ಹೆಣ್ಮಕ್ಕಳು ಸೇಫ್ ಆಗಿರಬೇಕಾದ್ರೆ ಒಂದೇ ಒಂದು ಪರಿಹಾರ ಕೊಟ್ಟ ವಿಕಿಪೀಡಿಯಾ- ವಿಡಿಯೋ ನೋಡಿ

By Mahmad Rafik  |  First Published Aug 22, 2024, 8:11 PM IST

ಮಹಿಳೆಯರನ್ನು ಷರತ್ತುಗಳಲ್ಲಿ ಬಂಧಿಸಿಡುವ ಮತ್ತು ಎಲ್ಲದಕ್ಕೂ ಆಕೆಯೇ ಕಾರಣ ಎಂದು ಬೆರಳು ತೋರಿಸುವ ಕೆಳಮಟ್ಟದ ಯೋಚನೆ ಹೊಂದಿರುವ  ಜನರಿಗೆ ವಿಕಿಪೀಡಿಯಾ ಟೀಂ ಮುಟ್ಟಿಕೊಂಡು ನೋಡಿಕೊಳ್ಳುವಂತೆ ವಿಡಿಯೋ ಮಾಡಿದೆ. 


ಬೆಂಗಳೂರು: ಭಾರತದಲ್ಲಿ ಹೆಣ್ಣು ಮಕ್ಕಳು ಎಷ್ಟು ಸುರಕ್ಷಿತ ಎಂಬ ಚರ್ಚೆಗಳು ನಡೆಯುತ್ತಿವೆ. ಪಶ್ಚಿಮ ಬಂಗಾಳದ ಕೊಲ್ಕತ್ತಾದ ವೈದ್ಯೆಯ ಪ್ರಕರಣ ಖಂಡಿಸಿ ದೇಶದಾದ್ಯಂತ ಪ್ರತಭಟನೆಗಳು ನಡೆಯುತ್ತಿವೆ. ಈ ಸಂಬಂಧ ಸುಪ್ರೀಂ ಕೋರ್ಟ್‌ನಲ್ಲಿಯೂ ವಿಚಾರಣೆ ನಡೆಯುತ್ತಿದೆ. ಮಹಿಳೆಯರು ಆಕರ್ಷಣೀಯವಾಗಿ ಕಾಣಿಸಿಕೊಳ್ಳುವುದು ತಪ್ಪು. ಮಹಿಳೆ ರಾತ್ರಿ ಹೊರಗೆ ಹೋಗದಿದ್ರೆ ಆಕೆಯ ಮೇಲೆ ದೌರ್ಜನ್ಯ ನಡೆಯಲ್ಲ ಎಂದು ಕೆಲ ಪುರುಷರು ಉದ್ದಟತನದ ಹೇಳಿಕೆಯನ್ನು ಮಾಧ್ಯಮಗಳ ಮುಂದೆಯೇ ನೀಡುತ್ತಿರುತ್ತಾರೆ. ಮಹಿಳೆ ಮೇಲಿನ ದೌರ್ಜನ್ಯ ನಿಲ್ಲಬೇಕಾದ್ರೆ ಏನು ಮಾಡಬೇಕು ಅಂತ ಕೇಳಿದ್ರೆ ಆಕೆಯತ್ತ ಸಮಾಜ ಬೆರಳು ತೋರಿಸುತ್ತದೆ. ಈ ಮೂಲಕ ಮಹಿಳೆಯನ್ನೇ ಅಪರಾಧಿ ಸ್ಥಾನದಲ್ಲಿ ನಿಲ್ಲಿಸುವ ಪ್ರಯತ್ನಗಳು ನಡೆಯುತ್ತಿರುತ್ತವೆ. ಅತ್ಯಾಚಾರ, ದೌರ್ಜನ್ಯಗಳು ನಿಲ್ಲಬೇಕಾದರೆ ಮಹಿಳೆಯನ್ನು ಷರತ್ತುಗಳ ಎಂಬ ಸುಳಿಯಲ್ಲಿಯೇ ಬಂಧಿಸಲಾಗುತ್ತದೆ. ಆದರೆ ಇಷ್ಟೆಲ್ಲಾ ದೌರ್ಜನ್ಯ ಎಸಗುವ ಪುರುಷನ ಬಗ್ಗೆ ಮಾತನಾಡೋದು ತುಂಬಾ ವಿರಳ. 

ಇಂತಹ ಕೆಳಮಟ್ಟದ ಮನಸ್ಥಿತಿಯುಳ್ಳ ವರ್ಗದ ಜನರಿಗೆ ಕನ್ನಡದ ಖ್ಯಾತ ಸೋಶಿಯಲ್ ಮೀಡಿಯಾ ಇನ್‌ಫ್ಲುಯೆನ್ಸರ್ ವಿಕಿಪೀಡಿಯಾ ತಂಡ ಮುಟ್ಟಿ ನೋಡಿಕೊಳ್ಳುವಂತಹ ಉತ್ತರವನ್ನು ನೀಡಿದೆ. ಇಂದು ವಿಕಿಪೀಡಿಯಾ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ಹೆಣ್ಮಕ್ಕಳು ಸೇಫ್ ಆಗಿರಬೇಕಾದ್ರೆ ಒಂದೇ ಒಂದು ಪರಿಹಾರ ಎಂಬ ಶೀರ್ಷಿಕೆಯಡಿಯಲ್ಲಿ ವಿಡಿಯೋ ಅಪ್ಲೋಡ್ ಮಾಡಲಾಗಿದೆ. ಈ ವಿಡಿಯೋಗೆ ಸಾಮಾಜಿಕ ಜಾಲತಾಣದಲ್ಲಿ ಸದ್ದು ಮಾಡುತ್ತಿದೆ. 

Latest Videos

ವಿಕಿಪೀಡಿಯಾ ತಂಡ ಚಾಲ್ತಿಯಲ್ಲಿರುವ ವಿಷಯಗಳ ಆಧಾರದ ಮೇಲೆ ವಿಡಿಯೋ ಕ್ರಿಯೇಟ್ ಮಾಡುತ್ತಾರೆ. ನೋಡೋದಕ್ಕೆ ತಮಾಷೆಯಾಗಿ ಕಂಡರೂ ಹಲವು ವಿಡಿಯೋಗಳು ಅರ್ಥಪೂರ್ಣವಾಗಿರುತ್ತವೆ. ವಿಕಿಪೀಡಿಯಾ ಟೀಂ ಗಂಭೀರವಾದ ವಿಚಾರಗಳನ್ನು ಸರಳವಾಗಿ ಹೇಳುವದರಿಂದ ಇಂದು ಕನ್ನಡಿಗರ ಪ್ರತಿ ಮೊಬೈಲ್‌ನಲ್ಲಿಯೂ ಇವರ ವಿಡಿಯೋಗಳಿಗೆ ಲೈಕ್ಸ್ ಬರುತ್ತಿರುತ್ತದೆ. ಇಂದು ಮತ್ತೊಮ್ಮೆ ಗಂಭೀರವಾದ ವಿಷಯವನ್ನು ತುಂಬಾ ಸರಳವಾಗಿ ಜನರಿಗೆ ಮುಟ್ಟುವಂತೆ ಮಾಡಿದ್ದಾರೆ. ಮಹಿಳೆ ಮನೆಯಲ್ಲಿರಬೇಕು, ಯಾಕೆ ಹೊರಗೆ ಬೇಕು? ಅಂತಹ ಬಟ್ಟೆ ಹಾಕಿದ್ದರಿಂದಲೇ ಹಾಗಾಯ್ತು ಅಂತಹ ತಳಮಟ್ಟದ ಯೋಚನೆ ಹೊಂದಿರುವ ಜನರಿಗೆ ವಿಕಿಪೀಡಿಯಾ ಟೀಂ ತಿಳಿ ಹೇಳುವ ಕೆಲಸವನ್ನು ಈ ವಿಡಿಯೋ ಮೂಲಕ ಮಾಡಲಾಗಿದೆ. 

ಜನರಿಂದ ಮೆಚ್ಚುಗೆ 
ವೈರಲ್ ಆಗುತ್ತಿರುವ ವಿಡಿಯೋದಲ್ಲಿ, ತಾಯಿ ಟಿವಿಯಲ್ಲಿ ನ್ಯೂಸ್ ನೋಡುತ್ತಿರುತ್ತಾರೆ. ಈ ವೇಳೆ ಟಿವಿಯಲ್ಲಿ ಯುವಕನೋರ್ವ, ಈ ಹೆಣ್ಣುಮಕ್ಕಳು ಆರೂವರೆ ಅಥವಾ 7 ಗಂಟೆಯೊಳಗೆ ಮನೆಗೆ ಬಂದ್ರೆ ಸೇಫ್ ಆಗಿಯೇ ಇರುತ್ತಾರೆ. ಅದು ಒಂದೇ ಇದಕ್ಕೆ ಪರಿಹಾರ ಎಂದು ಹೇಳುತ್ತಿರುತ್ತಾನೆ. ಇದನ್ನು ನೋಡಿದ ತಾಯಿ, ರೀ ಸಮಯ ಸಂಜೆ ಆರೂವರೆ ಆಯ್ತು. ಸೋನು ಇನ್ನು ಮನೆಗೆ ಬಂದಿಲ್ಲ. ನನಗೆ ಭಯ ಆಗ್ತಿದೆ. 7 ಗಂಟೆಯೊಳಗೆ ಮನೆಗೆ ಬರುವಂತೆ ಸೋನುಗೆ ಫೋನ್ ಮಾಡಿ ಎಂದು ಗಂಡನಿಗೆ ಹೇಳುತ್ತಾರೆ. ಪತ್ನಿ ಹೇಳಿದಂತೆ ಗಂಡ ಸಹ ಸೋನುಗೆ ಕರೆ ಮಾಡಿ, ನಿಮ್ಮ ಹೇಳ್ತಿದ್ದಾಳೆ ಏನೂ ಅಂತ ಗೊತ್ತಿಲ್ಲ. 7 ಗಂಟೆಯೊಳಗೆ ಮನೆಯಲ್ಲಿರಬೇಕು ಎಂದು ಹೇಳಿ ಫೋನ್ ಕಟ್ ಮಾಡುತ್ತಾರೆ. 

ಸೋನು ಮನೆಗೆ ಬರೋವರೆಗೂ ತಾಯಿ ಆತಂಕದಲ್ಲಿ ಗಡಿಯಾರ ನೋಡುತ್ತಾ, ಟಿವಿಯಲ್ಲಿ ಯುವಕ ಹೇಳಿದ ಮಾತುಗಳೇ ಮಾರ್ದನಿಸುತ್ತಿರುತ್ತದೆ. ಅಷ್ಟರಲ್ಲಿಯೇ ಮನೆಯ ಡೋರ್ ಬೆಲ್ ಕೇಳಿದ ಕೂಡಲೇ ತಾಯಿ ಆತಂಕದಿಂದ ಹೋಗಿ ಬಾಗಿಲು ತೆರೆಯುತ್ತಾರೆ. ಬಾಗಿಲು ತೆರೆದ್ರೆ ಟಿವಿಯಲ್ಲಿ ಮಾತನಾಡ್ತಿದ್ದ ಯುವಕನೇ ಬಂದು ನಿಂತಿರುತ್ತಾನೆ. ಅವನ ಹೆಸರೇ ಸೋನು. ಸೋನು ಬಂದವನೇ ಯಾಕೆ 7 ಗಂಟೆಯೊಳಗೆ ಬರೋದಕ್ಕೆ ಹೇಳಿದೆ ಅಮ್ಮಾ ಎಂದು ಪ್ರಶ್ನೆ ಮಾಡುತ್ತಾನೆ. 

ಏನಿಲ್ಲಪ್ಪಾ ಹೀಗೆ ಹೇಳ್ತೀನಿ ಅಂತ ತಪ್ಪು ತಿಳಿದುಕೊಳ್ಳಬೇಡಾ? ನಿಮ್ಮಂತವರು ಸಂಜೆ ಆರೂವರೆ-ಏಳು ಗಂಟೆಯೊಳಗೆ ಮನೆಯೊಳಗೆ ಬಂದ್ರೆ, ಆಚೆ ಇರೋ ಹೆಣ್ಣುಮಕ್ಕಳು ಸೇಫ್ ಆಗಿ ಇರ್ತಾರೆ ಅಲ್ಲವಾ ಎಂದು ತಾಯಿ ಮಗನಿಗೆ ಹೇಳುತ್ತಾನೆ. ಇಲ್ಲಿಗೆ ವಿಡಿಯೋ ಎಂಡ್ ಆಗುತ್ತದೆ.  

ಮಹಿಳೆಯರು-ಮಕ್ಕಳ ಬೆತ್ತಲೆ ವಿಡಿಯೋ ಸೆರೆ ಹಿಡಿಯುತ್ತಿದ್ದ ಭಾರತ ಮೂಲದ ಡ ...

ಈ ವಿಡಿಯೋಗೆ ಕಮೆಂಟ್ ಮಾಡುವ ಮೂಲಕ ನಟಿಯರಾದ ನಿಶ್ಚಿಕಾ ನಾಯ್ಡು, ಅದ್ವಿತಿ ಶೆಟ್ಟಿ, ಅಶ್ವಿತಿ ಶೆಟ್ಟಿ, ರೇಡಿಯೋ ಜಾಕಿಗಳಾದ ಪೃಥ್ವಿ, ರವಿಕಿರಣ್ ಹಾಗೂ ಹಲವರು ಮೆಚ್ಚುಗೆ ಸೂಚಿಸಿದ್ದಾರೆ. ಈ ವಿಡಿಯೋ ಲಿಂಕ್ ಕೆಳಗಿದೆ.

click me!