Home Remedies: ಮುಜುಗರ ತರಿಸುವ ಬಿಳಿ ಸೆರಗಿನ ಸಮಸ್ಯೆಗೆ ಇಲ್ಲಿದೆ ಪರಿಹಾರ

By Suvarna NewsFirst Published Jun 21, 2022, 5:32 PM IST
Highlights

ಅನೇಕ ಮಹಿಳೆಯರ ಅತಿ ದೊಡ್ಡ ಸಮಸ್ಯೆ ಬಿಳಿ ಮುಟ್ಟು. ಕಿರಿಕಿರಿ ಜೊತೆ ಸಾಕಷ್ಟು ಸಮಸ್ಯೆಗಳಿಗೆ ಇದು ಕಾರಣವಾಗುತ್ತದೆ. ದೇಹವನ್ನು ದುರ್ಬಲಗೊಳಿಸುವ ಜೊತೆಗೆ ದೈನಂದಿನ ಕೆಲಸದಲ್ಲಿ ಆಸಕ್ತಿ ಕಳೆದುಕೊಳ್ಳಲು ಇದು ಕಾರಣವಾಗುತ್ತದೆ. ಕೆಲ ಮನೆ ಮದ್ದಿನ ಮೂಲಕ ಇದಕ್ಕೆ ಪರಿಹಾರ ಕಂಡುಕೊಳ್ಳಬಹುದು. 
 

ಮಹಿಳೆಯರು ಅನೇಕ ಆರೋಗ್ಯ (Health) ದ ಸಮಸ್ಯೆಗಳನ್ನು ಎದುರಿಸ್ತಾರೆ. ಕೆಲವು ಮುಜುಗರ ಎಂಬ ಕಾರಣಕ್ಕೆ ಮುಚ್ಚಿಡ್ತಾರೆ. ಆದ್ರೆ ಅದೇ ಮುಂದೆ ದೊಡ್ಡ ಸಮಸ್ಯೆಗೆ ಕಾರಣವಾಗುತ್ತದೆ. ಇತ್ತೀಚಿನ ದಿನಗಳಲ್ಲಿ ಮಹಿಳೆಯರಲ್ಲಿ ಲ್ಯುಕೋರಿಯಾ, ಬಿಳಿ ಸ್ರಾವ (white discharge )ದ ಸಮಸ್ಯೆ ತುಂಬಾ ಸಾಮಾನ್ಯವಾಗಿದೆ. ಸಂಶೋಧನೆಯ ಪ್ರಕಾರ, ಭಾರತದಲ್ಲಿ ಸುಮಾರು ಶೇಕಡಾ 75 ರಷ್ಟು ಮಹಿಳೆಯರು ಬಿಳಿ ಸ್ರಾವದ ಸಮಸ್ಯೆಯಿಂದ ತೊಂದರೆಗೀಡಾಗಿದ್ದಾರೆ. ಬಿಳಿ ಮುಟ್ಟಿನ ಸಮಸ್ಯೆ ದೇಹದಲ್ಲಿ ದೌರ್ಬಲ್ಯವನ್ನು ಉಂಟುಮಾಡುತ್ತದೆ. ದೀರ್ಘಕಾಲದವರೆಗೆ ಈ ಸಮಸ್ಯೆ ಮುಂದುವರೆದರೆ ದೇಹದಲ್ಲಿ ಕ್ಯಾಲ್ಸಿಯಂ ಕೊರತೆ ಕಾಡುತ್ತದೆ. ದೇಹಕ್ಕೆ ಬೇಕಾದ ಅನೇಕ ಅಂಶಗಳ ಕೊರತೆ ಎದುರಿಸಬೇಕಾಗುತ್ತದೆ. ಹಾಗಾಗಿ ಅದನ್ನು ಲಘುವಾಗಿ ತೆಗೆದುಕೊಳ್ಳಬಾರದು. ಅನೇಕ ಮಹಿಳೆಯರಿಗೆ ಬಿಳಿ ಮುಟ್ಟಿನ ಪ್ರಮಾಣ ಹೆಚ್ಚಿರುತ್ತದೆ. ಕೆಲವರು ಪ್ಯಾಡ್ ಬಳಸ್ತಾರೆ. ಮತ್ತೆ ಕೆಲವರಿಗೆ ಬಿಳಿ ಸೆರಗಿನಿಂದ ವಾಸನೆ ಬರ್ತಿರುತ್ತದೆ. ಅದು ಅವರನ್ನು ಮುಜುಗರಕ್ಕೀಡು ಮಾಡುತ್ತದೆ. ಇಂದು ಬಿಳಿ ಮುಟ್ಟಿನ ಸಮಸ್ಯೆ ಹಾಗೂ ಅದನ್ನು ಮನೆ ಮದ್ದಿನ ಮೂಲಕ ಹೇಗೆ ಗುಣಪಡಿಸಬಹುದು ಎಂಬುದನ್ನು ನಾವು ಹೇಳ್ತೇವೆ.

ಬಿಳಿ ಮುಟ್ಟಿಗೆ ಕಾರಣಗಳು : ಬಿಳಿ ಮುಟ್ಟಿಗೆ ದೊಡ್ಡ ಕಾರಣವೆಂದರೆ ಯೋನಿಯನ್ನು ಸ್ವಚ್ಛಗೊಳಿಸದಿರುವುದು. ಅತಿಯಾದ ಒತ್ತಡ. ದೇಹದಲ್ಲಿ ಪೋಷಕಾಂಶಗಳ ಕೊರತೆಯಿಂದ ಬಿಳಿ ಮುಟ್ಟಿನ ಸಮಸ್ಯೆ ಕಾಡುತ್ತದೆ.  ಈ ಸಮಸ್ಯೆಯಿಂದಾಗಿ ಮಹಿಳೆಗೆ ತಲೆಸುತ್ತು, ಸುಸ್ತು, ದೌರ್ಬಲ್ಯ, ಖಾಸಗಿ ಭಾಗದಲ್ಲಿ ತುರಿಕೆ, ತಲೆನೋವು ಮತ್ತು ಮಲಬದ್ಧತೆ ಕಾಣಿಸಿಕೊಳ್ಳುತ್ತದೆ. ನೀವೂ ಸಹ ವೈಟ್ ಡಿಸ್ಚಾರ್ಜ್ ನಿಂದ ತೊಂದರೆಗೀಡಾಗಿದ್ದರೆ ಚಿಂತಿಸುವ ಅಗತ್ಯವಿಲ್ಲ. ಸುಲಭವಾದ ಕೆಲ ಮನೆ ಮದ್ದಿನ ಮೂಲಕವೇ ಆರಂಭಿಕ ಹಂತದಲ್ಲಿರುವ ಸಮಸ್ಯೆಯನ್ನು ಕಡಿಮೆ ಮಾಡ್ಬಹುದು. 

ಬಿಳಿ ಮುಟ್ಟಿಗೆ ಮನೆ ಮದ್ದು : 

ಮೆಂತ್ಯ ಬೀಜದ ನೀರನ್ನು ಸೇವಿಸಿ : ಮೆಂತ್ಯವನ್ನು ನೀರಿನಲ್ಲಿ ಕುದಿಸಿ ಮತ್ತು ಆ ನೀರನ್ನು ಸೇವಿಸುವುದರಿಂದ ಬಿಳಿ ಮುಟ್ಟಿನ ಸಮಸ್ಯೆಯನ್ನು ಹೋಗಲಾಡಿಸಬಹುದು. ಒಂದು ಚಮಚ ಮೆಂತ್ಯೆ ಬೀಜವನ್ನು ತೆಗೆದುಕೊಳ್ಳಿ. ಅದಕ್ಕೆ ಒಂದು ಕಪ್ ನೀರನ್ನು ಹಾಕಿ. ನೀರು ಅರ್ಥವಾಗುವವರೆಗೆ ಕುದಿಸಿ. ನಂತ್ರ ನೀರನ್ನು ತಣ್ಣಗಾಗಲು ಬಿಡಿ. ನೀರು ತಣ್ಣಗಾದ್ಮೇಲೆ ಅದನ್ನು ಸೇವಿಸಿ. ನಿಯಮಿತವಾಗಿ ಇದನ್ನು ಕುಡಿಯುತ್ತ ಬಂದಲ್ಲಿ ಬಿಳಿ ಮುಟ್ಟಿನ ಸಮಸ್ಯೆ ಕಡಿಮೆಯಾಗುತ್ತದೆ. 

WORLD MUSIC DAY 2022: ಸಂಗೀತವೆಂಬ ಸಾಂತ್ವನದ ಸೆಲೆ, ಮಾನಸಿಕ ಆರೋಗ್ಯಕ್ಕಿದು ಅತ್ಯುತ್ತಮ

ಬೆಂಡೆಕಾಯಿಯಲ್ಲಿದೆ ಶಕ್ತಿ : ಬಿಳಿ ಸ್ರಾವಕ್ಕೆ ಬೆಂಡೆಕಾಯಿ ಅತ್ಯುತ್ತಮ ಚಿಕಿತ್ಸೆಯಾಗಿದೆ. ಈ ಸಮಸ್ಯೆಯಿಂದ ಪಾರಾಗಲು ಬೆಂಡೆಕಾಯಿಯನ್ನು ನೀರಿನಲ್ಲಿ ಕುದಿಸಿಬೇಕು. ನಂತ್ರ ಮಿಕ್ಸಿಗೆ ಹಾಕಿ ರುಬ್ಬಬೇಕು. ಆ ರಸವನ್ನು ನಿಯಮಿತವಾಗಿ ಸೇವನೆ ಮಾಡ್ಬೇಕು. ಹೀಗೆ ಮಾಡಿದ್ರೆ ಬಿಳಿ ಮುಟ್ಟಿನ ಸಮಸ್ಯೆ ದೂರವಾಗುತ್ತದೆ. 

ಬಾಳೆಹಣ್ಣು ತಿನ್ನಿ: ಹದಿಹರೆಯದವರಲ್ಲಿ ಬಿಳಿ ಮುಟ್ಟಿನ ಸಮಸ್ಯೆ ಹೆಚ್ಚಾಗುತ್ತಿದ್ದರೆ, ಅವರು ಬಾಳೆಹಣ್ಣನ್ನು ತಿನ್ನಬೇಕು. ಬೆಳಗಿನ ಉಪಾಹಾರದಲ್ಲಿ ಬಾಳೆಹಣ್ಣು ತಿನ್ನುವುದರಿಂದ ಈ ಸಮಸ್ಯೆಯನ್ನು ಹೋಗಲಾಡಿಸಬಹುದು. ದೇಸಿ ತುಪ್ಪದಲ್ಲಿ ನೆನೆಸಿದ ಬಲಿತ ಬಾಳೆಹಣ್ಣನ್ನು ತಿಂದರೆ ಬೇಗ ಪರಿಹಾರ ಸಿಗುತ್ತದೆ.

ಮನೆಯಲ್ಲಿ ನೀವೇ ಕಲಿತು ಮಾಡಬಹುದಾದ ಸರಳ ಯೋಗಾಸನಗಳು

ಕೊತ್ತಂಬರಿ ಬೀಜಗಳನ್ನು ಸೇವಿಸಿ : ಕೊತ್ತಂಬರಿ ಬೀಜಗಳನ್ನು ರಾತ್ರಿ ನೀರಿನಲ್ಲಿ ನೆನೆಸಿ ಮತ್ತು ಬೆಳಿಗ್ಗೆ ಅವುಗಳನ್ನು ಫಿಲ್ಟರ್ ಮಾಡಿ ಮತ್ತು ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಸೇವಿಸಿ. ಕೊತ್ತಂಬರಿ ನೀರಿನ ಸೇವನೆಯು ಬಿಳಿ ಮುಟ್ಟಿಗೆ ಉತ್ತಮ ಮತ್ತು ಸುಲಭವಾದ ಚಿಕಿತ್ಸೆಯಾಗಿದೆ.

ನೆಲ್ಲಿಕಾಯಿ ಸೇವನೆ : ನೆಲ್ಲಿಕಾಯಿ ಒಂದು ಸೂಪರ್‌ಫುಡ್ ಆಗಿದ್ದು, ಇದರಲ್ಲಿ ವಿಟಮಿನ್ ಸಿ ಮತ್ತು ಅನೇಕ ಅಗತ್ಯ ಪೋಷಕಾಂಶಗಳಿವೆ. ನೆಲ್ಲಿಕಾಯಿ ರೋಗನಿರೋಧಕ ಶಕ್ತಿಯನ್ನು ಬಲಪಡಿಸುತ್ತದೆ ಮತ್ತು ದೇಹವನ್ನು ಆರೋಗ್ಯಕರವಾಗಿರಿಸುತ್ತದೆ. ನೀವು ನೆಲ್ಲಿ ಕಾಯಿಯನ್ನು ಹಾಗೆಯೇ ತಿನ್ನಬಹುದು. ಇಲ್ಲವೆ ಪುಡಿ ಮಾಡಿ ನೀರಿಗೆ ಹಾಕಿ ಸೇವನೆ ಮಾಡ್ಬಹುದು.
 

click me!