BUSINESS

೭೦+ ವರ್ಷ ವಯಸ್ಸಿನವರಿಗೆ ಆಯುಷ್ಮಾನ್ ಕಾರ್ಡ್

ಬಹು ನಿರೀಕ್ಷಿತಿ ಆಯುಷ್ಮಾನ್ ಯೋಜನೆಗ ೆಕೇಂದ್ರ ಸರಕಾರ ಅಂಕಿತ ಹಾಕಿದೆ.

AB PM-JAY ಯೋಜನೆಯ ಲಾಭ ಯಾರಿಗೆ ?

70 ವರ್ಷ ಮೇಲ್ಪಟ್ಟ ವಯಸ್ಸಿನ ಎಲ್ಲ ಹಿರಿಯ ನಾಗರಿಕರು, ಅವರ ಸಾಮಾಜಿಕ-ಆರ್ಥಿಕ ಸ್ಥಿತಿ ಏನೇ ಇರಲಿ, AB PM-JAY ಯೋಜನೆ ಲಾಭ ಪಡೆಯಬಹುದು. ಇದರ ಅಡಿಯಲ್ಲಿ ₹5 ಲಕ್ಷದವರೆಗೆ ಉಚಿತ ಚಿಕಿತ್ಸೆ ಸಿಗುತ್ತದೆ.

₹5 ಲಕ್ಷದ ಹೆಚ್ಚುವರಿ ಕವರ್

70 ವರ್ಷ ಮೇಲ್ಪಟ್ಟ ಹಿರಿಯ ನಾಗರಿಕರು, ಈಗಾಗಲೇ AB PM-JAY ಅಡಿ ವ್ಯಾಪ್ತಿಯಲ್ಲಿರುವವರು, ಪ್ರತಿ ವರ್ಷ ₹5 ಲಕ್ಷದ ಹೆಚ್ಚುವರಿ ಕವರ್ ಪಡೆಯುತ್ತಾರೆ. ಈ ಕವರ್ ಬೇರೆ ಕುಟುಂಬ ಸದಸ್ಯರೊಂದಿಗೆ ಹಂಚಿಕೊಳ್ಳಲು ಸಾಧ್ಯವಿಲ್ಲ.

ಇತರೆ ಆರೋಗ್ಯ ಯೋಜನೆಗಳಲ್ಲಿರುವವರು ಏನು ಮಾಡಬೇಕು?

ಅರ್ಹರು ಈಗಾಗಲೇ CGHS, ECHS ಅಥವಾ CAPF ನಂತಹ ಇತರ ಆರೋಗ್ಯ ವಿಮಾ ಯೋಜನೆಗಳ ಫಲಾನುಭವಿಗಳಾಗಿದ್ದರೆ, ಅವರು ಅಸ್ತಿತ್ವದಲ್ಲಿರುವ ಯೋಜನೆಯನ್ನು ಮುಂದುವರಿಸಬಹುದು ಅಥವಾ AB PM-JAY ಅನ್ನು ಆಯ್ಕೆ ಮಾಡಬಹುದು.

ಖಾಸಗಿ ಆರೋಗ್ಯ ವಿಮಾ ಇದ್ದವರಿಗೆ?

70 ವರ್ಷ ಮೇಲ್ಪಟ್ಟ ಹಿರಿಯ ನಾಗರಿಕರು ಖಾಸಗಿ ಪಾಲಿಸಿ ಅಥವಾ ESIS ಅಡಿಯಲ್ಲಿ ವ್ಯಾಪ್ತಿಯಲ್ಲಿದ್ದರೆ, ಅವರು AB PM-JAY ಯೋಜನೆ ಲಾಭವನ್ನೂ ಪಡೆಯಬಹುದು.

AB PM-JAY ಯೋಜನೆಯಡಿ ಎಷ್ಟು ಜನರಿಗೆ ಕವರ್?

AB PM-JAY ಯೋಜನೆಯು ವಿಶ್ವದ ಅತಿದೊಡ್ಡ ಸಾರ್ವಜನಿಕ ಆರೋಗ್ಯ ವಿಮಾ ಯೋಜನೆಯಾಗಿದ್ದು, ಇದು 55 ಕೋಟಿ ಜನರು ಮತ್ತು 12.34 ಕೋಟಿ ಕುಟುಂಬಗಳಿಗೆ ವರ್ಷಕ್ಕೆ ₹5 ಲಕ್ಷದವರೆಗೆ ಕವರ್ ಒದಗಿಸುತ್ತದೆ.

PMJAY ಗೆ ಅರ್ಜಿ ಸಲ್ಲಿಸುವುದು ಹೇಗೆ?

  • Google Play Store ನಿಂದ ಆಯುಷ್ಮಾನ್ ಆ್ಯಪ್ ಡೌನ್‌ಲೋಡ್ ಮಾಡಿ.
  • ನಿಮ್ಮ ಮೊಬೈಲ್ ಸಂಖ್ಯೆಯನ್ನು ನಮೂದಿಸುವ ಮೂಲಕ ಲಾಗಿನ್ ಆಗಿ.
  • ಆಧಾರ್ ಇ-ಕೆವೈಸಿ ಪೂರ್ಣಗೊಳಿಸಿ.
  • ಫೋಟೋ ಅಪ್‌ಲೋಡ್ ಮಾಡಿದರೆ ಸರಿ.

ಆಯುಷ್ಮಾನ್ ಕಾರ್ಡ್ ಪಡೆಯಲು ಬೇರೆ ದಾರಿ ಇದೆಯೇ?

ನೀವು ನಿಮ್ಮ ಹತ್ತಿರದ ಆಸ್ಪತ್ರೆ ಅಥವಾ ಆಯುಷ್ಮಾನ್ ಕೇಂದ್ರಕ್ಕೆ ಭೇಟಿ ನೀಡುವ ಮೂಲಕ ನೋಂದಣಿ ಮಾಡಿಕೊಳ್ಳಬಹುದು ಮತ್ತು ಆಯುಷ್ಮಾನ್ ಕಾರ್ಡ್ ಪಡೆಯಬಹುದು. ಇದಕ್ಕಾಗಿ ಆಧಾರ್ ಕಾರ್ಡ್ ಮತ್ತು ಫೋಟೋ ಅಗತ್ಯವಿದೆ.

ಗ್ರಾಮೀಣ ಪ್ರದೇಶದವರು ಕಾರ್ಡ್ ಪಡೆಯುವುದು ಹೇಗೆ?

ನೀವು ಗ್ರಾಮೀಣ ಪ್ರದೇಶದಲ್ಲಿ ವಾಸಿಸುತ್ತಿದ್ದರೆ, ಗ್ರಾಮ ರೋಜ್ಗಾರ್ ಸಹಾಯಕ ಅಥವಾ ವಾರ್ಡ್ ಇನ್‌ಚಾರ್ಜ್ ಸಹಾಯದಿಂದಲೂ ಆಯುಷ್ಮಾನ್ ಕಾರ್ಡ್ ಪಡೆಯಬಹುದು.

ಆಯುಷ್ಮಾನ್ ಕಾರ್ಡ್‌ಗೆ ಬೇಕಾದ ದಾಖಲೆಗಳು ಯಾವುವು?

ಆಯುಷ್ಮಾನ್ ಕಾರ್ಡ್ ಪಡೆಯಲು ಹಿರಿಯ ನಾಗರಿಕರಿಗೆ ಅವರ ಆಧಾರ್ ಕಾರ್ಡ್ ಮತ್ತು ಫೋಟೋ ಅಗತ್ಯವಿದೆ.

Find Next One