ಪಾರಿವಾಳಕ್ಕೆ ಆಹಾರ ಹಾಕಿದ್ದೇ ತಪ್ಪಾಯ್ತು… ನಾರಿಗೆ 2.5 ಲಕ್ಷ ದಂಡವಿಧಿಸಿದ ನಗರಸಭೆ

By Suvarna News  |  First Published Apr 1, 2024, 1:59 PM IST

ಧಾನ್ಯಗಳನ್ನು ನೋಡ್ತಿದ್ದಂತೆ ಪಾರಿವಾಳಗಳ ದಂಡು ಹಾರಿ ಬರುತ್ತೆ. ಅದನ್ನು ಇಷ್ಟಪಡುವ ಜನರು ಕಾಳುಗಳನ್ನು ಹಾಕಿ ಪಾರಿವಾಳವನ್ನು ಆಕರ್ಷಿಸುತ್ತಾರೆ. ಆದ್ರೆ ಈ ಅಜ್ಜಿಗೆ ಪಾರಿವಾಳದ ಪ್ರೀತಿಯೇ ಮುಳುವಾಗಿದೆ. ದಂಡ ತೆರುವಂತಾಗಿದೆ.


ಪಕ್ಷಿಗಳಿಗೆ ಆಹಾರ ನೀಡುವುದು, ನೀರು ನೀಡುವುದು ಶುಭವೆಂದು ಭಾರತೀಯರು ನಂಬುತ್ತಾರೆ. ಪಕ್ಷಿಗಳಿಗಾಗಿ ಅಂಗಳದಲ್ಲಿ, ಟೆರೆಸ್ ನಲ್ಲಿ ಧಾನ್ಯಗಳನ್ನು ಹಾಕಿರ್ತಾರೆ. ಒಂದು ಪಾತ್ರೆಯಲ್ಲಿ ಸ್ವಲ್ಪ ನೀರನ್ನು ತುಂಬಿಟ್ಟಿರುತ್ತಾರೆ. ಪ್ರತಿ ದಿನ ಆಹಾರ ಸಿಗುತ್ತೆ ಎಂಬುದು ಗೊತ್ತಾದ್ರೆ ಪಕ್ಷಿಗಳು ದಿನ ಆ ಜಾಗಕ್ಕೆ ಬಂದು ಕಾಳುಕಡಿ ಸೇವನೆ ಮಾಡಿ ಹೋಗ್ತವೆ. ಪಕ್ಷಿಗಳು ಅದ್ರಲ್ಲೂ ಪಾರಿವಾಳಗಳ ಸಂಖ್ಯೆ ನಮ್ಮಲ್ಲಿ ಹೆಚ್ಚು. ದಿನ ಬೆಳಗಾದ್ರೆ ಹತ್ತಾರು ಪಾರಿವಾಳಗಳು ಟೆರೆಸ್ ಮೇಲೆ ಹಾರಾಡೋದನ್ನು ನಾವು ಬೆಂಗಳೂರಿನಂತಹ ನಗರದಲ್ಲಿ ನೋಡ್ಬಹುದು. ಆದ್ರೆ ಎಲ್ಲ ಕಡೆ ನೀವು ಈ ಪಾರಿವಾಳಗಳನ್ನು ಅತಿಯಾಗಿ ಪ್ರೀತಿಸಿದ್ರೆ ನಿಮಗೆ ಶಿಕ್ಷೆಯಾಗುತ್ತದೆ. ಪಾರಿವಾಳಗಳಿಗೆ ಆಹಾರ ಹಾಕುವ ಮುನ್ನ ಅಲ್ಲಿನ ನಿಯಮವೇನು ಎಂಬುದನ್ನು ತಿಳಿದಿರಬೇಕು. ಈ ಮಹಿಳೆ ಪಾರಿವಾಳಕ್ಕೆ ಆಹಾರ ಹಾಕಿ ಈಗ ಅನಾರೋಗ್ಯಕ್ಕೆ ಒಳಗಾಗಿದ್ದಾಳೆ. ನಗರಸಭೆ ಆಕೆಗೆ ಕಟ್ಟುನಿಟ್ಟಿನ ಸೂಚನೆ ನೀಡಿದ್ದಲ್ಲದೆ ದೊಡ್ಡ ಮೊತ್ತವನ್ನು ದಂಡದ ರೂಪದಲ್ಲಿ ವಿಧಿಸಿದೆ.

ಪ್ರಾಣಿ (Animal) – ಪಕ್ಷಿ (Bird) ಗಳನ್ನು ಪ್ರೀತಿಸುವ ಜನರು ಅವರ ಬಗ್ಗೆ ಹೆಚ್ಚು ಕಾಳಜಿ ಹೊಂದಿರುತ್ತಾರೆ. ಪ್ರತಿ ದಿನ ಮನೆಯಂಗಳಕ್ಕೆ ಬರುವ ಪಕ್ಷಿಗಳನ್ನು ಮಕ್ಕಳಂತೆ ನೋಡಿಕೊಳ್ತಾರೆ. ಅವರಿಗೆ ಒಂದಿಷ್ಟು ಆಹಾರ ಹಾಕಿ ಪ್ರೀತಿಸುತ್ತಾರೆ. ಪ್ರಾಣಿ – ಪಕ್ಷಿಗಳು ಒತ್ತಡ ಕಡಿಮೆ ಮಾಡುವ ಕೆಲಸ ಮಾಡುತ್ತವೆ. ಅನೇಕರ ಟೈಂ ಪಾಸ್ ಈ ಸಾಕು ಪ್ರಾಣಿ – ಪಕ್ಷಿಗಳು. ಪ್ರತಿ ದಿನ ಒಂದಿಷ್ಟು ಸಮಯ ಅವರ ಜೊತೆ ಕಳೆಯುವುದ್ರಿಂದ ಸಂತೋಷ ಸಿಗುತ್ತದೆ. ನೋವು, ಒಂಟಿತನ ಕಡಿಮೆ ಆಗುತ್ತದೆ. ಅದೇ ಪಕ್ಷಿ ನಾಲ್ಕೈದು ದಿನ ಮನೆಗೆ ಬಂದಿಲ್ಲ ಎಂದಾಗ ಅಥವಾ ಆಹಾರ ಹಾಕಿಲ್ಲ ಎಂದಾಗ ಇವರಿಗೆ ಬೇಸರವಾಗುತ್ತದೆ. ಕೆಲವರು ಅದೇ ಕೊರಗಿನಲ್ಲಿ ಹಾಸಿಗೆ ಹಿಡಿಯುವುದಿದೆ. ಈಗ ಇಲ್ಲೊಬ್ಬ ಮಹಿಳೆ ಕೂಡ ಪಾರಿವಾಳ (Pigeon)ದ ಕೊರಗಿನಲ್ಲಿದ್ದಾಳೆ.

Tap to resize

Latest Videos

ಯಾವತ್ತೂ ಈ ಔಷಧ ಚಹಾ, ಕಾಫಿಯೊಂದಿಗೆ ಸೇವಿಸಲೇ ಬೇಡಿ

ನಮ್ಮಂತೆ ಎಲ್ಲ ದೇಶದಲ್ಲಿ ಪಾರಿವಾಳ ಸೇರಿದಂತೆ ಯಾವುದೇ ಪಕ್ಷಿಗೆ ಮನೆಯಲ್ಲಿ ಆಹಾರ ಹಾಕಲು ಅನುಮತಿ ಇಲ್ಲ. ಪ್ರಾಣಿ – ಪಕ್ಷಿಗಳನ್ನು ಸಾಕುವ ವೇಳೆ ಅಥವಾ ಪಕ್ಷಿಗಳಿಗೆ ಆಹಾರ ಹಾಕುವ ವೇಳೆ ಸ್ಥಳೀಯ ಅಧಿಕಾರಿಗಳ ಅನುಮತಿ ಬೇಕು. 97 ವರ್ಷ ವಯಸ್ಸಿನ ಅನ್ನೆ ಸಿಗೋ ಪಾರಿವಾಳಕ್ಕೆ ಆಹಾರ ಹಾಕಿ ಈಗ ದಂಡ ಪಾವತಿಸುವಂತಾಗಿದೆ. ಅನ್ನೆ ಸಿಗೊ ಸಂಗೀತ ಶಿಕ್ಷಕಿಯಾಗಿದ್ದರು. ಅವರೀಗ ಮನೆಯಲ್ಲಿ ಕೆಲ ಪಕ್ಷಿ ಸಾಕಿದ್ದಾರೆ. ಮನೆಗೆ ಬರುವ ಪಾರಿವಾಳಕ್ಕೆ ಪ್ರತಿ ದಿನ ಕಾಳು ಹಾಕ್ತಾರೆ. ಇದೇ ಕಾರಣಕ್ಕೆ ಅನೇಕ ಪಕ್ಷಿಗಳು ಅನ್ನೆ ಸಿಗೋ ಮನೆಗೆ ಬರುತ್ವೆ. ಪಕ್ಕದ ಮನೆ ವ್ಯಕ್ತಿ ಇದ್ರ ವಿರುದ್ಧ ನಗರಸಭೆಗೆ ದೂರು ನೀಡಿದ್ದಾನೆ.

ಅನ್ನೆ ಸಿಗೋ ಪಾರಿವಾಳಕ್ಕೆ ಆಹಾರ ನೀಡುವ ಕಾರಣ ಪಕ್ಷಿಗಳು ಮನೆಗೆ ಬರ್ತಿದ್ದು, ಇದ್ರಿಂದ ಸುತ್ತಮುತ್ತಲ ಪ್ರದೇಶ ಕೊಳಕಾಗ್ತಿದೆ ಎಂದು ಅವರು ದೂರಿದ್ದರು. ಈ ಸಂಬಂಧ ನಗರಸಭೆ ಅನ್ನೆ ಸಿಗೋಗೆ ನೊಟೀಸ್ ನೀಡಿತ್ತು. ಅದನ್ನು ಅನ್ನೆ ನಿರ್ಲಕ್ಷ್ಯ ಮಾಡಿದ್ದರು. ಆರಂಭದಲ್ಲಿ ಹತ್ತು ಸಾವಿರ ದಂಡ ವಿಧಿಸಿದ್ದ ನಗರಸಭೆ ಅಧಿಕಾರಿಗಳು ನಂತ್ರ 2,500 ಪೌಂಡ್‌ ಅಂದರೆ 2.5 ಲಕ್ಷ ರೂಪಾಯಿ ದಂಡ ವಿಧಿಸಿದ್ದಾರೆ. ಆದ್ರೆ ಅನ್ನೆ ಇದಕ್ಕೂ ಸ್ಪಂದಿಸದ ಕಾರಣ ಆಕೆ ಮಗ 77 ವರ್ಷದ ಮಗ ಅಲನ್‌ಗೆ ನೊಟೀಸ್ ನೀಡಿದೆ. ಪಾರಿವಾಳಕ್ಕೆ ಆಹಾರ ಹಾಕೋದನ್ನು ನಿಲ್ಲಿಸದೆ ಹೋದಲ್ಲಿ ಇಬ್ಬರನ್ನು ಮನೆಯಿಂದ ಹೊರಗೆ ಹಾಕುವುದಾಗಿ ಎಚ್ಚರಿಸಿದೆ. ಇದ್ರಿಂದ ಅನ್ನೆ ಆರೋಗ್ಯದಲ್ಲಿ ಏರುಪೇರಾಗಿದೆ. ಆಕೆ ಸದಾ ಅಳ್ತಿರುತ್ತಾಳೆ ಎಂದು ಮಗ ಹೇಳಿದ್ದಾನೆ.

ನವವಿವಾಹಿತೆಗೆ ಈ 5 ಉಡುಗೊರೆ ಕೊಡ್ಬೇಡಿ ಅನ್ನುತ್ತೆ ಜ್ಯೋತಿಷ್ಯ; ಯಾವುವು ಮತ್ತು ಯಾಕೆ?

ಇಂಗ್ಲೆಂಡ್, ಥೈಲ್ಯಾಂಡ್, ಕೊಲಂಬಿಯಾ, ಕೆನಡಾ, ಅಮೆರಿಕ ಸೇರಿದಂತೆ ಅನೇಕ ದೇಶಗಳಲ್ಲಿ ಪಕ್ಷಿಗಳಿಗೆ ಆಹಾರ ಹಾಕುವುದು ಅಪರಾಧ. ಪಕ್ಷಿಗಳು ಪರಿಸರ ಹಾಳು ಮಾಡುವುದಲ್ಲದೆ ಕೆಲ ರೋಗಗಳನ್ನು ಹರಡುತ್ತವೆ ಎನ್ನುವ ಕಾರಣಕ್ಕೆ ಪಾರಿವಾಳಗಳಿಗೆ ಆಹಾರ ನೀಡುವುದನ್ನು ಅಪರಾಧ ವಿಭಾಗದಲ್ಲಿಡಲಾಗಿದೆ. 

click me!