Latest Videos

ವಾಶ್‌ರೂಮಿಗೆ ಹೋದ್ರೂ ಕೈ ತೊಳೆಯೋಲ್ಲ, ಟ್ರೋಲ್ ಆಯ್ತು ಈ ಮಹಿಳೆ ವಿಡಿಯೋ

By Roopa HegdeFirst Published May 25, 2024, 11:47 AM IST
Highlights

ಕೊರೊನಾ ನಂತ್ರ ಜನರು ಹ್ಯಾಂಡ್ ವಾಶ್ ಮಾಡೋದು ಹೆಚ್ಚಾಗಿದೆ. ಸಣ್ಣ ವಸ್ತು ಮುಟ್ಟಿದ್ರೂ ಕೈ ವಾಶ್ ಮಾಡುವ ಜನರು ಶೌಚಾಲಯಕ್ಕೆ ಹೋದಾಗ ಕೈ ತೊಳೆದಿಲ್ಲ ಅಂದ್ರೆ ಹೆಂಗೆ? ಇಂಥವರೂ ಇರ್ತಾರಾ ಎಂಬ ನಿಮ್ಮ ಪ್ರಶ್ನೆಗೆ ಉತ್ತರ ಇಲ್ಲಿದೆ.
 

ಶೌಚಾಲಯಕ್ಕೆ ಹೋದ್ಮೇಲೆ ಕೈ ಸೋಪ್ ಹಚ್ಚಿ, ಉಜ್ಜಿ ಉಜ್ಜಿ ತೊಳೆದಿಲ್ಲ ಅಂದ್ರೆ ಸಮಾಧಾನವಿಲ್ಲ. ಮಕ್ಕಳಿಗೆ ಶೌಚಾಲಯ ಬಳಸಿದ ನಂತ್ರ ಕೈ ಕ್ಲೀನ್ ಮಾಡುವಂತೆ ಪಾಲಕರು ಮೊದಲು ಪಾಠ ಹೇಳ್ತಾರೆ. ಯಾರಾದ್ರೂ ಶೌಚಾಲಯಕ್ಕೆ ಹೋಗಿ ಕೈ ವಾಶ್ ಮಾಡ್ದೆ ಬಂದಿಲ್ಲ ಎಂದಾದ್ರೆ ಅಸಹ್ಯವೆನ್ನಿಸುತ್ತದೆ. ಕ್ಲೀನ್ ಮಾಡಿಲ್ಲವೆಂದ್ರೆ ಬ್ಯಾಕ್ಟೀರಿಯಾ ನಮ್ಮ ದೇಹ ಸೇರುವ ಅಪಾಯವಿರುತ್ತದೆ. ಅದೇನೇ ಇರಲಿ, ಸಾಮಾಜಿಕ ಜಾಲತಾಣದಲ್ಲಿ ಈಗ ವೈರಲ್ ಆಗಿರುವ ವಿಡಿಯೋ ಒಂದರಲ್ಲಿ ಮಹಿಳೆ ಅಚ್ಚರಿ ವಿಷ್ಯ ಹೇಳಿದ್ದಾಳೆ. ಆಕೆ ಮಾತು ಕೇಳಿ ಜನರು ವ್ಯಾಕ್ ಎನ್ನುತ್ತಿದ್ದಾರೆ. ಈ ಮಹಿಳೆ ಎಷ್ಟು ಕೊಳಕು ಅಂತ ಕಮೆಂಟ್ ಮಾಡ್ತಿದ್ದಾರೆ.  

ಮಹಿಳೆ, ಮನೆ ಶೌಚಾಲಯ (Toilet) ಬಳಸಿದ ಮೇಲೆ ಕೈ ತೊಳೆಯೋದಿಲ್ಲವಂತೆ. ಟೆನ್ನೆಸ್ಸಿಯ ನ್ಯಾಶ್‌ವಿಲ್ಲೆಯಲ್ಲಿ ವಾಸಿಸುವ ಮಹಿಳೆ ಇತ್ತೀಚೆಗೆ ಸಾಮಾಜಿಕ ಮಾಧ್ಯಮ ಪ್ಲಾಟ್‌ಫಾರ್ಮ್ ಟಿಕ್‌ಟಾಕ್‌ (Tiktok) ನಲ್ಲಿ ಈ ವಿಡಿಯೋ ಹಂಚಿಕೊಂಡಿದ್ದಾಳೆ. ಆಕೆ ಹೆಸರು ಸಮ್ಮರ್ ಈಡೀನ್. ಆಕೆ ಟಿಕ್‌ಟಾಕ್‌ ನ @thesummeredeen ಖಾತೆ ಹೊಂದಿದ್ದಾಳೆ. ಕಾರ್ ನಲ್ಲಿ ಕುಳಿತಿರುವ ಮಹಿಳೆ, ಮೊದಲು ಜನರಿಗೆ ವಿಚಿತ್ರ ಪ್ರಶ್ನೆ ಕೇಳ್ತಾಳೆ. ನೀವು ನಿಮ್ಮ ಮನೆಯ ಶೌಚಾಲಯ ಬಳಸಿದ್ರೂ ಕೈ ತೊಳೆಯುತ್ತೀರಾ ಎಂದು ಸಮ್ಮರ್ ಈಡೀನ್ ಕೇಳ್ತಾಳೆ. ನನ್ನ ಪ್ರಕಾರ ಎಲ್ಲರೂ ಮಾಡೋದಿಲ್ಲ, ತಾನು ಕೈ ತೊಳೆಯೋದಿಲ್ಲ ಎನ್ನುತ್ತಾಳೆ. ಇಷ್ಟೇ ಅಲ್ಲ, ನಮ್ಮ ಮನೆಯಲ್ಲಿ ನಾವ್ಯಾಕೆ ಕೈ ವಾಶ್ ಮಾಡ್ಬೇಕು ಎನ್ನುತ್ತಾಳೆ. ವಿಡಿಯೋ ಮುಂದುವರೆಸ್ತಾ, ಕೆಲವೊಮ್ಮೆ ಬಾತ್ ರೂಮಿನಲ್ಲಿರುವ ನೀರು ಬಿಟ್ಟಿರುತ್ತೇನೆ. ಮನೆಯವರಿಗೆ ನಾನು ಕೈ ತೊಳೆಯುತ್ತಿದ್ದೇನೆ ಎಂಬ ಭ್ರಮೆ ಹುಟ್ಟಿಸಲು ಹೀಗೆ ಮಾಡ್ತೇನೆ ಎಂದೂ ಸಮ್ಮರ್ ಈಡೀನ್ ಹೇಳಿದ್ದಾಳೆ. 

ಎಂಥಾ ಕಾಲ ಬಂತಪ್ಪಾ..ಬಟ್ಟೆ ಮಡಚೋಕು ಬಂತು ಮೆಷಿನ್‌!

ಸಮ್ಮರ್ ಈಡೀನ್ ಈ ವಿಡಿಯೋವನ್ನು ಯುಟ್ಯೂಬರ್ ಒಬ್ಬ ಹಂಚಿಕೊಂಡಿದ್ದಾನೆ. ಕನ್ಫೆಷನ್ಸ್ ಆಫ್ ನಾರ್ಮಲ್ ಪೀಪಲ್ (Confession of Normal People) ನಲ್ಲಿ ಈ ವಿಡಿಯೋವನ್ನು ಕೊಲಾಬರೇಟ್ ಮಾಡಲಾಗಿದೆ. ಸಮ್ಮರ್ ಈಡೀನ್ ವಿಡಿಯೋಕ್ಕೆ ವ್ಯಕ್ತಿ ರಿಯಾಕ್ಷನ್ ನೀಡಿದ್ದಾನೆ. ಮನೆಯಲ್ಲಿ ನೀವು ಆಹಾರ ತಯಾರಿಸ್ತೀರಿ ಅಲ್ವಾ ಎಂದಿದ್ದಾರೆ. ಜೊತೆಗೆ ವಿಚಿತ್ರ ಮುಖಭಾವ ಮಾಡಿ, ವಿಡಿಯೋವನ್ನು ಮತ್ತಷ್ಟು ವೈರಲ್ ಆಗುವಂತೆ ಮಾಡಿದ್ದಾರೆ. ಅವರ ಈ ವಿಡಿಯೋವನ್ನು 42 ಸಾವಿರಕ್ಕೂ ಹೆಚ್ಚು ಮಂದಿ ಲೈಕ್ ಮಾಡಿದ್ದಾರೆ. ಸಾವಿರಾರು ಮಂದಿ ಕಮೆಂಟ್ ಮಾಡಿದ್ದಾರೆ. ಯಾವುದೇ ಕಾರಣಕ್ಕೂ ಇವರ ಮನೆಗೆ ಹೋಗೋದಿಲ್ಲ ಎಂದು ಅನೇಕರು ಹೇಳಿದ್ದಾರೆ. ಮತ್ತೆ ಕೆಲವರು ಅವರು ಮಾಡಿದ ಅಡುಗೆ ತಿನ್ನಲು ಸಾಧ್ಯವೇ ಇಲ್ಲ ಅಂದ್ರೆ ಮತ್ತೊಂದಿಷ್ಟು ಮಂದಿ ಶೇಕ್ ಹ್ಯಾಂಡ್ ಮಾಡೋಕೂ ಕಷ್ಟ ಎಂದಿದ್ದಾರೆ. ಸಮ್ಮರ್ ಈಡೀನ್ ಈ ಶೌಚಾಲಯದ ವಿಡಿಯೋ ಸಾಕಷ್ಟು ಟ್ರೋಲ್ ಆಗಿದೆ. ಸಮ್ಮರ್ ರಿಯಲ್ ಎಸ್ಟೇಟ್ ಏಜೆಂಟ್ ಆಗಿ ಕೆಲಸ ಮಾಡ್ತಿದ್ದಾಳೆ. ಆಕೆ @summeredeen  ಹೆಸರಿನ ಇನ್ಸ್ಟಾಗ್ರಾಮ್ (Instagram) ಖಾತೆಯಲ್ಲಿ ಸಕ್ರಿಯವಾಗಿದ್ದಾಳೆ.

ಪ್ಯಾಂಟ್ ಬಿಚ್ಚಿರುವಾಗಲೇ ಮೇಕಪ್‌ ವ್ಯಾನ್‌ಗೆ ಪರಿಣೀತಿ ಚೋಪ್ರಾ ಬರ್ತಾರೆ; ಹೀಗಂದ್ರಾ ರಣವೀರ್ ಸಿಂಗ್ ?

ಹಿಂದೊಮ್ಮೆ ವೈರಲ್ ಆಗಿತ್ತು ಇಂಥ ವಿಡಿಯೋ : ವರ್ಷದ ಹಿಂದೆ ಸೋಫಿಯಾ ಪ್ಯಾಟರ್ಸನ್ ಹೆಸರಿನ ಮಹಿಳೆ ಕೂಡ ಶೌಚಾಲಯ ಬಳಸಿದ ನಂತ್ರ ಕೈ ತೊಳೆಯೋದಿಲ್ಲ ಎಂದಿದ್ದಳು. ಆಕೆ ಟಿಕ್ ಟಾಕ್ ಸಾಕಷ್ಟು ವೈರಲ್ ಆಗಿತ್ತು. ಕೈ ಸ್ವಚ್ಛಗೊಳಿಸದೆ ಇರಲು ಆಕೆ ವಿಚಿತ್ರ ಕಾರಣವನ್ನು ಹೇಳಿದ್ದಳು. ಶೌಚಾಲಯವನ್ನು ಹೇಗೆ ಬಳಸಬೇಕು, ಕೈಗಳನ್ನು ಹೇಗೆ ಸ್ವಚ್ಛವಾಗಿಟ್ಟುಕೊಳ್ಳಬೇಕು ಎಂಬುದು ನನಗೆ ಗೊತ್ತು. ಹಾಗಾಗಿ ನಾನು ಶೌಚಾಲಯ ಬಳಸಿದ ನಂತ್ರ ಕೈ ವಾಶ್ ಮಾಡೋದಿಲ್ಲ ಎಂದಿದ್ದಳು. ಟ್ರೋಲ್ ಆಗ್ತಿದ್ದಂತೆ ಟ್ರೋಲರ್ ಗಳಿಗೆ ಉತ್ತರ ನೀಡಿದ್ದ ಸೋಫಿಯಾ, ಶೌಚಾಲಯಕ್ಕೆ ಹೋದಾಗ ಮಾತ್ರ ಕೈ ತೊಳೆಯೋದಿಲ್ಲ, ಆದ್ರೆ ಬೇರೆ ಕಾರಣಕ್ಕೆ ನಾನು ನಿತ್ಯ ಅನೇಕ ಬಾರಿ ಕೈ ವಾಶ್ ಮಾಡ್ತೇನೆ ಎಂದಿದ್ದಳು. 
 

click me!