ಇವಳೇನು ರಾಕ್ಷಿಸಿಯಾ? ಗರ್ಭಿಣಿಗೆ ವಿಷ ಹಾಕಿದ ಕೊಲೀಗ್‌, ಕಾರಣ ತುಂಬಾ ಸಿಲ್ಲಿ ಬಿಡಿ!

By Suvarna NewsFirst Published Apr 1, 2024, 5:16 PM IST
Highlights

ಈಗಿನ ಕಾಲದಲ್ಲಿ ಎಷ್ಟು ಎಚ್ಚರಿಕೆಯಿಂದಿದ್ರೂ ಸಾಲೋದಿಲ್ಲ. ಅನೇಕ ಬಾರಿ ಅನವಶ್ಯಕ ಕಾರಣಕ್ಕೆ ಆಪತ್ತು ಎದುರಿಸಬೇಕಾಗುತ್ತದೆ. ಯಾರದ್ದೋ ಸ್ವಾರ್ಥಕ್ಕೆ ಮತ್ತ್ಯಾರೋ ನೋವು ತಿನ್ನಬೇಕಾಗುತ್ತದೆ. ನೂರು ಕಡೆ ಕಣ್ಣಿಟ್ರೂ ಯಾಮಾರೋ ಸಾಧ್ಯತೆ ಇರುತ್ತದೆ. 

ಕಚೇರಿಯಲ್ಲಿ ಕೆಲಸದ ವಿಷ್ಯಕ್ಕೆ ಸಣ್ಣಪುಟ್ಟ ಮುನಿಸು ಸಾಮಾನ್ಯ. ಒಬ್ಬರಿಗೆ ವಿಪರೀತ ರಜೆ ಸಿಗ್ತಿದೆ ಇನ್ನೊಬ್ಬರಿಗೆ ರಜೆ ಇಲ್ಲ ಎಂದಾಗ ಉದ್ಯೋಗಿಗಳ ಕಣ್ಣು ಕೆಂಪಾಗುತ್ತೆ. ಮತ್ತೆ ಕೆಲವರು ಕೆಲಸ ಮಾಡದೆ ಸಂಬಳ ಪಡೆಯುತ್ತಿರುತ್ತಾರೆ. ಮತ್ತೊಬ್ಬರು ಎಷ್ಟೇ ಕೆಲಸ ಮಾಡಿದ್ರೂ ಅವರ ಕೆಲಸಕ್ಕೆ ತಕ್ಕ ಸಂಬಳ ಸಿಗ್ತಿರೋದಿಲ್ಲ. ಈ ಸಮಯದಲ್ಲಿ ಪರಸ್ಪರ ದ್ವೇಷ ಬೆಳೆಯೋದಿದೆ. ಕೆಲವು ಕಡೆ ಇಂಥ ವಿಷ್ಯವೇ ದೊಡ್ಡದಾಗಿ ಕೊಲೆಯಲ್ಲಿ ಅಂತ್ಯಕಂಡಿದ್ದಿದೆ. ಈಗ ಇನ್ನೊಂದು ಇಂಥಹದ್ದೇ ಸುದ್ದಿ ಚರ್ಚೆಯಲ್ಲಿದೆ. ಮಹಿಳೆಗೆ ಸಹೋದ್ಯೋಗಿ ವಿಷ ನೀಡುವ ಪ್ರಯತ್ನ ಮಾಡಿದ್ದಾರೆ. ಅದೂ ಗರ್ಭಿಣಿಗೆ ವಿಷ ನೀಡಿದ್ದು ಮತ್ತಷ್ಟು ಆಘಾತಕಾರಿಯಾಗಿದೆ.

ಘಟನೆ ಚೀನಾ (China)ದಲ್ಲಿ ನಡೆದಿದೆ. ಗರ್ಭಿಣಿ (Pregnant) ಗೆ ವಿಷದ ನೀರು ನೀಡಲು ಕಾರಣ ಕೇಳಿದ್ರೆ ನೀವು ದಂಗಾಗ್ತೀರಿ. ಇಬ್ಬರ ಮಧ್ಯೆ ದೊಡ್ಡ ದ್ವೇಷವೇನೂ ಇಲ್ಲ. ಅಕ್ರಮ ಸಂಬಂಧವಾಗಲಿ, ಮಾಟ – ಮಂತ್ರವಾಗಲಿ ಇದಕ್ಕೆ ಕಾರಣವಲ್ಲ. ನಮಗೆ ಅತ್ಯಂತ ಕ್ಷುಲ್ಲಕ ಎನ್ನಿಸುವ ಕಾರಣಕ್ಕೆ ಸಹೋದ್ಯೋಗಿ (Colleague) ಈ ಕೆಲಸ ಮಾಡಿದ್ದಾರೆ. ಚೀನಾದ ಸಾಮಾಜಿಕ ಜಾಲತಾಣದಲ್ಲಿ ಈ ಘಟನೆ ಬಹಳ ಚರ್ಚೆಯಾಗ್ತಿದೆ. ಅನೇಕರು ಇದ್ರ ಬಗ್ಗೆ ಕಮೆಂಟ್ ಮಾಡ್ತಿದ್ದಾರೆ.

ಆರತಿಗೇಕೆ ಪ್ರಚಾರವೆಂದರೆ ಅಲರ್ಜಿ; ಅಮೆರಿಕಾದಿಂದ ಗುಟ್ಟಾಗಿ ಪದೇಪದೇ ಬರುವುದೇಕೆ, ಮತ್ತೆ ಹೋಗುವುದೇಕೆ?

ಚೀನಾದ ಹುಬೈ ಪ್ರಾಂತ್ಯದಲ್ಲಿ ಈ ಘಟನೆ ನಡೆದಿದೆ. ಗರ್ಭಿಣಿ, ಎನ್ಶಿ ತುಜಿಯಾದಲ್ಲಿರುವ ಜಲವಿಜ್ಞಾನ ಮತ್ತು ಜಲಸಂಪನ್ಮೂಲ ತನಿಖಾ ಬ್ಯೂರೋದಲ್ಲಿ ಕೆಲಸ ಮಾಡುತ್ತಿದ್ದಾಳೆ. ಒಂದು ದಿನ ಗರ್ಭಿಣಿ ತನ್ನ ಟೇಬಲ್ ಮೇಲಿದ್ದ ನೀರನ್ನು ಕುಡಿದಿದ್ದಾಳೆ. ಆ ನೀರು ಪ್ರತಿ ದಿನ ಸೇವನೆ ಮಾಡ್ತಿದ್ದ ನೀರಿನಂತೆ ಇರಲಿಲ್ಲ. ನೀರಿನ ರುಚಿಯಲ್ಲಿ ಬದಲಾವಣೆ ಆಗಿತ್ತು. ಮಹಿಳೆ ಬಾಟಲ್ ಬದಲಿಸಿ ನೋಡಿದ್ದಾಳೆ. ಆದ್ರೆ ಆ ಬಾಟಲ್ ನಲ್ಲಿದ್ದ ನೀರು ಕೂಡ ಅದೇ ರೀತಿ ಇತ್ತು.  ಈ ಮಧ್ಯೆ ಆಕೆಯ ಸ್ನೇಹಿತರೊಬ್ಬರು, ನಿಮ್ಮ ಬಾಟಲಿ ನೀರಿನಲ್ಲಿ ಏನಾದ್ರೂ ಬೆರೆಸಲಾಗಿದೆಯೇ ಎಂದು  ತಮಾಷೆ ಮಾಡಿದ್ದಾರೆ. ಈ ಮಾತಿನ ನಂತ್ರ ಗರ್ಭಿಣಿಗೆ ಅನುಮಾನ ಬಂದಿದೆ. ಈ ವಿಷ್ಯವನ್ನು ಗಂಭೀರವಾಗಿ ಪರಿಗಣಿಸಿದ ಮಹಿಳೆ ತನ್ನ ಐಪ್ಯಾಡ್ ಚೆಕ್ ಮಾಡಿದ್ದಾಳೆ. ಆಗ ಕಂಡ ವಿಷ್ಯ ಆಕೆಯನ್ನು ದಂಗಾಗಿಸಿದೆ.  

ನೀರಿನ ರುಚಿ ಬದಲಾಗಲು ಇದು ಕಾರಣ : ಗರ್ಭಿಣಿ ಪರಿಶೀಲನೆ ನಡೆಸಿದಾಗ ನೀರು ಬದಲಾಗಿರುವುದು ಬೆಳಕಿಗೆ ಬಂದಿದೆ. ನೀರಿಗೆ ಪೌಡರ್ ಒಂದನ್ನು ಬೆರೆಸಲಾಗಿದೆ. ಈ ಪೌಡರ್, ಹೆರಿಗೆಯನ್ನು ಮುಂದೂಡುವ ಕೆಲಸ ಮಾಡುತ್ತದೆ. ಹೆರಿಗೆ ಮುಂದೂಡುವ ಪ್ರಯತ್ನಕ್ಕೆ ಕಾರಣ ಏನು? : ಗರ್ಭಿಣಿಯ ಸಹೋದ್ಯೋಗಿಯೊಬ್ಬರು ನೀರಿಗೆ ಪೌಡರ್ ಬೆರೆಸಿದ್ದಾರೆ. ಗರ್ಭಿಣಿ ಹೆರಿಗೆಗೆ ಹೋದ್ರೆ ಕಚೇರಿಗೆ ರಜೆ ಹಾಕ್ತಾಳೆ. ಆಕೆ ರಜೆ ಹಾಕಿದ ಕಾರಣ ಆಕೆ ಕೆಲಸವನ್ನು ಕೂಡ ಕಚೇರಿಯಲ್ಲಿರುವ ಸಹೋದ್ಯೋಗಿಗಳು ಮಾಡ್ಬೇಕು. ಕೆಲಸದ ಹೊರೆ ಹೆಚ್ಚಾಗುತ್ತದೆ ಎನ್ನುವ ಕಾರಣಕ್ಕೆ ಸಹೋದ್ಯೋಗಿಯೊಬ್ಬರು, ಗರ್ಭಿಣಿಯ ಹೆರಿಗೆ ಮುಂದೂಡುವ ಪ್ರಯತ್ನ ಮಾಡಿದ್ದಾರೆ. ಅದಕ್ಕಾಗಿ ನೀರಿನಲ್ಲಿ ಪೌಡರ್ ಬೆರೆಸಿದ್ದಾರೆ.

ಈ ಫೋಟೋಗಳಲ್ಲಿ ಯಾವುದು ರಾಧಿಕಾ ಮರ್ಚೆಂಟ್, ಯಾವುದು ಅಲ್ಲ ಎಂದು ಕಂಡುಹಿಡಿಯಬಲ್ಲಿರಾ?

ವಾಸ್ತವವಾಗಿ ಜಲವಿಜ್ಞಾನ ಮತ್ತು ಜಲಸಂಪನ್ಮೂಲ ತನಿಖಾ ಬ್ಯೂರೋದಲ್ಲಿ ಕೆಲಸ ಸಿಗೋದು ಬಹಳ ಕಷ್ಟ. ಅಲ್ಲಿ ಉದ್ಯೋಗಿಗಳ ಸಂಖ್ಯೆ ಕಡಿಮೆ ಇದೆ. ಒಬ್ಬರು ರಜೆ ಹಾಕಿದ್ರೂ ಇನ್ನೊಬ್ಬರಿಗೆ ಕೆಲಸದ ಹೊರೆ ಹೆಚ್ಚಾಗುತ್ತದೆ. ಇದ್ರಿಂದ ತಪ್ಪಿಸಿಕೊಳ್ಳಲು ಸಹೋದ್ಯೋಗಿ ಇಂಥ ಕೆಟ್ಟ ನಿರ್ಧಾರಕ್ಕೆ ಬಂದಿದ್ದಾರೆ. ಮಹಿಳೆ ಈ ವಿಷ್ಯ ತಿಳಿದು ದಂಗಾಗಿದ್ದಾಳೆ. ಸಾಮಾಜಿಕ ಜಾಲತಾಣದಲ್ಲಿ ಈ ಸುದ್ದಿ ವೈರಲ್ ಆಗಿದೆ. ಅನೇಕರು ಸಹೋದ್ಯೋಗಿ ಕ್ರಮವನ್ನು ಖಂಡಿಸಿದ್ದಾರೆ. ಸ್ವಾರ್ಥಕ್ಕೆ ಇನ್ನೊಬ್ಬರ ಜೀವನದ ಜೊತೆ ಆಟವಾಡೋದು ಸೂಕ್ತವಲ್ಲ ಎಂದು ಅನೇಕರು ತಮ್ಮ ವಿರೋಧ ವ್ಯಕ್ತಪಡಿಸಿದ್ದಾರೆ. 

click me!