ನಂಬಿಕೆಗೆ ಇನ್ನೊಂದು ಹೆಸರೇ ನಾಯಿ (Dog). ಶ್ವಾನ ಪ್ರೇಮಿಗಳು ಹಲವರಿದ್ದಾರೆ. ನಾಯಿಯನ್ನು ಪ್ರೀತಿಯಿಂದ ಸಾಕುತ್ತಾರೆ. ಮನೆ ಮಂದಿಯಷ್ಟೇ ಪ್ರೀತಿ ನೀಡುತ್ತಾರೆ. ಇಲ್ಲೊಬ್ಬಾಕೆಗೆ ನಾಯಿ ಪ್ರೀತಿ ಎಷ್ಟಿದೆಯೆಂದರೆ ಈಕೆ ನಾಯಿಗೆಂದೇ ತಿಂಗಳಿಗೆ 4,000 ರೂ. ಕೊಟ್ಟು ಮಿನರಲ್ ವಾಟರ್ (Water) ಖರೀದಿಸುತ್ತಾರೆ.
ನಾಯಿ (Dog) ಅಂದ್ರೆ ಸಿಕ್ಕಾಪಟ್ಟೆ ನಂಬಿಕಸ್ಥ. ತನ್ನನ್ನು ಪ್ರೀತಿಸುವವರನ್ನು ನಿಸ್ವಾರ್ಥವಾಗಿ ಮರಳಿ ಪ್ರೀತಿಸುತ್ತದೆ. ಅವರಿಗಾಗಿ ಪ್ರತಿಯಾಗಿ ಏನು ಮಾಡಲು ಸಹ ಸಿದ್ಧವಿರುತ್ತದೆ. ಹೀಗಾಗಿಯೇ ಹೆಚ್ಚಿನವರು ಜೊತೆಯಲ್ಲೇ ನಾಯಿಯನ್ನು ಸಾಕುತ್ತಾರೆ. ಅದಕ್ಕೆ ಲಕ್ಷಾಂತರ ರೂ. ಖರ್ಚು ಮಾಡುತ್ತಾರೆ. ಅದಕ್ಕೆ ಇರಲು ಜಾಗ, ತಿನ್ನಲು ಆಹಾರದ (Food) ವ್ಯವಸ್ಥೆ ಮಾಡಲು ಸಾವಿರಾರು ರೂ. ಖರ್ಚು ಮಾಡ್ತಾರೆ. ಅದರಲ್ಲೂ ಹೆಣ್ಣುಮಕ್ಕಳಿಗೆ ನಾಯಿಯೆಂದರೆ ತುಸು ಹೆಚ್ಚೇ ಪ್ರೀತಿ ಇರುತ್ತದೆ. ನಾಯಿಗಾಗಿ ಎಷ್ಟು ಖರ್ಚು ಮಾಡಲು ಸಿದ್ಧವಾಗಿರುತ್ತಾರೆ. ಆಕೆ ಇಲ್ಲೊಬ್ಬ ಮಹಿಳೆ ನಾಯಿಯ ಕುಡಿಯುವ ನೀರಿಗಾಗಿ ತಿಂಗಳಿಗೆ 4,000 ರೂ. ಕೊಟ್ಟು ವಾಟರ್ ಬಾಟಲ್ (Warer bottle) ಖರೀದಿಸುತ್ತಾರೆ.
4,000 ರೂ.. ಖರ್ಚು ಮಾಡೋದೇನೋ ಸರಿ. ಆದ್ರೆ ನೀರಿಗಾ ಅಂತ ಅಚ್ಚರಿಪಡ್ಬೇಡಿ ಅಸಲಿಯತ್ತು ನಾವ್ ಹೇಳ್ತೀವಿ. ಯುಕೆಯಲ್ಲಿನ ಡೆವೊನ್‌ನ ಎಕ್ಸೆಟರ್‌ನಿಂದ ಲಿಜ್ಜಿ ಪ್ಯಾಲಿಸ್ಟರ್, ಈ ವರ್ಷದ ಆರಂಭದಲ್ಲಿ ಐದು ತಿಂಗಳ ವಯಸ್ಸಿನ ಫ್ರೆಂಚ್ ಬುಲ್‌ಡಾಗ್ ಹೆನ್ರಿಯನ್ನು ತಮ್ಮ ಮನೆಗೆ ಕರೆದುಕೊಂಡು ಬಂದರು. ನಾಯಿಯನ್ನು ಅತಿಯಾಗಿ ಪ್ರೀತಿಸುವ ಲಿಜ್ಜಿ ಅದಕ್ಕೆ ಬೇಕಾದ ಎಲ್ಲಾ ವ್ಯವಸ್ಥೆಯನ್ನು ಮಾಡಿಕೊಂಡರು. ಆದಕ್ಕೆ ಇಷ್ಟವಾದ ಆಹಾರ, ಮಲಗಲು ಸೂಕ್ತವಾದ ಜಾಗವನ್ನು ಒದಗಿಸಿದರು. ಆದ್ರೆ ಏನ್ ಮಾಡಿದ್ರೂ ನಾಯಿ ನೀರು ಮಾತ್ರ ಕುಡೀತಾ ಇರ್ಲಿಲ್ವಂತೆ. ಲಿಜ್ಜಿ ಅದೆಷ್ಟು ಬಾರಿ ಪ್ರೀತಿಯಿಂದ ನೀರು ಕೊಟ್ಟರೂ ನಾಯಿ ನೀರು ಕುಡಿಯಲು ನಿರಾಕರಿಸುತ್ತಿತ್ತು. ಆಮೇಲಷ್ಟೇ ಲಿಜ್ಜಿಗೆ ಗೊತ್ತಾಯ್ತು ಹೆನ್ರಿಗೆ ನಲ್ಲಿ ನೀರು ಆಗಿ ಬರಲ್ಲಾಂತ.
2 ಕಿಮೀ ನಡೆದು ಮಾಲೀಕನಿಗೆ ಊಟ ತಲುಪಿಸುವ ಶ್ವಾನ: ವಿಡಿಯೋ ವೈರಲ್
ಹೆನ್ರಿ ಮೆಟ್ಟಿಲುಗಳನ್ನು ಏರಲು ಮತ್ತು ಒಂಟಿಯಾಗಿ ಮಲಗಲು ನಿರಾಕರಿಸಿದ್ದಲ್ಲದೆ, ಲಿಜ್ಜಿಯ ಎರಡು ವರ್ಷದ ಮಗಳು ಬಾಟಲಿಯಿಂದ ಕುಡಿಯುವುದನ್ನು ನೋಡಿದ ನಂತರ ಟ್ಯಾಪ್ ನೀರನ್ನು ತಿರಸ್ಕರಿಸಲು ಪ್ರಾರಂಭಿಸಿದನು. ನಾನು ಹೆನ್ರಿಯಂತಹ ನಾಯಿಯನ್ನು ಹಿಂದೆಂದೂ ಭೇಟಿ ಮಾಡಿಲ್ಲ. ಹೀಗಾಗಿಯೇ ನಾನು ಅವನಿಗಾಗಿ ಇದನ್ನೆಲ್ಲಾ ಮಾಡಲು ಇಷ್ಟಪಡುತ್ತೇನೆ. ಅವನನ್ನು ಅತಿ ಹೆಚ್ಚು ಪ್ರೀತಿಸುತ್ತೇನೆ ಎಂದು ಲಿಜ್ಜಿ ಹೇಳುತ್ತಾರೆ. ಪ್ರತಿದಿನ ಬೆಳಿಗ್ಗೆ ನಾನು ಟ್ಯಾಪ್ ನೀರನ್ನು ನೆಲದ ಮೇಲೆ ಹಾಕಿದಾಗ, ಅವನು ಅದನ್ನು ನೂಕುತ್ತಾನೆ ಮತ್ತು ನನ್ನ ಬಾಟಲ್ ನೀರು ಎಲ್ಲಿದೆ ಎಂಬಂತೆ ನನ್ನನ್ನು ನೋಡುತ್ತಾನೆ ಎಂದು ಲಿಜ್ಜಿ ಹೇಳುತ್ತಾರೆ
ಹೀಗಾಗಿ ಲಿಜ್ಜಿ ಬಾಟಲ್ ನೀರನ್ನು ಖರೀದಿಸಲು ಆರಂಭಿಸಿದರು. ನಾನು ಪ್ರತಿ ವಾರ 12 ಬಾಟಲಿಗಳ ನೀರಿನ ಎರಡು ಪ್ಯಾಕ್‌ಗಳನ್ನು ಖರೀದಿಸುತ್ತೇನೆ. ಇದರಿಂದ ತಿಂಗಳಿಗೆ 4,000 ರೂ. ವೆಚ್ಚವಾಗುತ್ತದೆ. ನಾನು ಕುಟುಂಬಕ್ಕಾಗಿ ಶಾಪಿಂಗ್ ಮಾಡಬೇಕು ಮತ್ತು ಅವನಿಗೆ ನೀರಿನ ಬಾಟಲಿಗಳನ್ನು ಖರೀದಿಸಬೇಕು ಎಂದು ಲಿಜ್ಜಿ ಹೇಳುತ್ತಾರೆ, ನಾನು ಟ್ಯಾಪ್ ನೀರನ್ನು ಬಾಟಲಿಗಳಲ್ಲಿ ಹಾಕಲು ಪ್ರಯತ್ನಿಸಿದೆ. ಆದರೆ ಆ ರೀತಿ ಮಾಡಿದಾಗ ಹೆನ್ರಿಗೆ ಗೊತ್ತಾಗುತ್ತದೆ ಮತ್ತು ಅವನು ನೀರು ಕುಡಿಯುವುದಿಲ್ಲ. ಹೀಗಾಗಿ ನಾನು ಈಗ ನಾಯಿಗೆ ಬಾಟಲಿ ನೀರನ್ನು ಮಾತ್ರ ಕೊಡುತ್ತಿದ್ದೇನೆ ಎಂದು ಲಿಜ್ಜಿ ಹೇಳುತ್ತಾರೆ.
12 ಲಕ್ಷ ಖರ್ಚು ಮಾಡಿ ನಾಯಿಯಂತಾದ ವ್ಯಕ್ತಿ..!
ಮಾತ್ರವಲ್ಲ ಹೆನ್ರಿ ಮನೆಯ ಸದಸ್ಯನಂತೆಯೇ ಆಗಿದೆ. ನಮ್ಮೆಲ್ಲರ ಜೊತೆಯೇ ಮಲಗುತ್ತದೆ. ಬೆಳಗ್ಗೆ ಎಲ್ಲರ ಜೊತೆಯೇ ಏಳುತ್ತದೆ. ನಮ್ಮೆಲ್ಲರ ಜೊತೆ ದಿನದ ಚಟುವಟಿಕೆಯಲ್ಲಿ ಭಾಗವಹಿಸುತ್ತದೆ ಎಂದು ಲಿಜ್ಜಿ ವಿವರಿಸುತ್ತಾರೆ. ಒಬ್ಬ ಬಳಕೆದಾರ, ನನ್ನ ಬೆಕ್ಕು ಮತ್ತು ನಾಯಿಯು ಟ್ಯಾಪ್ ನೀರನ್ನು ಕುಡಿಯುವುದಿಲ್ಲ ಎಂದು ಹೇಳಿದ್ದಾರೆ. ಇನ್ನೊಬ್ಬರು ನನ್ನ ಸಾಕುಪ್ರಾಣಿ ಫ್ರಿಡ್ಜ್‌ನಿಂದ ಫಿಲ್ಟರ್ ಮಾಡಿದ ನೀರು ಬಾಟಲಿ ನೀರನ್ನು ಮಾತ್ರ ಕುಡಿಯುತ್ತದೆ ಎಂದಿದ್ದಾರೆ.