
ಉತ್ತರ ಪ್ರದೇಶದ ಆಗ್ರಾ (Agra)ದಲ್ಲಿ ಆಘಾತಕಾರಿ ಘಟನೆ ಬೆಳಕಿಗೆ ಬಂದಿದೆ. 30 ತಿಂಗಳಲ್ಲಿ ಮಹಿಳೆಯೊಬ್ಬಳು 25 ಬಾರಿ ಅಮ್ಮನಾಗಿದ್ದಾಳೆ. ಆಗ್ರಾದ ಫತೇಹಾಬಾದ್ನ ಸಮುದಾಯ ಆರೋಗ್ಯ ಕೇಂದ್ರ (CHC)ದಲ್ಲಿ ಘಟನೆ ಬೆಳಕಿಗೆ ಬಂದಿದೆ. ಒಂದೇ ಮಹಿಳೆ 25 ಬಾರಿ ಅಮ್ಮನಾಗಲು ಹೇಗೆ ಸಾಧ್ಯ? ಅದೂ 30 ತಿಂಗಳಲ್ಲಿ ಎನ್ನುವ ಪ್ರಶ್ನೆ ಎಲ್ಲರನ್ನು ಕಾಡ್ತಿದೆ. ಅಷ್ಟೇ ಅಲ್ಲ ಅದೇ ಮಹಿಳೆ ಐದು ಬಾರಿ ಸಂತಾನ ಹರಣ ಶಸ್ತ್ರಚಿಕಿತ್ಸೆಗೂ ಒಳಗಾಗಿದ್ದಾಳೆ. ಜನನಿ ಸುರಕ್ಷಾ ಯೋಜನೆ ಮತ್ತು ಸ್ತ್ರೀ ಸಂತಾನಹರಣ ಉತ್ತೇಜನ ಯೋಜನೆಯಲ್ಲಿ ದೊಡ್ಡ ಮಟ್ಟದ ಮೋಸವಾಗಿರುವ ಸಾಧ್ಯತೆ ಇದ್ದು, ಈ ಬಗ್ಗೆ ತನಿಖೆ ನಡೆಯುತ್ತಿದೆ.
ಘಟನೆ ಬೆಳಕಿಗೆ ಬಂದಿದ್ದು ಹೇಗೆ? : ಸಿಎಚ್ ಸಿ ಫತೇಹಾಬಾದನಲ್ಲಿ ಆರೋಗ್ಯ ಇಲಾಖೆ ಲೆಕ್ಕಪರಿಶೋಧನೆ ನಡೆಸಿದಾಗ ಈ ಆಘಾತಕಾರಿ ಪ್ರಕರಣ ಬೆಳಕಿಗೆ ಬಂದಿದೆ. ಆಡಿಟ್ ಟೀಂ ಲೆಕ್ಕಾಚಾರ ಮಾಡ್ತಿದ್ದಂತೆ ಒಂದೊಂದೇ ಕೇಸ್ ಹೊರಗೆ ಬಂತು. 25 ಬಾರಿ ಒಂದೇ ಹೆಸರಿನ ಮಹಿಳೆ ಹೆರಿಗೆಯಾಗಿದ್ದು ಹಾಗೂ ಆಕೆಗೆ ಐದು ಬಾರಿ ಸಂತಾನ ಹರಣ ಶಸ್ತ್ರಚಿಕಿತ್ಸೆ ಮಾಡಿಸಿದ್ದು ಪತ್ತೆಯಾಯ್ತು . ಇಷ್ಟೇ ಅಲ್ಲ ಆ ಮಹಿಳೆ ಬ್ಯಾಂಕ್ ಖಾತೆಗೆ 45 ಸಾವಿರ ರೂಪಾಯಿ ಜಮಾ ಮಾಡಲಾಗಿದೆ. ಸರ್ಕಾರಿ ಯೋಜನೆ ಹೆಸರಿನಲ್ಲಿ ಹಣವನ್ನು ವರ್ಗಾವಣೆ ಮಾಡಲಾಗಿದೆ. ಈ ವಿಷ್ಯವನ್ನು ತಕ್ಷಣ ಆಗ್ರಾದ ಸಿಎಂಒ ಡಾ. ಅರುಣ್ ಶ್ರೀವಾಸ್ತವ ಅವರಿಗೆ ತಿಳಿಸಲಾಯ್ತು. ಅವರು ಪ್ರಕರಣದ ತನಿಖೆಗೆ ಆದೇಶ ನೀಡಿದ್ದಾರೆ. ಇದು ತಾಂತ್ರಿಕ ದೋಷವೋ ಅಥವಾ ನೌಕರರ ಒಪ್ಪಿಗೆಯಿಂದ ನಡೆದ ಹಗರಣವೋ ಎಂಬುದರ ಬಗ್ಗೆ ತನಿಖೆ ನಡೆಸಲಾಗುವುದು ಎಂದು ಅರುಣ್ ಹೇಳಿದ್ದಾರೆ. ಯಾರಾದ್ರೂ ತಪ್ಪಿತಸ್ಥರೆಂದು ಕಂಡುಬಂದ್ರೆ ಅವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವುದಾಗಿ ಅರುಣ್ ಹೇಳಿದ್ದಾರೆ.
ಮೆನೋಪಾಸ್ ಇನ್ನಷ್ಟು ತಡವಾಗಿ ಬರ್ಬೇಕಾ? ಹಾಗಿದ್ರೆ ಇದೊಂದೇ ದಾರಿ!
ಯಾವ್ದು ಯೋಜನೆ, ಲಾಭ ಏನು? : ಸರ್ಕಾರ, ಜನನಿ ಸುರಕ್ಷಾ ಯೋಜನೆ ಮತ್ತು ಸ್ತ್ರೀ ಸಂತಾನ ಹರಣ ಪ್ರೋತ್ಸಾಹ ಯೋಜನೆಯನ್ನು ಜಾರಿಗೆ ತಂದಿದೆ. ಜನನಿ ಸುರಕ್ಷಾ ಯೋಜನೆ ಅಡಿ, ಹೆರಿಗೆಯಾದ ನಂತ್ರ ಮಹಿಳೆಗೆ 14 ಸಾವಿರ ರೂಪಾಯಿ ನೀಡಲಾಗುತ್ತದೆ. ಇದಕ್ಕೆ ಪ್ರೇರಣೆ ನೀಡಿದ ಆಶಾ ಕಾರ್ಯಕರ್ತೆಗೆ 6 ಸಾವಿರ ರೂಪಾಯಿ ನೀಡಲಾಗುತ್ತದೆ. ಇನ್ನು ಸಂತಾನ ಹರಣ ಶಸ್ತ್ರಚಿಕಿತ್ಸೆ ನಂತ್ರ ಮಹಿಳೆಗೆ 2 ಸಾವಿರ ರೂಪಾಯಿ ಸಿಗುತ್ತದೆ. ಆಶಾ ಕಾರ್ಯಕರ್ತೆಗೆ 300 ರೂಪಾಯಿ ಸಿಗುತ್ತದೆ. 48 ಗಂಟೆಯಲ್ಲಿ ಫಲಾನುಭವಿ ಖಾತೆಗೆ ಹಣವನ್ನು ವರ್ಗಾವಣೆ ಮಾಡಲಾಗುತ್ತದೆ. ಈ ಎರಡೂ ಯೋಜನೆಯಡಿ ನಕಲಿ ದಾಖಲೆ ಸೃಷ್ಟಿಸಿ ಹಣ ದೋಚಲಾಗಿದೆ.
ಒಂದೇ ಮಹಿಳೆಗೆ ಪದೇ ಪದೇ ಹೆರಿಗೆ ಮಾಡಿಸಲಾಗಿದೆ. ಆಕೆಗೆ ಐದು ಬಾರಿ ಸಂತಾನ ಹರಣ ಶಸ್ತ್ರಚಿಕಿತ್ಸೆ ಮಾಡಿಸಲಾಗಿದೆ ಎಂದು ವರದಿ ತೋರಿಸಿ, ಸರ್ಕಾರಿ ಹಣವನ್ನು ದೋಚಲಾಗಿದೆ. 48 ಗಂಟೆಯೊಳಗೆ ಫಲಾನುಭವಿಗಳಿಗೆ ಹಣ ವರ್ಗಾವಣೆ ಮಾಡುವ ಒತ್ತಡ ಇರುವ ಕಾರಣ, ದಾಖಲೆಯನ್ನು ಸರಿಯಾಗಿ ಪರಿಶೀಲನೆ ಮಾಡಲು ಸಾಧ್ಯವಾಗೋದಿಲ್ಲ ಎಂದು ಸಿಎಂಒ ಹೇಳಿದ್ದಾರೆ.
ಬಾಹ್ಯಾಕಾಶಕ್ಕೆ ನೆಗೆದ 6 ಮಹಿಳೆಯರ ತಂಡ: ಇತಿಹಾಸದಲ್ಲಿ ಇದೇ
ಘಟನೆ ಬಗ್ಗೆ ತನಿಖೆ ನಡೆಸಲು ವಿಶೇಷ ತಂಡವನ್ನು ಅವರು ರಚನೆ ಮಾಡಿದ್ದಾರೆ. ಘಟನೆ ಹೇಗೆ ನಡೀತು ಎಂಬುದನ್ನು ಅಧಿಕಾರಿಗಳು ಪತ್ತೆ ಮಾಡ್ಬೇಕಾಗಿದೆ. ತಾಂತ್ರಿಕ ದೋಷದಿಂದ ನಡೆದಿದ್ಯಾ ಇಲ್ಲ ಸಿಬ್ಬಂದಿ ಮೋಸ ಮಾಡಿದ್ದಾರಾ ಎಂಬುದನ್ನು ಪತ್ತೆ ಮಾಡ್ಬೇಕಾಗಿದೆ. ಒಂದ್ವೇಳೆ ಸಿಬ್ಬಂದಿಯಿಂದ ಮೋಸವಾಗಿದ್ದಲ್ಲಿ ಸೂಕ್ತ ಕಾನೂನು ಕ್ರಮಕೈಗೊಳ್ಳುವುದಾಗಿ ಸಿಎಂಒ ಹೇಳಿದ್ದಾರೆ.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.