ಕೆಲವೊಂದು ಕಂಪೆನಿಗಳಲ್ಲಿ ನಿರ್ಧಿಷ್ಟ ಶಿಪ್ಟ್‌ಗಳಲ್ಲಿ ಕೆಲಸ ಮಾಡಬೇಕು, ಒಂದು ವರ್ಷದ ವರೆಗೆ ಕಂಪೆನಿ ಬಿಡುವಂತಿಲ್ಲ ಈ ಮೊದಲಾದ ರೂಲ್ಸ್‌ಗಳಿರುತ್ತವೆ. ಆದರೆ ಇಲ್ಲೊಂದು ಕಂಪೆನಿಯಲ್ಲಿ ಇರೋ ವಿಚಿತ್ರ ರೂಲ್ಸ್ ಎಲ್ಲರೂ ದಂಗಾಗುವಂತೆ ಮಾಡಿದೆ. ಈ ರೂಲ್ಸ್ ಬಗ್ಗೆ ತಿಳಿದು ಎಲ್ಲರೂ ಬೆಚ್ಚಿಬಿದ್ದಿದ್ದಾರೆ.
ಸಾಫ್ಟ್‌ವೇರ್ ಕಂಪೆನಿಗಳಲ್ಲಿ ಹಲವಾರು ರೂಲ್ಸ್ ಆಂಡ್ ರೆಗ್ಯುಲೇಶನ್ಸ್ ಇರುತ್ತವೆ. ಕೆಲವೊಂದು ನಿಯಮಗಳನ್ನು ರೂಪಿಸಿ, ಒಪ್ಪಂದವನ್ನು ಸಿದ್ಧಪಡಿಸಿ ಕೆಲಸಕ್ಕೆ ಜಾಯಿನ್ ಆಗುವ ಮೊದಲೇ ಸಹಿ ಹಾಕಿಸಿಕೊಂಡಿರುತ್ತಾರೆ. ನಿರ್ಧಿಷ್ಟ ಶಿಪ್ಟ್‌ಗಳಲ್ಲಿ ಕೆಲಸ ಮಾಡಬೇಕು, ಒಂದು ವರ್ಷದ ವರೆಗೆ ಕಂಪೆನಿ ಬಿಡುವಂತಿಲ್ಲ ಹೀಗೆ ಹಲವು ರೂಲ್ಸ್‌ಗಳಿರುತ್ತವೆ. ಇದೆಲ್ಲಾ ಸಾಮಾನ್ಯವಾದ ರೂಲ್ಸ್‌ಗಳು. ಆದರೆ ಇಲ್ಲೊಂದು ಕಂಪೆನಿಯಲ್ಲಿ ಇರೋ ವಿಚಿತ್ರ ರೂಲ್ಸ್ ಎಲ್ಲರೂ ದಂಗಾಗುವಂತೆ ಮಾಡಿದೆ. ಈ ರೂಲ್ಸ್ ಬಗ್ಗೆ ತಿಳಿದು ಎಲ್ಲರೂ ಬೆಚ್ಚಿಬಿದ್ದಿದ್ದಾರೆ.
ಸ್ಯಾನ್ ಫ್ರಾನ್ಸಿಸ್ಕೋ ಮೂಲದ ಟೆಕ್ ಕಂಪನಿ ಟ್ರೇಡ್‌ಶಿಫ್ಟ್‌ನ 45 ವರ್ಷದ ಸಹ-ಸ್ಥಾಪಕ ಮತ್ತು ಮಾಜಿ ಸಿಇಒ ಆಗಿರುವ ಕ್ರಿಶ್ಚಿಯನ್ ಲ್ಯಾಂಗ್ ಅವರು ಲೈಂಗಿಕ ಕಿರುಕುಳದ ಆರೋಪಕ್ಕೆ ಒಳಗಾಗಿದ್ದಾರೆ. ಇವರು ತಮ್ಮ ಉದ್ಯೋಗಿಗೆ ಸೆಕ್ಸ್ ಕಾಂಟ್ರ್ಯಾಕ್ಟ್‌ಗೆ ಸಹಿ ಹಾಕಲು ಒತ್ತಾಯಿಸಿದ್ದರು ಎಂದು ತಿಳಿದುಬಂದಿದೆ. ಜೇನ್ ಡೋ ಎಂದು ಗುರುತಿಸಿಕೊಂಡಿರುವ ಮಾಜಿ ಉದ್ಯೋಗಿ, ಈ ಬಗ್ಗೆ ಆರೋಪ ಮಾಡಿದ್ದಾರೆ.
ಬಾಡಿಗೆಗಿದ್ದಾರೆ ಕಣ್ಣೀರು ಒರೆಸೋ ಹುಡುಗ್ರು, ಅತ್ರೆ ಕಣ್ಣೀರು ಒರೆಸ್ತಾರೆ ಈ ಹ್ಯಾಂಡ್‌ಸಮ್ ಬಾಯ್ಸ್!
ಲೈಂಗಿಕವಾಗಿ ಸಹಕರಿಸಬೇಕು ಅನ್ನೋ ಅಗ್ರಿಮೆಂಟ್
ನ್ಯೂಯಾರ್ಕ್ ಪೋಸ್ಟ್‌ನಲ್ಲಿನ ವರದಿಯ ಪ್ರಕಾರ, ಕ್ರಿಶ್ಚಿಯನ್ ಲ್ಯಾಂಗ್ ಮಾಜಿ ಉದ್ಯೋಗಿಯನ್ನು ತನ್ನ ಕಾರ್ಯನಿರ್ವಾಹಕ ಸಹಾಯಕಿಯಾಗಿ ನೇಮಿಸಿಕೊಂಡ ಕೆಲವೇ ತಿಂಗಳುಗಳ ನಂತರ ಒಂಬತ್ತು ಪುಟಗಳ ಒಪ್ಪಂದಕ್ಕೆ ಸಹಿ ಹಾಕುವಂತೆ ಒತ್ತಾಯಿಸಿದ್ದಾರೆ ಎಂದು ವರದಿಯಾಗಿದೆ. ಒಪ್ಪಂದದ ಪ್ರಕಾರ, ಈಗ-ಮಾಜಿ ಉದ್ಯೋಗಿ ಎಲ್ಲಾ ಸಮಯದಲ್ಲೂ ಲೈಂಗಿಕವಾಗಿ ಲಭ್ಯವಿರಬೇಕು, ಲೈಂಗಿಕ ಆಸಕ್ತಿಯನ್ನು ವ್ಯಕ್ತಪಡಿಸಿದಾಗ ವಿಧೇಯವಾಗಿ ವರ್ತಿಸಬೇಕು ಮೊದಲಾದ ಕುರಿತಾಗಿ ವಿವರವಾದ ಸೂಚನೆಗಳನ್ನು ನೀಡಲಾಗಿದೆ.
ಉದ್ಯೋಗ ಕಳೆದುಕೊಳ್ಳುವ ಭಯದಿಂದ ಮತ್ತು ಹೆಚ್ಚು ಕಮಿಟ್‌ಮೆಂಟ್ಸ್ ಇದ್ದ ಕಾರಭ ಒಪ್ಪಂದಕ್ಕೆ ಸಹಿ ಹಾಕಿದ್ದೇನೆ ಎಂದು ಮಾಜಿ ಉದ್ಯೋಗಿ ಹೇಳಿದ್ದಾರೆ. ಆದರೆ, ಕ್ರಿಶ್ಚಿಯನ್ ಲ್ಯಾಂಗ್, ಈ ಎಲ್ಲಾ ಆರೋಪವನ್ನು ನಿರಾಕರಿಸಿದ್ದಾರೆ. ನನ್ನ ಮತ್ತು ಉದ್ಯೋಗಿಯ ನಡುವಿನ ಸಂಬಂಧವು ಒಮ್ಮತದಿಂದ ಕೂಡಿತ್ತು ಎಂದು ಹೇಳಿದ್ದಾರೆ.
ಅಬ್ಬಬ್ಬಾ..ಜಸ್ಟ್ ನಾಯಿ ನೋಡಿಕೊಳ್ಳೋದಷ್ಟೇ ಕೆಲ್ಸ, ತಿಂಗಳಿಗೆ ಭರ್ತಿ 1 ಕೋಟಿ ರೂ.ಸಂಬಳ!
ಮೊಕದ್ದಮೆಯಲ್ಲಿನ ಆರೋಪಗಳು ಸ್ಪಷ್ಟವಾಗಿ ಸುಳ್ಳು. ಸಿಇಒ ಆಗಿ ನನ್ನ ಅಧಿಕಾರಾವಧಿಯಲ್ಲಿ ಅಥವಾ ನನ್ನ ಜೀವನದ ಯಾವುದೇ ಸಮಯದಲ್ಲಿ ನಾನು ಯಾರನ್ನಾದರೂ ಯಾವುದೇ ರೀತಿಯ ನಿಂದನೆಗೆ ಒಳಪಡಿಸಿದ್ದೇನೆ ಎಂಬ ಆರೋಪಗಳನ್ನು ನಾನು ತಿರಸ್ಕರಿಸುತ್ತೇನೆ' ಎಂದು ಲ್ಯಾಂಗ್ ಹೇಳಿದ್ದಾರೆ. ಆದರೆ ಹಲವಾರು ಮಂದಿ ಆರೋಪ ಮಾಡಿದ ಕಾರಣ ಕ್ರಿಸ್ಟಿಯನ್ ಲ್ಯಾಂಗ್ ಅವರನ್ನು ವರ್ಷದ ಆರಂಭದಲ್ಲಿ ವಜಾಗೊಳಿಸಲಾಯಿತು.