ಮಲಮಗನನ್ನು ಫೋಟೋದಿಂದ ಡಿಲಿಟ್ ಮಾಡಿ… ಮಲತಾಯಿ ಪೋಸ್ಟ್ ವೈರಲ್!

Published : Dec 29, 2023, 11:34 AM IST
ಮಲಮಗನನ್ನು ಫೋಟೋದಿಂದ ಡಿಲಿಟ್ ಮಾಡಿ… ಮಲತಾಯಿ ಪೋಸ್ಟ್ ವೈರಲ್!

ಸಾರಾಂಶ

ಎಷ್ಟೇ ನಿಸ್ವಾರ್ಥ ಪ್ರೀತಿ ನೀಡಿದ್ರೂ ನಮ್ಮದು ಎಂಬ ಸಣ್ಣ ಸ್ವಾರ್ಥ ಎಲ್ಲರಲ್ಲೂ ಇದ್ದೇ ಇರುತ್ತದೆ. ಮಕ್ಕಳ ವಿಷ್ಯದಲ್ಲೂ ಅಷ್ಟೆ. ತನ್ನ ಮಕ್ಕಳು ಹಾಗೂ ಮಲ ಮಕ್ಕಳನ್ನು ಮಹಿಳೆ ಭಿನ್ನವಾಗೆ ನೋಡ್ತಾಳೆ. ಇದಕ್ಕೆ ಈಗ ಮತ್ತೊಂದು ಉದಾಹರಣೆ ಸಿಕ್ಕಿದೆ.

ಪ್ರತಿಯೊಬ್ಬರು ಅಪ್ಪ – ಅಮ್ಮನ ಪ್ರೀತಿಯಲ್ಲಿ ಬೆಳೆಯಲು ಇಷ್ಟಪಡ್ತಾರೆ. ಆದ್ರೆ ಎಲ್ಲರಿಗೂ ಈ ಭಾಗ್ಯ ಸಿಗೋದಿಲ್ಲ. ಅನೇಕ ಬಾರಿ ಅಪ್ಪ – ಅಮ್ಮನ ಜೊತೆ ಜೀವನ ನಡೆಸುವ ಅವಕಾಶ ಇರೋದಿಲ್ಲ. ಕೆಲವರು ಅನಾಥಾಶ್ರಮದಲ್ಲಿ ಬೆಳೆದ್ರೆ ಮತ್ತೆ ಕೆಲವರು ಮಲ ತಂದೆ ಅಥವಾ ತಾಯಿ ಜೊತೆ ಜೀವನ ಸಾಗಿಸುವ ಅನಿವಾರ್ಯತೆ ಎದುರಾಗುತ್ತದೆ. ಮಲ ತಂದೆ ಅಥವಾ ತಾಯಿ ಜೊತೆ ವಾಸಿಸುವ ಮಕ್ಕಳು ಅನೇಕ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ಅವರ ಪ್ರೀತಿ ಸಿಗೋದು ದೂರದ ಮಾತು. ಸರಿಯಾದ ಸಮಯಕ್ಕೆ ಊಟ ಸಿಗೋದು ಕಷ್ಟವಾಗುತ್ತದೆ. ಹಲವು ಮನೆಗಳಲ್ಲಿ ಅತ್ಯಂತ ಕೆಟ್ಟ ತಾರತಮ್ಯ ಕಾಣುತ್ತದೆ. ಅಂತಹ ಮಕ್ಕಳು ಸಣ್ಣ ವಿಷಯಗಳ ಅನುಪಸ್ಥಿತಿಯಲ್ಲಿ ಬೆಳೆಯುತ್ತಾರೆ. ಕೆಲವೊಮ್ಮೆ ಮಲ ತಂದೆ ಅಥವಾ ತಾಯಿ ಕಾಟ ತಾಳಲಾರದೆ ಅನೇಕರು ಆತ್ಮಹತ್ಯೆ ಮಾಡಿಕೊಂಡಿದ್ದು, ಮನೆ ಬಿಟ್ಟು ಬಂದಿದ್ದು ಇದೆ.  ಕೆಲವೊಮ್ಮೆ ಮನೆಯಲ್ಲಿ ನಡೆಯುತ್ತಿರುವ ತಾರತಮ್ಯ ಹಾಗೂ ಗಲಾಟೆ ಮನೆಯವರ ಮಧ್ಯೆಯೇ ಇರುತ್ತದೆ. ಇದು ಬೇರೆಯವರಿಗೆ ತಿಳಿಯೋದಿಲ್ಲ. ಸಾಮಾಜಿಕ ಜಾಲತಾಣದಲ್ಲಿ ಮಹಿಳೆಯೊಬ್ಬಳು ತನ್ನ ಕಿರಿಯ ಮಲಮಗನಿಗೆ ಹೇಗೆ ತಾರತಮ್ಯ ಮಾಡುತ್ತಿದ್ದಾಳೆ. ಅವಳ ಇಬ್ಬರು ನಿಜವಾದ ಪುತ್ರರನ್ನು ಹೇಗೆ ಪ್ರೀತಿಸುತ್ತಾಳೆ ಎಂಬ ಸಂಗತಿಯನ್ನು ಹೇಳಿದ್ದಾಳೆ.

ಮಹಿಳೆ ಫೇಸ್ ಬುಕ್ (Facebook) ನಲ್ಲಿ ಪೋಸ್ಟ್ (Post) ಒಂದನ್ನು ಶೇರ್ ಮಾಡಿದ್ದಾಳೆ. ಇದರಲ್ಲಿ ಆಕೆಯ ಮಡಿಲಲ್ಲಿ ಸುಮಾರು ಒಂದು ಮತ್ತು ಎರಡು ವರ್ಷದ ಇಬ್ಬರು ಮಕ್ಕಳಿರೋದನ್ನು ನೀವು ನೋಡ್ಬಹುದು. ಈ ಫೋಟೋ (Photo) ದಲ್ಲಿ ನೀವು ಇನ್ನೊಂದು ಮಗುವನ್ನು ಕೂಡ ನೋಡಬಹುದು. ಸುಮಾರು ಎರಡೂವರೆ ವರ್ಷದ ಮೂರನೇ ಮಗು, ಮಹಿಳೆಯಿಂದ ಒಂದು ಅಡಿ ದೂರದಲ್ಲಿ ಕುಳಿತಿತ್ತು.

ರಶ್ಮಿಕಾ-ವಿಜಯ್ ದೇವರಕೊಂಡ ಮದ್ವೆಯಾದ್ರೆ ಡಿವೋರ್ಸ್ ಗ್ಯಾರಂಟಿ; ಶಾಕಿಂಗ್​ ಹೇಳಿಕೆ ಕೊಟ್ಟ ಸೆಲೆಬ್ರಿಟಿ ಜ್ಯೋತಿಷಿ!

ಬಲಭಾಗದಲ್ಲಿ ಕುಳಿತಿರುವ ಮಗುವನ್ನು ತೆಗೆಯಲು ನಿಮ್ಮಲ್ಲಿ ಯಾರ ಬಳಿಯಾದ್ರೂ ಮಾರ್ಗವಿದ್ಯಾ ಎಂದು ಆಕೆ ಪ್ರಶ್ನೆ ಮಾಡಿದ್ದಾಳೆ. ಆತ ನನ್ನ ಮಲಮಗ. ನನಗೆ ಈ ಫೋಟೋ ತುಂಬಾ ಇಷ್ಟವಾಗಿದೆ. ಆದ್ರೆ ನನ್ನಿಬ್ಬರು ಮಕ್ಕಳ ಜೊತೆ ನಾನಿರುವ ಫೋಟೋ ಮಾತ್ರ ನನಗೆ ಇಷ್ಟವಾಗಿದೆ. ದಯವಿಟ್ಟು ಈತನನ್ನು ಫೋಟೋಗಳಿಂದ ತೆಗೆದುಹಾಕಿ. ಮುಂಚಿತವಾಗಿ ಧನ್ಯವಾದಗಳು ಎಂದು ಆಕೆ ಪೋಸ್ಟ್ ಮಾಡಿದ್ದಾಳೆ.

Trending : ಚಮತ್ಕಾರ..! ಕೊನೆಯವರೆಗೂ ಹೋರಾಟ ನಡೆಸಿ ಪತ್ನಿ ಬದುಕಿಸಿದ ಪತಿ..

ಮಹಿಳೆಯ ಈ ಪೋಸ್ಟ್ ನೋಡಿ ಜನರು ಕೋಪಗೊಂಡಿದ್ದಾರೆ. ಒಂದಾದ್ಮೇಲೆ ಒಂದರಂತೆ ಕಮೆಂಟ್ ಮಾಡಲು ಶುರು ಮಾಡಿದ್ದಾರೆ. ಯಾರೋ ಈ ಪೋಸ್ಟನ್ನು ರೆಡ್ಡಿಟ್ ನಲ್ಲಿ ಪೋಸ್ಟ್ ಮಾಡಿದ್ದಾರೆ. ಇದಕ್ಕೂ ಅನೇಕ ಕಮೆಂಟ್ ಬಂದಿದೆ. ಮಹಿಳೆಯ ಬೇಧ ಭಾವವನ್ನು ಜನರು ಖಂಡಿಸಿದ್ದಾರೆ. ಮಲ ಮಗುವನ್ನು ಮಹಿಳೆ ಎಷ್ಟು ದೂರ ಇಟ್ಟಿದ್ದಾಳೆ ಎಂಬುದರಿಂದಲೇ ಮಹಿಳೆ ಮನಸ್ಥಿತಿಯನ್ನು ಅರಿಯಬಹುದು ಎಂದು ಒಬ್ಬರು ಕಮೆಂಟ್ ಮಾಡಿದ್ದಾರೆ.

ಈ ಫೋಟೋ ಕ್ಲಿಕ್ ಮಾಡುವ ವೇಳೆ ಮಹಿಳೆ ಉದ್ದೇಶಪೂರ್ವಕವಾಗಿಯೇ ಮಲ ಮಗನನ್ನು ದೂರ ಇಟ್ಟಿದ್ದಾಳೆ. ಆರಾಮವಾಗಿಯೇ ಫೋಟೋ ಕ್ರಾಪ್ ಮಾಡಬಹುದು ಎಂದು ಇನ್ನೊಬ್ಬರು ಕಮೆಂಟ್ ಮಾಡಿದ್ದಾರೆ. ಇಂಥ ಮಹಿಳೆ ಬಳಿ ಒಂದು ಮಗುವನ್ನೂ ಬಿಡಬಾರದು. ಮಹಿಳೆ ಮನಸ್ಥಿತಿ ಕೆಟ್ಟದಾಗಿದೆ. ಇದ್ರಿಂದ ನೋವಾಗುತ್ತದೆ. ಈ ಮಗು ಮುಂದಿನ ಜೀವನವನ್ನು ಹೇಗೆ ನಡೆಸ್ತಾನೆ ಎನ್ನುವ ಪ್ರಶ್ನೆ ನಮ್ಮನ್ನು ಕಾಡ್ತಿದೆ ಎಂದು ಇನ್ನೊಬ್ಬರು ಬರೆದಿದ್ದಾರೆ. ಎಲ್ಲ ಕಮೆಂಟ್ ಬಂದ್ಮೇಲೆ ಮಹಿಳೆ ಮತ್ತೊಂದು ಪೋಸ್ಟ್ ಹಂಚಿಕೊಂಡಿದ್ದಾಳೆ. ನಾನು ನನ್ನ ಮಲ ಮಗನನ್ನೂ ಪ್ರೀತಿ ಮಾಡ್ತೇನೆ. ಆದ್ರೆ ಮಲಮಗನನ್ನು ಬಿಟ್ಟು ಕೆಲ ಫೋಟೋಗಳನ್ನು ನಾನು ಕ್ಲಿಕ್ ಮಾಡಿಕೊಳ್ಳಬೇಕಿತ್ತು. ಆತ ಜೊತೆಗಿರುವ ಕೆಲ ಫೋಟೋಗಳನ್ನು ನಾನು ಫೇಸ್ಬುಕ್ ನಲ್ಲಿ ಹಂಚಿಕೊಂಡಿದ್ದೇನೆ ಎಂದು ಆಕೆ ಬರೆದಿದ್ದಾಳೆ.

PREV

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಶಾಕಿಂಗ್.. ಆ ನಟ-ನಟಿ ಈ ವಯಸ್ಸಿನಲ್ಲಿ ಮದುವೆ ಆಗೋದಾ?.. ವಿಡಿಯೋ ನೋಡಿ ನೆಟ್ಟಿಗರ ತಲೆ ಗಿರಗಿರ..!
'ಹೊಟ್ಟೆಗೆ ಹಿಟ್ಟಿಲ್ಲದೇ ಬದುಕಬಲ್ಲೆ, ಆದ್ರೆ 'ಅದಿಲ್ಲದೇ' ಬದುಕಲಾರೆ: ಮದುವೆ ಬೆನ್ನಲ್ಲೇ ಸಮಂತಾ ಹಳೆಯ ಹೇಳಿಕೆ ವೈರಲ್!