
ಗರ್ಭಧಾರಣೆ ಪರೀಕ್ಷೆ (Pregnancy test) ಮಾಡೋದು ಈಗ ಸುಲಭ. ಪ್ರೆಗ್ನೆನ್ಸಿ ಕಿಟ್ (Pregnancy Kit) ಖರೀದಿ ಮಾಡಿ, ಮನೆಯಲ್ಲಿಯೇ ಮಹಿಳೆಯರು ಗರ್ಭಧಾರಣೆ ಟೆಸ್ಟ್ ಮಾಡಿಕೊಳ್ತಾರೆ. ಆದ್ರೆ ಹಿಂದೆ ಕಾಲ ಹೀಗಿರಲಿಲ್ಲ. ಮನೆಯಲ್ಲಿಯೇ ಹೆರಿಗೆ ಆಗ್ತಿದ್ದ ಮಹಿಳೆಯರಿಗೆ, ಸೂಕ್ತ ವೈದ್ಯಕೀಯ ಸೌಲಭ್ಯ ಸಿಗ್ತಿರಲಿಲ್ಲ. ಗರ್ಭಧಾರಣೆ ಪರೀಕ್ಷೆ ಕೂಡ ಕಷ್ಟವಾಗಿತ್ತು. ಪಿರಿಯಡ್ಸ್ ಮಿಸ್ ಆದ ಎಲ್ಲ ಸಂದರ್ಭದಲ್ಲಿ ಮಹಿಳೆ ಗರ್ಭಧರಿಸಿದ್ದಾಳೆ ಎಂದಲ್ಲ. ಹಾಗಾಗಿ ಗರ್ಭಧಾರಣೆ ಪರೀಕ್ಷೆ ಅನಿವಾರ್ಯವಾಗಿತ್ತು. ಪ್ರಾಚೀನ ಈಜಿಪ್ಟ್ (Ancient Egypt) ನಲ್ಲಿ ಮಹಿಳೆಯರು ಗರ್ಭಧಾರಣೆ ಪರೀಕ್ಷೆ ಮಾಡಲು ತಮ್ಮದೇ ವಿಧಾನವನ್ನು ಪಾಲಿಸುತ್ತಿದ್ದರು. ಅವರು ಪರೀಕ್ಷೆಗೆ ಗೋಧಿ ಮತ್ತು ಬಾರ್ಲಿ ( Wheat and Barley) ಯನ್ನು ಬಳಸ್ತಿದ್ದರು.
ಬಾರ್ಲಿ – ಗೋಧಿ ಮೂಲಕ ಪ್ರೆಗ್ನೆನ್ಸಿ ಟೆಸ್ಟ್ : ಪ್ರಾಚೀನ ಈಜಿಪ್ಟ್ ನಲ್ಲಿ ಮಹಿಳೆಯರು ಗರ್ಭಧಾರಣೆ ಪರೀಕ್ಷೆಗೆ ಬಾರ್ಲಿ ಮತ್ತು ಗೋಧಿ ಮೇಲೆ ಮೂತ್ರ ವಿಸರ್ಜನೆ ಮಾಡ್ತಾ ಇದ್ದರು. ಆದ್ರೆ ಆ ತಕ್ಷಣ ಅವರಿಗೆ ರಿಸಲ್ಟ್ ಸಿಗ್ತಾ ಇರ್ಲಿಲ್ಲ. ಅವರು ಸ್ವಲ್ಪ ದಿನ ಕಾಯ್ಬೇಕಾಗಿತ್ತು. ಬಾರ್ಲಿ ಮತ್ತು ಗೋಧಿ ಮೊಳಕೆಯೊಡೆಯಲು ಶುರುವಾಗಿದ್ದರೆ ಮಹಿಳೆ ಗರ್ಭಧರಿಸಿದ್ದಾಳೆ ಎಂದರ್ಥ. ಅದೇ ಬಾರ್ಲಿ ಅಥವಾ ಗೋಧಿಯಲ್ಲಿ ಯಾವುದೇ ಒಂದರಲ್ಲೂ ಮೊಳಕೆ ಬಂದಿಲ್ಲ ಎಂದಾದ್ರೆ ಆಕೆ ಗರ್ಭಧರಿಸಿಲ್ಲ ಎಂದು ಅರ್ಥೈಸಿಕೊಳ್ಳುತ್ತಿದ್ದರು. ಇಲ್ಲಿಯೇ ಅವರು ಮಗುವಿನ ಲಿಂಗವನ್ನು ಕೂಡ ನಿರ್ಧರಿಸುತ್ತಿದ್ದರು. ಬಾರ್ಲಿ ಮೊಳಕೆ ಬಂದ್ರೆ ಗಂಡು ಮಗುವೆಂದೂ, ಗೋಧಿ ಮೊಳಗೆ ಬಂದ್ರೆ ಹೆಣ್ಣು ಮಗು ಎಂದು ನಂಬುತ್ತಿದ್ದರು.
172 ಸಲ ನಾಗ ಕಚ್ಚಿದ್ರೂ ಸಾಯ್ಲಿಲ್ಲ, ದೇಹದಲ್ಲಿತ್ತು ಹಾವಿನ ವಿಷ !
ವಿಜ್ಞಾನ ಏನು ಹೇಳುತ್ತೆ? : ಪ್ರಾಚೀನ ಕಾಲದಲ್ಲಿಯೇ ಜನರು ಸಾಕಷ್ಟು ಜ್ಞಾನವನ್ನು ಹೊಂದಿದ್ದರು ಎಂಬುದು ಇದ್ರಿಂದ ಗೊತ್ತಾಗುತ್ತದೆ. ವಿಜ್ಞಾನಿಗಳು ಕೂಡ ಈ ಮಾರ್ಗವನ್ನು ಒಪ್ಪುತ್ತಾರೆ. ಗರ್ಭಿಣಿ ಮೂತ್ರದಲ್ಲಿ ಈಸ್ಟ್ರೊಜೆನ್ ಮಟ್ಟ ಹೆಚ್ಚ ಇರುತ್ತದೆ. ಅದು ಬಾರ್ಲಿ ಅಥವಾ ಗೋಧಿ ಬೀಜಗಳು ಮೊಳಕೆಯೊಡೆಯಲು ನೆರವಾಗುತ್ತವೆ. ಆದ್ರೆ ಗರ್ಭಿಣಿಯಲ್ಲದ ಮಹಿಳೆ ಮೂತ್ರ ವಿಸರ್ಜನೆ ಮಾಡಿದಾಗ ಇದು ಸಂಭವಿಸುವುದಿಲ್ಲ.
ಪ್ರೆಗ್ನೆನ್ಸಿ ಪರೀಕ್ಷೆಗೆ ಬಳಸ್ತಿದ್ದ ವಿಧಾನಗಳು :
ಬೆಳ್ಳುಳ್ಳಿ / ಈರುಳ್ಳಿ (Garlic / Onion) : ಪ್ರಾಚೀನ ಈಜಿಪ್ಟ್ ಮಹಿಳೆಯರು ಬೆಳ್ಳುಳ್ಳಿ ಮತ್ತು ಈರುಳ್ಳಿಯನ್ನು ಕೂಡ ತಮ್ಮ ಪರೀಕ್ಷೆಗೆ ಬಳಸಲುತ್ತಿದ್ದರು. ಅವರು ತಮ್ಮ ವಜೈನಾದಲ್ಲಿ ಬೆಳ್ಳುಳ್ಳಿಯನ್ನು ಇಟ್ಟು ಮಲಗ್ತಿದ್ದರು. ಬೆಳಿಗ್ಗೆ ಮಹಿಳೆ ಉಸಿರಿನಿಂದ ಬೆಳ್ಳುಳ್ಳಿ ವಾಸನೆ ಬರ್ತಿದ್ದರೆ ಆಕೆ ಗರ್ಭಿಣಿಯಲ್ಲ ಎಂದು ನಿರ್ಧರಿಸುತ್ತಿದ್ದರು. ಗರ್ಭದಲ್ಲಿರುವ ಭ್ರೂಣ, ಬೆಳ್ಳುಳ್ಳಿ ಅಥವಾ ಈರುಳ್ಳಿ ವಾಸನೆಯನ್ನು ಮೇಲಕ್ಕೆ ಬಿಡೋದಿಲ್ಲ. ಒಂದ್ವೇಳೆ ಉಸಿರು ಬೆಳ್ಳುಳ್ಳಿ ವಾಸನೆ ಬಂದಿಲ್ಲ ಎಂದಾದ್ರೆ ಆಕೆ ಗರ್ಭಿಣಿ ಎಂಬ ನಿರ್ಣಯಕ್ಕೆ ಬರ್ತಿದ್ದರು.
ಕಣ್ಣಿನ ಪರೀಕ್ಷೆ ( Eye Test) : ಕಣ್ಣುಗಳಲ್ಲಾಗುವ ಬದಲಾವಣೆಯಿಂದಲೂ ಮಹಿಳೆ ಗರ್ಭಿಣಿ ಎಂಬುದನ್ನು ಅವರು ಪತ್ತೆ ಮಾಡ್ತಿದ್ದರು. 16ನೇ ಶತಮಾನದಲ್ಲಿ ವೈದ್ಯ ಜಾಕ್ವೆಸ್ ಗಿಲ್ಲೆಮಿಯ ಈ ವಿಷ್ಯವನ್ನು ಹೇಳಿದ್ದರು. ಪ್ರೆಗ್ನೆಂಟ್ ಮಹಿಳೆ ಕಣ್ಣುಗಳು ಸಣ್ಣದಾಗುತ್ತವೆ. ಕಣ್ಣು ರೆಪ್ಪೆಗಳು ಕುಸಿದಿರುತ್ತವೆ. ಅಲ್ಲದೆ ಕಣ್ಣಿನ ಮೂಲೆ ಊದಿಕೊಳ್ಳುತ್ತದೆ.
ಬೀಗದ ಪರೀಕ್ಷೆ (Lock Test) : 15ನೇ ಶತಮಾನದಲ್ಲಿ ಮಹಿಳೆಯರು ಈ ಬೀಗದ ವಿಧಾನವನ್ನು ಬಳಸಲುತ್ತಿದ್ದರು. ಬಾಗಿಲಿಗೆ ಹಾಕುವ ಬೀಗದ ಮೇಲೆ ಅವರು ಮೂತ್ರ ವಿಸರ್ಜನೆ ಮಾಡ್ತಿದ್ದರು. ಕೆಲ ಸಮಯದ ನಂತ್ರ ಬೀಗದ ಮೇಲೆ ಕಲೆ ಕಾಣಿಸಿಕೊಂಡಲ್ಲಿ ಮಹಿಳೆ ಪ್ರೆಗ್ನೆಂಟ್ ಎಂದು ನಿರ್ಧರಿಸುತ್ತಿದ್ದರು.
70 ವರ್ಷ ಮೇಲ್ಪಟ್ಟವರಿಗೆ ಆಯುಷ್ಮಾನ್ ಕಾರ್ಡ್: ರಿಜಿಸ್ಟ್ರೇಷನ್ ಹೇಗೆ?
ಟೂತ್ ಪೇಸ್ಟ್ ಪರೀಕ್ಷೆ (Toothpaste Test) : ಇದು ಪ್ರಾಚೀನ ಕಾಲದ ವಿಧಾನವಲ್ಲ. ತೀರಾ ಇತ್ತೀಚಿನ ದಿನಗಳಲ್ಲೂ ಕೆಲವರು ಈ ಮಾರ್ಗವನ್ನು ಬಳಸಿದ್ದಾರೆ. ಒಂದು ಪಾತ್ರೆಯಲ್ಲಿ ಟೂತ್ ಪೇಸ್ಟ್ ಹಾಕಿ ಅದರ ಮೇಲೆ ಮಹಿಳೆಯರು ಮೂತ್ರ ವಿಸರ್ಜನೆ ಮಾಡ್ತಿದ್ದರು. ಪೇಸ್ಟ್ ನೊರೆಯಾದ್ರೆ ಆಕೆ ಗರ್ಭಿಣಿ ಎಂದು ನಂಬುತ್ತಿದ್ದರು.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.