ಮದುವೆಯಲ್ಲಿ ಖುಷಿ ಮನೆ ಮಾಡಿರಬೇಕು. ಕೆಲವೊಮ್ಮೆ ನಾವು ಆಹ್ವಾನ ನೀಡಿದ ಅತಿಥಿಗಳು ಬರದೆ ಹೋದ್ರೆ ಬೇಸರದ ಜೊತೆ ನಾವು ಮಾಡಿದ ಖರ್ಚು ವ್ಯರ್ಥವಾಗುತ್ತದೆ. ಈಗ ಇದೇ ವಿಷ್ಯಕ್ಕೆ ವಧುವೊಬ್ಬಳು ಚರ್ಚೆಯಲ್ಲಿದ್ದಾಳೆ.
ಇದು ಮದುವೆ ಋತು. ದಿನಕ್ಕೆ ಒಂದೇ ಊರಿನಲ್ಲಿ ಎರಡು – ಮೂರು ಮದುವೆ ನಡೆಯೋದಿದೆ. ಯಾವ ಮದುವೆಗೆ ಹೋಗ್ಬೇಕು, ಯಾವುದಕ್ಕೆ ಹೋಗ್ಬಾರದು ಎನ್ನುವ ಕನ್ಫ್ಯೂಜ್ ಆಗುತ್ತೆ. ಮನೆಯಲ್ಲಿ ಎರಡು ಮೂರು ಜನರಿದ್ರೆ ಒಬ್ಬರು ಒಂದು ಮದುವೆಗೆ ಇನ್ನೊಬ್ಬರು ಇನ್ನೊಂದು ಕಾರ್ಯಕ್ರಮಕ್ಕೆ ಹೋಗ್ತಾರೆ. ಇನ್ನು ನಮ್ಮ ಮನೆಯಲ್ಲೇ ಮದುವೆ ಆದಾಗ ನಾವು ಸಂಭ್ರಮದಿಂದ ಎಲ್ಲ ಸಂಬಂಧಿಕರನ್ನು ಕರೆಯುತ್ತೇವೆ. ಸಂಬಂಧಿಕರು, ಸ್ನೇಹಿತರೆಲ್ಲರು ಸೇರಲು ಇದೊಂದು ಒಳ್ಳೆ ಅವಕಾಶವಾಗುತ್ತದೆ. ಮದುವೆ ಮನೆಯಲ್ಲಿ ಸದಾ ಸಂಭ್ರಮ ಮನೆ ಮಾಡುತ್ತದೆ. ನಾವು ಇನ್ವಿಟೇಷನ್ ನೀಡಿದ ಎಲ್ಲರೂ ಮದುವೆ ಅಥವಾ ಯಾವುದೇ ಸಮಾರಂಭಕ್ಕೆ ಬಂದ್ರೆ ಬಹಳ ಖುಷಿ. ಆದ್ರೆ ಎಲ್ಲರೂ ಬರೋದಿಲ್ಲ. ಕೆಲವರು ಬೇರೆ ಕೆಲಸದಲ್ಲಿ ಬ್ಯೂಸಿಯಾಗುವ ಕಾರಣ ಮದುವೆಗೆ ಬರಲು ಸಾಧ್ಯವಾಗೋದಿಲ್ಲ. ಈ ವಿಷ್ಯವನ್ನು ಕರೆಯೋಲೆ ನೀಡುವ ಸಮಯದಲ್ಲೇ ಹೇಳಿದ್ರೆ ತೊಂದ್ರೆ ಇಲ್ಲ. ಈಗಿನ ದಿನಗಳಲ್ಲಿ ಅದ್ರಲ್ಲೂ ನಗರ ಪ್ರದೇಶದಲ್ಲಿ ಗೆಸ್ಟ್ ಲೀಸ್ಟ್ ಬಹಳ ಮುಖ್ಯ. ಅವರಿಗಾಗಿ ಮಾಡಿದ ಅಡುಗೆ ಅಥವಾ ಗಿಫ್ಟ್ ಅವರು ಬರದೆ ಇದ್ರೆ ಹಾಳಾಗುತ್ತೆ. ಒಂದು ಅವರು ಬಂದಿಲ್ಲ ಎನ್ನುವ ಬೇಸರವಾದ್ರೆ ಇನ್ನೊಂದು ಹಣ ಹಾಳಾಯ್ತಲ್ಲ ಎನ್ನುವ ನೋವು. ಆಸ್ಟ್ರೇಲಿಯಾ ಮಹಿಳೆ ಜೀವನದಲ್ಲೂ ಇಂಥದ್ದೇ ಘಟನೆ ನಡೆದಿದೆ. ಈಗ ಏನು ಮಾಡ್ಬೇಕು ಎಂದು ಆಕೆ ಪ್ರಶ್ನೆ ಮಾಡಿದ್ದಾಳೆ.
ನಡೆದಿದ್ದು ಇಷ್ಟೆ: ಶಿಸ್ ಆನ್ ದಿ ಮನಿ ಎಂಬ ಪಾಡ್ಕಾಸ್ಟ್ ನಲ್ಲಿ ಮಹಿಳೆ ಈ ವಿಷ್ಯವನ್ನು ತಿಳಿಸಿದ್ದಾಳೆ. ಮಹಿಳೆಗೆ ಮದುವೆ (Marriage) ಫಿಕ್ಸ್ ಆಗಿದೆ. ಮುಂದಿನ ವಾರ ಮದುವೆ ನಡೆಯಲಿದೆ. ಇದಕ್ಕೆ ಎಲ್ಲ ಸಿದ್ಧತೆ ನಡೆದಿದೆ. ಹದಿನೆಂಟು ತಿಂಗಳ ಮುಂಚೆಯೇ ಮದುವೆ ದಿನಾಂಕ ಫಿಕ್ಸ್ ಆಗಿದ್ದ ಕಾರಣ ಮಹಿಳೆ ಎಲ್ಲರಿಗೂ ಮದುವೆಗೆ ಆಹ್ವಾನ ನೀಡಿದ್ದಾಳೆ. ಆಹಾರ (Food) ಆರ್ಡರ್ ಆಗಿದೆ. ಅತಿಥಿ (Guest) ಗಳಿಗಾಗಿ ಸಂಪೂರ್ಣ ಸಿದ್ಧತೆ ನಡೆದಿದೆ. ಈಗ ವಧು ಸಂದಿಗ್ಧ ಸ್ಥಿತಿಯಲ್ಲಿದ್ದಾಳೆ.
ಬ್ರಾಹ್ಮಣರಿಗೆ ಹೆಣ್ಣು ಸಿಗ್ತಿಲ್ಲವೆಂದು ಅನಾಥಾಶ್ರಮದ ಹುಡುಗಿಯರನ್ನು ಮದುವೆಯಾದ ಅರ್ಚಕರು!
ಕನ್ಫರ್ಮ್ ಆದ ಅತಿಥಿಗಳ ಪಟ್ಟಿಯನ್ನು ವಧು ಈವೆಂಟ್ ತಂಡಕ್ಕೆ ನೀಡಿದ್ದಾಳೆ. ಮದುವೆಗೆ ಸುಮಾರು 12,446 ಡಾಲರ್ ಅಂದ್ರೆ 10 ಲಕ್ಷ ರೂಪಾಯಿ ಹಣವನ್ನು ಪಾವತಿ ಮಾಡಿದ್ದಾಳೆ. ಇಷ್ಟೆಲ್ಲ ತಯಾರಿ, ಸಂಭ್ರಮದ ಮಧ್ಯೆ ಆಕೆಯ 10 ಅತಿಥಿಗಳು ಕೈ ಎತ್ತಿದ್ದಾರೆ. ತಾವು ಬೇರೆ ರಾಜ್ಯಕ್ಕೆ ಪ್ರಯಾಣ ಮಾಡಲು ಸಾಧ್ಯವಿಲ್ಲ. ಪ್ರಯಾಣದ ಖರ್ಚು ದುಬಾರಿಯಾಗುತ್ತದೆ ಎಂದಿದ್ದಾರೆ. ಇದು ಮಹಿಳೆ ಬೇಸರಕ್ಕೆ ಕಾರಣವಾಗಿದೆ.
ಮದುವೆಗೆ ಆಹ್ವಾನ ನೀಡಿದ ಸಮಯದಲ್ಲಿ ಅವರು ಬರಲು ಒಪ್ಪಿದ್ದರು. ಹದಿನೆಂಟು ತಿಂಗಳ ಮೊದಲೇ ಅವರಿಗೆ ಈ ವಿಷ್ಯ ತಿಳಿದಿತ್ತು. ಅವರನ್ನು ಲೆಕ್ಕಕ್ಕೆ ಹಿಡಿದು ನಾನು ಅಡ್ವಾನ್ಸ್ ನೀಡಿದ್ದೇನೆ. ಆಗ್ಲೇ ಅವರು ಮದುವೆಗೆ ಬರಲು ನಿರಾಕರಿಸಿದ್ದರೆ ತೊಂದರೆ ಇರಲಿಲ್ಲ. ಆದ್ರೆ ಈಗ ಅವರು ಬರ್ತಿಲ್ಲ. ಇದ್ರಿಂದ ನನಗೆ 1336 ಡಾಲರ್ ಅಂದರೆ 1,11,076 ರೂಪಾಯಿ ದಂಡವಾಗಿದೆ. ಇದನ್ನು ನಾನು ಆ ಅತಿಥಿಗಳಿಂದ ವಸೂಲಿ ಮಾಡಬೇಕಾ ಎಂದು ಮಹಿಳೆ ಪ್ರಶ್ನೆ ಮಾಡಿದ್ದಾಳೆ.
ಗರ್ಭ ಧರಿಸಲು ಪ್ರಯತ್ನಿಸುತ್ತಿದ್ದರೆ, ಮಿಸ್ ಮಾಡದೇ ಈ ವ್ಯಾಯಾಮ ಮಾಡಿ
ಮಹಿಳೆ ಈ ಪ್ರಶ್ನೆಗೆ ಅನೇಕರು ಪ್ರತಿಕ್ರಿಯೆ ನೀಡಿದ್ದಾರೆ. ನೂರಕ್ಕೆ ನೂರು ಅತಿಥಿಗಳ ತಪ್ಪಿದೆ. ನಿಮಗೆ ಅವರು ಆಪ್ತರಾಗಲು ಸಾಧ್ಯವಿಲ್ಲ ಎಂದು ಬಳಕೆದಾರರೊಬ್ಬರು ಕಮೆಂಟ್ ಮಾಡಿದ್ದಾರೆ. ಆತ್ಮೀಯ ಅತಿಥಿಗಳೇ ಮೋಸ ಮಾಡಿದಾಗ ತುಂಬಾ ನೋವಾಗುತ್ತದೆ ಎಂದು ಇನ್ನೊಬ್ಬರು ಹೇಳಿದ್ದಾರೆ. ಮದುವೆಗಾಗಿ ಬೇರೆ ರಾಜ್ಯಕ್ಕೆ ಬರುವ ಜನರು ಒಂದು ವಾರದ ಮೊದಲೇ ಟಿಕೆಟ್ ಬುಕ್ ಮಾಡೋದಿಲ್ಲ ಎಂದು ಇನ್ನೊಬ್ಬರು ಕಮೆಂಟ್ ಮಾಡಿದ್ದಾರೆ.