ಪ್ರಗ್ನೆಂಟ್ ಆಗ್ತಾ ಇಲ್ವಾ? ಈ ಆರು ಕಾರಣಗಳನ್ನು ಕ್ರಾಸ್ ಚೆಕ್ ಮಾಡಿ..

By Suvarna News  |  First Published Jan 2, 2024, 11:04 AM IST

ಪ್ರತಿ ತಿಂಗಳೂ ಪ್ರಗ್ನೆನ್ಸಿ ಟೆಸ್ಟ್ ನೆಗೆಟಿವ್ ಬಂದು ತಲೆಬಿಸಿ ಆಗಿದ್ಯಾ? ಈ ಜೀವನಶೈಲಿ ಸಮಸ್ಯೆಗಳು ನಿಮಗಿವೆಯಾ?


ಮುಂಚೆಯೆಲ್ಲ ಹದಿ ವಯಸ್ಸಿನಿಂದಲೇ ಮಕ್ಕಳನ್ನು ಹೆರಲು ಪ್ರಾರಂಭಿಸಿದರೆ, ಮಕ್ಕಳ ಸಂಖ್ಯೆ 8- 10 ದಾಟುವುದು ಸಾಮಾನ್ಯವಾಗಿತ್ತು. ಈಗಿನ ತಲೆಮಾರು ಹಾಗಲ್ಲ. ಅವರು 30 ದಾಟಿದ ಮೇಲೆ ಮಗುವಿಗೆ ಪ್ಲ್ಯಾನ್ ಮಾಡುತ್ತಾರೆ. ನಂತರದಲ್ಲಿ ಪ್ರತಿ ತಿಂಗಳು ಪೀರಿಯಡ್ಸ್ ಆದಂತೆಲ್ಲ ಚಿಂತೆ ಹೆಚ್ಚುತ್ತಾ ಹೋಗುತ್ತದೆ. ಗರ್ಭಿಣಿಯಾಗುವುದು ತಾವಂದುಕೊಂಡಷ್ಟು ಸುಲಭವಿಲ್ಲ ಎಂದು ತಿಳಿದಾಗ ಹೆದರಲಾರಂಭಿಸುತ್ತಾರೆ. 
ಈಗೆಲ್ಲ ಮುಂಚಿನಂತಿಲ್ಲ, ಮಾಲಿನ್ಯ, ಕಲಬೆರಕೆ ಆಹಾರ, ಜೀವನಶೈಲಿಯ ಕಾರಣದಿಂದ ಗರ್ಭ ಧರಿಸುವುದು ಕಷ್ಟದ ವಿಷಯವಾಗಿದೆ. ಹಾಗಾಗಿ, ತಂದೆ ತಾಯಿಯಾಗ ಬಯಸುವ ಜೋಡಿಯು ಜೀವನಶೈಲಿಯ ವಿಷಯದಲ್ಲಿ ಹೆಚ್ಚು ಕಟ್ಟುನಿಟ್ಟಾಗಿರಬೇಕು. ಅದರಲ್ಲೂ ಮಹಿಳೆಯರು-  ನೀವು ಗರ್ಭಿಣಿಯಾಗಲು ತೊಂದರೆಯನ್ನು ಎದುರಿಸುತ್ತಿರುವಾಗ, ನೀವು ಮಾಡಬಹುದಾದ ಪ್ರಮುಖ ಅಥವಾ ಸಣ್ಣ ಜೀವನಶೈಲಿಯ ಬದಲಾವಣೆಗಳು ಇವು..

ನೀವು ಗರ್ಭಿಣಿಯಾಗದಿರಲು ಸಂಭವನೀಯ ಕಾರಣಗಳು
ಕಡಿಮೆ ಲೈಂಗಿಕ ಆಸಕ್ತಿ

ಲೈಂಗಿಕ ಕ್ರಿಯೆಯು ನಿಮ್ಮ ದೇಹವು ಗರ್ಭಧಾರಣೆಗೆ ಸಿದ್ಧವಾಗಲು ಸೂಚನೆ ನೀಡುತ್ತದೆ. ಕೇವಲ ಅಂಡೋತ್ಪತ್ತಿ ಸಮಯದಲ್ಲಿ ಮಾತ್ರವಲ್ಲದೆ, ಉಳಿದಂತೆಯೂ ಲೈಂಗಿಕ ಆಸಕ್ತಿ ತೋರುವುದು ಮುಖ್ಯ. ಮನಸ್ಸು, ಶರೀರ ಎರಡೂ ಸಿದ್ಧವಿದ್ಧಾಗ ಗರ್ಭ ಧರಿಸುವ ಸಾಧ್ಯತೆ ಹೆಚ್ಚು. 

ಕೋವಿಡ್‌ 2ನೇ ಡೋಸ್‌ ಲಸಿಕೆ ಪಡೆದವರಿಗೆ ಕಾರ್ಬೋವ್ಯಾಕ್ಸ್‌ ಲಸಿಕೆ ಬಿಡುಗಡೆ ಮಾಡಿದ ಕೇಂದ್ರ ಸರ್ಕಾರ!

Tap to resize

Latest Videos

ಒತ್ತಡ
ಈಗಂತೂ ಹೆಚ್ಚಿನ ಮಹಿಳೆಯರು ಮನೆ ಮತ್ತು ವೃತ್ತಿ ಎರಡನ್ನೂ ನಿಭಾಯಿಸುತ್ತಿರುತ್ತಾರೆ. ಹಲವಾರು ಕಮಿಟ್‌ಮೆಂಟ್‌ಗಳ ಕಾರಣದಿಂದಾಗಿ ಕೆಲಸ ಬಿಡುವ ಯೋಚನೆಯನ್ನೂ ಮಾಡುವಂತಿರುವುದಿಲ್ಲ. ಅಂಥದರಲ್ಲಿ ತಾನು ಪ್ರಗ್ನೆಂಟ್ ಆದರೆ ಏನೆಲ್ಲ ಸಮಸ್ಯೆಗಳಾಗಬಹುದು ಎಂಬುದು ಅವರಲ್ಲಿ ಒತ್ತಡ ಸೃಷ್ಟಿಸುತ್ತಿರುತ್ತದೆ. ಆರ್ಥಿಕವಾಗಿ ತಾನು ಅನುಭವಿಸಬಹುದಾದ ಒತ್ತಡ ದೇಹದ ಮೇಲೂ ಪರಿಣಾಮ ಬೀರುತ್ತದೆ. ಇದೂ ಕೂಡಾ ನೀವು ಗರ್ಭಿಣಿಯಾಗುವುದನ್ನು ತಡೆಯುತ್ತಿರಬಹುದು. ಒತ್ತಡದಿಂದ ಹೊರ ಬರುವ ಮಾರ್ಗಗಳನ್ನು ಕಂಡುಕೊಳ್ಳಿ.

ತುಂಬಾ ಹೆಚ್ಚು ಅಥವಾ ತುಂಬಾ ಕಡಿಮೆ ತೂಕ
ನಿಮ್ಮ ದೇಹದ ತೂಕವು ಫಲವತ್ತತೆಯಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಕೆನಡಿಯನ್ ಮೆಡಿಕಲ್ ಅಸೋಸಿಯೇಶನ್ ಜರ್ನಲ್‌ನಲ್ಲಿ ಪ್ರಕಟವಾದ ಅಧ್ಯಯನದ ಪ್ರಕಾರ ಅಧಿಕ ತೂಕ ಹೊಂದಿರುವ ಮಹಿಳೆಯರಿಗೆ ಬಂಜೆತನದ ಅಪಾಯ 27%ರಷ್ಟು ಮತ್ತು ಬೊಜ್ಜು ಹೊಂದಿರುವ ಮಹಿಳೆಯರಿಗೆ 78% ರಷ್ಟು ಹೆಚ್ಚು. ಇನ್ನು ಕಡಿಮೆ ತೂಕ ಹೊಂದಿರುವ ದೇಹವು ಈಸ್ಟ್ರೊಜೆನ್ ಅನ್ನು ಉತ್ಪಾದಿಸುವುದನ್ನು ನಿಲ್ಲಿಸಬಹುದು. ಇದರಿಂದ ಅನಿಯಮಿತ ಋತುಚಕ್ರ ಎದುರಿಸಬೇಕಾಗಬಹುದು. ಈ ಎರಡೂ ಕಾರಣಗಳು ಬಂಜೆತನವನ್ನು ಸೃಷ್ಟಿಸುತ್ತವೆ. ಹಾಗಾಗಿ, ದೇಹದ ಎತ್ತರಕ್ಕೆ ತಕ್ಕ ತೂಕ ಹೊಂದಿರುವಂತೆ ನೋಡಿಕೊಳ್ಳಿ. 

ಉಚಿತ ಬಸ್‌ನಲ್ಲಿ ಸೀಟಿಗಾಗಿ ಮಹಿಳೆಯರ ಫೈಟಿಂಗ್: ಕಾಂಗ್ರೆಸ್‌ ಸರ್ಕಾರವೇ ಕಾರಣವೆಂದ ಪ್ರಯಾಣಿಕರು!

ಅತಿಯಾದ ವ್ಯಾಯಾಮ
ವ್ಯಾಯಾಮ ಎಲ್ಲರಿಗೂ ಅಗತ್ಯ. ಆದರೆ, ನೀವು ಗರ್ಭಿಣಿಯಾಗಲು ಪ್ರಯತ್ನಿಸುತ್ತಿದ್ದರೆ ಕಠಿಣವಾದ ವ್ಯಾಯಾಮಗಳಿಂದ ಕೊಂಚ ದೂರವಿರಿ. ಕಠಿಣ ವ್ಯಾಯಾಮಗಳಲ್ಲಿ ಮಹಿಳೆಯು ಹೆಚ್ಚು ಕಾಲ ತೊಡಗಿಸಿಕೊಳ್ಳುವುದರಿಂದ ಫಲವತ್ತತೆ ಕಡಿಮೆಯಾಗುತ್ತದೆ ಎನ್ನುತ್ತದೆ ಸಂಶೋಧನೆ. 

ಆಹಾರ ಕ್ರಮ
ನಿಮ್ಮ ಆಹಾರದ ಆಯ್ಕೆಗಳನ್ನು ಬದಲಾಯಿಸುವುದು ಬಂಜೆತನ ಸಮಸ್ಯೆಗಳಿಗೆ ಪರಿಹಾರವಾಗುತ್ತದೆ. ಫಲವತ್ತತೆ ಮತ್ತು ಆಹಾರಕ್ರಮವು ಪರಸ್ಪರ ಸಂಬಂಧ ಹೊಂದಿದೆ. ಕೊಬ್ಬು ಮತ್ತು ಸಕ್ಕರೆಯು ಫಲವತ್ತತೆ ನಷ್ಟಕ್ಕೆ ಕಾರಣವಾಗುತ್ತವೆ. ಹಾಗಾಗಿ, ಮಗುವಿನ ನಿರೀಕ್ಷೆಯಲ್ಲಿದ್ದರೆ, ಆರೋಗ್ಯಕರ ಆಹಾರದತ್ತ ಜೀವನವನ್ನು ಹೊರಳಿಸಿ.

ಧೂಮಪಾನ
ಕೇವಲ ಪುರುಷರಷ್ಟೇ ಅಲ್ಲ, ಮಹಿಳೆಯರೂ ಇಂದು ಧೂಮಪಾನದತ್ತ ಹೊರಳುತ್ತಿದ್ದಾರೆ. ನೀವು ಧೂಮಪಾನಿಗಳಾಗಿದ್ದರೆ, ಅದು ಫಲವತ್ತತೆಯ ಮೇಲೂ ಪರಿಣಾಮ ಬೀರಿ, ಬಂಜೆತನದ ಅಪಾಯವನ್ನು ಹೆಚ್ಚಿಸುವುದು. 
 

click me!