ಆನ್ಲೈನ್ ನಲ್ಲಿ ಖರೀದಿ ಮಾಡಿದ್ದ ಹೊಸ ಅಂಡರ್ವೇರ್ ಧರಿಸಿ ಮಹಿಳೆ ಗರ್ಭಿಣಿಯಾಗಿದ್ದಾಳೆ. ಈಗ ಈ ವಿಷ್ಯ ಸೋಶಿಯಲ್ ಮೀಡಿಯಾದಲ್ಲಿ ಬಹು ಚರ್ಚಿತ ವಿಷ್ಯವಾಗಿದೆ. ಅದು ಹೇಗೆ ಸಾಧ್ಯ ಎಂಬ ಪ್ರಶ್ನೆ ಎಲ್ಲರನ್ನು ಕಾಡ್ತಿದೆ.
ಮದುವೆ (marriage) ಆದ್ಮೇಲೇ ಮಕ್ಕಳನ್ನು ಹೆರಬೇಕು ಎನ್ನುವ ರೂಲ್ಸ್ ಈಗಿಲ್ಲ. ಒಂಟಿ ಜನರು, ವೈದ್ಯಕೀಯಲೋಕದಲ್ಲಾದ ಬೆಳವಣಿಗೆಯನ್ನು ಸದುಪಯೋಗಪಡಿಸಿಕೊಂಡು ಸಿಂಗಲ್ ಪೇರೇಂಟ್ (Single Parent) ಆಗ್ತಿದ್ದಾರೆ. ಐವಿಎಫ್ (IVF), ಬಾಡಿಗೆ ತಾಯಿ, ಎಗ್ ಫ್ರೀಜ್ (Egg Freeze) ಸೇರಿದಂತೆ ನಾನಾ ವಿಧಾನಗಳನ್ನು ಬಳಸಿಕೊಳ್ತಿದ್ದಾರೆ. ಹೊಸ ಖಾಯಿಲೆ ಹರಡೋದ್ರಿಂದ ಹಿಡಿದು ಎಲ್ಲ ಕೆಲಸದಲ್ಲಿ ಚೀನಾ ಮುಂದಿದೆ. ಈಗ ಮಕ್ಕಳನ್ನು ಪಡೆಯೋಕೆ ಚೀನಾದಲ್ಲಿ ಹೊಸ ತಂತ್ರಜ್ಞಾನ ಬಂದಿದೆ. ಇದನ್ನು ನಾವು ಹೇಳ್ತಿಲ್ಲ. ಚೀನಾದ ಮಹಿಳೆಯೊಬ್ಬಳು ಹೇಳ್ತಿದ್ದಾಳೆ. ಈಕೆ ಹೇಳಿಕೆ ಪ್ರಕಾರ, ಮಕ್ಕಳನ್ನು ಪಡೆಯೋದು ಬಹಳ ಸುಲಭ. ಒಂದು ಕಂಪನಿ ತಯಾರಿಸಿದ ಅಂಡರ್ವೇರ್ ಧರಿಸಿದ್ರೆ ಆಯ್ತು. ಮಹಿಳೆ ಗರ್ಭಧರಿಸಬಹುದು..!
ಅಂಡರ್ವೇರ್ ಧರಿಸಿದ್ರೆ ಮಕ್ಕಳಾಗುತ್ವೆ..! : ಅಚ್ಚರಿ ಎನ್ನಿಸಿದ್ರೂ ಮಹಿಳೆ ವಾದ ಮಾಡ್ತಿರೋದು ಸತ್ಯ. ಮಹಿಳೆ ತನ್ನ ಮಗಳಿಗಾಗಿ ಆನ್ಲೈನ್ ನಲ್ಲಿ ಅಂಡರ್ವೇರ್ ಖರೀದಿ ಮಾಡಿದ್ದಳು. ಅದನ್ನು ಧರಿಸಿದ ಮಹಿಳೆ ಗರ್ಭ ಧರಿಸಿದ್ದಾಳೆ. ಮಹಿಳೆ ಪ್ರಕಾರ, ತನ್ನ ಮಗಳು ಪ್ರೆಗ್ನೆಂಟ್ ಆಗಲು ಆನ್ಲೈನ್ ನಲ್ಲಿ ಖರೀದಿ ಮಾಡಿದ ಅಂಡರ್ವೇರ್ ಕಾರಣ.
Chanakya Neeti: ಚಾಣಕ್ಯ ಹೇಳುವ ಪ್ರಕಾರ, ಹೆಂಡತಿ ತನ್ನ ಗಂಡನಿಗೆ ಯಾವಾಗ ಸುಳ್ಳು ಹೇಳ್ತಾಳೆ ಗೊತ್ತಾ?
ಮಹಿಳೆ ಈ ಹೇಳಿಕೆ ಸೋಶಿಯಲ್ ಮೀಡಿಯಾದಲ್ಲಿ ಫುಲ್ ವೈರಲ್ ಆಗಿದೆ. ಮಹಿಳೆ ಮಾತು ಕೇಳಿದ್ರೆ ಆಶ್ಚರ್ಯವಾಗುತ್ತೆ. ಇದೆಂಥ ಅಸಂಬದ್ಧ ಅನ್ನಿಸೋದು ಸಾಮಾನ್ಯ. ಒಳ ಉಡುಪು ತಯಾರಿಕಾ ಕಂಪನಿಗೂ ಕರೆ ಮಾಡಿದ್ದ ಮಹಿಳೆ, ತನ್ನ ಮಗಳ ಪ್ರೆಗ್ನೆನ್ಸಿಗೆ ನಿಮ್ಮ ಅಂಡರ್ವೇರ್ ಕಾರಣ ಎಂದಿದ್ದಾಳೆ. ಅದಕ್ಕೆ ಕಂಪನಿ ಭಿನ್ನವಾದ ಪ್ರತಿಕ್ರಿಯೆ ನೀಡಿದೆ.
ಕಂಪನಿಗೆ ಕರೆ ಮಾಡಿದ್ದ ಮಹಿಳೆ, ತನ್ನ ಮಗಳು ಗರ್ಭಣಿಯಾಗಲು ನಿಮ್ಮ ಕಂಪನಿಯಲ್ಲಿ ಸಿದ್ಧವಾದ ಒಳ ಉಡುಪು ಕಾರಣ. ಅದನ್ನು ಧರಿಸಿದ ಮೇಲೆ ಮಗಳ ಸ್ಥಿತಿ ಹೀಗಾಗಿದೆ ಎಂದು ಆರೋಪ ಮಾಡಿದ್ದಾಳೆ. ಆರಂಭದಲ್ಲಿ ಕಂಪನಿ ಇದು ಹೇಗೆ ಸಾಧ್ಯ. ಇದು ತರ್ಕವಿಲ್ಲದ ವಾದ, ಇದು ಸಾಧ್ಯವಿಲ್ಲದ ಮಾತು ಎಂದಿದೆ. ಆದ್ರೆ ಮಹಿಳೆ ಅದಕ್ಕೆ ಒಪ್ಪಲಿಲ್ಲ. ಆಗ ಕಂಪನಿ, ನಮ್ಮಲ್ಲಿ ಬರೀ ಮಹಿಳೆಯರು ಕೆಲಸ ಮಾಡ್ತಿದ್ದಾರೆ. ಮಾಲೀಕ, ಸಂತಾನ ಹರಣ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದಾರೆ. ಹಾಗಾಗಿ ನಿಮ್ಮ ಮಗಳು ಗರ್ಭ ಧರಿಸಲು ನಮ್ಮ ಕಂಪನಿ ಕಾರಣವಲ್ಲ ಎಂದು ಸ್ಪಷ್ಟಪಡಿಸಿದೆ. ಇಷ್ಟಾದ್ರೂ ಮಹಿಳೆ ನಿಜವನ್ನು ಒಪ್ಪಿಕೊಳ್ತಿಲ್ಲ. ಈ ವಿಷ್ಯವನ್ನು ಮಹಿಳೆ ಜಗತ್ತಿಗೆ ಸಾರುವ ಅಪಾಯವಿದೆ ಎಂಬುದನ್ನು ಅರಿತ ಕಂಪನಿ, ಕಸ್ಟಮರ್ ಕೇರ್ ಜೊತೆ ಮಹಿಳೆ ಮಾತನಾಡಿದ ಸಂಭಾಷಣೆಯನ್ನು ತಾನೇ ಸಾಮಾಜಿಕ ಜಾಲತಾಣಕ್ಕೆ ಪೋಸ್ಟ್ ಮಾಡಿದೆ.
ವಾದ ಮಾಡಿದ ಮಹಿಳೆ ಸೋಶಿಯಲ್ ಮೀಡಿಯಾ ಪ್ರಭಾವಿಯಾಗಿದ್ದು, ಆಕೆ ಜನರ ಗಮನ ಸೆಳೆಯಲು ಹೀಗೆ ಮಾಡ್ತಿದ್ದಾಳೆಂದು ಕಂಪನಿ ಸಿಇಒ ಹೇಳಿದ್ದಾರೆ. ಇಂಥ ಆರೋಪಗಳು ಕಂಪನಿ ಮೇಲೆ ಕೆಟ್ಟ ಪ್ರಭಾವ ಬೀರುತ್ತವೆ. ಗ್ರಾಹಕರು ಕಂಪನಿ ಮೇಲಿನ ನಂಬಿಕೆಯನ್ನು ಕಳೆದುಕೊಳ್ತಾರೆ ಎಂದು ಸಿಇಒ ಹೇಳಿದ್ದಾರೆ.
ಯಾವ ರಾಜ್ಯಗಳ ಮಹಿಳೆಯರು ಹೆಚ್ಚು ಮದ್ಯ ಸೇವಿಸುತ್ತಾರೆ?
ಸಾಮಾಜಿಕ ಜಾಲತಾಣದಲ್ಲಿ ಕಮೆಂಟ್ : ಸಾಮಾಜಿಕ ಜಾಲತಾಣದಲ್ಲಿ ಈ ಪೋಸ್ಟ್ ನೋಡಿದ ಬಳಕೆದಾರರು ತಮ್ಮ ಕಮೆಂಟ್ ಶುರು ಮಾಡಿದ್ದಾರೆ. ಮಹಿಳೆ ವಾದವನ್ನು ಅವರು ಖಂಡಿಸಿದ್ದಾರೆ. ಅಮ್ಮನ ಬೈಗುಳದಿಂದ ತಪ್ಪಿಸಿಕೊಳ್ಳಲು ಮಹಿಳೆ ಮಗಳು ಸುಳ್ಳು ಹೇಳಿರಬಹುದು. ಅದನ್ನೇ ಮಹಿಳೆ ನಂಬಿದ್ದಾಳೆ ಎಂದು ಬಳಕೆದಾರರು ಹೇಳಿದ್ದಾರೆ. ಇನ್ನೊಬ್ಬರು ಹುಡುಗಿ ಸಾರ್ವಜನಿಕ ಈಜುಕೊಳದಲ್ಲಿ ಸ್ವಿಮ್ ಮಾಡಿಬಹುದು. ಇದ್ರಿಂದ ಆಕೆ ಗರ್ಭಿಣಿಯಾಗಿರಬಹುದು ಎಂದಿದ್ದಾರೆ. ಆದ್ರೆ ಈಜುಕೊಳದಲ್ಲಿ ಸ್ಪರ್ಮ್ ಇದ್ದಾಗ ಮಹಿಳೆ ಗರ್ಭಧರಿಸಲು ಸಾಧ್ಯವಿಲ್ಲ. ಮಹಿಳೆ ಪ್ರಸಿದ್ಧಿಗಾಗಿಯೇ ಈ ಕೆಲಸ ಮಾಡಿದ್ದಾಳೆ ಎಂದು ಮತ್ತೆ ಕೆಲವರು ತಮ್ಮ ವಾದವನ್ನು ಮುಂದಿಟ್ಟಿದ್ದಾರೆ.