
ಹೆಣ್ಣು ಮಕ್ಕಳಿಗೆ ಬಟ್ಟೆ ಚಪ್ಪಲಿ, ಬ್ಯಾಗ್‌ಗಳ ಶಾಪಿಂಗ್ ಮಾಡುವುದೆಂದರೆ ಭಾರಿ ಇಷ್ಟ ಅದರಲ್ಲೂ ಕೆಲವು ಮಹಿಳೆಯರು ಎಷ್ಟೇ ಉನ್ನತ ಸ್ಥರದಲ್ಲಿದ್ದರೂ ಬೀದಿ ಬದಿ ಶಾಪಿಂಗನ್ನು ಮಿಸ್ ಮಾಡುವುದೇ ಇಲ್ಲ. ಹೀಗಿರುವಾಗ ಒಂದೇ ಬಟ್ಟೆಗಾಗಿ ಇಬ್ಬರು ಮಹಿಳೆಯರು ಫೈಟ್ ಮಾಡುತ್ತಿರುವ ವೀಡಿಯೋವೊಂದು ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, 5 ಲಕ್ಕಕ್ಕೂ ಅಧಿಕ ಮಂದಿ ವೀಕ್ಷಿಸಿದ್ದಾರೆ. ಅಂದಹಾಗೆ ಈ ಘಟನೆ ನಡೆದಿರುವುದು ದೆಹಲಿಯ ಬಹುದೊಡ್ಡ ಶಾಪಿಂಗ್ ಸ್ಟ್ರೀಟ್ ಆಗಿರುವ ಸರೋಜಿನಿ ನಗರ ಮಾರ್ಕೆಟ್‌ನಲ್ಲಿ ಇಲ್ಲಿ ವಿವಿಧ ಫ್ಯಾಷನ್‌ಗಳ ಧಿರಿಸುಗಳು ಬಹಳ ಕಡಿಮೆ ಬೆಲೆಗೆ ದೊರಕುತ್ತವೆ. ಈಗ ಇಲ್ಲಿನ ಬೀದಿಯೊಂದರಲ್ಲಿ ಮಹಿಳೆಯರು ಒಂದೇ ಬಟ್ಟೆಗಾಗಿ ಜಗಳ ಮಾಡಿ ಹೊಡೆದಾಡಿಕೊಂಡಿದ್ದಾರೆ. ಈ ದೃಶ್ಯ ಕ್ಯಾಮರಾದಲ್ಲಿ ಸೆರೆ ಆಗಿದ್ದು, ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
@gharkekalesh ಎಂಬ ಟ್ವಿಟ್ಟರ್ ಪೇಜ್‌ನಿಂದ ಈ ವೀಡಿಯೋ ಪೋಸ್ಟ್ ಆಗಿದ್ದು, 20 ಸೆಕೆಂಡ್‌ನ ಈ ವೀಡಿಯೋವನ್ನು 5 ಲಕ್ಷಕ್ಕೂ ಅಧಿಕ ಮಂದಿ ವೀಕ್ಷಿಸಿದ್ದಾರೆ. ವೀಡಿಯೋದಲ್ಲಿ ಅತ್ಯಾಧುನಿಕ ಧಿರಿಸು ಧರಿಸಿರುವ ಮಹಿಳೆಯರಿಬ್ಬರು ಪರಸ್ಪರ ಕಪಾಳ ಮೋಕ್ಷ ಮಾಡಿದ್ದಾರೆ. ಮೊದಲಿಗೆ ನೀಲಿ ಜೀನ್ಸ್ ಬಿಳಿ ಟಾಪ್ ಧರಿಸಿದ್ದ ಮಹಿಳೆ ಕಂದು ಬಣ್ಣದ ಬಟ್ಟೆ ಧರಿಸಿದ ಮಹಿಳೆಯ ಮೇಲೆ ಹಲ್ಲೆ ಮಾಡಿದ್ದಾರೆ. ಹೆಣ್ಮಕ್ಕಳ ಜಗಳ ಅಂದ್ರೆ ಸುಮ್ನೆನಾ, ಪರಸ್ಪರ ಜುಟ್ಟು ಹಿಡಿದುಕೊಂಡು ಕಿತ್ತಾಡಿದ್ದು, ಇವರ ಜಗಳ ಬಿಡಿಸಲು ಹರಸಾಹಸ ಪಡುವಂತಹ ಸ್ಥಿತಿ ನಿರ್ಮಾಣವಾಗಿತ್ತು. ಮೂವರು ಇತರ ಮಹಿಳೆಯರು ಇವರ ಜಗಳ ಬಿಡಿಸಲು ಯತ್ನಿಸುತ್ತಿರುವುದು ಹಾಗೂ ಉಳಿದವರು ಗಾಬರಿಯಿಂದ ನೋಡುತ್ತಿರುವುದನ್ನು ಕೂಡ ವೀಡಿಯೋದಲ್ಲಿ ನೋಡಬಹುದಾಗಿದೆ. ಮಹಿಳೆಯ ಜಗಳದ ಪೋರ್ಸ್‌ಗೆ ಅಲ್ಲಿ ನೇತು ಹಾಕಿರುವ ಬಟ್ಟೆಗಳ ಸ್ಟ್ಯಾಂಡ್ ಕೂಡ ಶೇಕ್ ಆಗುತ್ತಿದೆ.
ವೀಡಿಯೋ ನೋಡಿದ ನೆಟ್ಟಿಗರು ಕೂಡ ಹಲವು ಕಾಮೆಂಟ್ ಮಾಡಿದ್ದಾರೆ. ಇಬ್ಬರು ಧರಿಸಿರುವ ಬಟ್ಟೆ ನೋಡಿದರೆ ಇವರಿಬ್ಬರಿಗೂ ವಿಭಿನ್ನ ಬಟ್ಟೆಗಳ ಆಸಕ್ತಿ ಇದೆ ಎನಿಸುತ್ತಿದೆ ಎಂದು ಒಬ್ಬರು ಕಾಮೆಂಟ್ ಮಾಡಿದ್ದಾರೆ. ಸಾವಿನವರೆಗೆ ಹೋರಾಡಿದರಷ್ಟೇ ಈ ಆಸ್ತಿಯನ್ನು ತಮ್ಮದಾಗಿಸಿಕೊಳ್ಳಬಹುದು ಎಂದು ಮತ್ತೊಬ್ಬರು ತಮಾಷೆಯಾಗಿ ಕಾಮೆಂಟ್ ಮಾಡಿದ್ದಾರೆ. ಆದರೆ ಹುಡುಗರು ಹಾಗಲ್ಲ, ಸಮಸಂಖ್ಯೆಯಂದು ನೀನು ಹಾಕು ಬೆಸ ಸಂಖ್ಯೆಯಂದು ನಾನು ಹಾಕುವೆ ಎಂದು ಬಟ್ಟೆಗಳ ವಿಷಯದಲ್ಲಿ ಹೊಂದಿಕೊಂಡು ಹೋಗುತ್ತಾರೆ ಎಂದು ಮತ್ತೊಬ್ಬರು ಕಾಮೆಂಟ್ ಮಾಡಿದ್ದಾರೆ. ಬಟ್ಟೆಗಾಗಿ ಮಹಿಳೆಯರು ನಡೆಸಿದ ಈ ಕಿತ್ತಾಟದ ಬಗ್ಗೆ ನಿಮಗೇನನಿಸಿತು ಕಾಮೆಂಟ್ ಮಾಡಿ.
ಹೃದಯಾಘಾತ : ವಿಮಾನ ಲ್ಯಾಂಡ್ ಮಾಡಿ ಉಸಿರು ಚೆಲ್ಲಿದ 28ರ ಹರೆಯದ ನವವಿವಾಹಿತ ಪೈಲಟ್
ನವದೆಹಲಿ: ವಿಮಾನ ಲ್ಯಾಂಡ್ ಆಗುತ್ತಿದ್ದಂತೆ ಹೃದಯಾಘಾತಕ್ಕೀಡಾಗಿ 28 ವರ್ಷದ ಯುವ ಪೈಲಟ್ ಸಾವನ್ನಪ್ಪಿದ ಮನಕಲುಕುವ ಘಟನೆ ನಡೆದಿದೆ. ಕೆಲ ದಿನಗಳ ಹಿಂದಷ್ಟೇ ಈ ಪೈಲಟ್‌ಗೆ ಮದುವೆಯಾಗಿತ್ತು. ವಿಮಾನದ ಲ್ಯಾಂಡಿಂಗ್ ಪ್ರಕ್ರಿಯೆಯನ್ನು ಸಂಪೂರ್ಣಗೊಳಿಸಿದ ಪೈಲಟ್ ನಂತರ ಕಾಕ್‌ಫಿಟ್‌ನಲ್ಲೇ ವಾಂತಿ ಮಾಡಿದ್ದು, ಸ್ವಲ್ಪ ಹೊತ್ತಿನಲ್ಲೇ ಜೀವ ಹೋಗಿದೆ. ಹೀಗೆ ಕರ್ತವ್ಯದಲ್ಲಿದ್ದಾಗಲೇ ಸಾವಿಗೀಡಾದ ಪೈಲಟ್ ಹೆಸರನ್ನು ಗೌಪ್ಯವಾಗಿಡಲಾಗಿದೆ. ಯಾವ ಏರ್‌ಪೋರ್ಟ್‌ನಲ್ಲಿ ಯಾವಾಗ ಈ ಘಟನೆ ನಡೆದಿದೆ ಎಂಬ ಬಗ್ಗೆ ಮಾಹಿತಿ ಇಲ್ಲ. ಆದರೆ ಏರ್ ಇಂಡಿಯಾ ಎಕ್ಸ್‌ಪ್ರೆಸ್‌ನ ವಕ್ತಾರರು ಈ ವಿಚಾರ ಖಚಿತಪಡಿಸಿದ್ದಾರೆ.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.