World Menopause Day: ಕಾಯಿಲೆಯೆಂದು ಭಯಪಡದಿರಿ, ಇದು ರೋಗವಲ್ಲ ಋತುಬಂಧ

By Suvarna NewsFirst Published Oct 18, 2022, 3:13 PM IST
Highlights

ಅಕ್ಟೋಬರ್ 18ರಂದು, ವಿಶ್ವ ಋತುಬಂಧ ದಿನವನ್ನು ಆಚರಿಸಲಾಗುತ್ತದೆ. ಈ ದಿನ ಋತುಬಂಧಕ್ಕೊಳಗಾದ ಮಹಿಳೆಯರು ತಮ್ಮ ಆರೋಗ್ಯದ ಬಗ್ಗೆ ಕಾಳಜಿ ವಹಿಸುವಂತೆ ಜಾಗೃತಿ ಮೂಡಿಸಲಾಗುತ್ತೆದೆ. ಋತುಬಂಧದ ಸೂಚನೆಗಳೇನು, ಅದನ್ನು ನಿರ್ವಹಿಸುವುದು ಹೇಗೆ ಅನ್ನೋ ಮಾಹಿತಿ ಇಲ್ಲಿದೆ. 

ಜೀವನದುದ್ದಕ್ಕೂ ಮಹಿಳೆಯರು ತಮ್ಮ ದೇಹದಲ್ಲಿ ಸಾಕಷ್ಟು ಬದಲಾವಣೆಗಳನ್ನು ಅನುಭವಿಸುತ್ತಾರೆ. ಅದರಲ್ಲಿ ಋತುಬಂಧವು ಸಹ ಒಂದು ಹಂತವಾಗಿದೆ. ಋತುಬಂಧದ ಸಮಯದಲ್ಲಿ ಮಹಿಳೆಯರು ದೈಹಿಕ ಮತ್ತು ಮಾನಸಿಕ ಎರಡೂ ಬದಲಾವಣೆಗಳನ್ನು ಸಹ ಅನುಭವಿಸುತ್ತಾರೆ. ಋತುಬಂಧವು 40 ಮತ್ತು 50ರ ಮಧ್ಯದ ಮಹಿಳೆಯರಲ್ಲಿ ಕಾಣಿಸಿಕೊಳ್ಳುವ ಒಂದು ಪ್ರಮುಖ ಹಂತವಾಗಿದೆ. ನಂತರ ಅವರು ಮುಟ್ಟಾಗುವುದಿಲ್ಲ. ಮಾತ್ರವಲ್ಲ ಮಗುವನ್ನು ಸಹ ಹೆರಲು ಸಾಧ್ಯವಿಲ್ಲ. ಹಾಗಿದ್ರೆ ಋತುಬಂಧ ಎಂದರೇನು ಎಂಬುದನ್ನು ಸ್ಪಷ್ಟವಾಗಿ ತಿಳಿಯೋಣ.

ಋತುಬಂಧ ಎಂದರೇನು?
ವೈದ್ಯಕೀಯ ಪರಿಭಾಷೆಯಲ್ಲಿ, ಋತುಬಂಧವು (Menopause) ಮಹಿಳೆಯರಲ್ಲಿ ಋತುಚಕ್ರದ ಅಂತ್ಯವನ್ನು ಸೂಚಿಸುತ್ತದೆ. ಸಾಮಾನ್ಯವಾಗಿ, ಸಂಪೂರ್ಣ 12 ತಿಂಗಳ ಕಾಲ ಮುಟ್ಟಿನ ಅವಧಿಗಳ ಅನುಪಸ್ಥಿತಿಯನ್ನು ಋತುಬಂಧ ಎಂದು ನಿರ್ಣಯಿಸಲಾಗುತ್ತದೆ. ಭಾರತದಲ್ಲಿ ಮಹಿಳೆಯರಲ್ಲಿ (Woman) ನೈಸರ್ಗಿಕ ಋತುಬಂಧ ಸಂಭವಿಸುವ ಸರಾಸರಿ ವಯಸ್ಸು 51.4 ವರ್ಷಗಳು. ವಯಸ್ಸಾಗುವುದು ಮಾತ್ರ ಋತುಬಂಧದ ಮುನ್ಸೂಚನೆಯಲ್ಲ. ಮಹಿಳೆ ಸಂಪೂರ್ಣ ಓಫೆರೆಕ್ಟಮಿಗೆ ಒಳಗಾಗಿದ್ದರೆ ಅದು ಸಂಭವಿಸಬಹುದು - ಎರಡೂ ಅಂಡಾಶಯಗಳನ್ನು ಶಸ್ತ್ರಚಿಕಿತ್ಸೆಯಿಂದ ತೆಗೆದುಹಾಕುವುದು. ರೋಗಿಯು (Patient) ಅಂಡಾಶಯದ ಕ್ಯಾನ್ಸರ್ ಹೊಂದಿದ್ದರೆ ಈ ವೈದ್ಯಕೀಯ ವಿಧಾನವನ್ನು ಮಾಡಲಾಗುತ್ತದೆ. ಅಂತಹ ಋತುಬಂಧವನ್ನು 'ಶಸ್ತ್ರಚಿಕಿತ್ಸಾ ಋತುಬಂಧ' ಅಥವಾ 'ಕೃತಕ ಋತುಬಂಧ' ಎಂದು ಕರೆಯಲಾಗುತ್ತದೆ.

Work And Menopause: ಅಮ್ಮನಿಗೆ ಗೊತ್ತಿರಲ್ಲ..ನೀವೇ ಹೇಳಿ ಕೊಡ್ಬೇಕು !

ಋತುಬಂಧದ ಸಾಮಾನ್ಯ ಚಿಹ್ನೆಗಳು
ನವಿ ಮುಂಬೈನ ಕ್ಲೌಡ್‌ನೈನ್‌ ಗ್ರೂಪ್‌ ಆಫ್‌ ಹಾಸ್ಪಿಟಲ್ಸ್‌ನ ಹಿರಿಯ ಸಲಹೆಗಾರರಾದ ಪ್ರಸೂತಿ ಮತ್ತು ಸ್ತ್ರೀರೋಗ ಶಾಸ್ತ್ರದ ಡಾ. ಸುಕೀರ್ತಿ ಜೈನ್ ಅವರ ಪ್ರಕಾರ, ಮಹಿಳೆಯರು ಋತುಬಂಧದ ಕೆಲವು ಲಕ್ಷಣಗಳನ್ನು ಸ್ವತಃ ಗುರುತಿಸಬಹುದು. ಆದರೆ ಹಾರ್ಮೋನ್ ವಿಶ್ಲೇಷಣೆಯ ಮೂಲಕ ಋತುಬಂಧದ ಆಕ್ರಮಣವನ್ನು ದೃಢೀಕರಿಸುವುದು ಉತ್ತಮವಾಗಿದೆ.

1. ದಿಢೀರ್ ಬೆವರುವ ಸಮಸ್ಯೆದಿಢೀರ್ ಬೆವರುವ ಸಮಸ್ಯೆ (Sweat problem) ಅನುಭವವನ್ನು ಮಧ್ಯಂತರವಾಗಿ ಅನುಭವಿಸುವುದು ಋತುಬಂಧದ ಸಾಮಾನ್ಯ ಲಕ್ಷಣಗಳಲ್ಲಿ ಒಂದಾಗಿದೆ. ಇವುಗಳು ನಿಮ್ಮ ದೇಹದ ಮೇಲ್ಭಾಗವನ್ನು, ವಿಶೇಷವಾಗಿ ನಿಮ್ಮ ಮುಖ ಮತ್ತು ಕುತ್ತಿಗೆಯನ್ನು ಸಾಮಾನ್ಯಕ್ಕಿಂತ ಹೆಚ್ಚು ಬೆಚ್ಚಗಾಗುವಂತೆ ಮಾಡಬಹುದು. ಕೆಲವೊಮ್ಮೆ, ಅವರು ಅತಿಯಾದ ಬೆವರುವಿಕೆಯೊಂದಿಗೆ ಇರುತ್ತಾರೆ. ಋತುಬಂಧದ ಪರಿಣಾಮವಾಗಿ ಈಸ್ಟ್ರೊಜೆನ್ ಮಟ್ಟವನ್ನು ಕಡಿಮೆ ಮಾಡುವುದರಿಂದ ಮಹಿಳೆಯರಲ್ಲಿ ಈ ರೀತಿಯಾಗುತ್ತದೆ ಎಂದು ತಜ್ಞರು ವಿವರಿಸುತ್ತಾರೆ

2. ಆತಂಕ: ಋತುಬಂಧವು ಮಹಿಳೆಯ ಮಾನಸಿಕ ಆರೋಗ್ಯದ (Mental health) ಮೇಲೂ ಪರಿಣಾಮ ಬೀರಬಹುದು ಎಂದು ತಿಳಿಸುವುದು ಬಹಳ ಮುಖ್ಯ. ಋತುಬಂಧ ಮತ್ತು ಪೆರಿಮೆನೋಪಾಸ್ ಮೂಲಕ ಹೋಗುವ ಅನೇಕ ಮಹಿಳೆಯರು ಆತಂಕವನ್ನು ಅನುಭವಿಸುತ್ತಾರೆ. ರೋಗಿಯ ಸ್ಥಿತಿಯು ತೀವ್ರವಾಗಿದ್ದರೆ, ವೈದ್ಯರು ಅವರಿಗೆ ಔಷಧಿಗಳನ್ನು ಶಿಫಾರಸು ಮಾಡಬಹುದು. ಆದರೆ ನಾವು ಅವರಿಗೆ ಧ್ಯಾನ, ಯೋಗ ಮತ್ತು ವ್ಯಾಯಾಮವನ್ನು (Exercise) ಅಭ್ಯಾಸ ಮಾಡಲು ಸಲಹೆ ನೀಡುತ್ತೇವೆ. ಈ ಅಭ್ಯಾಸಗಳು ನಮ್ಮ ದೇಹಕ್ಕೆ ದೀರ್ಘಕಾಲೀನ ಪ್ರಯೋಜನಗಳನ್ನು ಹೊಂದಿವೆ ಮತ್ತು ಋತುಬಂಧದ ಲಕ್ಷಣಗಳನ್ನು ನಿರ್ವಹಿಸಲು ಸಹಾಯ ಮಾಡುತ್ತದೆ ಎಂದು ತಜ್ಞರು ಹೇಳುತ್ತಾರೆ.

ತಿಂಗಳಿಗೊಮ್ಮೆ ಗಂಡಸರೂ ಮುಟ್ಟಾಗ್ತಾರೆ, ವಿಜ್ಞಾನದಿಂದ ಬಯಲಾಯ್ತು ಶಾಕಿಂಗ್‌ ಸತ್ಯ

3. ಚಡಪಡಿಕೆ: ಚಡಪಡಿಕೆಯು ಋತುಬಂಧದ ಮತ್ತೊಂದು ಸೂಚಕವಾಗಿದೆ. ಇದು ನಿಮ್ಮ ನಿದ್ರೆಯ (Sleep) ವೇಳಾಪಟ್ಟಿಯನ್ನು ತೊಂದರೆಗೊಳಿಸಬಹುದು. ರೋಗಿಗಳು ಸುಲಭವಾಗಿ ನಿದ್ರಿಸಲು ಸಾಧ್ಯವಾಗುವುದಿಲ್ಲ. ಇವೆಲ್ಲವೂ ನಿಮ್ಮ ಸಂತಾನೋತ್ಪತ್ತಿ ಅಂಗಗಳಲ್ಲಿ ಆಗುತ್ತಿರುವ ಬದಲಾವಣೆಗಳ ಲಕ್ಷಣಗಳಾಗಿವೆ. ನಿಮ್ಮನ್ನು ಶಾಂತಗೊಳಿಸಲು ಧ್ಯಾನ ಅಥವಾ ಯೋಗ ನಿದ್ರಾ ಅಭ್ಯಾಸ ಮಾಡಿ ಎಂದು ತಜ್ಞರು ಸಲಹೆ ನೀಡುತ್ತಾರೆ.

4. ಯೋನಿ ಶುಷ್ಕತೆ: ಋತುಬಂಧವನ್ನು ಸಮೀಪಿಸಿದಾಗ, ಯೋನಿಯ (Vagina) ಮೇಲೆ ಇರುವ ಗ್ರಂಥಿಗಳ ಸ್ರವಿಸುವಿಕೆಯು ಕಡಿಮೆಯಾಗುತ್ತದೆ. ಆದ್ದರಿಂದ, ಯೋನಿಯ ನೈಸರ್ಗಿಕ ನಯಗೊಳಿಸುವಿಕೆ ಕಡಿಮೆಯಾಗುತ್ತದೆ.  ಹೀಗಾಗಿ ಸಹಜವಾಗಿಯೇ ಯೋನಿ ಶುಷ್ಕತೆ ಕಂಡು ಬರುತ್ತದೆ. ಇದು ಕೆಲವು ರೋಗಿಗಳಲ್ಲಿ ಯೋನಿ ತುರಿಕೆಗೆ ಕಾರಣವಾಗಬಹುದು. ಮಾತ್ರವಲ್ಲ ಲೈಂಗಿಕ ಜೀವನದ ಮೇಲೆಯೂ ಪರಿಣಾಮ ಬೀರಬಹುದು. 

5. ಮರೆವು: ಮರೆವು ಋತುಬಂಧದ ಚಿಹ್ನೆಗಳಲ್ಲಿ ಒಂದಾಗಿದೆ. ಆದರೆ ಎಲ್ಲರಲ್ಲೂ ಈ ಸಮಸ್ಯೆ ಕಂಡು ಬರುವುದಿಲ್ಲ. ಕೆಲವು ರೋಗಿಗಳು ಮಾತ್ರ ಈ ಸಮಸ್ಯೆಯನ್ನು ಅನುಭವಿಸುತ್ತಾರೆ. ಹೀಗಾಗಿಯೇ ಇದನ್ನು ಮೆನೋಪಾಸ್‌ನ ಮುಖ್ಯ ಲಕ್ಷಣವೆಂದು ಪರಿಗಣಿಸಲಾಗುವುದಿಲ್ಲ. ಮೆನೋಪಾಸ್ ಮೆದುಳಿನಲ್ಲಿ ಕಾರ್ಯನಿರ್ವಹಿಸುವ ಈಸ್ಟ್ರೊಜೆನ್‌ನ ಪ್ರಾಥಮಿಕ ರೂಪವಾದ ಎಸ್ಟ್ರಾಡಿಯೋಲ್‌ನಂತಹ ಅಂಡಾಶಯದ ಹಾರ್ಮೋನುಗಳ ಕಡಿತವನ್ನು ಸೂಚಿಸುತ್ತದೆ ಎಂದು ಸಂಶೋಧನಾ ತಂಡವು ಸೂಚಿಸುತ್ತದೆ.

click me!