ಕಿತ್ತೋಗಿರೋ ಜೀನ್ಸ್ ತೊಟ್ಟು ಮೆಟ್ರೋದಲ್ಲಿ ಆಜ್‌ ಕಿ ರಾತ್ ಹಾಡಿಗೆ ಡಾನ್ಸ್: ಸಿಟ್ಟಿಗೆದ್ದ ಜನ

By Anusha KbFirst Published Sep 30, 2024, 2:42 PM IST
Highlights

ಮೆಟ್ರೋದಲ್ಲಿ ಯುವತಿಯೊಬ್ಬಳು ಕಿತ್ತೋಗಿರುವ ಜೀನ್ಸ್ ತೊಟ್ಟು 'ಆಜ್ ಕಿ ರಾತ್' ಹಾಡಿಗೆ ನೃತ್ಯ ಮಾಡಿರುವ ವೀಡಿಯೋ ವೈರಲ್ ಆಗಿದೆ. ಈ ವೀಡಿಯೋಗೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದ್ದು, ಕೆಲವರು ಮೆಚ್ಚುಗೆ ವ್ಯಕ್ತಪಡಿಸಿದರೆ, ಇನ್ನು ಕೆಲವರು ಟೀಕಿಸಿದ್ದಾರೆ. ಸಾರ್ವಜನಿಕ ಸ್ಥಳದಲ್ಲಿ ಇಂತಹ ನೃತ್ಯ ಸೂಕ್ತವಲ್ಲ ಎಂದು ಹಲವರು ಅಭಿಪ್ರಾಯಪಟ್ಟಿದ್ದಾರೆ.

ಸಾಮಾಜಿಕ ಜಾಲತಾಣದ ಈ ಕಾಲಘಟ್ಟದಲ್ಲಿ ಮೆಟ್ರೋ ಟ್ರೈನುಗಳು ಕೂಡ ಸೋಶಿಯಲ್ ಮೀಡಿಯಾ ಇನ್‌ಫ್ಲುಯೆನ್ಸರ್‌ಗಳ ವೇದಿಕೆಯಾಗುತ್ತಿದೆ. ಅದರಲ್ಲೂ ದೆಹಲಿ ಮೆಟ್ರೋದಲ್ಲಿ ಈ ಇನ್‌ಫ್ಲುಯೆನ್ಸರ್‌ಗಳ ಹಾವಳಿ ಹೆಚ್ಚಾಗಿದ್ದು, ಪ್ರತಿದಿನವೂ ಪ್ರಯಾಣಿಕರಿಗೆ ಒಂದಲ್ಲ ಒಂದು ಬಿಟ್ಟಿ ಮನೋರಂಜನೆ ಸಿಗುತ್ತಿದೆ. ಇದರ ಜೊತೆಗೆ ಕಿರಿಕಿರಿಯೂ  ಆಗುತ್ತಿದೆ. ಅದೇ ರೀತಿ ಈಗ ಮೆಟ್ರೋವೊಂದರಲ್ಲಿ ಯುವತಿಯೊಬ್ಬಳು ಕಿತ್ತೋಗಿರೋ ಜೀನ್ಸ್ ತೊಟ್ಟು ಸ್ತ್ರೀ-2 ಸಿನಿಮಾದ, ನಟಿ ತಮನ್ನಾ ಭಾಟಿಯಾ ಅಭಿನಯದ ಐಟಂ ನಂಬರ್ ಆಜ್ ಕಿ ರಾತ್' ಹಾಡಿಗೆ ಮೈ ಬಳುಕಿಸಿದ್ದು, ಆಕೆಯ ವೀಡಿಯೋ ಇಂಟರ್‌ನೆಟ್‌ನಲ್ಲಿ ಸಖತ್ ವೈರಲ್ ಆಗಿದೆ.

ಈ ವೀಡಿಯೋಗೆ ಜನರಿಂದ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ. ಕೆಲವರು ಈಕೆಗೆ ಪ್ರಶಂಸೆ ವ್ಯಕ್ತಪಡಿಸಿದ್ದರೆ ಮತ್ತೆ ಕೆಲವರು ಮೆಟ್ರೋ ರೈಲಿನಲ್ಲಿ ಡಾನ್ಸ್ ಮಾಡುತ್ತಾ ನ್ಯೂಸೆನ್ಸ್ ಕ್ರಿಯೇಟ್ ಮಾಡಿರುವುದಕ್ಕೆ ಆಕೆಯ ವಿರುದ್ಧ ಕಿಡಿಕಾರಿದ್ದಾರೆ. ಈ ವೀಡಿಯೋವನ್ನು ಇನ್ಸ್ಟಾಗ್ರಾಮ್‌ನಲ್ಲಿ ಸಹೆಲಿ ರುದ್ರಾ ಎಂಬುವವರು ಪೋಸ್ಟ್ ಮಾಡಿದ್ದು, ಮೆಟ್ರೋ ರೈಲೊಳಗೆ ಪ್ರಯಾಣಿಕರು ನಿಲ್ಲುವ ಜಾಗದಲ್ಲಿ ಆಜ್ ಕಿ ರಾತ್ ಹಾಡಿಗೆ ಜಬರ್ದಸ್ತ್ ಸ್ಟೆಪ್ ಹಾಕಿದ್ದಾಳೆ. ಕೆಲವರು ಆಕೆಯ ಆತ್ಮವಿಶ್ವಾಸವನ್ನು ಮೆಚ್ಚಿದರೆ ಮತ್ತೆ ಕೆಲವರು ಕಿರಿಕಿಗೊಳಗಾಗಿರುವುದು ಮುಖದಲ್ಲಿ ಕಾಣುತ್ತಿದೆ. 

Latest Videos

ಹೈವೇಯಲ್ಲಿ ಸಾರಿಯುಟ್ಟ ನಾರಿಯ ಬಿಂದಾಸ್ ಕುಣಿತ: ಸೇತುವೆ ಬಿರುಕು ಬಿಡುತ್ತೆ ಎಂದ ನೆಟ್ಟಿಗ

ಮ್ಯೂಸಿಕ್ ಪ್ಲೇ ಆಗುತ್ತಿದ್ದಂತೆ ಕೆಲವು ಪ್ರಯಾಣಿಕರು ಕ್ಯಾಮರಾಗೆ ಪೋಸ್ ಕೊಟ್ಟರೆ ಮತ್ತೆ ಕೆಲವರು ತಲೆ ತಿರುಗಿಸಿ ಬೇರೆಡೆ ನೋಡಲು ಶುರು ಮಾಡಿದ್ದಾರೆ. ಈ ವಿಡಿಯೋವನ್ನು ಒಂದು ಲಕ್ಷಕ್ಕೂ ಹೆಚ್ಚು ಮಂದಿ ನೋಡಿದ್ದು, ತರಹೇವಾರಿ ಕಾಮೆಂಟ್ ಮಾಡಿದ್ದಾರೆ. ಕೆಲವರು ಈಕೆಯ ವಿರುದ್ಧ ಮೆಟ್ರೋ ದೂರು ದಾಖಲಿಸುವಂತೆ ಆಗ್ರಹಿಸಿದ್ದಾರೆ. ಸಾರ್ವಜನಿಕ ಸ್ಥಳದಲ್ಲಿ ಇಂತಹ ಅಸಭ್ಯ ಡಾನ್ಸ್ ಮಾಡುವ ಅಗತ್ಯವೇನಿತ್ತು ಎಂದು ಕೆಲವರು ಪ್ರಶ್ನೆ ಮಾಡಿದ್ದಾರೆ. ಅಲ್ಲದೇ ಈಕೆ ಈ ವೀಡಿಯೋ ಪೋಸ್ಟ್ ಮಾಡಿ, ಸಾರ್ವಜನಿಕರ ಒತ್ತಾಯದ ಮೇರೆಗೆ ಎಂದು ಕ್ಯಾಪ್ಷನ್ ನೀಡಿದ್ದಾಳೆ. ಇದಕ್ಕೆ ಪ್ರತಿಕ್ರಿಯಿಸಿದ ನೋಡುಗರೊಬ್ಬರು, ಇದು ಸಾರ್ವಜನಿಕ ಬೇಡಿಕೆಯ ಮೇರೆಗೆ ಅಲ್ಲ, ಇದೊಂತರ ಸಾರ್ವಜನಿಕರಿಗೆ ತೊಂದರೆ ಎಂದು ಕಾಮೆಂಟ್ ಮಾಡಿದ್ದಾರೆ. 

ಮೆಟ್ರೋದಲ್ಲಿ ಹೀಗೆ ಸೋಶಿಯಲ್ ಮೀಡಿಯಾ ಇನ್ಫ್ಲುಯೆನ್ಸರ್‌ಗಳು ಕುಣಿದಾಡೋದು ಇದೇ ಮೊದಲೇನಲ್ಲ, ಈ ಹಿಂದೆಯೂ ಅನೇಕರು ಹೀಗೆ ಸೋಶಿಯಲ್ ಮೀಡಿಯಾದಲ್ಲಿ ವಿಚಿತ್ರವಾಗಿ ಡಾನ್ಸ್‌ ಮಾಡುವ ಮೂಲಕ ಜನರ ಸೆಳೆಯಲು ಯತ್ನಿಸಿ ವೈರಲ್ ಆಗಿದ್ದಾರೆ. ಹೀಗೆ ಸೋಶಿಯಲ್ ಮೀಡಿಯಾದಲ್ಲಿ ಹೀಗೆ ರೀಲ್ಸ್ ಮಾಡೋರೋ ವೀಡಿಯೋ ಮಾಡಿದಾಗಲೆಲ್ಲಾ ಜನ ಇಂತಹವರ ವಿರುದ್ಧ ಕ್ರಮ ಕೈಗೊಳ್ಳುವಂತೆ ಆಗ್ರಹಿಸುತ್ತಲೇ ಇರ್ತಾರೆ. ಆದರೂ ಮೆಟ್ರೋಗಳಲ್ಲಿ ಈ ಇನ್ಫ್ಲುಯೆನ್ಸರ್‌ಗಳ ರೀಲ್ಸ್ ಆಟ ಮುಂದುವರಿಯುತ್ತಲೇ ಇದೆ. 

ರೀಲ್ಸ್‌ಗಾಗಿ ಮಗುವನ್ನೇ ಅಪಾಯಕ್ಕೆ ತಳ್ಳಿದ ತಾಯಿ: ವಿಡಿಯೋ ವೈರಲ್

 

click me!