
ಆಡೋದು ಒಂದು ಮಾಡೋದು ಇನ್ನೊಂದು, ಸದ್ಯ ಭಾರತದ ಪ್ರಸಿದ್ಧ ಆಧ್ಯಾತ್ಮಿಕ (spiritual) ಬೋಧಕಿ, ಪ್ರೇರಕ ಭಾಷಣಕಾರ್ತಿ (motivational speaker) ಮತ್ತು ಗಾಯಕಿ ಜಯಾ ಕಿಶೋರಿ (Jaya Kishori) ಮೇಲೆ ಈ ಆರೋಪ ಬಂದಿದೆ. ಜಯಾ ಕಿಶೋರಿ, ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗ್ತಿದ್ದಾರೆ. ಅದಕ್ಕೆ ಕಾರಣ ಅವರು ಕ್ಯಾರಿ ಮಾಡಿದ್ದ ಹ್ಯಾಂಡ್ ಬ್ಯಾಗ್. ಏರ್ಪೋರ್ಟ್ (Airport) ನಲ್ಲಿ ಜಯಾ ಕಿಶೋರಿ ಹಿಡಿದಿದ್ದ ಬ್ಯಾಗ್ ಫೋಟೋ ವೈರಲ್ ಆಗಿದ್ದು, ಇದನ್ನು ನೋಡಿದ ನೆಟ್ಟಿಗರು ಕಮೆಂಟ್ ಶುರು ಮಾಡಿದ್ದಾರೆ. ಜಯಾ ಕಿಶೋರಿ ಹಿಡಿದ ಬ್ಯಾಗ್ ಬೆಲೆ ಹಾಗೂ ಅದನ್ನು ತಯಾರಿಸಿದ ವಸ್ತುವೇ ಸದ್ಯ ಚರ್ಚೆಯ ವಿಷ್ಯ.
ಆಧ್ಯಾತ್ಮಿಕ ಪ್ರಚಾರಕಿ ಜಯಾ ಕಿಶೋರಿ ಹಿಡಿದಿರುವ ಬ್ಯಾಗ್ ಮಾಮೂಲಿ ಬ್ಯಾಗ್ ಅಲ್ಲ. ಐಷಾರಾಮಿ ಬ್ರ್ಯಾಂಡ್ ಡಿಯರ್ ಬ್ಯಾಗ್ (Dior Bag )ಹಿಡಿದಿದ್ದಾರೆ. ಇದು ಕಸ್ಟಮೈಸ್ ಬ್ಯಾಗ್ ಆಗಿದೆ. ಬ್ಯಾಗ್ ಮೇಲೆ ಜಯಾ ಕಿಶೋರಿ ಹೆಸರನ್ನೂ ಬರೆಸಲಾಗಿದೆ. ಈ ಬ್ರ್ಯಾಂಡ್ ನ ಸೆಕೆಂಡ್ ಹ್ಯಾಂಡ್ ಬ್ಯಾಗ್ ಬೆಲೆಯೇ 2 ಲಕ್ಷಕ್ಕಿಂತ ಹೆಚ್ಚಿರುತ್ತದೆ. ಇನ್ನು ಕಸ್ಟಮೈಸ್ ಬ್ಯಾಗ್ ಬೆಲೆ ಎಷ್ಟಿರಬಹುದು ಅನ್ನೋದನ್ನು ನೀವೇ ಅಂದಾಜಿಸಿ. 29 ವರ್ಷದ ಹಿಂದೂ ಪ್ರಚಾರಕಿ ಹಿಡಿದಿರುವ ಬ್ಯಾಗ್ ಈಗ ಟ್ರೋಲ್ ಆಗಿದೆ.
20 ಮದುವೆಗೆ ಅವಕಾಶವಿದ್ರೂ ಮುಸ್ಲಿಂ ಹುಡುಗಿಯರಿಗೆ ನೋವು ತಪ್ಪಿಲ್ಲ! ಏನಿದು ಮುತಾಹ್
ಸೋಶಿಯಲ್ ಮೀಡಿಯಾದಲ್ಲಿ ಬಳಕೆದಾರರು ಜಯಾ ಕಿಶೋರಿ ವಿರುದ್ಧ ತಿರುಗಿಬಿದ್ದಿದ್ದಾರೆ. ಬಳಕೆದಾರರೊಬ್ಬರು ಡೋಯಲ್ ತನ್ನ ಬ್ಯಾಗನ್ನು ದನದ ಚರ್ಮದಿಂದ ಮಾಡುತ್ತದೆ. ಹಿಂದೂ ಪರ ಪ್ರಚಾರ ಮಾಡುವ ಜಯಾ ಕಿಶೋರಿ ಇಂಥ ಬ್ಯಾಗ್ ಹಿಡಿದಿದ್ದಾರೆಂದು ಕಮೆಂಟ್ ಮಾಡಿದ್ದಾರೆ. ಜಯಾ ಕಿಶೋರಿ ಐಷಾರಾಮಿ ಜೀವನ ನೋಡಿ, ಬಳಕೆದಾರರು ದಂಗಾಗಿದ್ದಾರೆ. ಜಯಾ ಕಿಶೋರಿ ತಮ್ಮ ಖಾತೆಯಲ್ಲಿ ಬ್ಯಾಗ್ ಹಿಡಿದ ವಿಡಿಯೋ ಪೋಸ್ಟ್ ಮಾಡಿದ್ದರು. ಆದ್ರೆ ವಿವಾದ ಶುರುವಾಗ್ತಿದ್ದಂತೆ ಅದನ್ನು ಡಿಲಿಟ್ ಮಾಡಿದ್ದಾರೆ. ಆದ್ರೆ ಈ ವಿಡಿಯೋ ಮೊದಲೇ ನೋಡಿದ್ದ ಬಳಕೆದಾರರು ಪಾಪರಾಜಿಗಳು ತೆಗೆದ ಫೋಟೋ ಪೋಸ್ಟ್ ಮಾಡ್ತಿದ್ದಾರೆ.
ಜಯಾ ಕಿಶೋರಿ ಬೂಟಾಟಿಕೆ ಮಾಡ್ತಿದ್ದಾರೆಂದು ಒಬ್ಬರು ಆರೋಪ ಮಾಡಿದ್ದಾರೆ. ದೆಹಲಿಯಿಂದ ಕೊಲ್ಕತ್ತಾ ಹೋಗುವ ಸಮಯದಲ್ಲಿ ಜಯಾ ಕಿಶೋರಿ ಪಕ್ಕದಲ್ಲೇ ನಾನು ಪ್ರಯಾಣ ಬೆಳೆಸಿದ್ದೆ. ಈ ಟೈಂನಲ್ಲಿ ಜಯಾ, ತಮ್ಮ ಬ್ಯಾಗ್ ಕೊಂಡೊಯ್ಯಲು ಇಬ್ಬರನ್ನು ನೇಮಕ ಮಾಡಿಕೊಂಡಿದ್ದರು. ಅವರ ಡಬಲ್ ಸ್ಟ್ಯಾಂಡರ್ಡ್ ಆಗ ನನಗೆ ಗೊತ್ತಾಯ್ತು ಎಂದು ಮತ್ತೊಬ್ಬರು ಕಮೆಂಟ್ ಮಾಡಿದ್ದಾರೆ. ಎಲ್ಲ ಆಧ್ಯಾತ್ಮಿಕ ನಾಯಕರು ಐಷಾರಾಮಿ ಬಯಸ್ತಾರೆ ಎಂದು ಮತ್ತೊಬ್ಬರು ಕಮೆಂಟ್ ಮಾಡಿದ್ದಾರೆ.
ಹುಡುಗಿಯರನ್ನು ಗುತ್ತಿಗೆಗೆ ನೀಡ್ತಾರೆ ಪಾಲಕರು, ದಿನದಲ್ಲಿ ನಡೆಯುತ್ತೆ ಹತ್ತಾರು ಬಾರಿ ಬಲಾತ್ಕಾರ
ಮತ್ತೆ ಅನೇಕರು ಜಯಾ ಕಿಶೋರಿ ಪರ ಮಾತನಾಡಿದ್ದಾರೆ. ಜಯಾ ಕಿಶೋರಿ ಇದನ್ನು ಖರೀದಿ ಮಾಡಿದ್ದು ಅಂತ ನೀವು ಹೇಗೆ ಹೇಳ್ತೀರಿ, ಇದು ಗಿಫ್ಟ್ ರೂಪದಲ್ಲಿ ಸಿಕ್ಕಿರಬಹುದು. ಆಧ್ಯಾತ್ಮಿಕದ ಬಗ್ಗೆ ಮಾತನಾಡುವವರು ಐಷಾರಾಮಿ ಜೀವನ ನಡೆಸಬಾರದು ಎಂದಿಲ್ಲವಲ್ಲ, ಆಧ್ಯಾತ್ಮಿಕ ಆಲೋಚನೆಯನ್ನು ಮಾರಾಟ ಮಾಡಿ ಅವರು ಹಣ ಮಾಡಿಕೊಳ್ತಿದ್ದಾರೆ. ಅದು ಅವರ ಬ್ಯುಸಿನೆಸ್. ಪ್ರಾಮಾಣಿಕವಾಗಿ ದುಡಿದ ಹಣವನ್ನು ಅವರಿಷ್ಟದಂತೆ ಖರ್ಚು ಮಾಡಲು ಸ್ವಾತಂತ್ರ್ಯ ನೀಡಿ ಎಂದಿರುವ ಬಳಕೆದಾರರು, ಅದ್ರಲ್ಲಿ ಜಯಾ ಕಿಶೋರಿ ತಪ್ಪಿಲ್ಲ, ಅವರ ಹಿಂದೆ ಮುಂದೆ ಸುತ್ತಾಡುವ ಭಕ್ತರು, ಸಾರ್ವಜನಿಕರ ತಪ್ಪು ಎಂದು ಅನೇಕರು ಕಮೆಂಟ್ ಮಾಡಿದ್ದಾರೆ.
ಜಯಾ ಕಿಶೋರಿಗೆ 29 ವರ್ಷ ವಯಸ್ಸು. ಜಯಾ ಕಿಶೋರಿ, ಆಧ್ಯಾತ್ಮಿಕ ಪ್ರಚಾರ, ಭಜನಾ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳುವ ಮೂಲಕ ಹಣ ಸಂಪಾದನೆ ಮಾಡ್ತಾರೆ. ಅವರ ಒಂದು ತಿಂಗಳ ಗಳಿಕೆ 20ರಿಂದ 25 ಲಕ್ಷ ಎಂದು ಅಂದಾಜಿಸಲಾಗಿದೆ.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.