ವೈವಾಹಿಕ ಜೀವನ ಚೆನ್ನಾಗಿರಬೇಕು ಎನ್ನುವುದು ಎಲ್ಲರ ಆಸೆ. ಅದಕ್ಕೆ ನಮ್ಮ ಕೊಡುಗೆಯೂ ಬೇಕಾಗುತ್ತದೆ. ಮದುವೆ ಎಂದರೆ ಟೇಕನ್ ಫಾರ್ ಗ್ರಾಂಟೆಡ್ ಸಂಬಂಧವಲ್ಲ. ಹೀಗಾಗಿ, ಮದುವೆಗೂ ಮುನ್ನವೇ ಕೆಲವು ವಿಚಾರಗಳನ್ನು ತಿಳಿದುಕೊಂಡಿರಿ. ಅದರಂತೆ ನಡೆದುಕೊಂಡರೆ ನಿಮ್ಮ ಸಂಬಂಧ ದೀರ್ಘಕಾಲ ಬಾಳುವುದು ಗ್ಯಾರೆಂಟಿ.
ಮದುವೆ ಎನ್ನುವುದು ಜೀವನದ ಬಹುಮುಖ್ಯ ಹಂತ. ಮುಂದಿನ ಜೀವನವನ್ನು ಮತ್ತೊಬ್ಬರ ಜತೆಗೆ ಹಂಚಿಕೊಳ್ಳುವ, ಎದುರಿಸುವ, ಬದುಕುವ ಅನಿವಾರ್ಯತೆಯನ್ನು ಸೃಷ್ಟಿಸುವ ಸಮಯ. ಹೀಗಾಗಿ, ಇಂದಿನ ಯುವಜನಾಂಗ ಮದುವೆಯನ್ನು ಅತ್ಯಂತ ಕ್ಲಿಷ್ಟಕರ ಸಂಬಂಧವನ್ನಾಗಿ ಪರಿಗಣಿಸಿದೆ. ಹೀಗಾಗಿ, ಮದುವೆಗೂ ಮುನ್ನವೇ ಪರಸ್ಪರ ಇಷ್ಟಾನಿಷ್ಟ, ದೌರ್ಬಲ್ಯಗಳನ್ನು ಅರಿತುಕೊಳ್ಳುವುದು, ಆರ್ಥಿಕ ಸ್ಥಿತಿಗತಿ, ಯೋಚನಾ ವಿಧಾನ ಎಲ್ಲವನ್ನೂ ತಿಳಿದುಕೊಂಡೇ ಮುಂದೆ ಸಾಗಲು ಯತ್ನಿಸುತ್ತಾರೆ. ನಮ್ಮ ಭಾರತೀಯ ಸಮಾಜದಲ್ಲಿ ಮದುವೆ ಎನ್ನುವುದು ಹುಡುಗಿಯರಿಗೆ ಇನ್ನೂ ಹೆಚ್ಚಿನ ಸವಾಲು ಒಡ್ಡುತ್ತದೆ. ಏಕೆಂದರೆ, ಕೆಲವೇ ಸಮುದಾಯಗಳನ್ನು ಹೊರತುಪಡಿಸಿ ಉಳಿದ ಸಮಾಜಗಳಲ್ಲಿ ಮದುವೆ ಬಳಿಕ ಹುಡುಗಿಯೇ ಹುಡುಗನ ಮನೆಗೆ ಹೋಗುತ್ತಾಳೆ. ಹೀಗಾಗಿ, ಅವಳಿಗೆ ಎದುರಾಗುವ ಸವಾಲು ಹೆಚ್ಚು. ಮದುವೆಗೂ ಮುನ್ನ ಕೆಲವು ಅಂಶಗಳ ಬಗ್ಗೆ ಗಮನ ನೀಡಿದರೆ ಮದುವೆ ನಂತರ ಹೆಚ್ಚು ಅನುಕೂಲವಾಗುತ್ತದೆ. ಪ್ರತಿ ಯುವತಿಯೂ ಮದುವೆಯ ಬಗ್ಗೆ, ಪತಿಯಾಗುವವರ ಬಗ್ಗೆ ಒಂದಿಷ್ಟು ಕನಸುಗಳನ್ನು ಕಾಣುತ್ತಾಳೆ. ಅವು ಸಾಕಾರಗೊಳ್ಳಲೆಂದು ಪ್ರಾರ್ಥಿಸುತ್ತಾಳೆ. ಆದರೆ, ಪ್ರಾರ್ಥಿಸುವ ಬದಲು ವಾಸ್ತವದ ನೆಲೆಗಟ್ಟಿನಲ್ಲಿ ಕೆಲವು ವಿಚಾರಗಳನ್ನು ಅರಿತುಕೊಳ್ಳಲು ಯತ್ನಿಸಬೇಕು. ನೀವು ಸಹ ಮದುವೆಗೆ ಸಿದ್ಧವಾಗಿದ್ದರೆ, ಈ ವಿಚಾರಗಳನ್ನು ಅರಿತುಕೊಳ್ಳಿ.
• ಸಮಸ್ಯೆ ಇದ್ದರೆ ಬಗೆಹರಿಸಿಕೊಳ್ಳಿ
ಒಂದೊಮ್ಮೆ ನಿಮಗೆ ಏನಾದರೂ ಸಮಸ್ಯೆ (Problem), ಗೊಂದಲ ಇದೆ ಎಂದಾದರೆ ಭಾವಿ ಪತಿಯಲ್ಲಿ (Fiance) ಮುಕ್ತವಾಗಿ ಮಾತನಾಡಿ. ಯಾವುದೇ ಗೊಂದಲ(Confusion)ವನ್ನು ಕ್ಲಿಯರ್ ಮಾಡಿಕೊಳ್ಳುವುದು ಉತ್ತಮ. ಕೆಲವು ವಿಚಾರಗಳ ಬಗ್ಗೆ ಸ್ಪಷ್ಟವಾಗಿ ಮಾತನಾಡದೆ ಹೋದರೆ ಮದುವೆಯ (Marriage) ಬಳಿಕ ಇನ್ನಷ್ಟು ಮುಜುಗರವಾಗುತ್ತದೆ. ಆಗ ನಿಮ್ಮಲ್ಲಿ ಸ್ಪಷ್ಟತೆ ಇಲ್ಲದೆ ಸಮಸ್ಯೆ ಶುರುವಾಗಬಹುದು.
• ಮಕ್ಕಳ (Children) ಜತೆಗೆ ಪತಿಯ (Husband) ಬಗ್ಗೆಯೂ ಗಮನವಿರಲಿ
ಬಹಳಷ್ಟು ಯುವತಿಯರು ಮದುವೆಯಾದ ಬಳಿಕ ಪತಿಗೆ ಸಾಕಷ್ಟು ಆದ್ಯತೆ ನೀಡುತ್ತಾರೆ. ಮಕ್ಕಳಾಯಿತು ಎಂದರೆ ಪತಿಯನ್ನು ಸಂಪೂರ್ಣವಾಗಿ ನಿರ್ಲಕ್ಷಿಸುತ್ತಾರೆ ಅಥವಾ ಕೇವಲ ಮಕ್ಕಳ ಬಗೆಗೊಂದೇ ಗಮನ ನೀಡುತ್ತಾರೆ. ಇದು ಸಲ್ಲದು ಎನ್ನುವ ವಿಚಾರ ಇಂದೇ ಅರಿತುಕೊಳ್ಳಿ. ಉತ್ತಮ ಬಾಂಧವ್ಯಕ್ಕೆ ಇಬ್ಬರೂ ಸಮಾನ ಪ್ರೀತಿ-ಗೌರವ (Love and Respect) ಹೊಂದಿರುವುದು ಮುಖ್ಯ.
ವೈವಾಹಿಕ ಜೀವನ ಕಷ್ಟ ಎನಿಸೋದು ಏಕೆ?
• ಸೋಲು-ಗೆಲುವಿನ (Lose-Win) ಭಾವನೆ ದೂರವಿಡಿ
ಮದುವೆಯ ಬಳಿಕ ದಂಪತಿಯ ನಡುವೆ ಸೋಲು-ಗೆಲುವಿನ ಭಾವನೆ ಬರಬಾರದು. ಇದನ್ನು ಅವರ ಬಳಿ ಮಾತಾಡಿಕೊಳ್ಳಬಹುದು. ದಂಪತಿ (Couple) ಮಧ್ಯೆ ಜಗಳ, ವಾಗ್ವಾದ ಸಾಮಾನ್ಯ. ಆದರೆ, ಅಲ್ಲಿ ಸೋಲು-ಗೆಲುವಿನ ವಿಚಾರ ಬಂದರೆ ಇಗೋ ಆರಂಭವಾಗುತ್ತದೆ. ಇದು ಸಂಬಂಧವನ್ನು ಹಾಳುಗೆಡವುತ್ತದೆ.
• ಮಕ್ಕಳಾದ ಬಳಿಕವೂ ಡೇಟ್ (Date) ಮಾಡಿ
ಮಕ್ಕಳಾದ ಮಾತ್ರಕ್ಕೆ ದಂಪತಿ ನಡುವೆ ರೋಮ್ಯಾಂಟಿಕ್ (Romantic) ಬದುಕು ಮುಗಿದುಹೋಗುವುದಿಲ್ಲ. ಅನುಕೂಲವಾದರೆ ಮಕ್ಕಳನ್ನು ಹಿರಿಯರ ಬಳಿ ಬಿಟ್ಟು ಒಂದೆರಡು ದಿನಗಳ ಕಾಲ ಎಲ್ಲಾದರೂ ಹೋಗಿಬರುವುದು ಸಂಬಂಧದ ದೃಷ್ಟಿಯಿಂದ ಉತ್ತಮ. ಕನಿಷ್ಠ ರಾತ್ರಿಯ ಊಟಕ್ಕೆ ಹೊರಗೆ ಹೋಗಬಹುದು. ಒಂದು ಹಗಲು ಸಮಯವನ್ನಾದರೂ ಪರಸ್ಪರ ಮೀಸಲಿಡಬಹುದು.
• ಪರಸ್ಪರ ಅಂತರ (Space) ಇರಲಿ!
ದಂಪತಿ ನಡುವೆ ಪರಸ್ಪರ ಅಂತರ ಇರುವುದು ಅಗತ್ಯ. ಒಬ್ಬರ ಸ್ವಾತಂತ್ರ್ಯಹರಣವಾಗದಂತೆ ಇರುವುದರಿಂದ ಸಂಬಂಧ ಸುಮಧುರವಾಗುತ್ತದೆ. ಪತಿಯ ಎಲ್ಲ ವಿಚಾರಗಳಲ್ಲೂ ಮೂಗು ತೂರಿಸುವುದು, ಪತ್ನಿ ತಾನು ಹೇಳಿದಂತೆಯೇ ಕೇಳಬೇಕು ಎನ್ನುವ ಹಠದ ಧೋರಣೆ ಬೇಡ. ಪತಿ ಯಾವಾಗಲಾದರೊಮ್ಮೆ ಸ್ನೇಹಿತರ ಜತೆಗೆ ಹೋಗುವುದಕ್ಕೆ, ಪತ್ನಿ ಯಾವಾಗಲಾದರೂ ತನ್ನ ಬಳಗದೊಂದಿಗೆ ಔಟಿಂಗ್ ಹೋಗುವುದಕ್ಕೆ ನಿರ್ಬಂಧ ಇರಬಾರದು. ಸಂಬಂಧದಲ್ಲಿ ನಿರ್ಬಂಧ (Restriction) ಹೆಚ್ಚಾದಷ್ಟೂ ಅಪನಂಬಿಕೆ ಹೆಚ್ಚುತ್ತದೆ, ಇದು ದೀರ್ಘಕಾಲದ ಬಾಂಧವ್ಯಕ್ಕೆ ಉತ್ತಮವಲ್ಲ.
ಮದುವೆ ಜೀವನ ಚೆನ್ನಾಗಿರಬೇಕೆಂದರೆ ಹೀಗ್ ಮಾಡಿ
• ಪ್ರತಿದಿನವೂ ಹೊಸ ದಿನ (New Day)
ದಂಪತಿ ಪ್ರತಿದಿನವೂ ಗುಡ್ ಮಾರ್ನಿಂಗ್, ಗುಡ್ ನೈಟ್ ವಿಶ್ (Wish) ಹೇಳಿಕೊಳ್ಳುವುದನ್ನು ಅಭ್ಯಾಸ ಮಾಡಿಕೊಳ್ಳಬೇಕು. ಇದರಿಂದ ಯಾವುದಾದರೂ ಅಸಮಾಧಾನವಿದ್ದರೆ ದೂರವಾಗುತ್ತದೆ. ಪರಸ್ಪರ ಮುಖ ನೋಡದೆ ಮಾತನಾಡುವುದಕ್ಕಿಂತ ಮುಖ, ಕಣ್ಣುಗಳನ್ನು ನೋಡಿ ಮಾತನಾಡಿಕೊಳ್ಳಬೇಕು.