ಭಾರತೀಯ ನಾರಿ ಸೀರೆಯುಟ್ರೆ ಕಾಣುವಷ್ಟು ಚೆಂದ ಇನ್ಯಾವುದರಲ್ಲೂ ಕಾಣಲ್ಲ. ಆದ್ರೆ ವಿದೇಶಿ ನೆಲದಲ್ಲಿ ಸ್ಯಾರಿಯುಟ್ರೆ ಜನರ ಪ್ರತಿಕ್ರಿಯೆ ಹೇಗಿರಬಹುದು. ಯಾವಾಗ್ಲೂ ಜೀನ್ಸ್, ಸ್ಕರ್ಟ್ ಮಂದಿ ಸ್ಯಾರಿಯನ್ನು ಹೇಗೆ ನೋಡಬಹುದು..ಇಲ್ಲಿದೆ ಜನರ ರಿಯಾಕ್ಷನ್.
ಭಾರತೀಯ ನಾರಿ ಸೀರೆಯುಟ್ರೆ ಕಾಣುವಷ್ಟು ಚೆಂದ ಇನ್ಯಾವುದರಲ್ಲೂ ಕಾಣಲ್ಲ..ಹೀಗಾಗಿಯೇ ಭಾರತದಲ್ಲಿ ಯಾವುದೇ ಹಬ್ಬ-ಹರಿದಿನಗಳು ಬಂದರೂ ಹೆಣ್ಮಕ್ಕಳು ಸೀರೆಯುಡೋದು ಮಾತ್ರ ತಪ್ಪಲ್ಲ. ಪ್ರತಿಯೊಬ್ಬ ಭಾರತೀಯ ಹುಡುಗಿ ಆರು ಗಜಗಳ ಸೀರೆಯಲ್ಲಿ ಅದ್ಭುತವಾಗಿ ಕಾಣುತ್ತಾರೆ. ಭಾರತದಲ್ಲಿ ವಯಸ್ಸಿನ ವ್ಯತ್ಯಾಸವಿಲ್ಲದೆ ಎಲ್ಲರೂ ಸೀರೆ ಉಡೋಕೆ ಇಷ್ಟಪಡುತ್ತಾರೆ. ಅದರಲ್ಲೂ ಸೀರೆಯಲ್ಲಿ ಹಲವು ವೆರೈಟಿ ಇರೋ ಕಾರಣ ಯಾವ ರೀತಿಯ ಸೀರೆಯನ್ನು ಬೇಕಾದರೂ ಆರಿಸಲು ಸಾಧ್ಯವಾಗುತ್ತದೆ. ಆದರೆ ವಿದೇಶಿ ನೆಲದಲ್ಲಿ ಸ್ಯಾರಿಯುಟ್ಟುಕೊಂಡು ಓಡಾಡಿದರೆ ಹೇಗಿರಬಹುದು?
ಫಾರಿನ್ ಕಂಟ್ರಿಗಳಲ್ಲಿ ಜೀನ್ಸ್-ಶರ್ಟ್, ಲಾಂಗ್ ಗೌನ್‌ಗಳನ್ನು ಧರಿಸಿ ಜನರು ಓಡಾಡುವುದೇ ಹೆಚ್ಚು. ಅಲ್ಲಿನ ಜನರು ಎಂಥಾ ವಿಶೇಷ ದಿನಗಳಲ್ಲೂ ಸೀರೆ ಧರಿಸುವುದಿಲ್ಲ. ಸೀರೆ ಎಂಬ ವಿಚಾರವೇ ಅವರಿಗೆ ಹೊಸತು. ಹೀಗಿರುವಾಗ ಫಾರಿನ್ ಕಂಟ್ರಿಯಲ್ಲಿ ಸೀರೆಯುಟ್ಟು ಓಡಾಡಿದರೆ ಹೇಗಿರಬಹುದು? ಇತ್ತೀಚೆಗೆ ಡಿಜಿಟಲ್ ಕಂಟೆಂಟ್ ಕ್ರಿಯೇಟರ್ ಮಹಿ ಶರ್ಮಾ, ಅದ್ಭುತವಾದ ನೀಲಿ ಬಣ್ಣದ ಸೀರೆಯುಟ್ಟು ಜಪಾನ್‌ನ ಬೀದಿಗಳನ್ನು ಓಡಾಡಿದ್ದಾರೆ. ಜನರ ರಿಯಾಕ್ಷನ್ ಹೇಗಿತ್ತು ನೋಡಿ..
undefined
ಸೀರೆಯುಟ್ಟು, ಹೀಲ್ಸ್ ಹಾಕಿದ್ರೂ..ಯುವತಿ ಏನ್ ಸಖತ್ತಾಗಿ ಡ್ಯಾನ್ಸ್ ಮಾಡಿದ್ಲು ನೋಡಿ!
ಡಿಜಿಟಲ್ ಕಂಟೆಂಟ್ ಕ್ರಿಯೇಟರ್ ಮಹಿ ಶರ್ಮಾ ಜಪಾನ್‌ನಲ್ಲಿ ನೀಲಿ ಸೀರೆಯನ್ನುಟ್ಟು ಸೆರಗನ್ನು ಬೀಸುತ್ತಾ ಸ್ಟ್ರೀಟ್‌ಗಳಲ್ಲಿ ಓಡಾಡಿದ್ದಾರೆ. ಈ ವೀಡಿಯೋವನ್ನು ಸೋಷಿಯಲ್ ಮೀಡಿಯಾದಲ್ಲಿ ಸುಂದರವಾದ ಶೀರ್ಷಿಕೆಯನ್ನು ಸಹ ನೀಡಿದ್ದಾರೆ. 'ನಾನು ಜಪಾನ್‌ನಲ್ಲಿ ಸೀರೆ ಧರಿಸಿ ಓಡಾಡಿದ್ದೇನೆ. ಜನರ ಪ್ರತಿಕ್ರಿಯೆ ಅದ್ಭುತವಾಗಿದೆ' ಎಂದು ವೀಡಿಯೋ ಪೋಸ್ಟ್‌ಗೆ ಹೆಡ್ಡಿಂಗ್ ನೀಡಿದ್ದಾಳೆ.
ಟೋಕಿಯೊದ ಬೀದಿಗಳಲ್ಲಿ ಭಾರತೀಯ ಸೀರೆಯನ್ನು ಉಟ್ಟು ಓಡಾಡಿದಾಗ, ಜನರಿಂದ ಇಂಥಾ ಅದ್ಭುತವಾದ ಪ್ರತಿಕ್ರಿಯೆಯನ್ನು ನಾನು ನಿರೀಕ್ಷಿಸಿರಲ್ಲಿಲ್ಲ ಎಂದು ಯುವತಿ ಹೇಳಿದ್ದಾಳೆ. ಸೀರೆಯುಟ್ಟ ಯುವತಿಯನ್ನು ಜನರು ಕಣ್ಣರಳಿಸಿ ನೋಡುತ್ತಾರೆ. ಗುಂಪಾಗಿ ನಿಂತು ಫೋಟೋಗಳನ್ನು ಕ್ಲಿಕ್ಕಿಸಿಕೊಳ್ಳುತ್ತಾರೆ.
ಸೀರೆ ಧರಿಸಿ ಬಂದು ಪದ್ಮಶ್ರೀ ಸ್ವೀಕರಿಸಿದ 101 ವರ್ಷದ ಫ್ರೆಂಚ್ ಯೋಗ ಶಿಕ್ಷಕಿಯ ಲುಕ್‌ಗೆ ನೆಟ್ಟಿಗರು ಫಿದಾ