ಫ್ರಿಡ್ಜ್ ನಲ್ಲಿ ಏನಿರಲ್ಲ ಹೇಳಿ ? ಜನರು ತುಂಬಾ ದಿನ ಬಾಳಿಕೆ ಬರುಬೇಕು ಅಂತಾ ಎಲ್ಲ ವಸ್ತುವನ್ನೂ ಫ್ರಿಡ್ಜ್ ನಲ್ಲಿ ಇಡ್ತಾರೆ. ಆದ್ರೆ ಕೆಲ ಆಹಾರವನ್ನು ಎಂದೂ ಫ್ರಿಡ್ಜ್ ನಲ್ಲಿ ಇಡಬಾರದು. ಅದ್ರಿಂದ ಆಹಾರ ಹಾಳಾಗುವ ಜೊತೆಗೆ ಆರೋಗ್ಯವೂ ಹಾಳಾಗುತ್ತದೆ.
ಫ್ರಿಡ್ಜ್ ಅಂದ್ಮೇಲೆ ಅದ್ರಲ್ಲಿ ಆಹಾರ ಪದಾರ್ಥ ಇರಲೇಬೇಕು. ಬೇಳೆ ಕಾಳುಗಳಿಂದ ಹಿಡಿದು, ನಿನ್ನೆ ಮೊನ್ನೆ ತಯಾರಿಸಿದ ಆಹಾರ ಪದಾರ್ಥಗಳನ್ನು ಕೂಡ ಜನರು ಫ್ರಿಡ್ಜ್ ನಲ್ಲಿ ಇಡುತ್ತಾರೆ. ಅನೇಕರಿಗೆ ಫ್ರಿಡ್ಜ್ ವರದಾನ. ಮೊದಲೇ ಆಹಾರ ತಯಾರಿಸಿ ಫ್ರಿಡ್ಜ್ ನಲ್ಲಿಟ್ಟು ಎರಡು ದಿನಗಳ ಕಾಲ ಬಳಕೆ ಮಾಡುವವರಿದ್ದಾರೆ. ಫ್ರಿಡ್ಜ್ ನಲ್ಲಿರುವ ಆಹಾರ ತಿನ್ನುವುದ್ರಿಂದ ಅನೇಕ ಸಮಸ್ಯೆ ಎದುರಾಗುತ್ತದೆ ಎಂದು ತಜ್ಞರು ಹೇಳ್ತಾರೆ. ಆದ್ರೆ ಕೆಲ ಆಹಾರ ಹಾಳಾಗದಂತೆ ನೋಡಿಕೊಳ್ಳಬೇಕೆಂದ್ರೆ ಅದನ್ನು ಫ್ರಿಡ್ಜ್ ನಲ್ಲಿ ಇಡಲೇಬೇಕು. ಸಾಮಾನ್ಯ ತಾಪಮಾನದಲ್ಲಿ ಆಹಾರವನ್ನಿಟ್ಟರೆ ಅದು ಹಾಳಾಗುತ್ತದೆ. ಇನ್ನು ಕೆಲ ವಸ್ತುವನ್ನು ಯಾವಾಗ್ಲೂ ಫ್ರಿಡ್ಜ್ ನಲ್ಲಿ ಇಡಬಾರದು. ಅದ್ರಲ್ಲೂ ಕೆಲ ದ್ರವ ವಸ್ತುಗಳನ್ನು ಎಂದಿಗೂ ಫ್ರಿಡ್ಜ್ ನಲ್ಲಿ ಇಡಬಾರದು, ಫ್ರಿಡ್ಜ್ ನಲ್ಲಿ ಇಡದ ದ್ರವ ವಸ್ತುಗಳು ಯಾವ ಯಾವುವು ಎಂಬುದನ್ನು ನಾವಿಂದು ಹೇಳ್ತೇವೆ.
ಈ ವಸ್ತುಗಳನ್ನು ಫ್ರಿಡ್ಜ್ (Fridge) ನಲ್ಲಿ ಇಡಲೇಬೇಡಿ :
ಆಲಿವ್ ಆಯಿಲ್ (Olive Oil) ಫ್ರಿಡ್ಜ್ ನಲ್ಲಿ ಇಡಬಾರದು ಯಾಕೆ ಗೊತ್ತಾ? : ಮೊದಲೇ ಹೇಳಿದಂತೆ ಬೇಳೆ ಕಾಳುಗಳ ಜೊತೆ ಎಣ್ಣೆಯನ್ನು ಕೂಡ ಫ್ರಿಡ್ಜ್ ನಲ್ಲಿ ಇಡುವವರಿದ್ದಾರೆ. ಕೆಲವರು ಆಲಿವ್ ಆಯಿಲನ್ನು ಕೂಡ ಫ್ರಿಡ್ಜ್ ನಲ್ಲಿ ಸಂಗ್ರಹಿಸುತ್ತಾರೆ. ಫ್ರಿಡ್ಜ್ ನಲ್ಲಿ ಆಲಿವ್ ಆಯಿಲ್ ಇಡುವುದ್ರಿಂದ ಆಲಿವ್ ಎಣ್ಣೆಯ ಬಣ್ಣ ಬದಲಾಗುತ್ತದೆ ಮತ್ತು ಅದರಲ್ಲಿ ಸ್ವಲ್ಪ ಫೋಮ್ ಸಹ ಗೋಚರಿಸುತ್ತದೆ. ಆಲಿವ್ ಆಯಿಲ್ ಹಾಳಾಗಬಾರದು ಅಂದ್ರೆ ನೀವು ಆಲಿವ್ ಎಣ್ಣೆಯನ್ನು ಫ್ರಿಡ್ಜ್ ನಿಂದ ಹೊರಗಿಡಿ. ಆಲಿವ್ ಆಯಿಲನ್ನು ನೀವು ಕಪಾಟಿನಲ್ಲಿ ಇಡುವುದ ಒಳ್ಳೆಯದು ಎನ್ನುತ್ತಾರೆ ತಜ್ಞರು.
ಕಿರಿಕಿರಿ ಇಲ್ಲದೆ ಅಡುಗೆ ಮುಗಿಸಬೇಕಾ? ಇಲ್ಲಿವೆ ಸಿಂಪಲ್ ಟಿಪ್ಸ್
ರೂಹ್ ಅಫ್ಜಾ (Rooh Afza) : ರೂಹ್ ಅಫ್ಜಾವನ್ನು ಕೂಡ ಅನೇಕರು ಫ್ರಿಡ್ಜ್ ನಲ್ಲಿ ಇಡ್ತಾರೆ. ನೀವೂ ಫ್ರಿಡ್ಜ್ ನಲ್ಲಿ ಇಟ್ಟಿದ್ದರೆ ಇಂದೇ ಅದನ್ನು ಹೊರಗೆ ತೆಗೆದಿಡಿ. ಯಾಕೆಂದ್ರೆ ರೂಹ್ ಅಫ್ಜಾದಲ್ಲಿ ಸಕ್ಕರೆ ಹೆಚ್ಚಿನ ಪ್ರಮಾಣದಲ್ಲಿ ಕಂಡುಬರುತ್ತದೆ. ಈ ಕಾರಣದಿಂದಾಗಿ ಅದನ್ನು ಫ್ರಿಡ್ಜ್ನಲ್ಲಿ ಇಡುವುದರಿಂದ ಸಕ್ಕರೆಯು ಕೆಳಗೆ ನೆಲೆಗೊಳ್ಳುತ್ತದೆ ಮತ್ತು ಬಣ್ಣವೂ ಬದಲಾಗಲು ಪ್ರಾರಂಭಿಸುತ್ತದೆ. ಹಾಗಾಗಿ ನೀವು ರೂಹ್ ಅಫ್ಜಾವನ್ನು ಫ್ರಿಡ್ಜ್ ನಿಂದ ಹೊರಗೆ ಇಡದಿರುವುದು ಉತ್ತಮ. ಸಾಮಾನ್ಯ ತಾಪಮಾನದಲ್ಲಿ ಅದನ್ನು ಇಟ್ಟರೆ ಅದು ಮಾರುಕಟ್ಟೆಯಿಂದ ತಂದ ಬಣ್ಣ, ಸ್ವಾದದಲ್ಲಿಯೇ ಇರುತ್ತದೆ.
ಜೇನು ತುಪ್ಪ : ಜೇನುತುಪ್ಪ ಆರೋಗ್ಯಕ್ಕೆ ಒಳ್ಳೆಯದು. ಅದ್ರಲ್ಲಿ ಔಷಧಿ ಗುಣವಿದೆ. ಅದನ್ನು ಪ್ರತಿ ದಿನ ಬಳಸುವುದಿಲ್ಲ. ಅನಾರೋಗ್ಯಕ್ಕೀಡಾದಾಗ ಅದನ್ನು ಬಳಸುವವರು ಹೆಚ್ಚು. ಇದೇ ಕಾರಣಕ್ಕೆ ಜನರು ಜೇನು ತುಪ್ಪವನ್ನು ಜನರು ಫ್ರಿಡ್ಜ್ ನಲ್ಲಿ ಇಡುತ್ತಾರೆ. ಆದ್ರೆ ಜೇನು ತುಪ್ಪವನ್ನು ಫ್ರಿಡ್ಜ್ ನಲ್ಲಿ ಇಡುವ ಅಗತ್ಯವಿಲ್ಲ. ಜೇನು ತುಪ್ಪವನ್ನು ಫ್ರಿಡ್ಜ್ ನಲ್ಲಿಟ್ಟರೆ ಅದು ಗಟ್ಟಿಯಾಗುತ್ತದೆ. ನಂತ್ರ ಜೇನುತುಪ್ಪ ಬಳಸುವುದು ಕಷ್ಟವಾಗುತ್ತದೆ. ರುಚಿ ಕೂಡ ಪರಿಣಾಮ ಬೀರುತ್ತದೆ. ಜೇನು ತುಪ್ಪವನ್ನು ಫ್ರಿಡ್ಜ್ ನಲ್ಲಿ ಇಡದೇ ಹೊರಗೆ ಶೇಖರಿಸಿಟ್ಟರೆ ಉತ್ತಮ. ಒಂದ್ವೇಳೆ ನೀವು ಈಗಾಗಲೇ ಜೇನು ತುಪ್ಪವನ್ನು ಫ್ರಿಡ್ಜ್ ನಲ್ಲಿ ಇಟ್ಟಿದ್ದರೆ ಅದನ್ನು ಹೊರಗೆ ತೆಗೆದು, ಜೇನು ತುಪ್ಪವಿರುವ ಬಾಟಲಿಯನ್ನು ಬಿಸಿ ನೀರಿನಲ್ಲಿ ನೆನೆಸಿಡಿ.
ಮಸಾಲೆಗೂ ಹುಳ ಹಿಡೀತಾ ಇದ್ಯಾ? ಇಲ್ಲಿವೆ ಸಿಂಪಲ್ ಸೊಲ್ಯೂಷನ್ಸ್
ಸಂಸ್ಕರಿಸಿದ ಆಹಾರ : ಫ್ರಿಡ್ಜ್ ನಲ್ಲಿ ಸಂಸ್ಕರಿಸಿದ ಆಹಾರವನ್ನು ಅಪ್ಪಿತಪ್ಪಿಯೂ ಇಡಬೇಡಿ. ಬೆಣ್ಣೆಯನ್ನು ಕೂಡ ಅನೇಕರು ಫ್ರಿಡ್ಜ್ ನಲ್ಲಿ ಇಡ್ತಾರೆ. ಅದು ಕೂಡ ತಪ್ಪು. ಫ್ರಿಡ್ಜ್ ನಲ್ಲಿ ಬೆಣ್ಣೆಯನ್ನು ಇಡುವುದರಿಂದ ಪೇಪರ್ ಬೆಣ್ಣೆಗೆ ಅಂಟಿಕೊಳ್ಳುತ್ತದೆ. ಹಾಗಾಗಿ ಸಂಸ್ಕರಿಸಿದ ಆಹಾರ ಹಾಗೂ ಬೆಣ್ಣೆಯನ್ನು ಹೊರಗೆ ಇಡಿ.