ಸೋಡಾ ಕುಡಿಯೋಕೆ ಹೋದವಳು 83 ಲಕ್ಷ ರೂಪಾಯಿ ಗೆದ್ಲು!

By Suvarna News  |  First Published Dec 8, 2023, 1:00 PM IST

ಮುಂದೇನಾಗುತ್ತೆ ಎನ್ನುವುದು ನಮಗೆ ಗೊತ್ತಿರೋದಿಲ್ಲ. ನಾವು ಮಾಡುವ ಕೆಲ ಕೆಲಸಗಳು ನಮ್ಮ ಜೀವನ ಬದಲಿಸುತ್ತವೆ. ಈ ಮಹಿಳೆ ಕೂಡ ಕಲ್ಪನೆಯಿಲ್ಲದೆ ಕಿರಾಣಿ ಅಂಗಡಿಗೆ ಹೋಗಿದ್ದಾಳೆ. ಬರಿಗೈನಲ್ಲಿ ಹೋದವಳು ಲಕ್ಷಾಧಿಪತಿಯಾಗಿ ವಾಪಸ್ ಆಗಿದ್ದಾಳೆ. 
 


ದೇವರು ಕೊಡುವಾಗ ಕೈಬಿಚ್ಚಿ ಕೊಡ್ತಾನೆ ಎನ್ನುವ ಮಾತಿದೆ. ಸಂತೋಷ ಇರಲಿ ದುಃಖವಿರಲಿ ಒಟ್ಟಿಗೆ ತಡೆಯಲಾರದಷ್ಟು ಬರುತ್ತದೆ.  ಅದೃಷ್ಟ ನಿಮ್ಮ ಕೈಹಿಡಿದ್ರೆ ಹಣ ನಿಮ್ಮನ್ನು ಹುಡುಕಿಕೊಂಡು ಬರುತ್ತದೆ. ನಿಮ್ಮ ಕಲ್ಪನೆಗೂ ಸಿಗದ ಜಾಗದಿಂದ ನಿಮಗೆ ಹಣ ಸಿಗುತ್ತದೆ. ಒಂದೇ ಬಾರಿ ಕೋಟ್ಯಾಧಿಪತಿಗಳಾಗ್ತೀರಿ. ಇದು ಎಲ್ಲರ ಜೀವನದಲ್ಲಿ ನಡೆಯುವಂತಹದ್ದಲ್ಲ. ಕೆಲವೇ ಕೆಲವು ಮಂದಿ ಇಂಥ ಲಕ್ ಹೊಂದಿರುತ್ತಾರೆ. ಇದರಲ್ಲಿ ಈ ಮಹಿಳೆ ಕೂಡ ಸೇರಿದ್ದಾಳೆ. ತನ್ನ ಜೀವನದಲ್ಲಿ ಅಷ್ಟೊಂದು ದೊಡ್ಡ ಮೊತ್ತ ಬರುತ್ತೆ ಎನ್ನುವ ಕಲ್ಪನೆ ಆಕೆಗಿರಲಿಲ್ಲ. ಕನಸಿನಲ್ಲೂ ಆಕೆ ಈ ರೀತಿ ಘಟನೆ ನಡೆಯುತ್ತೆ ಎಂದುಕೊಂಡಿರಲಿಲ್ಲ. ಆದ್ರೆ ಆಕೆಯ ಒಂದೇ ಒಂದು ಕೆಲಸ ಅವಳ ಜೀವನದಲ್ಲಿ ದೊಡ್ಡ ಬದಲಾವಣೆ ತಂದಿದೆ. ಒಂದು ಸೋಡಾ ಕುಡಿಯುವ ನೆಪ ಆಕೆಯನ್ನು ಶ್ರೀಮಂತೆಯನ್ನಾಗಿ ಮಾಡಿದೆ. ಅಷ್ಟಕ್ಕೂ ನಡೆದಿದ್ದೇನು ಎಂಬ ವಿವರ ಇಲ್ಲಿದೆ.

ಮಹಿಳೆ ಅದೃಷ್ಟ (Good Luck ) ಬದಲಿಸಿದ ಸೋಡಾ : ಆಕೆ ವರ್ಜಿನಿಯಾದ ಮಹಿಳೆ. ಅವಳ ಹೆಸರು ಜಾನೆಟ್ ಬೇನ್ (Janet Bane). ಆಕೆಯ ಜೀವನದಲ್ಲಿ ಚಮತ್ಕಾರ ನಡೆದಿದೆ. ಅಂದು ಅಂಥದ್ದೊಂದು ಕೆಲಸ ಮಾಡ್ತೇನೆ ಎಂದು ಜಾನೆಟ್ ಅಂದುಕೊಂಡಿರಲಿಲ್ಲ. ಎಲ್ಲಿಗೋ ಹೊರಟಿದ್ದ ಜಾನೆಟ್ ಬೇನ್ ಒಂದು ಅಂಗಡಿಗೆ ಹೋಗಿದ್ದಾಳೆ. ಬಾಯಾರಿದ್ದ ಕಾರಣ ಅಲ್ಲಿ ಸೋಡಾ ಖರೀದಿ ಮಾಡಿ ಕುಡಿದಿದ್ದಾಳೆ. ಅಂಗಡಿ ಮುಂದೆ ನಿಂತು ಸೋಡಾ ಕುಡಿಯುತ್ತಿದ್ದ ಜಾನೆಟ್ ಗೆ ಅಂಗಡಿಯಲ್ಲಿದ್ದ ಲಾಟರಿ ಟಿಕೆಟ್ ಕಣ್ಣಿಗೆ ಬಿದ್ದಿದೆ. ಇರಲಿ ಅಂತ ಒಂದು ಟಿಕೆಟ್ ಖರೀದಿ ಮಾಡಿದ್ದಾಳೆ. ಅಷ್ಟೆ, ಜಾನೆಟ್ ಬೇನ್ ಅದೃಷ್ಟ ಬದಲಾಗಿದೆ. ಸುಮ್ಮನೇ ಖರೀದಿ ಮಾಡಿದ್ದ ಲಾಟರಿ ಟಿಕೆಟ್ ಆಕೆಗೆ ದೊಡ್ಡ ಮೊತ್ತವನ್ನು ತಂದುಕೊಟ್ಟಿದೆ.

Tap to resize

Latest Videos

ಫೋರ್ಬ್ಸ್ ಪ್ರಭಾವಿ ಮಹಿಳೆಯರ ಪಟ್ಟಿಯಲ್ಲಿ ಸ್ಥಾನ ಪಡೆದ SAIL ಮಾಜಿ ಮುಖ್ಯಸ್ಥೆ;ಈಕೆ ಸಾಧನೆ ಹಲವರಿಗೆ ಸ್ಫೂರ್ತಿ

ಲಾಟರಿಯಲ್ಲಿ ಸಿಕ್ಕಿದ್ದು ಇಷ್ಟೊಂದು ಹಣ : ಲಾಟರಿ ಖರೀದಿ ಮಾಡಿದ ಜಾನೆಟ್ ಅದನ್ನು ಸ್ಕ್ರ್ಯಾಚ್ ಮಾಡಿದ್ದಾಳೆ. ಆಗ ಆಕೆಗೆ 100,000 ಡಾಲರ್ ಅಂದ್ರೆ ಸುಮಾರು 83 ಲಕ್ಷ ರೂಪಾಯಿ ಲಾಟರಿ ಹಣ ತನಗೆ ಸಿಕ್ಕಿದೆ ಎಂಬುದು ಗೊತ್ತಾಗಿದೆ. ಸೋಡಾ ಕುಡಿಯಲು ನಿಲ್ಲಿಸಿದ್ದ ಕಾರಣ ಜಾನೆಟ್ ಬೇನ್ ಟಿಕೆಟ್ ಖರೀದಿ ಮಾಡಿದ್ದಳು. ಅದೇ ಆಕೆ ಜೀವನವನ್ನು ಬದಲಿಸಿದೆ ಎಂದು ವರ್ಜಿನಿಯಾ ಲಾಟರಿ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ. ಈ ವಿಷ್ಯ ತಿಳಿದ ಜಾನೆಟ್ ಶಾಕ್ ಗೆ ಒಳಗಾಗಿದ್ದಾಳೆ. ನನಗೆ ಇದನ್ನು ನಂಬಲು ಸಾಧ್ಯವಾಗ್ತಿಲ್ಲ. ನಾನು ಟಿಕೆಟ್ ನಂಬರನ್ನು ಅನೇಕ ಬಾರಿ ಚೆಕ್ ಮಾಡಿದ್ದೇನೆ. ಈ ವರ್ಷ ನನಗೆ ಬಹಳ ಅಧ್ಬುತವಾಗಿದೆ. ನನಗೆ ಅನೇಕ ಪ್ಲಾನ್ ಇದೆ. ಈ ಹಣದಲ್ಲಿ ಅವುಗಳನ್ನೆಲ್ಲ ತೀರಿಸಿಕೊಳ್ಳುವ ಪ್ರಯತ್ನ ನಡೆಸುತ್ತೇನೆ ಎಂದು ಜಾನೆಟ್ ಬೇನ್ ಹೇಳಿದ್ದಾಳೆ.

ನಿಸಾರ್ ಮಿಷನ್​ಗೂ ಇದೆ ಡಾ. ಅಕ್ಷತಾ ಕೃಷ್ಣಮೂರ್ತಿ ಕೊಡುಗೆ: ಯೋಜನೆಯ ಮಹತ್ವ, ವಿವರ ಹೀಗಿದೆ..

ಇವರ ಜೀವನ ಬದಲಿಸಿದ ಲಾಟರಿ  : ಬರೀ ಜಾನೆಟ್ ಬೇನ್ ಮಾತ್ರವಲ್ಲ ಈ ವರ್ಷ ಅನೇಕರ ಅದೃಷ್ಟ ಲಾಟರಿಯಿಂದ ಬದಲಾಗಿದೆ. ಕೆಲ ದಿನಗಳ ಹಿಂದೆ ಅಮೆರಿಕಾದ ಅರ್ಕಾನ್ಸಾಸ್ ನಿವಾಸಿ ಗ್ಯಾರಿ ಲೇಸಿ ಸಿಗರೇಟ್ ಖರೀದಿಸಲು ಹೋಗಿದ್ದರು. ಅಲ್ಲಿ ಪವರ್‌ಬಾಲ್ ಲಾಟರಿ ಟಿಕೆಟ್ ಖರೀದಿ ಮಾಡಿದ್ದ. ಲಾಟರಿ ಸ್ಕ್ರ್ಯಾಚ್ ಮಾಡಿದಾಗ 50,000 ಸಿಕ್ಕಿತ್ತು.  ಇದೇ ರೀತಿ ಬ್ರಿಟನ್ ನಲ್ಲಿ ಮಹಿಳೆಯೊಬ್ಬರು ಬ್ರೆಡ್ ಖರೀದಿಗೆ ಹೋದಾಗ ಲಾಟರಿ ಖರೀದಿ ಮಾಡಿದ್ದರು. ಮನೆಗೆ ಬಂದ್ಮೇಲೆ ಗೊತ್ತಾಯ್ತು ಮನರಂಜನೆಗೆ ಖರೀದಿ ಮಾಡಿದ್ದ ಲಾಟರಿ ಆಕೆಯನ್ನು ಕೋಟ್ಯಾಧಿಪತಿಯನ್ನಾಗಿ ಮಾಡಿತ್ತು. ಕಚೇರಿಗೆ ಹೋಗುವ ವೇಳೆ ಪಿಟ್ಮೆನ್ ಎಂಬ ವ್ಯಕ್ತಿಯೊಬ್ಬ ಲಾಟರಿ ಖರೀದಿ ಮಾಡಿ 1 ಕೋಟಿ 65 ಲಕ್ಷ ರೂಪಾಯಿ ಗೆದ್ದಿದ್ದ. ಅನೇಕರ ಅದೃಷ್ಟವನ್ನು ಈ ಲಾಟರಿ ಬದಲಿಸಿದೆ. 

click me!