
ಶಬರಿಮಲೆ ಸನ್ನಿಧಾನದಲ್ಲಿ 100 ವರ್ಷದ ಪಾರುಕುಟ್ಟಿಯಮ್ಮ 18 ಮೆಟ್ಟಿಲು (ಪತಿನೆಟ್ಟಂ ಪಾಡಿ) ಏರುತ್ತಿರುವುದನ್ನು ನೋಡಿದ ಇತರ ಭಕ್ತರು ಕೂಡ ಹುಮ್ಮಸ್ಸಿನಿಂದ ಹೆಜ್ಜೆ ಹಾಕಿದರು.
ಶತಾಯುಷಿ ವಯನಾಡಿನ ಮೂನ್ನನಕುಜಿಯ ಪಾರುಕುಟ್ಟಿಯಮ್ಮ 41 ದಿನಗಳ ವೃತಾಚರಣೆಯನ್ನು ಮಾಡಿ ತನ್ನ ಮೊಮ್ಮಗ ಮತ್ತು ಮಕ್ಕಳೊಂದಿಗೆ ಬೆಟ್ಟದ ದೇಗುಲ ಶಬರಿಮಲೆಗೆ ತನ್ನ ಚೊಚ್ಚಲ ಯಾತ್ರೆ ಮಾಡಿದರು. ಕೇರಳದ ವಯನಾಡಿನಿಂದ ನೂರು ವರ್ಷದ ಮಹಿಳೆಯೊಬ್ಬರು ಶಬರಿಮಲೆ ಅಯ್ಯಪ್ಪ ದೇವಸ್ಥಾನಕ್ಕೆ ಚೊಚ್ಚಲ ಭೇಟಿ ನೀಡಿದ್ದರಿಂದ ಜೊತೆಗೆ ಭಕ್ತರು ತುಂಬಿ ತುಳುಕುತ್ತಿದ್ದರಿಂದ ವಿಶೇಷ ವ್ಯವಸ್ಥೆ ಮಾಡಲಾಗಿತ್ತು.
ಹುಬ್ಬಳ್ಳಿ ಮತ್ತು ಕೊಟ್ಟಾಯಮ್ ನಡುವೆ ವಿಶೇಷ ವೀಕ್ಲಿ ಎಕ್ಸ್ಪ್ರೆಸ್ ರೈಲು ಸಂಚಾರ, ಶಬರಿಮಲೆ ಹೋಗೋರಿಗೆ ಅನುಕೂಲ
ಮೊದಲ ಬಾರಿಗೆ ಶಬರಿಮಲೆ ಯಾತ್ರೆ ಕೈಗೊಂಡ ಪಾರುಕುಟ್ಟಿಯಮ್ಮ ದಾರಿಯುದ್ದಕ್ಕೂ, ಕಡಂಪುಳ, ಗುರುವಾಯೂರ್, ವೈಕೋಮ್ ಮತ್ತು ಎಟ್ಟುಮನೂರ್ ಮುಂತಾದ ದೇವಾಲಯಗಳಲ್ಲಿ ದರ್ಶನ ಪಡೆದು ಶಬರಿಮಲೆ ತಲುಪಿದರು.
ಯಾತ್ರಾರ್ಥಿ ಗುಂಪು ಭಾನುವಾರ ಮಧ್ಯಾಹ್ನ ಪಂಪಾ ತಲುಪಿದ್ದರೂ ಮಳೆಯಿಂದಾಗಿ ಸನ್ನಿಧಾನಕ್ಕೆ ತೆರಳುವುದನ್ನು ಸೋಮವಾರಕ್ಕೆ ಮುಂದೂಡಲಾಯಿತು. ಪಂಪಾ ನದಿ ಬಳಿಯಿಂದ ಪಲ್ಲಕ್ಕಿಯಲ್ಲಿ ಆಕೆಯನ್ನು ಸನ್ನಿಧಾನಕ್ಕೆ ಕರೆತರಲಾಯಿತು. ಪಾರುಕುಟ್ಟಿಯಮ್ಮ ಆಗಮಿಸಿದ ಸುದ್ದಿ ತಿಳಿದ ದೇವಸ್ವಂ ಮಂಡಳಿಯವರು ಆಕೆಗೆ ಪೊನ್ನಡ (ಚಿನ್ನದ ದಾರದಿಂದ ನೇಯ್ದ ಬಟ್ಟೆ) ನೀಡಿ ಗೌರವಿಸಿದರು.
ಭಗವಾನ್ ಅಯ್ಯಪ್ಪನ ದರ್ಶನ ಪಡೆದ ನಂತರ, ಭಾವಪರವಶಳಾದ ಪಾರುಕುಟ್ಟಿಯಮ್ಮ ತನ್ನ ಸಂತೋಷವನ್ನು ವ್ಯಕ್ತಪಡಿಸಿದಳು ಮತ್ತು ದಾರಿಯುದ್ದಕ್ಕೂ ತನಗೆ ಸಹಾಯ ಮಾಡಿದ ಎಲ್ಲರಿಗೂ ಧನ್ಯವಾದಗಳನ್ನು ಅರ್ಪಿಸಿದಳು. ಜೊತೆಗೆ ದರ್ಶನಕ್ಕೆ ಅವಕಾಶ ಕಲ್ಪಿಸಿದವರಿಗೆ ಒಳ್ಳೆಯದಾಗಲಿ. ತನ್ನ ಮೊಮ್ಮಗನ ಪತ್ನಿ ಇಸ್ರೇಲ್‌ನಲ್ಲಿ ಉದ್ಯೋಗದಲ್ಲಿದ್ದಾಳೆ. ಆದಷ್ಟು ಬೇಗ ಇಸ್ರೇಲ್-ಹಮಾಸ್ ಕದನ ನಿಲ್ಲಲಿ ಎಂದು ಪ್ರಾರ್ಥಿಸಿದ್ದಾಳೆ.
ಅಯ್ಯಪ್ಪ ಮಾಲಾಧಾರಿಗಳಿಗೆ ಕೆಎಸ್ಆರ್‌ಟಿಸಿ ಗುಡ್‌ನ್ಯೂಸ್ : ಶಬರಿಮಲೆಗೆ ವೋಲ್ವೋ ಬಸ್ ಸೇವೆ ಆರಂಭ
1923ರಲ್ಲಿ ಜನಿಸಿದ ಪಾರುಕುಟ್ಟಿಯಮ್ಮಗೆ ಅಯ್ಯಪ್ಪನ ದರ್ಶನ ಪಡೆಯುವುದು ಬಾಲ್ಯದ ಕನಸಾಗಿತ್ತು. ಬಾಲ್ಯದಲ್ಲಿ ಆ ಕನಸು ಈಡೇರದ ಕಾರಣ ಇಳಿವಯಸ್ಸಿನಲ್ಲಿ ತನ್ನ ಆಸೆ ಈಡೇರಿಸಿಕೊಂಡಿದ್ದಾಳೆ. ಮೊಮ್ಮಕ್ಕಳು ಮತ್ತು ಅವರ ಮಕ್ಕಳು ಹಲವಾರು ಬಾರಿ ಶಬರಿಮಲೆಗೆ ಭೇಟಿ ನೀಡಿದ್ದಾರೆ. ಎಲ್ಲರೂ ವಿಶ್ರಾಂತಿ ಪಡೆಯುವಂತೆ ಪ್ರೋತ್ಸಾಹಿಸಿದರೂ ಪಾರುಕುಟ್ಟಿ ಅಮ್ಮ 100ನೇ ವಯಸ್ಸಿಗೆ ಬೆಟ್ಟ ಹತ್ತಲು ಹುಮ್ಮಸ್ಸು ತೋರಿಸಿದ್ದಳು. ಆಕೆಯ ಆಸೆಗೆ ಮಕ್ಕಳು ಮೊಮ್ಮಕ್ಕಳು ನೀರೆರೆದಿದ್ದರು.
ಕೇರಳದ ಶಬರಿಮಲೆಯ ಅಯ್ಯಪ್ಪ ದೇವಾಲಯದ ಗರ್ಭಗುಡಿ ದರ್ಶನ, ಶಬರಿಮಲೆ ಅಯ್ಯಪ್ಪ ಮಂಡಲ ಮಾಸಂ ನವೆಂಬರ್ 17 ರಂದು ಪ್ರಾರಂಭವಾಗಿದ್ದು. ಪ್ರತಿದಿನ ಲಕ್ಷಾಂತರ ಭಕ್ತರು ಶಬರಿಮಲೆಗೆ ಭೇಟಿ ನೀಡುತ್ತಾರೆ. ಜನವರಿ 15, 2024ರಂದು ಮಕರ ಜ್ಯೋತಿ ದರ್ಶನವಾಗಲಿದೆ.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.