Viral Video: ಪ್ರಾಂಶುಪಾಲರನ್ನು ಕಾಲಿಗೆ ಬೀಳಿಸಿಕೊಂಡ ವಿದ್ಯಾರ್ಥಿಗಳು

By Suvarna NewsFirst Published May 14, 2022, 5:37 PM IST
Highlights

ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್  ತಲೆ ತಗ್ಗಿಸುವ ಕೆಲಸ ಮಾಡಿದೆ. ಹಾಜರಾತಿ ವಿಚಾರದಲ್ಲಿ ಪ್ರಾಂಶುಪಾಲರ (Principal0 ಜೊತೆ ಜಗಳವಾಡಿದ ಎಬಿವಿಪಿ ನಾಯಕ (Leader), ವಿದ್ಯಾರ್ಥಿನಿ ಪಾದ ಮುಟ್ಟುವಂತೆ ಒತ್ತಡ (Pressure) ಹೇರಿದ್ದಾನೆ. 

ಗುರು (Teacher) – ಶಿಷ್ಯರ ಸಂಬಂಧ ಪವಿತ್ರವಾದದ್ದು. ಗುರುವನ್ನು ದೇವರಿ (God) ಗೆ ಹೋಲಿಕೆ ಮಾಡಲಾಗುತ್ತದೆ. ಎಂದೂ ಗುರುವನ್ನು ಅವಮಾನಿಸಬಾರದು. ಗುರುವಿಗೆ ಅಪಮಾನ ಮಾಡುವ ಶಿಷ್ಯ ಇದ್ದೂ ಸತ್ತಂತೆ. ಆದ್ರೆ ಇತ್ತೀಚಿನ ದಿನಗಳಲ್ಲಿ ಈ ಗುರು – ಶಿಷ್ಯರ ಸಂಬಂಧಕ್ಕೆ ಕಳಂಕ ತರುವ ಅನೇಕ ಘಟನೆಗಳು ನಡೆಯುತ್ತಿವೆ. ವಿದ್ಯೆ ಕಲಿಸಿದ ಗುರುವನ್ನು ಬಲಗಾಲಿನಲ್ಲಿ ಒದ್ದು ಹೋಗುವ ಶಿಷ್ಯರೇ ಈಗ ಹೆಚ್ಚಾಗಿದ್ದಾರೆ. ಯಾವ್ಯಾವುದೋ ಕಾರಣ ಹೇಳಿ, ಗುರುವಿಗೆ ಅವಮಾನ ಮಾಡುವ ಮಕ್ಕಳನ್ನು ನಾವು ನೋಡ್ತಿರುತ್ತೇವೆ. ಈಗ ಅಹಮದಾಬಾದ್ (Ahmedabad ) ನಲ್ಲಿ ಗುರುವಿನ ಘನತೆಗೆ ಕುಂದು ತರುವ ಘಟನೆಯೊಂದು ಬೆಳಕಿಗೆ ಬಂದಿದೆ. ಗುರುವನ್ನು ದೇವರ ಸ್ಥಾನದಲ್ಲಿಟ್ಟು ಪೂಜೆ ಮಾಡ್ತೇವೆ ಎನ್ನುವ ಭಾರತೀಯರ ಭಾವನೆಗೆ ಧಕ್ಕೆಯಾಗುವ ಘಟನೆ ನಡೆದಿದೆ. ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ (ಎಬಿವಿಪಿ) ಅಹಮದಾಬಾದ್ ಘಟಕದ ಕಾರ್ಯವೈಖರಿಯಿಂದ ಶೈಕ್ಷಣಿಕ ಜಗತ್ತು ತಲೆತಗ್ಗಿಸಿದೆ. 

ಸಾಲ್ ಇಂಜಿನಿಯರಿಂಗ್ ಕಾಲೇಜಿನಲ್ಲಿ ಗುರುವಿಗೆ ಅವಮಾನ : ಸಾಲ್ ಇಂಜಿನಿಯರಿಂಗ್ ಕಾಲೇಜಿನಲ್ಲಿ ಗುರುವನ್ನು ಅವಮಾನಿಸಲಾಗಿದೆ. ಮಹಿಳಾ ಪ್ರಾಂಶುಪಾಲರು, ವಿದ್ಯಾರ್ಥಿನಿಯ ಪಾದ ಮುಟ್ಟಿದ ಘಟನೆ ಬೆಳಕಿಗೆ ಬಂದಿದೆ. ಇದಕ್ಕೆಲ್ಲ ಕಾರವಾಗಿದ್ದು ಎಬಿವಿಪಿ ಸಂಘಟನೆ. ಅಹಮದಾಬಾದ್‌ನ ಸೈನ್ಸ್ ಸಿಟಿ ರಸ್ತೆಯಲ್ಲಿ ಸಾಲ್ ಟೆಕ್ನಿಕಲ್ ಇನ್‌ಸ್ಟಿಟ್ಯೂಟ್‌ ಇದೆ.  ಡಿಪ್ಲೊಮಾ ಇಂಜಿನಿಯರಿಂಗ್‌ನ ಪ್ರಥಮ, ದ್ವಿತೀಯ ಮತ್ತು ನಾಲ್ಕನೇ ವರ್ಷದ 12 ವಿದ್ಯಾರ್ಥಿಗಳ ಹಾಜರಾತಿ ಶೇಕಡಾ 75ಕ್ಕಿಂತ ಕಡಿಮೆ ಇತ್ತು ಎನ್ನಲಾಗಿದೆ. ಈ ಕಾರಣಕ್ಕೆ ಪ್ರಾಂಶುಪಾಲರು, ವಿದ್ಯಾರ್ಥಿಗಳಿಗೆ ಅವರ ಪೋಷಕರನ್ನು ಕರೆದುಕೊಂಡು ಬರುವಂತೆ ಹೇಳಿದ್ದಾರೆ. ಅದ್ರಲ್ಲಿ ಕೆಲ ವಿದ್ಯಾರ್ಥಿಗಳು ಪ್ರಾಂಶುಪಾಲರನ್ನು ಕರೆದುಕೊಂಡು ಬಂದಿದ್ದಾರೆ. 

ಆದ್ರೆ ಕೆಲ ಮಕ್ಕಳು ಪಾಲಕರನ್ನು ಕರೆದುಕೊಂಡು ಬಂದಿರಲಿಲ್ಲ. ಅವರು ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ವಿದ್ಯಾರ್ಥಿ ನಾಯಕರಿಗೆ ವಿಷ್ಯ ತಿಳಿಸಿದ್ದಾರೆ. ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ನ ಸುಮಾರು 100 ವಿದ್ಯಾರ್ಥಿಗಳೊಂದಿಗೆ, ನಾಯಕರು ಪ್ರಾಂಶುಪಾಲರ ಕಚೇರಿ ಪ್ರವೇಶಿಸಿದ್ದಾರೆ.

ಮಗು ತೂಕ ಏರ್ತಿಲ್ಲ ಅನ್ನೋ ಚಿಂತೆನಾ? ಈ ಆಹಾರ ನೀಡಿದ್ದೀರಾ?

ಪ್ರಾಂಶುಪಾಲರ ಜೊತೆ ಅನುಚಿತ ವರ್ತನೆ : ಎಬಿವಿಪಿ ವಿದ್ಯಾರ್ಥಿ ನಾಯಕ ಅಕ್ಷತ್ ಜೈಸ್ವಾಲ್  ಜೊತೆ ಮಕ್ಕಳು ಕಾಲೇಜಿಗೆ ಬಂದಿದ್ದಾರೆ. ಸುಮಾರು 100 ವಿದ್ಯಾರ್ಥಿಗಳೊಂದಿಗೆ ಪ್ರಿನ್ಸಿಪಾಲ್ ಡಾ.ಮೋನಿಕಾ ಗೋಸ್ವಾಮಿ ಅವರ ಕಚೇರಿಗೆ ಬಂದ  ಅಕ್ಷತ್, ಪ್ರಾಂಶುಪಾಲರಿಗೆ ಬೆದರಿಕೆ ಹಾಕಿದ್ದಾರೆ. ಪ್ರಾಂಶುಪಾಲರ ಜೊತೆ ಅಸಭ್ಯವಾಗಿ ಹಾಗೂ ನಿಂದನಾತ್ಮಕವಾಗಿ ವರ್ತಿಸಿದ್ದಾರೆ. ಪ್ರಾಂಶುಪಾಲರಾದ ಡಾ.ಮೋನಿಕಾ, ವಿದ್ಯಾರ್ಥಿನಿಯ ಪಾದ ಮುಟ್ಟುವಂತೆ ಒತ್ತಾಯಿಸಿದರು. ಇದ್ರಿಂದ ನೊಂದ ಪ್ರಾಂಶುಪಾಲರು ಬೇರೆ ದಾರಿಯಿಲ್ಲದೆ ವಿದ್ಯಾರ್ಥಿನಿಯರ ಪಾದ ಮುಟ್ಟಿದ್ದಾರೆ. 

ಎಬಿವಿಪಿ ವಿದ್ಯಾರ್ಥಿ ನಾಯಕ ಅಕ್ಷತ್ ಜೈಸ್ವಾಲ್  ಅಮಾನತು : ಘಟನೆ ನಂತ್ರ ಡಾ.ಮೋನಿಕಾ ಇಡೀ ಘಟನೆಯನ್ನು ಹೇಳುತ್ತಾ ಅಳಲು ತೋಡಿಕೊಂಡಿದ್ದಾರೆ. ಈ ಘಟನೆಯ ವಿಡಿಯೋ ವೈರಲ್ ಆದ ಕೆಲವೇ ಹೊತ್ತಿನಲ್ಲಿ ಎಬಿವಿಪಿ ಕಾರ್ಯಕರ್ತರು ಎಚ್ಚೆತ್ತಿದ್ದಾರೆ. ಎಬಿವಿಪಿ ಮಹಾನಗರ ಸಚಿವೆ ಪ್ರಾರ್ಥನಾ ಅಮೀನ್ ಅವರು ಅಕ್ಷತ್ ಜೈಸ್ವಾಲ್ ಅವರನ್ನು ತರಾತುರಿಯಲ್ಲಿ ಅಮಾನತುಗೊಳಿಸಿದ್ದಾರೆ.  ಇದನ್ನು ಗಂಭೀರವಾಗಿ ಪರಿಗಣಿಸಿರುವ ವಿದ್ಯಾರ್ಥಿ ಸಂಘಟನೆ, ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ (ಎಬಿವಿಪಿ) ಇದನ್ನು ಖಂಡಿಸುತ್ತದೆ. ಅಲ್ಲದೆ ಇಂತಹ ನಾಚಿಕೆಗೇಡಿನ ಘಟನೆಯನ್ನು ಪರಿಷತ್ ಬೆಂಬಲಿಸುವುದಿಲ್ಲ ಎಂದು ಹೇಳಿಕೆ ನೀಡಿದೆ.

32 ವರ್ಷದಲ್ಲಿ ಒಮ್ಮೆಯೂ ಕುಳಿತೇ ಇಲ್ಲ ಈ ಯುವತಿ!

ಎಬಿವಿಪಿ ಅಹಮದಾಬಾದ್ ಮಹಾನಗರ ಪಾಲಿಕೆ ಸಚಿವೆ ಪ್ರಾರ್ಥನಾ ಅಮೀನ್, ಕಾಲೇಜು ಕ್ಯಾಂಪಸ್‌ನಲ್ಲಿ ನಡೆದ ಧರಣಿ ತಪ್ಪು ಎಂದಿದ್ದಾರೆ. ಪ್ರಾಧ್ಯಾಪಕರ ಗೌರವಕ್ಕೆ ಧಕ್ಕೆಯಾಗಬಾರದು. ಈ ವಿಚಾರದಲ್ಲಿ ತಪ್ಪೆಸಗಿದ ಕೌನ್ಸಿಲ್ ಕಾರ್ಯಕರ್ತ ಅಕ್ಷತ್ ಜೈಸ್ವಾಲ್ ಅವರನ್ನು ವಿದ್ಯಾರ್ಥಿ ಪರಿಷತ್ ನ ಎಲ್ಲಾ ಜವಾಬ್ದಾರಿಯಿಂದ ಮುಕ್ತಗೊಳಿಸಲಾಗಿದೆ. ಮುಂದಿನ ದಿನಗಳಲ್ಲಿ ಕೌನ್ಸಿಲ್‌ನ ಯಾವುದೇ ಕಾರ್ಯಕರ್ತರು ಇಂತಹ ಕೆಲಸ ಮಾಡುವುದಿಲ್ಲ ಎಂದಿದ್ದಾರೆ. ವೈರಲ್ ಆಗಿರುವ ವಿಡಿಯೋದಲ್ಲಿ ಪ್ರಾಂಶುಪಾಲರು ವಿದ್ಯಾರ್ಥಿಯ ಕಾಲಿಗೆ ಬೀಳುತ್ತಿರುವುದು ಕಂಡುಬಂದಿದೆ.  

click me!