ನಾಲಗೆಗೆ ಕತ್ತರಿ ಎದೆಗೆ ಸರ್ಜರಿ: ಈ ಟ್ಯಾಟೂ ಲೇಡಿ ದೇಹದಲ್ಲಿ ಜಾಗ ಇಲ್ಲ ಖಾಲಿ

By Suvarna News  |  First Published Jul 28, 2022, 4:38 PM IST

ಅಮೆರಿಕಾದ ಮಹಿಳೆಯೊಬ್ಬಳು  ತನ್ನ ಮೈ ತುಂಬಾ ಟ್ಯಾಟೂ ಹಾಕಿಸಿಕೊಂಡು ಈಗ ಜನ ದೆವ್ವ ಅಂತಾರೆ ಎಂದು ಗೋಳು ತೋಡಿಕೊಂಡಿದ್ದಾಳೆ. 


ನ್ಯೂಯಾರ್ಕ್‌: ಕೆಲ ದಿನಗಳ ಹಿಂದೆ ಯುವಕನೋರ್ವ ತನ್ನ ಮೈ ಮೇಲೆ ವಿಚಿತ್ರವಾಗಿ ಟ್ಯಾಟೂ ಹಾಕಿಸಿಕೊಂಡಿದ್ದಲ್ಲದೇ, ಏಲಿಯನ್ ರೀತಿ ಕಾಣಿಸಿಕೊಳ್ಳುವುದಕ್ಕಾಗಿ ಕಿವಿ ಮೂಗುಗಳನ್ನೆಲ್ಲಾ ಕತ್ತರಿಸಿಕೊಂಡಿದ್ದ. ನಂತರ ಆತ ಜನ ನನಗೆ ಈಗ ಕೆಲಸ ಕೊಡುವುದಿಲ್ಲ ಎಂದು ಅಳಲು ತೋಡಿಕೊಂಡಿದ್ದ. ಆ ಘಟನೆ ಮಾಸುವ ಮೊದಲೇ ಈಗ ಯುವತಿಯೊಬ್ಬಳು ತನ್ನ ಮೈ ತುಂಬಾ ಟ್ಯಾಟೂ ಹಾಕಿಸಿಕೊಂಡು ಈಗ ಜನ ದೆವ್ವ ಅಂತಾರೆ ಎಂದು ಗೋಳು ತೋಡಿಕೊಂಡಿದ್ದಾಳೆ. 

ಅಹ್ವಲಾ ಎಂಬಾಕೆಯೇ ಹೀಗೆ ಟ್ಯಾಟೂ ಹಾಕಿಸಿಕೊಂಡು ಅಳಲು ತೋಡಿಕೊಳ್ಳುತ್ತಿರುವ ಯುವತಿ. 34 ವರ್ಷದ ಈಕೆ  2009ರಲ್ಲಿ ಮೊದಲ ಬಾರಿಗೆ ತನ್ನ ದೇಹಕ್ಕೆ ಮೊದಲ ಬಾರಿಗೆ ಟ್ಯಾಟೂ ಹಾಕಿಸಿಕೊಂಡಿದ್ದಾಳೆ. ಇದಾದ ನಂತರ ಇಡೀ ದೇಹಕ್ಕೆ ಒಂದೊಂದೇ ಟ್ಯಾಟೂವನ್ನು ಹಾಕಿಸಿಕೊಂಡಿದ್ದು, ಇಡೀ ದೇಹವನ್ನು ಟ್ಯಾಟೂವಿಂದ ಭರ್ತಿ ಮಾಡಿದ್ದಾಳೆ. ಬರೀ ಇಷ್ಟೇ ಆಗಿದ್ದರೆ ಪರವಾಗಿರಲಿಲ್ಲ. ತನ್ನ ನಾಲಗೆಗೆ ಕೂಡ ಕತ್ತರಿ ಹಾಕಿಸಿಕೊಂಡಿರುವ ಅಕೆ ಎದೆ ಹಾಗೂ ಕೈಗಳ ಭಾಗಕ್ಕೆ ಇಂಪ್ಲಾಂಟ್ (ಕಸಿ) ಮಾಡಿಸಿಕೊಂಡಿದ್ದಾರೆ. 

Tap to resize

Latest Videos

ಮುಸ್ಲಿಂ ಹುಡುಗನ ಎದೆಯ ಮೇಲೆ ಯೋಗಿ ಆದಿತ್ಯನಾಥ್ ಟ್ಯಾಟೂ!

ಜನರು ಆಕೆಗೆ ಈ ಹಿಂದೆ ಆಕೆಯ ದೇಹ ಬಗ್ಗೆ ಅವಮಾನ ಮಾಡಿ ಕಿರುಕುಳ ನೀಡಿದ್ದರಂತೆ ಆದರೆ ಆಕೆ ಅದ್ಯಾವುದನ್ನು ತಲೆಗೆ ಹಾಕಿಕೊಳ್ಳದೇ ತನ್ನ ಚರ್ಮದ ಬಗ್ಗೆ ಆಕೆ ಸಂತೋಷವಾಗಿದ್ದಳಂತೆ. ತನ್ನ ಲುಕ್ ಬಗ್ಗೆ ಆತ್ಮವಿಶ್ವಾಸದಿಂದ ಇರುವುದಾಗಿ ಆಕೆ ಹೇಳಿಕೊಂಡಿದ್ದಾಳೆ. ಅಲ್ಲದೇ ತಾನು ಇರುವ ರೀತಿ ಬಗ್ಗೆ ನನಗೆ ಇಷ್ಟ ಇರುವುದಾಗಿ ಆಕೆ ಹೇಳಿಕೊಂಡಿದ್ದಾಳೆ. ಆದರೆ ಕೆಲವು ಜನರು ನಾನು ಇರುವ ರೀತಿಯನ್ನು ಇಷ್ಟಪಡುವುದಿಲ್ಲ. ಮತ್ತೆ ಇನ್ನು ಕೆಲವರು ನನ್ನನ್ನು ದೆವ್ವ ಎಂದು ಕರೆಯುತ್ತಾರೆ ಎಂದು ಅವಳು ಅಳಲು ತೋಡಿಕೊಂಡಿದ್ದಾಳೆ. 

ಆದಾಗ್ಯೂ ಕೆಲವರು ತನ್ನ ವಿಭಿನ್ನತೆಯನ್ನು ಸ್ವೀಕರಿಸುತ್ತಾರೆ. ಒಂದು ಪುಟ್ಟ ಮಗು ತನ್ನನ್ನು ಸೂಪರ್ ಹೀರೋ ಎಂದು ಕರೆದಿರುವುದಾಗಿ ಯುವತಿ ಹೇಳಿಕೊಂಡಿದ್ದಾಳೆ. ಅನೇಕ ಸಲ ನನ್ನ ಈ ಅವತಾರಕ್ಕೆ ನನಗೆ ಜನ ಮೆಚ್ಚಗೆ ಸೂಚಿಸಿದ್ದಾರೆ. ಒಂದು ಮಗು ನನ್ನನ್ನು ನೋಡಿ ನಾನೂ ಸೂಪರ್ ಹೀರೋ ಆಗಬಹುದೇ ಎಂದು ಅದರ ತಾಯಿಯನ್ನು ಕೇಳಿತ್ತು ಎಂದು ಅಹ್ವಲಾ ಹೇಳಿಕೊಂಡಿದ್ದಾಳೆ.  

ಕೈಕೊಟ್ಟ ಗರ್ಲ್‌ಫ್ರೆಂಡ್‌ನ ಕಿಡ್ನಾಪ್‌ ಮಾಡ್ದ : ಮುಖದ ಮೇಲೆ ತನ್ನ ಹೆಸರನ್ನೇ ಟ್ಯಾಟೂ ಹಾಕ್ಸಿದ

ಅಮೆರಿಕಾ ಮೂಲದ ಯುವತಿ ಅಹ್ವಲಾಳ ಮೊದಲ ಟ್ಯಾಟೂ ಆಕೆಯ ಸಂಗಾತಿಯೊಂದಿಗೆ ಮ್ಯಾಚ್ ಆಗುವಂತೆ ಹಾಕಿದ್ದಾಗಿತ್ತು. ಆದರೆ ಅವರು ನಂತರದಲ್ಲಿ ಅದನ್ನು ಬೇರೆ ಟ್ಯಾಟೂಗಳೊಂದಿಗೆ ಮುಚ್ಚಿದರು ಎಂದು ಅಹ್ವಲಾ ಹೇಳಿಕೊಂಡಿದ್ದಾಳೆ. 2014 ರಲ್ಲಿ ನಾನು ನನ್ನ ನಾಲಗೆಯನ್ನು ಸೀಳಿಕೊಂಡೆ. ಪಾದಗಳ ಕೆಳಗೂ ನಾನು ಟ್ಯಾಟೂ ಹಾಕಿಸಿಕೊಂಡಿದ್ದೇನೆ. ಹೀಗಾಗಿ ನನ್ನ ದೇಹದಲ್ಲಿ ಕೇವಲ ಸಣ್ಣ ಜಾಗಗಳಷ್ಟೇ ಟ್ಯಾಟೂ ಇಲ್ಲದೇ ಖಾಲಿ ಉಳಿದಿದೆ ಎಂದು ಆಕೆ ಹೇಳುತ್ತಾಳೆ. ತನ್ನ ದೇಹಕ್ಕೂ ಕಸಿ ಮಾಡಿಕೊಂಡಿರುವ ಈಕೆ ಒಟ್ಟು ದೇಹದಲ್ಲಿ ಎರಡು ಹಂತಗಳಲ್ಲಿ ಎಂಟು ಅಂಗಾಂಗಳನ್ನು ಕಸಿ ಮಾಡಿಕೊಂಡಿರುವುದಾಗಿ ಆಕೆ ಹೇಳಿಕೊಂಡಿದ್ದಾಳೆ. ಅಲ್ಲದೇ ಅವುಗಳ ಗಾಯ ವಾಸಿಯಾಗಲು ಹಲವು ವಾರಗಳು ಬೇಕಾದವು ಎಂದು ಮಹಿಳೆ ಹೇಳಿಕೊಂಡಿದ್ದಾಳೆ.
 

click me!