ಗೂಗಲ್ ಸಿಇಒ ಆಗಿ ಸುಂದರ್ ಪಿಚೈ ಇಂದು ದಿನಕ್ಕೆ 5 ಕೋಟಿ ರೂಪಾಯಿ ಆದಾಯ ಗಳಿಸುತ್ತಿದ್ದಾರೆ ಎಂದರೆ, ಅದಕ್ಕೆ ಕಾರಣ ಅವರ ಪತ್ನಿ ಅಂಜಲಿ ಪಿಚೈ ನೀಡಿದ್ದ ಸಲಹೆ. ಗೂಗಲ್ ನಲ್ಲೇ ಮುಂದುವರಿಯಲು ಅವರೇ ಪತಿಗೆ ಸಲಹೆ ನೀಡಿದ್ದರು. ಸುಂದರ್ ಪಿಚೈ ವೃತ್ತಿ ಜೀವನ ಸುಂದರವಾಗಲು ಪತ್ನಿ ಅಂಜಲಿಯ ಕೊಡುಗೆ ಸಾಕಷ್ಟಿದೆ.
ಸುಂದರ್ ಪಿಚೈ… ಯಾವುದೇ ಮಾಹಿತಿ ಬೇಕಾದರೂ ನಾವು ನೀವೆಲ್ಲ ತಡಕಾಡುವ ಗೂಗಲ್ ಸಂಸ್ಥೆಯ ಸಿಇಒ. ಭಾರತ ಮೂಲದವರು ಎನ್ನುವ ಹೆಮ್ಮೆ ನಮಗೆಲ್ಲ. ಕೆಲವೊಮ್ಮೆ ಜೀವನದ ಯಾವುದೋ ಒಂದು ಹಂತದಲ್ಲಿ ಕೈಗೊಳ್ಳುವ ನಿರ್ಧಾರ ಅತ್ಯುತ್ತಮವಾಗಿ ಕ್ಲಿಕ್ ಆಗುತ್ತದೆ, ಸುಂದರ್ ಪಿಚೈ ಜೀವನದಲ್ಲಿ ಗ್ರೇಟ್ ಎನ್ನುವಂತೆ ಕ್ಲಿಕ್ ಆದ ನಿರ್ಧಾರ ಗೂಗಲ್ ಸಂಸ್ಥೆಯಲ್ಲೇ ಮುಂದುವರಿಯುವ ಕುರಿತಾದದ್ದು. ಈ ನಿರ್ಧಾರ ಕೈಗೊಳ್ಳಲು ಸುಂದರ್ ಪತ್ನಿ ಅಂಜಲಿ ಪಿಚೈ ಅವರೇ ಕಾರಣೀಕರ್ತರು ಎಂದು ತಿಳಿದರೆ ಅಚ್ಚರಿಯಾಗಬಹುದು. ಪ್ರತಿ ಯಶಸ್ವಿ ಪುರುಷನ ಹಿಂದೆಯೂ ಒಬ್ಬ ಮಹಿಳೆ ಇರುತ್ತಾಳೆ ಎನ್ನುವ ಮಾತು ಸಾಕಷ್ಟು ಬಾರಿ ಕ್ಲೀಷೆ ಎನಿಸುತ್ತದೆ. ಆದರೆ, ಬಹಳಷ್ಟು ಪ್ರಮುಖ ವ್ಯಕ್ತಿಗಳ ಜೀವನದಲ್ಲಿ ಇದು ಸಂಭವಿಸಿದೆ ಎನ್ನುವುದು ಸತ್ಯ. ಸುಂದರ್ ಪಿಚೈ ಅವರ ಜೀವನದಲ್ಲೂ ಈ ಮಾತು ಸಾಕಾರಗೊಂಡಿದೆ. ತಮ್ಮ ವೃತ್ತಿ ಜೀವನ ಹಾಗೂ ವೈವಾಹಿಕ ಜೀವನವನ್ನು ಅತ್ಯುತ್ತಮವಾಗಿ ನಿಭಾಯಿಸುತ್ತಿರುವ ಈ ಜೋಡಿ ಎಲ್ಲರಿಗೂ ಪ್ರೇರಣೆಯಾಗಬಲ್ಲರು.
ಗೂಗಲ್ (Google) ಸಿಇಒ (CEO) ಆಗಿ ಸುಂದರ್ ಪಿಚೈ (Sundar Pichai) ದಿನಕ್ಕೆ 5 ಕೋಟಿ ರೂಪಾಯಿ ಆದಾಯ ಗಳಿಸುತ್ತಿದ್ದಾರೆ. ಸುಂದರ್ ಅವರು ಗೂಗಲ್ ಸಂಸ್ಥೆಯನ್ನು ತೊರೆಯದೇ ಅಲ್ಲಿಯೇ ಮುಂದುವರಿಯುವಂತೆ ಅವರ ಪತ್ನಿ ಅಂಜಲಿ ನೀಡಿದ ಸಲಹೆಯೇ ಇದಕ್ಕೆ ಕಾರಣ. ಪತ್ನಿಯ ಸಲಹೆ ಇಲ್ಲವಾದರೆ ಸುಂದರ್ ಗೂಗಲ್ ನಲ್ಲಿ ಮುಂದುವರಿಯುತ್ತಲೇ ಇರಲಿಲ್ಲ ಎನ್ನುವುದು ಹಲವರಿಗೆ ತಿಳಿದಿಲ್ಲ.
Roti Didi: ರೊಟ್ಟಿ ತಯಾರಿಸಿ 18 ಜನರಿಗೆ ಕೆಲಸ ನೀಡಿದ ಟೀಚರಮ್ಮ!
ಅಂಜಲಿ ಪಿಚೈ (Anjali Pichai) ರಾಜಸ್ಥಾನದ ಕೋಟಾ (Kota) ಮೂಲದವರು. 1971 ರ ಜನವರಿ 11ರಂದು ಜನಿಸಿದ ಇವರ ತಂದೆಯ ಹೆಸರು ಓಲಾರಾಮ್ ಹರ್ಯಾನಿ. ಸಹೋದರ ಅಮಿತ್ ಹರ್ಯಾನಿ. ಇವರ ಮಲತಾಯಿ ಮಾಧುರಿ ಶರ್ಮಾ, ನಿಜವಾದ ತಾಯಿಯ ಹೆಸರು ಸಾರ್ವಜನಿಕವಾಗಿ ಲಭ್ಯವಿಲ್ಲ. ಅಂಜಲಿ, ಕೋಟಾದಲ್ಲಿಯೇ ಶಾಲಾ ಶಿಕ್ಷಣ ಮುಗಿಸಿದ ಬಳಿಕ ಖರಗ್ ಪುರ ಐಐಟಿ ಸೇರಿಕೊಂಡರು. 1989-93ರ ಬ್ಯಾಚ್ ನಲ್ಲಿ ಕೆಮಿಕಲ್ ಇಂಜಿನಿಯರಿಂಗ್ ನಲ್ಲಿ ಪದವಿ ಪಡೆದರು. ಬಳಿಕ, ಐಟಿ ದಿಗ್ಗಜ ಅಕ್ಸೆಂಚರ್ ನಲ್ಲಿ ವೃತ್ತಿ ಆರಂಭಿಸಿದರು. 3 ವರ್ಷಗಳ ಕಾಲ ಬ್ಯುಸಿನೆಸ್ ಅನಾಲಿಸ್ಟ್ ಆಗಿ ಕೆಲಸ ಮಾಡಿದರು. ಈ ಸಮಯದಲ್ಲಿ ಐಟಿ ಸಾಫ್ಟ್ ವೇರ್ ಕಂಪೆನಿಯ ಆಳ-ಅಗಲಗಳನ್ನು ಅರಿತರು. ಮಾಹಿತಿ ತಂತ್ರಜ್ಞಾನ (Information Technology) ವಲಯದ ಸೇವೆಯ ಅಗಾಧತೆಯನ್ನು ತಿಳಿದುಕೊಂಡರು. ಬಳಿಕ, ಇಂಟ್ಯೂಟ್ ಎನ್ನುವ ಸಂಸ್ಥೆಗೆ ಸೇರಿ ಪ್ರಸ್ತುತ, ಬ್ಯುಸಿನೆಸ್ ಆಪರೇಷನ್ ಮ್ಯಾನೇಜರ್ ಆಗಿ ಸೇವೆ ಸಲ್ಲಿಸುತ್ತಿದ್ದಾರೆ. ಇವರ ಸಂಸ್ಥೆ ವಿಶ್ವದ ಅತ್ಯುತ್ತಮ ಕಂಪೆನಿಗಳ ಸಾಲಿನಲ್ಲೇ ಇದೆ.
ಗೂಗಲ್ ತೊರೆಯಬೇಡ ಎಂದ ಪತ್ನಿ
ಸುಂದರ್ ಗೂಗಲ್ (Google) ಸಂಸ್ಥೆಯಲ್ಲಿ ಅತ್ಯುತ್ತಮವಾಗಿ ಕಾರ್ಯನಿರ್ವಹಿಸುತ್ತಿದ್ದ ಸಮಯದಲ್ಲಿ ಅವರಿಗೆ ಮೈಕ್ರೋಸಾಫ್ಟ್ ಮತ್ತು ಟ್ವಿಟರ್ ನಿಂದ ಆಫರ್ ಬಂದಿತ್ತು. ಮೈಕ್ರೋಸಾಫ್ಟ್ ಕಂಪೆನಿ ಅವರಿಗೆ ಸಿಇಒ ಹುದ್ದೆಯನ್ನೂ ನೀಡುವುದಾಗಿ ಹೇಳಿತ್ತು. ಟ್ವಿಟರ್ ಆಫರ್ (Offer) ಕೂಡ ಕಡೆಗಣಿಸುವಂಥದ್ದಾಗಿರಲಿಲ್ಲ. ಈ ಸಮಯದಲ್ಲಿ ಸುಂದರ್, ಗೂಗಲ್ ತೊರೆಯುವ ನಿರ್ಧಾರಕ್ಕೆ ಬಂದಿದ್ದರು. ಆದರೆ, ಅಂಜಲಿ ಪತಿಯನ್ನು ತಡೆದರು. “ಗೂಗಲ್ ನಲ್ಲಿ ಭವಿಷ್ಯ (Future) ಚೆನ್ನಾಗಿರುತ್ತದೆ. ತೊರೆಯಬೇಡʼ ಎಂದು ಸಲಹೆ ನೀಡಿದರು. ಬೇರೆಡೆ ಉತ್ತಮ ಆಫರ್ ಗಳಿದ್ದರೂ ಗೂಗಲ್ ನಲ್ಲೇ ಮುಂದುವರಿಯಬೇಕೆಂದು ತಮ್ಮ ಮನಸ್ಸು ಹೇಳುತ್ತಿದೆ, ಅದನ್ನು ನಂಬುವಂತೆ ಮನವರಿಕೆ ಮಾಡಿದರು. ಅದರಂತೆ ಸುಂದರ್ ನಡೆದುಕೊಂಡರು. ಕೆಲವೇ ವರ್ಷಗಳ ಬಳಿಕ ಗೂಗಲ್ ಸಿಇಒ ಆಗಿ ನಿಯೋಜನೆಗೊಂಡರು. ಇಂದು ದಿನಕ್ಕೆ ಬರೋಬ್ಬರಿ 5 ಕೋಟಿ ರೂಪಾಯಿ ಆದಾಯ ಗಳಿಸುತ್ತಿದ್ದಾರೆ.
24 ನೇ ವಯಸ್ಸಿನಲ್ಲಿ ಟಿವಿ ಕಂಪನಿ ಸಿಇಒ ಆಗಿ, ಶೂನ್ಯದಿಂದ 1000 ಕೋಟಿ ಕಂಪನಿ ಕಟ್ಟಿ ಶ್ರೀಮಂತೆಯಾದ ಸುಂದರಿ!
ಮೊದಲು ಸ್ನೇಹ, ಬಳಿಕ ಮದುವೆ
ಅಂದ ಹಾಗೆ ಇವರದ್ದು ಪ್ರೇಮವಿವಾಹ (Love Marriage). ಐಐಟಿ ಖರಗಪುರದಲ್ಲಿ ಮೊದಲ ಭೇಟಿ. ಉತ್ತಮ ಸ್ನೇಹಿತರಾಗಿದ್ದರು. ಕಾಲೇಜು ಶಿಕ್ಷಣ ಮುಗಿಸಿ ಸುಂದರ್ ಅಮೇರಿಕಾಕ್ಕೆ ತೆರಳಿದರೆ, ಅಂಜಲಿ ಇಲ್ಲಿಯೇ ಉದ್ಯೋಗ (Job) ಮಾಡಿದ್ದರು. ಬಳಿಕ ಮದುವೆಯಾದರು. ಇವರಿಗೆ ಕಿರಣ್ ಮತ್ತು ಕಾವ್ಯಾ ಎನ್ನುವ ಮಕ್ಕಳಿದ್ದಾರೆ.