ಇಡೀ ದಿನ ಕೆಲಸ ಮಾಡಿದ್ರೆ ಹಣ ಬರೋದಿಲ್ಲ. ಕೆಲಸವನ್ನು ಬುದ್ಧಿವಂತಿಕೆಯಿಂದ ಮಾಡ್ಬೇಕು. ಕೆಲವೊಮ್ಮೆ ನಿಮ್ಮ ಆಲಸ್ಯವೂ ನಿಮ್ಮ ಕೈ ಹಿಡಿಯುತ್ತೆ. ಈಕೆ ಅದಕ್ಕೆ ಉತ್ತಮ ನಿದರ್ಶನ. ಹೆಚ್ಚು ಶ್ರಮವಿಲ್ಲದೆ ಈಕೆ ಶ್ರೀಮಂತೆಯಾಗಿದ್ದು ಹೇಗೆ ಗೊತ್ತಾ?
ಹಣ ಗಳಿಸ್ಬೇಕು, ಕೋಟ್ಯಾಧಿಪತಿ ಆಗ್ಬೇಕು ಅಂದ್ರೆ ಏನೆಲ್ಲ ಪ್ರಯತ್ನ ನಡೆಸ್ಬೇಕು. ಬುದ್ಧಿವಂತಿಕೆ ಉಪಯೋಗಿಸಿ, ಹಗಲು – ಇರುಳು ಎನ್ನದೆ ಕೆಲಸ ಮಾಡಿ, ಸರಿಯಾದ ಜಾಗದಲ್ಲಿ ಹಣವನ್ನು ಹೂಡಿಕೆ ಮಾಡಿ ಆದಾಯ ಹೆಚ್ಚಿಸಿಕೊಳ್ಳಬೇಕು. ಯಾವುದೇ ಸ್ಕಿಲ್ ಇಲ್ದೆ, ಯಾವುದೇ ಕಠಿಣ ಪ್ರಯತ್ನ ಇಲ್ಲದೆ, ಆರಾಮವಾಗಿ ಕುಳಿತು, ಆಲಸ್ಯದಿಂದಲೂ ಕೋಟ್ಯಾಧಿಪತಿ ಆಗ್ಬಹುದು ಅಂದ್ರೆ ನೀವು ನಂಬ್ತೀರಾ? ಈ ಮಹಿಳೆ ಅದನ್ನೇ ವಾದಿಸಿದ್ದಾಳೆ. ತನ್ನ ಬಳಿ ಯಾವುದೇ ವಿಶೇಷ ಕೌಶಲ್ಯ ಇಲ್ಲ. ಮನೆಯಲ್ಲೇ ಕೆಲಸ ಮಾಡುವ ನಾನು, ನನ್ನ ಆಲಸ್ಯದಿಂದಲೇ ಕೋಟ್ಯಾದಿಪತಿ ಆಗಿದ್ದೇನೆ ಎಂದಿದ್ದಾಳೆ. ಅಷ್ಟೇ ಅಲ್ಲ ಆಲಸ್ಯದಿಂದ ಹೇಗೆ ಹಣ ಸಂಪಾದನೆ ಮಾಡ್ಬಹುದು ಎನ್ನುವ ಬಗ್ಗೆ ಟಿಪ್ಸ್ ಕೂಡ ನೀಡಿದ್ದಾಳೆ.
ಆಲಸ್ಯ (Laziness) ದಿಂದ ಕೋಟ್ಯಾಧಿಪತಿ (Millionaire) ಆದ ಮಹಿಳೆ ಯಾರು? : ಮಹಿಳೆಯ ಹೆಸರು ಪಾವಿನಿ ಲೆರ್ಟ್‌ಜಿಟ್‌ಬಾನ್‌ಜಾಂಗ್. ಆಕೆಗೆ 42 ವರ್ಷ. ಕೆಲಸ ಮಾಡುವ ಭರದಲ್ಲಿ ಆಕೆ ಅನೇಕ ವರ್ಷವನ್ನು ಹಾಳು ಮಾಡಿದ್ದಾಳೆ. ಮದುವೆ ಮುರಿದು ಬಿದ್ಮೇಲೆ ಆಕೆಗೆ ಜ್ಞಾನೋದಯವಾಗಿದೆ. ಆ ಸಮಯದಲ್ಲಿ ಪಾವಿನಿ 100,000 ಡಾಲರ್ ಅಂದ್ರೆ ಸುಮಾರು 83 ಲಕ್ಷ ರೂಪಾಯಿ ಸಾಲವನ್ನು ಮಾಡಿದ್ದಳು. ತನ್ನ ಜೀವನ ಶೈಲಿಯಲ್ಲಿ ಬದಲಾವಣೆ ಮಾಡೋದು ಅನಿವಾರ್ಯವೆಂದು ಭಾವಿಸಿದ ಆಕೆ ಅದರಂತೆ ನಡೆದಳು. ಈಗ ಆಲಸಿ ಜೀವನ ನಡೆಸುತ್ತಿದ್ದರೂ ಸಾಕಷ್ಟು ಹಣವನ್ನು ಸಂಪಾದನೆ ಮಾಡಿದ್ದಾಳೆ.
undefined
ವಕ್ರ ಕುತ್ತಿಗೆಯಿಂದ ಮುಜುಗರ, ಕೆಲಸ ಸಿಗದೇ ಆತ್ಮಹತ್ಯೆಗೆ ಪ್ರಯತ್ನಿಸಿದ ಈಕೆ ಈಗ ದೊಡ್ಡ ಕಂಪನಿ CEO
ಪಾವಿನಿ, ಅಮೆರಿಕಾದ ನ್ಯೂಯಾರ್ಕ್ ನಲ್ಲಿ ವಾಸವಾಗಿದ್ದಾಳೆ. ಆಕೆ ಒಂದು ವರ್ಷದಲ್ಲಿ 380,000 ಡಾಲರ್ ಸುಮಾರು 3.16 ಕೋಟಿ ರೂಪಾಯಿಗೂ ಹೆಚ್ಚು ಆದಾಯ ಗಳಿಸ್ತಾಳೆ. ಇದಕ್ಕಾಗಿ ಆಕೆ ಹೆಚ್ಚಿನ ಕಷ್ಟಪಡೋದಿಲ್ಲ. ತನಗೆ ಸುಸ್ತಾಗುವ ಯಾವುದೇ ಕೆಲಸ ಮಾಡೋದಿಲ್ಲ. ಮನೆಯಲ್ಲೇ ಕೆಲಸ ಮಾಡುವ ಆಕೆ ಓವರ್ ಟೈಂ ಕೆಲಸ ಕೂಡ ಮಾಡೋದಿಲ್ಲ. ನನ್ನನ್ನು ನಾನು ಆಲಸಿ ಕೋಟ್ಯಾಧಿಪತಿ ಎಂದೇ ಗುರುತಿಸುತ್ತೇನೆ ಎನ್ನುವ ಪಾವಿನಿ, ಯಾವುದೇ ಸ್ಕಿಲ್ ಇಟ್ಕೊಂಡು ನಾನು ಹಣ ಸಂಪಾದನೆ ಮಾಡೋದಿಲ್ಲ ಎನ್ನುತ್ತಾಳೆ. ಮನೆಯಲ್ಲೇ ನಾನು ಕೆಲಸ ಮಾಡ್ತೇನೆ. ನನಗೆ ಅಡುಗೆ ಮಾಡೋದು ಬೇಸರದ ಕೆಲಸ. ಮನೆ ಸ್ವಚ್ಛಗೊಳಿಸೋದು ಕೂಡ ಇಷ್ಟವಿಲ್ಲ. ನೆಟ್‌ವರ್ಕಿಂಗ್ ಈವೆಂಟ್‌ಗಳಿಗೆ ಹೋಗಿ ನಾನು ಸಮಯ ಹಾಳು ಮಾಡೋದಿಲ್ಲ. ನಾನು ಆಲಸಿ ಲೈಫ್ ಸ್ಟೈಲ್ ಅಳವಡಿಸಿಕೊಂಡಿದ್ದು ಇದು ನನ್ನನ್ನು ಉತ್ತಮಗೊಳಿಸಿದೆ ಎನ್ನುತ್ತಾಳೆ ಪಾವಿನಿ.
ಪಾವಿನಿ ಪಾಲಕರು, ಥಾಯ್ಲೆಂಡ್‌ನ ಬ್ಯಾಂಕಾಕ್‌ನಿಂದ ಅಮೆರಿಕಕ್ಕೆ ಬಂದ ನಿರಾಶ್ರಿತರು. ಹಾಗಾಗಿ ಅವರು ಇತರರಿಗಿಂತ ಹತ್ತು ಪಟ್ಟು ಹೆಚ್ಚು ಕೆಲಸ ಮಾಡ್ಬೇಕಿತ್ತು. ಮೊದಲು ಪಾವಿನಿ ಕೂಡ ಕಷ್ಟದ ಕೆಲಸಗಳನ್ನು ಒಪ್ಪಿಕೊಳ್ತಿದ್ದಳು. ಬೇರೆಯವರನ್ನು ಖುಷಿಪಡಿಸಲು ಮುಂದಾಗ್ತಿದ್ದಳು. ಒಳ್ಳೆ ಅವಕಾಶ ಕೈಬಿಟ್ಟು ಹೋಗದಿರಲಿ ಎನ್ನುವುದು ಆಕೆಯ ಆಸೆಯಾಗಿತ್ತು. ಕಷ್ಟಪಟ್ಟರೆ ಫಲ ಸಿಗುತ್ತೆ ಎಂದು ಆಕೆ ಭಾವಿಸಿದ್ದಳು. 2019 ರಲ್ಲಿ ಮದುವೆ ಮುರಿದುಬಿತ್ತು. ಮಾರ್ಚ್ 2020 ರಲ್ಲಿ ವಿಚ್ಛೇದನದ ನಂತರ ಕಾನೂನು ಶುಲ್ಕದ ಕಾರಣ ಸಾಲ ಹೆಚ್ಚಾಯ್ತು. ನಂತ್ರ ಕೊರೊನಾ ಹಾಗೂ ತನ್ನ ಆಲಸಿ ಜೀವನಶೈಲಿ ನನ್ನನ್ನು ಶ್ರೀಮಂತೆಯನ್ನಾಗಿ ಮಾಡಿದೆ ಎನ್ನುತ್ತಾಳೆ ಪಾವಿನಿ.
ಪಿಯುಸಿ ಫೇಲ್ ಆಗಿ, ಮೊದಲ ಕೆಲಸಕ್ಕೆ ಕೇವಲ 11000 ಸಂಬಳ ಪಡೆದ ವ್ಯಕ್ತಿ ಈಗ ಕೋಟ್ಯಾಧಿಪತಿ!
ಶ್ರೀಮಂತರಾಗಲು ಆಲಸಿ ಟಿಪ್ಸ್ ನೀಡಿದ ಪಾವಿನಿ :
• ನಿಮಗೆ ಅಡುಗೆ ಮಾಡಲು ಇಷ್ಟವಿಲ್ಲವೆಂದ್ರೆ ವಾರದಲ್ಲಿ ಒಂದು ದಿನ ನಿಗದಿಪಡಿಸಿಕೊಳ್ಳಿ. ಆ ಒಂದು ದಿನ ವಾರ ಪೂರ್ತಿ ಆಗುವಷ್ಟು ಆಹಾರ ಸಿದ್ಧಪಡಿಸಿ ಎನ್ನುತ್ತಾಳೆ ಪಾವಿನಿ.
• ಬಿಲ್ ಗಳನ್ನು ತಕ್ಷಣ ಪಾವತಿಸಿ. ನಾಳೆ ನಾಳೆ ಅಂತಾ ಮುಂದುಡಬೇಡಿ.
• ಜಿಮ್ ಸದಸ್ಯತ್ವಕ್ಕಾಗಿ ಹಣವನ್ನು ಖರ್ಚು ಮಾಡಬೇಡಿ. ಆಹಾರ ಖರೀದಿ ಸೇರಿದಂತೆ ಸಣ್ಣಪುಟ್ಟ ಖರೀದಿ ವೇಳೆ ನಾಲ್ಕು ಹೆಜ್ಜೆ ನಡೆಯಿರಿ.
• ನೆಟ್‌ವರ್ಕಿಂಗ್ ಈವೆಂಟ್‌ಗಳಿಗೆ ಹೋಗುವುದನ್ನು ತಪ್ಪಿಸಿ. ಜನರೊಂದಿಗೆ ಬೆರೆಯುವ ಮನಸ್ಸಿದ್ರೆ ಮಾತ್ರ ಹೋಗಿ ಎನ್ನುತ್ತಾಳೆ ಪಾವಿನಿ.
• ಕಠಿಣ ಕೆಲಸಕ್ಕಿಂತ ಸ್ಮಾರ್ಟ್ ವರ್ಕ್ ಗೆ ಪಾವಿನಿ ಸಮಯ ವಿನಿಯೋಗಿಸಿದ್ದಾಳೆ. ಕಚೇರಿಯಲ್ಲಿ ಪ್ರಮೋಷನ್ ಸಿಗುವ ಕೆಲಸ ಮಾಡ್ತಾಳೆ. ಯಶಸ್ವಿ ವ್ಯಕ್ತಿಗಳನ್ನು ಸ್ನೇಹಿತರನ್ನಾಗಿ ಮಾಡಿಕೊಂಡಿದ್ದಾಳೆ. ಒಂದೇ ಕೆಲಸಕ್ಕೆ ಓವರ್ ಟೈಂ ನೀಡುವ ಬದಲು ಆ ಸಮಯವನ್ನು ಬೇರೆ ಕೆಲಸಕ್ಕೆ ಬಳಸಿಕೊಂಡಿದ್ದಾಳೆ. ಹಣವನ್ನು ಷೇರಿಗೆ ಇನ್ವೆಸ್ಟ್ ಮಾಡಿದ್ದಾಳೆ. ಇದ್ರಿಂದ ವರ್ಷ 126,000 ಡಾಲರ್ ಸಿಗುತ್ತದೆ. ಈ ಹಣದಲ್ಲಿ ಮೊದಲು ಸಾಲ ತೀರಿಸಿ ನಂತ್ರ ಮೂರು ಬೆಡ್ ರೂಮಿನ ಮನೆ ಖರೀದಿ ಮಾಡಿದ್ದಾಳೆ. ಈಗಾಗಲೇ ಬ್ಯಾಂಕಾಂಕ್ ಟೂರ್ ಮುಗಿಸಿದ್ದು, ಮುಂದಿನ ವರ್ಷ ಮತ್ತೊಂದಿಷ್ಟು ದೇಶ ಸುತ್ತುವ ಪ್ಲಾನ್ ಮಾಡಿದ್ದಾಳೆ.