ತಾಯಿ ಎದೆಹಾಲಿನಿಂದ ಸೌಂದರ್ಯವರ್ಧಕ ಸೋಪು: ಹಲವು ಚರ್ಮದ ಸಮಸ್ಯೆಗಳಿಗೆ ಮದ್ದು!

ಎದೆ ಹಾಲಿನಿಂದ ಸೋಪು ತಯಾರಿಸುವುದು ಎಂದರೆ ನಿಜಕ್ಕೂ ಅಚ್ಚರಿಯಾಗದೇ ಇರಲ್ಲ, ಇಲ್ಲೊಬ್ಬಳು ಮಹಿಳೆ ತಾನು ಅವಧಿ ಮುಗಿದ ತಾಯಿ ಎದೆಹಾಲಿನಿಂದ ಸೋಪನ್ನು ತಯಾರಿಸುತ್ತಿರುವುದಾಗಿ ಹೇಳಿಕೊಂಡಿದ್ದು, ಆಕೆಯ ಮಾತು ಈಗ ಸಾಕಷ್ಟು ಸಂಚಲನ ಸೃಷ್ಟಿಸಿದೆ.


ನೀವು ಕತ್ತೆ ಹಾಲಿನಿಂದ ಸೋಪು ತಯಾರಿಸುವುದನ್ನು ಹಾಗೂ ಹಲವು ಸೌಂದರ್ಯವರ್ಧಕಗಳನ್ನು ತಯಾರಿಸುವುದನ್ನು ಕೇಳಿರುತ್ತೀರಿ. ಕತ್ತೆ ಹಾಲು ಮಾತ್ರವಲ್ಲದೇ ಒಂಟೆ ಮೇಕೆ ಹಸುಗಳ ಹಾಲಿನಿಂದ ಹಲವು ರೀತಿಯ ಹಾಲಿನ ಉತ್ಪನ್ನಗಳನ್ನು ಸಿದ್ಧಪಡಿಸುತ್ತಾರೆ ಅದನ್ನು ನೀವು ಬಳಕೆ  ಮಾಡಿಯೂ ಇರಬಹುದು. ಆದರೆ ತಾಯಿ(ಮನುಷ್ಯರ) ಎದೆಹಾಲಿನಿಂದ ಸೋಪು ತಯಾರಿಸುವುದು ಎಂದರೆ ನಿಜಕ್ಕೂ ಅಚ್ಚರಿಯಾಗದೇ ಇರಲ್ಲ, ಇಲ್ಲೊಬ್ಬಳು ಮಹಿಳೆ ತಾನು ಅವಧಿ ಮುಗಿದ ತಾಯಿ ಎದೆಹಾಲಿನಿಂದ ಸೋಪನ್ನು ತಯಾರಿಸುತ್ತಿರುವುದಾಗಿ ಹೇಳಿಕೊಂಡಿದ್ದು, ಆಕೆಯ ಮಾತು ಈಗ ಸಾಕಷ್ಟು ಸಂಚಲನ ಸೃಷ್ಟಿಸಿದೆ.

ಇತ್ತೀಚೆಗೆ ತಾಯಿ ಎದೆಹಾಲನ್ನು ಪಂಪ್ ಮಾಡಿ ಮಕ್ಕಳಿಗೆ ಕುಡಿಸುವುದು ಸಾಮಾನ್ಯ ಎನಿಸಿದೆ. ಅನೇಕ ಉದ್ಯೋಗಸ್ಥ ಮಹಿಳೆಯರು ತಾಯ್ತನದ ರಜೆ ಮುಗಿದ ಕೂಡಲೇ ಮಗುವನ್ನು ಬಿಟ್ಟು ಉದ್ಯೋಗಕ್ಕೆ ಹೋಗಬೇಕಾದ ಅನಿವಾರ್ಯತೆ ಇರುವುದರಿಂದ ತಮ್ಮ ಎದೆಹಾಲನ್ನು ಪಂಪ್ ಮಾಡಿ ಫ್ರಿಡ್ಜ್‌ಗಳಲ್ಲಿ ಶೇಖರಿಸಿ ಬಳಿಕ ಮಗುವಿಗೆ ನೀಡುತ್ತಾರೆ.ಮನೆಯಲ್ಲಿರುವ ಮಗುವಿನ ಪೋಷಣೆ ಮಾಡುವವರು ಈ ಹಾಲನ್ನು ನಂತರದಲ್ಲಿ ಮಗುವಿಗೆ ನೀಡುತ್ತಾರೆ. ಹಾಗೆಯೇ ವಿದೇಶಗಳಲ್ಲಿ ಎದೆಹಾಲಿನ ಬ್ಯಾಂಕ್‌ಗಳೇ ಇದ್ದು, ಹಾಲು ಹೆಚ್ಚಿರುವ ತಾಯಂದಿರು ತಮ್ಮ ಎದೆಹಾಲನ್ನು ಹಾಲಿನ ಬ್ಯಾಂಕ್ ಮೂಲಕ ಎದೆಹಾಲು ಸಿಗದ ಅಥವಾ ತಾಯಿ ಇಲ್ಲದ ಮಕ್ಕಳಿಗೆ ನೀಡುತ್ತಾರೆ. ಹೀಗಿರುವಾಗ ವಿದೇಶಗಳಲ್ಲಿ ಅದರಲ್ಲೂ ಮುಂದುವರೆದ ರಾಷ್ಟ್ರಗಳಲ್ಲಿ ಎದೆಹಾಲನ್ನು ಶೇಖರಿಸಿರುವುದು ಸಾಮಾನ್ಯವಾಗಿದೆ. ಆದರೆ ಈ ಎದೆಹಾಲನ್ನು ಬಳಸುವುದಕ್ಕೆ ಬೇರೆ ವಸ್ತುಗಳಿಗೆ ಇರುವಂತೆಯೇ ಇಂತಿಷ್ಟೇ ಅವಧಿ ಎಂಬುದು ಇರುತ್ತದೆ. ಆ ಅವಧಿ ಮೀರಿದ ನಂತರ ಆ ಹಾಲನ್ನು ಬಳಸಲು ಆಗದು. ಇಂತಹ ಅವಧಿ ಮೀರಿದ ಹಾಲನ್ನು ಬಳಸಿ ತಾನು ಸ್ನಾನದ ಸೋಪನ್ನು ತಯಾರಿಸುತ್ತಿರುವುದಾಗಿ ಮಹಿಳೆಯೊಬ್ಬರು ಹೇಳಿದ್ದಾರೆ.

ಬರುತ್ತಿದೆ ಎದೆ ಹಾಲು ಫ್ಲೇವರ್ ಐಸ್‌ಕ್ರೀಮ್, ಹಲವರಲ್ಲಿ ಹೆಚ್ಚಾದ ಕುತೂಹಲ ಪ್ರಶ್ನೆ

Latest Videos

ಅವರು ತಮ್ಮ ಇನ್ಸ್ಟಾಗ್ರಾಮ್‌ನಲ್ಲಿ ಈ ಬಗ್ಗೆ ವಿವರಿಸಿದ್ದಾರೆ. ಎದೆಹಾಲಿನಿಂದ ಸ್ನಾನದ ಸೋಪು ಹಾಗೂ ಇತರ ನೈಸರ್ಗಿಕ ಸೋಪಿನ ಉತ್ಪನ್ನ ತಯಾರಿಸಿ ಮಾರಾಟ ಮಾಡುತ್ತಿರುವ ಮಹಿಳೆಯ ಹೆಸರು ಟೇಲರ್ ರಾಬಿನ್ಸನ್‌. ಅವರು ಲಿಯೋ ಜೂಡ್ ಹೆಸರಿನ ಸೋಪ್ ಕಂಪನಿಯನ್ನು ಹೊಂದಿದ್ದು, ಅವಧಿ ಮೀರಿದ ಎದೆಹಾಲಿನಿಂದ ತಾವು ವಿವಿಧ ಉತ್ಪನ್ನಗಳನ್ನು ತಯಾರಿಸುತ್ತಿರುವುದಾಗಿ ಹೇಳಿಕೊಂಡಿದ್ದಾರೆ. ಇಂತಹ ಹಾಲನ್ನು ಬಳಸಿ ಸೋಪುಗಳು ಮತ್ತು ನೈಸರ್ಗಿಕ ಸ್ನಾನದ ಉತ್ಪನ್ನಗಳನ್ನು ಮಾರಾಟ ಮಾಡುತ್ತಿರುವುದಾಗಿ ಅವರು ಹೇಳಿದ್ದಾರೆ. 

ತಾಯಿಯ ಹಾಲನ್ನು ನವಜಾತ ಶಿಶುಗಳಿಗೆ ನೀಡುವ ಅತ್ಯುತ್ತಮ ಆಹಾರವೆಂದು ಪರಿಗಣಿಸಲಾಗುತ್ತದೆ. ಇದರಿಂದ ಎಕ್ಸಿಮಾ, ಸೋರಿಯಾಸಿಸ್, ಕ್ರಾಡಲ್ ಕ್ಯಾಪ್ಸ್‌ನಂತಹ ಚರ್ಮದ ಸಮಸ್ಯೆಗಳನ್ನು ತಡೆಯುವ ಉತ್ಪನ್ನಗಳನ್ನು ತಯಾರಿಸುತ್ತಿದ್ದೇನೆ ಎಂದು ಟೇಲರ್ ರಾಬಿನ್ಸನ್ ಹೇಳಿದ್ದಾರೆ. ಇನ್‌ಸ್ಟಾಗ್ರಾಮ್‌ನಲ್ಲಿ ವೈರಲ್ ಆಗಿರುವ ಅವರ ವೀಡಿಯೋದಲ್ಲಿ ತಾಯಿಯ ಎದೆಹಾಲು ಹೇಗೆ ವಿವಿಧ ಉತ್ಪನ್ನಗಳಾಗಿ ಬದಲಾಗುತ್ತದೆ ಎಂಬುದನ್ನು ಸಹ ವಿಡಿಯೋದಲ್ಲಿ ತೋರಿಸಲಾಗಿದೆ.

ಬರೋಬ್ಬರಿ 2,600 ಲೀಟರ್ ಎದೆಹಾಲು ದಾನದಿಂದ ಗಿನ್ನೆಸ್ ದಾಖಲೆ ಮಾಡಿದ ಮಹಿಳೆ

ತನ್ನ ಉತ್ಪನ್ನಗಳು ಚರ್ಮದ ಸಮಸ್ಯೆಗಳನ್ನು ಪರಿಹರಿಸಲು ಸಹಾಯ ಮಾಡುತ್ತವೆ. ಜನರು ಅವಧಿ ಮೀರಿದ ಹಾಲನ್ನು ತಮಗೆ ಕಳುಹಿಸುತ್ತಾರೆ. ಅದರಿಂದ ಸೋಪುಗಳನ್ನು ತಯಾರಿಸುತ್ತೇವೆ. ಇದು ಹಾಲಿನ ಅತ್ಯುತ್ತಮ ಮರುಬಳಕೆಯಾಗಿದೆ. ತಾಯಿಯ ಹಾಲಿನಿಂದ ಸಿಗುವ ಗುಣಗಳು ತನ್ನ ಉತ್ಪನ್ನಗಳಲ್ಲಿ ಸಿಗುತ್ತವೆ ಎಂದು ಟೇಲರ್ ಹೇಳುತ್ತಾರೆ. 

ಇದನ್ನು ನೋಡಿದಾಗ ಕೆಲವರಿಗೆ ಅಸಹ್ಯ ಮತ್ತು ವಾಕರಿಕೆ ಬರುತ್ತದೆ. ಆದರೆ, ಇನ್ನು ಕೆಲವರಿಗೆ ಆಶ್ಚರ್ಯ ಮತ್ತು ವಿಸ್ಮಯವಾಗುತ್ತದೆ ಎಂದು ಟೇಲರ್ ಹೇಳಿದ್ದಾರೆ. ಟೇಲರ್ ಅವರು ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡಿರುವ ಈ ವಿಡಿಯೋಗೆ ಅನೇಕರು ಕಾಮೆಂಟ್ ಮಾಡಿದ್ದಾರೆ. ಕೆಲವರಿಗೆ ಇದನ್ನು ಒಪ್ಪಿಕೊಳ್ಳಲು ಸಾಧ್ಯವಾಗದಿದ್ದರೆ, ಇನ್ನು ಕೆಲವರು ಇದರಲ್ಲಿ ತಪ್ಪೇನಿದೆ ಎಂದು ಕೇಳುತ್ತಿದ್ದಾರೆ.

 
 
 
 
 
 
 
 
 
 
 
 
 
 
 

A post shared by 60 Second Docs (@60secdocs)

 

tags
click me!