ನಿಮ್ಮ ಏಕಾಗ್ರತೆ, ಗಮನ ಮತ್ತು ಮಾನಸಿಕ ಸ್ಥಿರತೆಯನ್ನು ಹೆಚ್ಚಿಸಲು 7 ಪ್ರಾಚೀನ ತಂತ್ರಗಳನ್ನು ಇಲ್ಲಿ ನೀಡಲಾಗಿದೆ. ತ್ರಾಟಕ, ಪ್ರಾಣಾಯಾಮ, ಧಾರಣ, ಜಪ, ಯೋಗ ನಿದ್ರೆ, ಅಭ್ಯಾಸ ಮತ್ತು ನಾದ ಯೋಗದಂತಹ ತಂತ್ರಗಳು ನಿಮ್ಮ ಮನಸ್ಸನ್ನು ಹಿಡಿತದಲ್ಲಿಟ್ಟುಕೊಳ್ಳಲು ಸಹಾಯ ಮಾಡುತ್ತವೆ.
ಯೋಗಿಕ್ ಐ ಅಭ್ಯಾಸದಿಂದ ಹಿಡಿದು ಉಸಿರಾಟದ ನಿಯಂತ್ರಣ ಹಾಗೂ ಶಬ್ಧದ ಧ್ಯಾನದವರೆಗೆ(Sound meditation)ಇಲ್ಲಿ ನಾವು ನಿಮಗೆ ತಿಳಿಸುತ್ತಿರುವ 7 ಪುರಾತನವಾದ ತಂತ್ರಗಳು ನಿಮಗೆ ಇಂದಿಗೂ ನಿಮ್ಮ ಏಕಾಗ್ರತೆಯನ್ನು ಹೆಚ್ಚಿಸಲು ನಿಮ್ಮ ಗಮನವನ್ನು ಕೇಂದ್ರೀಕರಿಸಲು, ನಿಮ್ಮ ಮನಸ್ಸನ್ನು ಹಿಡಿತದಲ್ಲಿಟ್ಟುಕೊಳ್ಳಲು ಹಾಗೂ ಸಂಪೂರ್ಣವಾದ ನಿಮ್ಮ ಮಾಸಿಕ ಸ್ಥಿರತೆಯನ್ನು ಹೆಚ್ಚಿಸಲು ಶಕ್ತಿಶಾಲಿಯಾದ ಆಯುಧಗಳಾಗಬಲ್ಲವು. ಅವು ಯಾವುವು ಅಂತ ಈಗ ನೋಡೋಣ.
1.ತ್ರಾಟಕ
ಇದೊಂದು ಕಣ್ಣಿನ ನೋಟವನ್ನು ಬದಲಾಯಿಸದೇ ಕಣ್ಣು ರೆಪ್ಪೆಗಳನ್ನು ಮಿಟುಕಿಸದೇ ನೆಟ್ಟ ದೃಷ್ಟಿಯನ್ನು ಕದಲಿಸಿದೇ ಒಂದೇ ಗುರಿಯನ್ನು ನಿರಂತರವಾಗಿ ನೋಡುವುದಾಗಿದೆ. ವಿಶೇಷವಾಗಿ ದೀಪ ಅಥವಾ ಕ್ಯಾಂಡಲ್ ಲೈಟನ್ನು ಇದಕ್ಕೆ ಬಳಸಲಾಗುತ್ತದೆ. ಇದು ನಿಮ್ಮ ಏಕಾಗ್ರತೆಯನ್ನು ಹೆಚ್ಚು ಮಾಡುವುದಲ್ಲದೇ, ನಿಮ್ಮ ದೃಷ್ಟಿಯನ್ನು ಸುಧಾರಿಸುತ್ತದೆ, ಮಾನಸಿಕ ಸ್ಥಿರತೆಯನ್ನು ಕಾಪಾಡುತ್ತದೆ. ಕೇವಲ 10 ನಿಮಿಷದ ಕಾಲ ಮಾಡುವ ಈ ಐ ಗೇಜಿಂಗ್ ಎಂದೂ ಕರೆಯಲ್ಪಡುವ ತ್ರಾಟಕ ತಂತ್ರವೂ ಅದ್ಭುತವನ್ನೇ ಸೃಷ್ಟಿಸಬಲ್ಲದು.
2.ಮಾನಸಿಕ ಸ್ಪಷ್ಟತೆಗೆ ಪ್ರಾಣಾಯಾಮ ಹಾಗೂ ಉಸಿರಾಟ
ಪ್ರಾಣಾಯಾಮ ಎಂಬುದು ನಿಯಂತ್ರಿತವಾದ ಉಸಿರಾಟದ ವ್ಯಾಯಾಮವಾಗಿದೆ. ಇದರಲ್ಲಿ ಬರುವ ಅನುಲೋಮ, ವಿಲೋಮ, ಭ್ರಮರಿ ಮುಂತಾದ ತಂತ್ರಗಳು ನಿಮ್ಮ ನರ ವ್ಯವಸ್ಥೆಯನ್ನು ಶಾಂತಗೊಳಿಸುತ್ತವೆ. ಜೊತೆಗೆ ಮಿದುಳಿಗೆ ಆಮ್ಲಜನಕದ ಹರಿಯುವಿಕೆಯನ್ನು ಸರಾಗಗೊಳಿಸುತ್ತವೆ. ಇದು ನಿಮ್ಮನ್ನು ಸದಾ ಎಚ್ಚರದಿಂದ ಇರುವಂತೆ ದೀರ್ಘಕಾಲ ಗಮನದಿಂದ ಇರುವಂತೆ ಮಾಡುತ್ತದೆ.
3. ಧಾರಣ: ಏಕಾಗ್ರತೆಯ ಮೂಲಕ ಮನಸ್ಸಿನ ತರಬೇತಿ
ಧಾರಣ ಅನ್ನೋದು ಯೋಗದ 8 ಅಂಗಗಳಲ್ಲಿ ಒಂದಾಗಿದೆ. ಒಂದು ವಸ್ತುವಿನ ಮೇಲೆ ಗಮನಹರಿಸುವಂತೆ ಅಥವಾ ಏಕಾಗ್ರತೆ ಸಾಧಿಸುವಂತೆ ಇದು ನಿಮ್ಮ ಮನಸ್ಸಿಗೆ ತರಬೇತಿ ನೀಡುತ್ತದೆ. ಇದು ಮನಸ್ಸಿನ ಅಡೆತಡೆಗಳನ್ನು ನಿರ್ಲಕ್ಷಿಸಿ ಗುರಿಯಯತ್ತ ಗಮನಹರಿಸುವ ಅಗತ್ಯವಾದ ಮಾನಸಿಕ ಶಿಸ್ತನ್ನು ನಿರ್ಮಾಣ ಮಾಡುತ್ತದೆ.
4. ಜಪ: ಪುನರಾವರ್ತನೆಗಿರುವ ಶಕ್ತಿ
ಮೌನವಾಗಿ ಅಥವಾ ಎಲ್ಲರಿಗೂ ಕೇಳುವಂತೆ ಜೋರಾಗಿ ನೀವು ಯಾವುದೇ ಮಂತ್ರವನ್ನು ಪಠಿಸುವುದನ್ನು ಜಪ ಎನ್ನಲಾಗುತ್ತದೆ. ಒಂದು ಅರ್ಥಪೂರ್ಣವಾದ ಭಜನೆ, ಮಂತ್ರಗಳ ಶಬ್ದವು ಮನಸ್ಸನ್ನು ಸ್ಥಿರಗೊಳಿಸುತ್ತದೆ ಮಾನಸಿನ ಸಾವಧಾನತೆಯನ್ನು ಹೆಚ್ಚಿಸುತ್ತದೆ. ಹಾಗೂ ನಿಮ್ಮ ಗಮನ ಹರಿಸುವ ಸಾಮರ್ಥ್ಯವನ್ನು ಒಳಮುಖವಾಗಿ ಹರಿಯುವಂತೆ ಮಾಡುತ್ತದೆ.ಇದು ಜಾಗೃತಿ ಮೂಡಿಸುವುದಲ್ಲದೇ ನಿಮ್ಮ ಮನಸ್ಸನ್ನು ಶಾಂತವಾಗಿರಿಸುವುದು.
5. ಯೋಗ ನಿದ್ರೆ: ಪ್ರಜ್ಞಾಪೂರ್ವಕ ವಿಶ್ರಾಂತಿ
ಸಾಮಾನ್ಯವಾಗಿ ಯೋಗ ನಿದ್ರೆ ಎಂದು ಕರೆಯಲ್ಪಡುವ ಯೋಗ ನಿದ್ರೆಯು ನಿಮ್ಮನ್ನು ಆಳವಾದ ಧ್ಯಾನಸ್ಥ ಸ್ಥಿತಿಗೆ ಕರೆದೊಯ್ಯುತ್ತದೆ. ಇದನ್ನು ನಿಯಮಿತವಾಗಿ ಅಭ್ಯಾಸ ಮಾಡುವುದರಿಂದ, ಇದು ಮಾನಸಿಕ ಆಯಾಸವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ ಮತ್ತು ಎಚ್ಚರವಾಗಿರುವ ಸಮಯದಲ್ಲಿ ನಿಮ್ಮ ಗಮನವನ್ನು ಕೇಂದ್ರೀಕರಿಸುವ ಸಾಮರ್ಥ್ಯವನ್ನು ತೀಕ್ಷ್ಣಗೊಳಿಸುತ್ತದೆ.
6. ಅಭ್ಯಾಸ: ನಿರಂತರ ದೈನಂದಿನ ಅಭ್ಯಾಸ
ಅಭ್ಯಾಸದ ಪರಿಕಲ್ಪನೆಯು ಶಿಸ್ತು ಮತ್ತು ಸ್ಥಿರತೆಗೆ ಒತ್ತು ನೀಡುತ್ತದೆ. ಫಲಿತಾಂಶಗಳನ್ನು ಬೆನ್ನಟ್ಟುವ ಬದಲು, ಪ್ರತಿದಿನ ಸಣ್ಣ, ಪುನರಾವರ್ತಿತ ಪ್ರಯತ್ನಗಳ ಮೇಲೆ ಗಮನ ಕೇಂದ್ರೀಕರಿಸುವುದರಿಂದ ಕಾಲಾಂತರದಲ್ಲಿ ಮಾನಸಿಕ ಸ್ಥಿತಿಸ್ಥಾಪಕತ್ವ ಮತ್ತು ಏಕಾಗ್ರತೆ ಬೆಳೆಯುತ್ತದೆ
7. ನಾದ ಯೋಗ: ಧ್ವನಿಯ ಮೂಲಕ ಗಮನ ಕೇಂದ್ರೀಕರಿಸುವುದು
ನಾದ ಯೋಗವು ಧ್ವನಿ ಅಥವಾ ಶಬ್ದದ ಯೋಗವಾಗಿದೆ. ಇದು ಸಂಗೀತ, ಪಠಣಗಳು ಅಥವಾ ಆಂತರಿಕ ಶಬ್ದಗಳಾಗಲಿ ಆಲಿಸುವಿಕೆಯನ್ನು ಗಮನವನ್ನು ಕೇಂದ್ರೀಕರಿಸಲು ಬಳಸುತ್ತದೆ. ಒಂದೇ ಸ್ವರಕ್ಕೆ ಟ್ಯೂನ್ ಮಾಡುವುದು ಅಲೆದಾಡುವ ಆಲೋಚನೆಗಳನ್ನು ಸ್ಥಿರಗೊಳಿಸಲು ಮತ್ತು ಆಳವಾದ ಗಮನವನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ. ಏಕಾಗ್ರತೆಯ ಕೊರತೆಯನ್ನು ಎದುರಿಸುವ ನಿಮ್ಮ ಮಕ್ಕಳಿಗೆ ಇವುಗಳನ್ನು ಅಭ್ಯಾಸಿಸಿದ್ದಲ್ಲಿ ಅದ್ಭುತವಾದ ಫಲಿತಾಂಶವನ್ನು ನೀವೇ ನೋಡುವಿರಿ.