ಮದ್ವೆಯಾಗ್ತಿದೀರಾ? ಹಾಗಿದ್ರೆ ಮೊದ್ಲು ಗೈನಕಾಲಜಿಸ್ಟ್‌ ಅನ್ನು ಭೇಟಿಯಾಗಿ!

By Suvarna News  |  First Published Dec 28, 2019, 9:31 AM IST

ಮದುವೆಯ ಮೊದಲಿನ ನಿಮ್ಮ ಆರೋಗ್ಯಕ್ಕೂ- ಮದುವೆಯ ನಂತರದ ಹೆಲ್ತ್‌ ಸಿಚುಯೇಷನ್‌ಗಳಿಗೂ ವ್ಯತ್ಯಾಸವಿರುತ್ತೆ. ಇದನ್ನು ಸರಿಯಾಗಿಟ್ಟುಕೊಳ್ಳೋಕೆ ಗೈನಕಾಲಜಿಸ್ಟ್‌ರನ್ನು ಒಂದ್ಸಲ ಭೇಟಿಯಾಗಿ.
 


ಮದುವೆಯಾಗೋಕೆ ಮುನ್ನ ಒಂದ್ಸಲ ಹುಡುಗಿ ಹುಡುಗಿ ಜತೆಯಾಗಿ ಡೇಟ್‌ ಮಾಡಿಬರೋದು, ಜೊತೆಯಾಗಿ ಸ್ವಲ್ಪ ಕಾಲ ಕಳೆದು ಪರಸ್ಪರ ಅರ್ಥ ಮಾಡಿಕೊಳ್ಳೋದು ಈಗ ಕಾಮನ್‌. ಇದರ ಜೊತೆಗೆ ಹೊಳೆಯುವ ಚರ್ಮಕ್ಕಾಗಿ ಬ್ಯೂಟಿ ಸ್ಪೆಶಲಿಸ್ಟ್‌ಗೆ ಭೇಟಿ ಕೊಡೋದು, ವಿವಾಹದ ಥೀಮ್‌ ವಿನ್ಯಾಸಕರ ಜೊತೆಗೆ ಮಾತನಾಡೋದು, ನಿಮಗೂ ಮನೆಯವರಿಗೂ ಕೊಡಿಸಬೇಕಾದ ಬಟ್ಟೆಗಳಿಗಾಗಿ ಸಾಕಷ್ಟು ಶಾಪಿಂಗ್‌ ದಂಡಯಾತ್ರೆ ಇವೆಲ್ಲ ಇದ್ದದ್ದೇ. ನೀ

ವು ಮಾಡಬೇಕಾದ ಕೆಲ್ಸ ಇನ್ನೊಂದಿದೆ, ಅದೇನು ಗೊತ್ತಾ? ಒಬ್ಬರು ಪರಿಣತ ಗೈನಕಾಲಜಿಸ್ಟ್‌- ಸ್ತ್ರೀರೋಗತಜ್ಞರನ್ನು ಭೇಟಿ ಮಾಡೋದು. ಯಾಕೆ ಅಂತ ಆಶ್ಚರ್ಯಪಡುತ್ತೀರಾ? ಇಲ್ಲಿವೆ ಕಾರಣಗಳು.

Latest Videos

undefined

ರಾಣಿ ಮುಖರ್ಜಿ ಮಗಳಿಗೆ ಏನು ಕಲಿಸ್ತಿದ್ದಾರೆ ಗೊತ್ತಾ?

ಗರ್ಭನಿರೋಧಕಗಳ ಬಳಕೆ

ಮದುವೆಯಾದ ನಂತರ, ನೀವು ಲೈಂಗಿಕವಾಗಿ ಹೆಚ್ಚು ಸಕ್ರಿಯರಾಗಿರುತ್ತೀರಿ. ಆದರೆ ಇಷ್ಟು ಬೇಗನೇ ಮಕ್ಕಳು ಬೇಡ ಅನ್ನೋದು ಇಂದಿನ ಎಲ್ಲ ದಂಪತಿಗÙ ಅಭಿಪ್ರಾಯ. ಆದ್ದರಿಂದ ಅನಗತ್ಯ ಗರ್ಭಧಾರಣೆಯನ್ನು ತಡೆಗಟ್ಟಲು ಸರಿಯಾದ ಗರ್ಭನಿರೋಧಕವನ್ನು ಉಪಯೋಗಿಸುವುದು ಬಹಳ ಮುಖ್ಯ. ಕೆಲವು ತುರ್ತು ಸಂದರ್ಭದಲ್ಲಿ, ಸೆಕ್ಸ್‌ ನಂತರ ಬಳಸಬಹುದಾದ ಮಾತ್ರೆಗಳು. ಇನ್ನು ಕೆಲವು ಸೆಕ್ಸ್‌ಗೆ ಮುನ್ನವೇ ಎಚ್ಚರ ವಹಿಸಿ ಧರಿಸಬಹುದಾದ ಸಾಧನಗಳು.

ನಿಮಗೆ ಯಾವುದು ಸೂಕ್ತ ಅನ್ನಿಸುತ್ತದೋ ಅದನ್ನು ಕಂಡುಹಿಡಿದು ಬಳಸುವುದು ಮುಖ್ಯ. ಪದೇ ಪದೇ ಕಾಂಟ್ರಸೆಪ್ಟಿವ್‌ ಪಿಲ್ಸ್‌ ತಿನ್ನುವುದರಿಂದ ಕೆಲವರು ದಪ್ಪಗಾಗುವ ಚಾನ್ಸ್‌ ಕೂಡ ಇದೆ. ಇಂಥ ರಿಸ್ಕ್‌ಗಳನ್ನು ಗೈನಕಾಲಜಿಸ್ಟ್‌ ಹತ್ತಿರ ಚರ್ಚಿಸಿ.

ಋುತುಚಕ್ರ

ನಿಮ್ಮ ಋುತುಚಕ್ರದ ಅವಧಿ ನಿಯಮಿತವಾದ ಅವಧಿಯಲ್ಲಿ ನಡೆಯುತ್ತಿದ್ದರೆ ಸಮಸ್ಯೆ ಇರೊಲ್ಲ. ನ್ಯಾಚುರಲ್‌ ಕಾಂಟ್ರಸೆಪ್ಷನ್‌ ಅನ್ನು ಅನುಸರಿಸಬಹುದು. ಆದರೆ ಅನಿಯಮಿತ ಋುತುಚಕ್ರ ನಿಮ್ಮದಾಗಿದ್ದರೆ ಸಮಸ್ಯೆ ಉಂಟಾಗಬಹುದು. ಪಿಸಿಓಎಸ್‌ನಂಥ ಸಮಸ್ಯೆಗಳೂ ಕಾಡುತ್ತವೆ. ಈ ಅವಧಿಯಲ್ಲಿ ನೋವು ಹೆಚ್ಚು ಇದ್ದರೆ ಅದನ್ನೂ ಗೈನಕಾಲಜಿಸ್ಟ್‌ ಬಳಿ ಚರ್ಚಿಸಬಹುದು.

ಕೆಲವರು ಮದುವೆಯ ದಿನಗಳಲ್ಲಿ ಋುತುಚಕ್ರವಿದ್ದರೆ ಅದನ್ನು ಮುಂದೆ ಹಾಕಲು ಮಾತ್ರೆ ಸೇವಿಸುತ್ತಾರೆ. ಆದರೆ ಇದು ಮುಂದೆ ಸಮಸ್ಯೆಗೆ ಕಾರಣವಾಗುತ್ತದೆ. ಹೀಗಾಗಿ ಮದುವೆಯ ಎರಡು ತಿಂಗಳ ಮುನ್ನವೇ ಗೈನ್‌ ಅನ್ನು ಸಂಪರ್ಕಿಸಿದರೆ ಅವರು ಡೇಟ್‌ಗಳಲ್ಲಿ ಹೆಚ್ಚು ಕಡಿಮೆ ಮಾಡಿಕೊಡಬಹುದು.

ಸೆಕ್ಸ್‌ ಲೈಫ್‌

ಬಹಳಷ್ಟು ಮಹಿಳೆಯರು ಲೈಂಗಿಕವಾಗಿ ಸಕ್ರಿಯರಾಗಿರುತ್ತಾರೆ. ಆದರೂ ಹೆಚ್ಚಿನ ಸಂಖ್ಯೆಯ ಮಹಿಳೆಯರು ಲೈಂಗಿಕತೆಯ ಬಗ್ಗೆ ಕಡಿಮೆ ಮಾಹಿತಿಯನ್ನು ಹೊಂದಿದ್ದಾರೆ. ಅದರ ಬಗ್ಗೆ ಬೇಸಿಕ್‌ ಮಾಹಿತಿಗಳೂ ಗೊತ್ತಿರುವುದಿಲ್ಲ, ಮದುವೆಯಾದ ಬಳಿಕ ಇದು ಮುಜುಗರಕ್ಕೆ ಅಥವಾ ನೋವಿಗೆ ಕಾರಣವಾಗಬಹುದು. ಮುಂದೆಂದೂ ಸೆಕ್ಸ್‌ ಬೇಡ ಅನ್ನಿಸುವಂಥ ಅನುಭವವೂ ಉಂಟಾಗಬುದು. ನೀವು ಅಂಥವರಾಗಿದ್ದರೆ, ನಿಮ್ಮ ವೈದ್ಯರನ್ನು ಭೇಟಿ ಮಾಡಲೇಬೇಕು ಹಾಗೂ ಚರ್ಚಿಸಬೇಕು. ನಿಮಗಿರುವ ಅನುಮಾನಗಳನ್ನು ಪರಿಹರಿಸಿಕೊಳ್ಳಬೇಕು.

ಹನಿಮೂನ್‌ ಸಿಸ್ಟೈಟಿಸ್‌

ಮೊದಲ ಸಂಭೋಗದ ನಂತರ, ಕೆಲವು ಮಹಿಳೆಯರು ಮೂತ್ರದ ಸೋಂಕಿಗೆ ಒಳಗಾಗಬಹುದು. ಇದೊಂದು ಸಾಮಾನ್ಯವಾಗಿ ಕಂಡುಬರುವ ಸಂಗತಿ. ಆದರೆ ಆಗ ಉಂಟಾಗುವ ನೋವು ಮಾತ್ರ ಕಿರಿಕಿರಿ ತರುವಂಥದು. ಇದರಿಂದಾಗಿ ಮುಂದಿನ ಸೆಕ್ಸ್‌ ಬೇಡ ಅನ್ನಿಸಬಹುದು. ಇದನ್ನು ತಡೆಗಟ್ಟಲು, ಸಂಭೋಗದ ನಂತರ ಮೂತ್ರಕೋಶವನ್ನು ಖಾಲಿ ಮಾಡಿಕೊಳ್ಳುವುದು ಮತ್ತು ಸಾಕಷ್ಟು ನೀರು ಕುಡಿಯುವುದು ಅಗತ್ಯ. ಆಗಾಗ ಮೂತ್ರ ವಿಸರ್ಜನೆ, ಹೊಟ್ಟೆಯ ಕೆಳಗಿನ ಭಾಗದಲ್ಲಿ ನೋವು, ಮೂತ್ರ ಮಾಡುವಾಗ ಉರಿ ಉಂಟಾಗುತ್ತವೆ, ಸಾಕಷ್ಟು ನೀರು ಕುಡಿದು ಇದನ್ನು ಎದುರಿಸಬಹುದು. ಆದರೆ ಹೆಚ್ಚಾದರೆ, ಡಾಕ್ಟರ್‌ ಬಳಿ ಹೋಗುವುದು ಅಗತ್ಯ.

ಗರ್ಭಧಾರಣೆಯ ಯೋಜನೆ

ದಾಂಪತ್ಯದ ಮಣೆ ಏರಿದ ಕೂಡಲೇ ಮಗು ಮಾಡಿಕೊಳ್ಳುವ ಯೋಚನೆಯಲ್ಲಿದ್ದೀರಾ ಅಥವಾ ತಡವಾಗಿಯೇ ಎಂಬುದನ್ನು ನಿರ್ಧರಿಸಿಕೊಂಡು, ಒಂದು ವೇಳೆ ನೀವು ಕೂಡಲೇ ಮಗುವನ್ನು ಹೊಂದಲು ಬಯಸಿದ್ದರೆ ಆಗ ಗೈನಕಾಲಜಿಸ್ಟ್‌ರನ್ನು ಭೇಟಿ ಮಾಡಿಕೊಳ್ಳುವುದು ಅಗತ್ಯ. ಮಗುವನ್ನು ಹೊತ್ತು ಹೆತ್ತು ಮಾಡುವಷ್ಟು ನೀವಿಬ್ಬರೂ ಆರೋಗ್ಯಕರವಾಗಿದ್ದೀರಾ, ಹಾಗೂ ಮಾನಸಿಕವಾಗಿ ಸಿದ್ಧರಾಗಿದ್ದೀರಾ ಎಂಬುದನ್ನು ಕೂಡ ಕಂಡುಕೊಳ್ಳಬೇಕು. ಇಬ್ಬರೂ ಈ ಬಗ್ಗೆ ಗೈನಕಾಲಜಿಸ್ಟ್‌ ಜೊತೆ ಕೌನ್ಸೆಲಿಂಗ್‌ ಮಾಡಿಸಿಕೊಂಡರೆ, ಅದಕ್ಕನುಗುಣವಾಗಿ ಮುಂದಿನ ಪ್ಲಾನಿಂಗ್‌ ಮಾಡಿಕೊಳ್ಳಬಹುದು.

click me!