅಸಮತೋಲನಗೊಳಿಸುತ್ತದೆ. ಸಂತಾನೋತ್ಪತ್ತಿಗೆ ಸಹಾಯ ಮಾಡಬಲ್ಲ ಹಾರ್ಮೋನ್ ಮೇಲೂ ಇದು ಇದು ನಕಾರಾತ್ಮಕ ಪ್ರಭಾವ ಬೀರುತ್ತದೆ. ಅನಿಯಮಿತ ಎಸ್ಟ್ರಸ್ ಚಕ್ರ (Irregular Estrous Cycle), ಸಂತಾನೋತ್ಪತ್ತಿ ದರದಲ್ಲಿ (Productivity Rate) ಇಳಿಕೆ ಜೊತೆಗೆ ಅಂಡಾಶಯದ (Ovary) ಅಕಾಲಿಕ ಕುಸಿತ ಸೇರಿದಂತೆ ಸ್ಥೂಲಕಾಯ, ಇನ್ಸುಲಿನ್ ಸೂಕ್ಷ್ಮತೆ, ಮಧುಮೇಹ, ಹಸಿವಿನ ಅಸ್ವಸ್ಥತೆಯಂತಹ ಸಮಸ್ಯೆ ಕಾಡುತ್ತದೆ.
ಪ್ರೊಜೆಸ್ಟರಾನ್ ಮಟ್ಟದಲ್ಲಿ ಇಳಿಕೆ : ನಿದ್ರೆ ಕಡಿಮೆ ಆಗುವ ಕಾರಣ ಮಹಿಳೆಯರ ಪ್ರೊಜೆಸ್ಟರಾನ್ ಮಟ್ಟದಲ್ಲಿ ಇಳಿಕೆ ಕಂಡು ಬರುತ್ತದೆ. ಪ್ರೊಜೆಸ್ಟರಾನ್ ಗರ್ಭಾಶಯದ ಒಳಪದರವನ್ನು ನಿಯಂತ್ರಿಸುತ್ತದೆ. ಗರ್ಭಧಾರಣೆಗೆ ಇದು ಅವಶ್ಯಕ. ರಿಪ್ರೊಡಕ್ಟಿವ್ ಹೆಲ್ತ್ (Reproductive Health General) ಜರ್ನಲ್ 259 ಮಹಿಳೆಯರ ಅಧ್ಯಯನ ನಡೆಸಿದೆ. ಅಧ್ಯಯನದಲ್ಲಿ ಪಾಲ್ಗೊಂಡಿದ್ದ ಎಲ್ಲ ಮಹಿಳೆಯರು ನಿಯಮಿತವಾಗಿ ಮುಟ್ಟಿನ ಚಕ್ರಕ್ಕೆ ಒಳಗಾಗುತ್ತಿದ್ದರು. ಮಹಿಳೆಯರ ದೈನಂದಿನ ನಿದ್ರೆಯ ಅವಧಿಯನ್ನು ಇದ್ರಲ್ಲಿ ಗಮನಿಸಲಾಗಿದೆ. ಮಹಿಳೆಯರ ಪ್ರತಿ ಗಂಟೆಯ ನಿದ್ರೆಯ ಹೆಚ್ಚಳವು ಲೂಟಿಯಲ್ ಹಂತದ ಪ್ರೊಜೆಸ್ಟರಾನ್ ಮಟ್ಟವನ್ನು ಶೇಕಡಾ 9.4 ರಷ್ಟು ಹೆಚ್ಚಿಸಿದೆ.
ಮಹಿಳೆಯರಿಗೆ ಒತ್ತಡ ಹೆಚ್ಚಾದಂತೆ ಪ್ರೊಜೆಸ್ಟರಾನ್ ಇಳಿಕೆಯಾಗುತ್ತದೆ. ನಿದ್ರೆಯು ದೈಹಿಕ ಒತ್ತಡಕ್ಕೆ ಸಂಬಂಧಿಸಿದೆ. ನಿದ್ರೆ ಕಡಿಮೆಯಾದ್ರೆ ಪ್ರೊಜೆಸ್ಟರಾನ್ ಮಟ್ಟ ಕೂಡ ಇಳಿಕೆಯಾಗುತ್ತದೆ.
ಈಸ್ಟ್ರೊಜೆನ್ ಮೇಲೆ ನಿದ್ರೆಯ ಪ್ರಭಾವ : ಕಾರ್ಟಿಸೋಲ್ ಜೊತೆ ಈಸ್ಟ್ರೊಜೆನ್ ಸಂಬಂಧ ಹೊಂದಿದೆ. ನಿದ್ರೆ ಕೊರತೆಯು ಕಾರ್ಟಿಸೋಲ್ ಮಟ್ಟವನ್ನು ಹೆಚ್ಚಿಸುತ್ತದೆ. ಕಾರ್ಟಿಸೋಲ್ ಮಟ್ಟ ಹೆಚ್ಚಾದಂತೆ ಈಸ್ಟ್ರೊಜೆನ್ ಮಟ್ಟವನ್ನು ಕಡಿಮೆ ಮಾಡುತ್ತದೆ. ಅದಲ್ಲದೆ ಇದು ಥೈರಾಯ್ಡ್ ಗ್ರಂಥಿಯನ್ನು ನಿಧಾನಗೊಳಿಸುತ್ತದೆ. ಚಯಾಪಚಯ ಕ್ರಿಯೆಯ ಮೇಲೆ ಪರಿಣಾಮ ಬೀರುತ್ತದೆ. ಈಸ್ಟ್ರೊಜೆನ್ ಮಟ್ಟವು ಕಡಿಮೆಯಾದಾಗ ದೇಹದ ಉಷ್ಣತೆಯು ಸಹ ಪರಿಣಾಮ ಬೀರುತ್ತದೆ.
ಭಾರತದಲ್ಲಿ ಯುವಕರು ಅಧಿಕ ಕೊಲೆಸ್ಟ್ರಾಲ್ ಸಮಸ್ಯೆಗೆ ಬಲಿಯಾಗುತ್ತಿರೋದು ಯಾಕೆ?
ಹಾರ್ಮೋನ್ ರಿಪ್ಲೇಸ್ಮೆಂಟ್ ಥೆರಪಿ (Harmone Replacement Therapy) : ಮಹಿಳೆಯರು ಆರೋಗ್ಯವಾಗಿರಲು ನಿದ್ರೆ ಅನಿವಾರ್ಯ. ನಿದ್ರೆ ಸಮಸ್ಯೆ ಇರುವ ಮಹಿಳೆಯರು ಹಾರ್ಮೋನ್ ರಿಪ್ಲೇಸ್‌ಮೆಂಟ್ ಥೆರಪಿಗೆ ಒಳಗಾಗಬೇಕು. ಇದು ಈಸ್ಟ್ರೊಜೆನ್ ರಿಪ್ಲೇಸ್ಮೆಂಟ್ ಥೆರಪಿಯನ್ನು ಒಳಗೊಂದಿದೆ. ಈಸ್ಟ್ರೊಜೆನ್ ರಿಪ್ಲೇಸ್ಮೆಂಟ್ ಥೆರಪಿ ನಿದ್ರೆ ಮತ್ತು ಜೀವನದ ಗುಣಮಟ್ಟವನ್ನು ಸುಧಾರಿಸುತ್ತದೆ. ಋತುಬಂಧದ ಸಮಯದಲ್ಲಿ ಮಹಿಳೆಯರು ನಿದ್ರಾಹೀನತೆಗೆ ಒಳಗಾಗ್ತಾರೆ. ಅದನ್ನು ತಪ್ಪಿಸಲು ಈಸ್ಟ್ರೊಜೆನ್ ರಿಪ್ಲೇಸ್ಮೆಂಟ್ ಥೆರಪಿಯನ್ನು ಶಿಫಾರಸ್ಸು ಮಾಡಲಾಗುತ್ತದೆ.