ಉದ್ದ ಕೂದಲು ಭಾರತೀಯ ಸಂಪ್ರದಾಯ: 7 ಅಡಿ 9 ಇಂಚು ಕೂದಲು ಬಿಟ್ಟು ಗಿನ್ನೆಸ್ ದಾಖಲೆ ಪಡೆದ ಯುಪಿ ಮಹಿಳೆ

By BK Ashwin  |  First Published Nov 30, 2023, 5:52 PM IST

ನಾನು ಎಂದಿಗೂ ನನ್ನ ಕೂದಲನ್ನು ಕತ್ತರಿಸುವುದಿಲ್ಲ. ಏಕೆಂದರೆ ನನ್ನ ಕೂದಲಿನಲ್ಲಿ ನನ್ನ ಜೀವವಿದೆ ಎಂದು ಹೇಳಿಕೊಂಡಿದ್ದಾರೆ ಗಿನ್ನೆಸ್‌ ದಾಖಲೆ ಪಡೆದ ಮಹಿಳೆ. 


ನವದೆಹಲಿ (ನವೆಂಬರ್ 30, 2023): ಭಾರತೀಯ ಮಹಿಳೆಯೊಬ್ಬರು ತಮ್ಮ ಅಸಾಧಾರಣ ಉದ್ದ ಮತ್ತು ಸೊಂಪಾದ ಕೂದಲಿನೊಂದಿಗೆ ಸುದ್ದಿ ಮಾಡುತ್ತಿದ್ದಾರೆ. 46 ವರ್ಷದ ಉತ್ತರ ಪ್ರದೇಶ ಮೂಲದ ಸ್ಮಿತಾ ಶ್ರೀವಾಸ್ತವ್ ಜೀವಂತ ವ್ಯಕ್ತಿ ಹೊಂದಿರುವ ಉದ್ದನೆಯ ಕೂದಲಿಗಾಗಿ ಗಿನ್ನೆಸ್ ವಿಶ್ವ ದಾಖಲೆಯ ಪ್ರಶಸ್ತಿಯನ್ನು ಪಡೆದಿದ್ದಾರೆ.

ಸ್ಮಿತಾ ಶ್ರೀವಾಸ್ತವ್ 7 ಅಡಿ ಮತ್ತು 9 ಇಂಚು ಉದ್ದದ ಕೂದಲು ಹೊಂದಿದ್ದಾರೆ. ಆಕೆ ಚಿಕ್ಕ ಹುಡುಗಿಯಾಗಿದ್ದಾಗ ಕೂದಲಿನೊಂದಿಗೆ ತನ್ನ ಪ್ರೇಮವನ್ನುಪ್ರಾರಂಭಿಸಿದ್ದು, ತನ್ನ ಕೂದಲನ್ನು ಕತ್ತರಿಸದೆ ಹಾಗೆ ಬಿಟ್ಟಿದ್ದಾರೆ. ತನ್ನ ಕೂದಲನ್ನು ಕತ್ತರಿಸದೆ ಬೆಳೆಸಲು ಆರಂಭಿಸಿದಾಗ ಆಕೆಗೆ ಕೇವಲ 14 ವರ್ಷ ಎಂದು ತಿಳಿದುಬಂದಿದೆ. 1980 ರ ದಶಕದ ಉದ್ದ ಮತ್ತು ಸುಂದರವಾದ ಕೂದಲನ್ನು ಹೊಂದಿದ್ದ ಹಿಂದಿ ನಟಿಯರ ಶೈಲಿಯನ್ನು ಅನುಕರಿಸಲು ಸ್ಮಿತಾ ಪ್ರಯತ್ನಿಸಿದರು ಎಂದೂ ತಳಿದುಬಂದಿದೆ.

Tap to resize

Latest Videos

ಇದನ್ನು ಓದಿ: ಜಗತ್ತಿನ ಅತ್ಯಂತ ಹಿರಿಯ ಶ್ವಾನ ಬೋಬಿ ಇನ್ನಿಲ್ಲ: ಹಳ್ಳಿಯಲ್ಲಿ ಆರಾಮಾಗಿ ಜೀವನ ನಡೆಸ್ತಿದ್ದ ಇದರ ವಯಸ್ಸೆಷ್ಟು ನೋಡಿ..

ಇನ್ನು, ತನ್ನ ಕೂದಲನ್ನು ಬೆಳೆಯಲು ತನ್ನ ಪ್ರೇರಣೆ ಭಾರತೀಯ ಸಂಸ್ಕೃತಿಯ ದೃಷ್ಟಿಕೋನದಿಂದ ಬಂದಿದೆ ಎಂದು ಮಹಿಳೆ ಹೇಳಿಕೊಂಡಿದ್ದಾರೆ. ದೇವತೆಯರು ಸಾಮಾನ್ಯವಾಗಿ ಉದ್ದ ಕೂದಲು ಬಿಟ್ಟುಕೊಂಡಿರುತ್ತಾರೆ. ಅಲ್ಲದೆ, ತನ್ನ ಕೂದಲನ್ನು ಕತ್ತರಿಸುವುದು ನಮ್ಮ ಸಮಾಜದಲ್ಲಿ ಅಶುಭವೆಂದೂ ಹಾಗೂ ಉದ್ದ ಕೂದಲು ಬಿಡುವುದರಿಂದ ಮಹಿಳೆಯ ಸವಂದರ್ಯವನ್ನು ಹೆಚ್ಚಿಸುತ್ತದೆ ಎಂದೂ ಸ್ಮಿತಾ ಶ್ರೀವಾಸ್ತವ್‌ ಹೇಳಿದ್ದಾರೆ. 

ಈ ಮಧ್ಯೆ, ಅಷ್ಟುದ್ದ ಕೂದಲು ಬಿಟ್ಟುಕೊಂಡಿರುವುದರಿಂದ ಅದನ್ನು ನೋಡಿಕೊಳ್ಳುವುದು ಸುಲಭವಲ್ಲ. ಪ್ರತಿ ವಾರ ತನ್ನ ಕೂದಲನ್ನು ತೊಳೆಯಲು, ಒಣಗಿಸಲು, ತೊಡೆದುಹಾಕಲು ಮತ್ತು ಸ್ಟೈಲಿಂಗ್ ಮಾಡಲು 3 ಗಂಟೆ ಮೀಸಲಿಡುತ್ತಾರೆ. ಈ ಪೈಕಿ ಕೇವಲ ಕೂದಲು ತೊಳೆಯಲು 45 ನಿಮಿಷಗಳವರೆಗೆ ತೆಗೆದುಕೊಳ್ಳುತ್ತದೆ. ಬಳಿಕ, ಅದನ್ನು ಒಣಗಿಸುವ ಪ್ರಕ್ರಿಯೆಯೂ ತುಂಬಾ ಕಷ್ಟ. 

ಇದನ್ನು ಓದಿ: 19 ವರ್ಷಕ್ಕೆ ಸಿಎ ಟಾಪರ್ ಆದ ನಂದಿನಿ: ಗಿನ್ನೆಸ್‌ ವಿಶ್ವ ದಾಖಲೆಯ ಒಡತಿ

ಹೌದು, ಈಕೆಗೆ ಅತ್ಯಂತ ಕಷ್ಟಕರವಾದ ಭಾಗವೆಂದರೆ ಕೂದಲನ್ನು ಒಣಗಿಸುವುದು. ಕೂದಲನ್ನು ಬಿಡಿಸಲು ಸಹ 2 ಗಂಟೆ ಬೇಕಾಗುತ್ತದೆ ಎಂದೂ ಸ್ಮಿತಾ ಶ್ರೀವಾಸ್ತವ ಹೇಳಿದ್ದಾರೆ. ಕೂದಲು ತುಂಬಾ ಉದ್ದವಿರೋ ಕಾರಣ, ಮಹಿಳೆ ತನ್ನ ಕೂದಲನ್ನು ಶೀಟ್‌ ಮೇಲೆ ಹರಡಬೇಕು ಮತ್ತು ಎಳೆಗಳನ್ನು ಎಚ್ಚರಿಕೆಯಿಂದ ಬಾಚಿಕೊಳ್ಳಬೇಕು ಎಂದೂ ಹೇಳಿಕೊಂಡಿದ್ದಾರೆ.

ಇಷ್ಟೆಲ್ಲ ಕಷ್ಟ ಅದರೂ, ನನಗೆ ಸಾಧ್ಯವಾದಷ್ಟು ಕಾಲ ನಾನು ನನ್ನ ಕೂದಲನ್ನು ನೋಡಿಕೊಳ್ಳುತ್ತೇನೆ. ನಾನು ಎಂದಿಗೂ ನನ್ನ ಕೂದಲನ್ನು ಕತ್ತರಿಸುವುದಿಲ್ಲ. ಏಕೆಂದರೆ ನನ್ನ ಕೂದಲಿನಲ್ಲಿ ನನ್ನ ಜೀವವಿದೆ ಎಂದೂ ಮಹಿಳೆ ತಿಳಿಸಿದ್ದಾರೆ. ಇನ್ನೊಂದೆಡೆ, ತನ್ನ ಇತ್ತೀಚಿನ ಸಾಧನೆಗೆ ಅಂದರೆ ಗಿನ್ನೆಸ್‌ ವಿಶ್ವ ದಾಖಲೆಗೆ ಪ್ರತಿಕ್ರಿಯಿಸಿದ ಮಹಿಳೆ, ಇದು ಕನಸು ನನಸಾದ ಕ್ಷಣ ಎಂದು ಹೇಳಿದ್ದಾರೆ. ಇದಲ್ಲದೆ, ತನ್ನ ಕೂದಲು ತನ್ನ ಗುರುತಿನ ಪ್ರಮುಖ ಭಾಗವಾಗಿದೆ ಎಂದೂ ಉತ್ತರ ಪ್ರದೇಶ ಮೂಲದ ಸ್ಮಿತಾ ಶ್ರೀವಾಸ್ತವ್‌ ಹೇಳಿಕೊಂಡಿದ್ದಾರೆ.

ಇದನ್ನೂ ಓದಿ: ಅಬ್ಬಬ್ಬಾ.. ದುಬೈ ಶೇಖ್‌ನ ಈ 46 ಅಡಿ ಎತ್ತರದ ಹಮ್ಮರ್ ನೋಡಿ: ಇದ್ರ ಮುಂದೆ ಇತರ ವಾಹನಗಳು ಕುಬ್ಜವಾಗೇ ಕಾಣ್ಸುತ್ತೆ!

click me!