ಗಂಡನ ಯಶಸ್ಸಿಗೆ ಹೆಣ್ಣು ಮಕ್ಕಳು ಹೀಗ್ ಮಾಡಬೇಕು!

By Suvarna News  |  First Published Aug 1, 2023, 6:31 PM IST

ಒಂದಲ್ಲ ಒಂದು ಸಮಸ್ಯೆ ಸಂಸಾರದಲ್ಲಿರುತ್ತದೆ. ಅದನ್ನು ನಿಭಾಯಿಸಿಕೊಂಡು ಹೋಗೋದು ಜಾಣತನ. ಹೆಣ್ಣಾದವಳಿಗೆ ಕೆಲ ಟ್ರಿಕ್ಸ್ ಗೊತ್ತಿರಬೇಕು. ಮನೆ ಮದ್ದು, ಜ್ಯೋತಿಷ್ಯ ಉಪಾಯಗಳನ್ನು ಪಾಲಿಸುವ ಮೂಲಕ ಸಂಸಾರ ಸುಖಮಯವಾಗಿ ಸಾಗುವಂತೆ ಮಾಡ್ಬೇಕು.


ಒಂದು ಸಂಸಾರ ಚೆನ್ನಾಗಿರಬೇಕು ಅಂದ್ರೆ ಅಲ್ಲಿ ಪ್ರೀತಿ, ಬಾಂಧವ್ಯ ಹಾಗೂ ನಂಬಿಕೆ  ಇರಬೇಕು. ಪರಸ್ಪರ ಒಳ್ಳೆಯ ಭಾವನೆ, ಗೌರವವಿದ್ದಾಗ ಮಾತ್ರ ಸಂಸಾರ ಸುಖಮಯವಾಗಿರಲು ಸಾಧ್ಯ. ಅದರಲ್ಲೂ ಮನೆಯ ಹೆಂಗಸರಲ್ಲಿ ಸಂಸಾರವನ್ನು ತೂಗಿಸಿಕೊಂಡು, ಚೆನ್ನಾಗಿ ನೋಡಿಕೊಂಡು ಹೋಗುವ ಮನೋಭಾವ ಇರಬೇಕು.

ಮನೆ (House) ಯ ಸುಖ ಸಂತೋಷಗಳನ್ನು ಕಾಪಾಡುವ ಜವಾಬ್ದಾರಿ (Responsibility) ಪ್ರತಿಯೊಬ್ಬ ಹೆಣ್ಣಿಗಿರಬೇಕು :   ಕುಟುಂಬ ಅಂದ ಮೇಲೆ ಅಲ್ಲಿ ನಾಲ್ಕಾರು ಜನರು ಇರುತ್ತಾರೆ. ಒಬ್ಬೊಬ್ಬರ ಅಭಿಪ್ರಾಯ ಒಂದೊಂದು ರೀತಿ ಇರುತ್ತದೆ. ಕೆಲವೊಮ್ಮೆ ಸಣ್ಣ ಪುಟ್ಟ ವಿಷಯಕ್ಕೆ ಮನಸ್ತಾಪಗಳು ಉಂಟಾಗುತ್ತದೆ. ಅದರಿಂದಲೇ ದೊಡ್ಡ ಜಗಳ ಹಾಗೂ ಪರಸ್ಪರ ದ್ವೇಷಗಳು ಉಂಟಾಗಬಹುದು. ಪರಿಸ್ಥಿತಿಗಳು ಹೇಗೇ ಇದ್ದರೂ ಅದನ್ನು ತಾಳ್ಮೆ, ಸಹನೆಯಿಂದ ನಿಭಾಯಿಸಿದಾಗಲೇ ಬದುಕು ಸುಂದರವಾಗಲು ಸಾಧ್ಯ.

Latest Videos

undefined

ಗಂಡನಿಗಾಗಿ ತನ್ನ ತಟ್ಟೆಯ ಊಟವನ್ನೂ ಕೊಡೋ ಹೆಂಡ್ತಿ, ವಿಡಿಯೋ ವೈರಲ್‌; ನೆಟ್ಟಿಗರು ಗರಂ

ಕೆಲವೊಮ್ಮೆ ಮನೆಯ ಗೃಹಿಣಿಯರು ಕೂಡ ಅನೇಕ ರೀತಿಯ ಸಮಸ್ಯೆಗಳಿಂದ ಬಳುತ್ತಿರುತ್ತಾರೆ. ವೃತ್ತಿನಿರತ ಮಹಿಳೆಯರಿಗೆ ಕೆಲವೊಂದು ಸಮಸ್ಯೆಗಳು ಇರುತ್ತವೆ. ಕೆಲವು ಮಹಿಳೆಯರು ಗಂಡನ ಕುಡಿತದಿಂದ ಕಂಗಾಲಾಗಿರುತ್ತಾರೆ. ಇನ್ಕೆಲವರು ಅತ್ತೆ ಮಾವರಿಂದ ಹಿಂಸೆ ಅನುಭವಿಸುತ್ತಿರುತ್ತಾರೆ. ಅನೇಕ ಜನರು ಆರ್ಥಿಕ ಪರಿಸ್ಥಿತಿಯಿಂದ ಅಥವಾ ಕೆಟ್ಟ ಆರೋಗ್ಯ ಸ್ಥಿತಿಯಲ್ಲಿರುತ್ತಾರೆ. ಇಂತಹ ಹತ್ತು ಹಲವು ಸಮಸ್ಯೆಗಳನ್ನು ದೂರಮಾಡಲು ಹೆಣ್ಣುಮಕ್ಕಳು ಕೆಲವು ನಿಯಮಗಳನ್ನು ಪಾಲಿಸಬೇಕು. ಈ ಕೆಲವು ನಿಯಮಗಳನ್ನು ಪಾಲಿಸಿದರೆ ಜೀವನದಲ್ಲಿ ಎದುರಾಗುವ ಅನೇಕ ಕಷ್ಟಗಳನ್ನು ದೂರಮಾಡಬಹುದು.

ಆರೋಗ್ಯ (Health) ದ ಸಮಸ್ಯೆಗೆ ಹೀಗೆ ಮಾಡಿ :  ಇತ್ತೀಚಿನ ದಿನಗಳಲ್ಲಿ ಸಾಂಕ್ರಾಮಿಕ ರೋಗಗಳು ಹಾಗೂ ಇತರೇ ರೋಗಗಳು ಮನುಷ್ಯರನ್ನು ಕಾಡುತ್ತಲೇ ಇರುತ್ತವೆ. ಎಷ್ಟೋ ಮಂದಿ ಆರೋಗ್ಯ ಸಮಸ್ಯೆಯನ್ನು ಹೇಳಿಕೊಳ್ಳಲಾಗದೇ, ಅನುಭವಿಸಲೂ ಆಗದಂತ ಪರಿಸ್ಥಿತಿಯಲ್ಲಿದ್ದಾರೆ. ಹೀಗೆ ಆರೋಗ್ಯ ಸಮಸ್ಯೆಯನ್ನು ಹೊಂದಿರುವವರು ಮುರುಗ, ಮಂದಾರ ಹೂವುಗಳನ್ನು ಮುಡಿದುಕೊಂಡರೆ ದೇಹದ ನೋವುಗಳು ನಿವಾರಣೆಯಾಗಿ ಆರೋಗ್ಯ ಸ್ಥಿತಿಯಲ್ಲಿ ಸುಧಾರಣೆ ಕಂಡುಬರುತ್ತದೆ.

ರುಚಿಯಾದ ಅಡುಗೆ ಮಾಡಲು ಹೀಗೆ ಮಾಡಿ : ಕೆಲ  ಮಹಿಳೆಯರು ಅಡುಗೆ ಕೆಲಸದಲ್ಲಿ ನಿಪುಣರಾಗಿರುವುದಿಲ್ಲ ಅಥವಾ ಚೆನ್ನಾಗಿ ಅಡುಗೆ ಮಾಡಬೇಕು ಅಂದುಕೊಂಡರೂ ಅಡುಗೆ ರುಚಿಯಾಗೋದಿಲ್ಲ. ನೀವು ಮಾಡುವ ಅಡುಗೆ ಚೆನ್ನಾಗಿ ಆಗಬೇಕಂದ್ರೆ ಅಡುಗೆ ಮಾಡುವ ಮುನ್ನ ಸ್ವಲ್ಪ ಅಕ್ಕಿಕಾಳನ್ನು ಅಗ್ನಿಗೆ ಆಹುತಿ ಕೊಡಬೇಕು. ಹೀಗೆ ಮಾಡೋದ್ರಿಂದ ಅಡುಗೆ ಚೆನ್ನಾಗಿ ಆಗುತ್ತೆ ಎಂಬ ನಂಬಿಕೆಯಿದೆ.

ಭಿನ್ನಾಭಿಪ್ರಾಯ ದೂರವಾಗಲು ಹೀಗೆ ಮಾಡಿ : ಮನೆಯಲ್ಲಿ ಯಾವುದೋ ವಿಷಯಕ್ಕೆ ಭಿನ್ನಾಭಿಪ್ರಾಯಗಳು ಉಂಟಾಗಿ ಸಂಸಾರದಲ್ಲಿ ಬಿರುಕು ಮೂಡುತ್ತದೆ. ಹಾಗಾದಾಗ ನಿಮಗೆ ಯಾರ ಜೊತೆ ಭಿನ್ನಾಭಿಪ್ರಾಯಗಳು ಉಂಟಾಗಿದೆಯೋ ಅವರು ಮಲಗುವ ದಿಂಬಿನ ಕೆಳಗೆ ತುಳಸಿ ಬೇರುಗಳನ್ನಿಡಿ. ಹೀಗೆ ಮಾಡೋದ್ರಿಂದ ನಿಮ್ಮ ಸಂಬಂಧಗಳು ಚೆನ್ನಾಗಿರುತ್ತದೆ.

Inspiring Women: ಗರ್ಭಿಣಿಯಾಗಿದ್ದಾಗ್ಲೇ ಐಎಎಸ್ ಪರೀಕ್ಷೆ ಬರೆದ ಡಿಸಿ ದಿವ್ಯಾ ಪ್ರಭು

ಗಂಡನ ಯಶಸ್ಸಿಗೆ ಹೀಗೆ ಮಾಡಿ : ಒಬ್ಬ ಯಶಸ್ವಿ ಪುರುಷನ ಹಿಂದೆ ಮಹಿಳೆ ಇರ್ತಾಳೆ ಎನ್ನುವ ಮಾತಿದೆ. ಹಾಗಾಗಿ ಗಂಡ ಮನೆಯಿಂದ ಹೊರಗೆ ಹೋಗುವಾಗ ಹೆಂಡತಿಯ ಬಲಗೈ ಗಂಡನಿಗೆ ತಾಕಿದರೆ ಆತನ ಎಲ್ಲ ಕೆಲಸಗಳೂ ಯಶಸ್ವಿಯಾಗುತ್ತದೆ.

ಪತಿಯ ಕುಡಿತ ಬಿಡಿಸೋದು ಹೀಗೆ :  ಗಂಡನ ಕುಡಿತ ಮನೆ ಮಂದಿಯನ್ನು ಕಣ್ಣೀರಿನಲ್ಲಿ ಕೈ ತೊಳೆಯುವಂತೆ ಮಾಡುತ್ತದೆ. ಮನೆಯ ಯಜಮಾನನ ಕುಡಿತದ ಕೆಟ್ಟ ಅಭ್ಯಾಸದಿಂದ ಇಡೀ ಕುಟುಂಬವೇ ಬೀದಿಗೆ ಬಂದ ಉದಾಹರಣೆಗಳೂ ಇವೆ. ಗಂಡಸರ ಕುಡಿತದ ಚಟವನ್ನು ಬಿಡಿಸಲು ಪ್ರತಿದಿನ ಬೆಳಿಗ್ಗೆ 60 ದಿನಗಳ ಕಾಲ ಅರ್ಧ ಗ್ರಾಂ ಅಣಲೆಕಾಯಿ ಪುಡಿಯನ್ನು 6 ಸ್ಪೂನ್ ನೀರಿನಲ್ಲಿ ಬೆರೆಸಿ ಕುಡಿಸಬೇಕು. ತಿಂಡಿ ಸೇವನೆ ಮಾಡಿದ ನಂತ್ರ ಇದನ್ನು ನೀಡಬೇಕು. ಹೀಗೆ ಮಾಡೋದ್ರಿಂದ ಗಂಡಸರಿಗೆ ಕುಡಿತದಲ್ಲಿ ಆಸಕ್ತಿ ಕಡಿಮೆಯಾಗುತ್ತದೆ. ಮನೆಯಲ್ಲಿ ಸುಖ ಸಂತೋಷ ನೆಲೆಸಲು ಹೀಗೆ ಮಾಡಿ : ಹೆಣ್ಣುಮಕ್ಕಳು ಹೂವು ಮುಡಿದುಕೊಳ್ಳುವ ಸಂಪ್ರದಾಯ ಭಾರತೀಯ ಸಂಸ್ಕೃತಿಯಲ್ಲಿ ಮೊದಲಿನಿಂದಲೂ ಇದೆ. ಮನೆಯಲ್ಲಿ ಸುಖ ಸಂತೋಷ ನೆಲೆಸಲು ಮನೆಯ ಹೆಣ್ಣುಮಕ್ಕಳು ಹಳದಿ ಬಣ್ಣದ ಹೂವನ್ನು ಹಾಗೂ ಸಾಲ ಬಾಧೆಯಿಂದ ಮುಕ್ತಿ ಹೊಂದಲು ಬಿಳಿ ಬಣ್ಣದ ಹೂವನ್ನು ಯಾವಾಗಲೂ ಮುಡಿದುಕೊಳ್ಳಬೇಕು.
 

click me!