Rhiannon Harries : ಭಾರತೀಯ ಹುಡುಗನ ವಿವಾಹವಾದ ಬ್ರಿಟಿಷ್ ರಾಜತಾಂತ್ರಿಕ ಅಧಿಕಾರಿ!

By Suvarna News  |  First Published Feb 19, 2022, 4:13 PM IST

ಭಾರತೀಯ ಹುಡುಗನ ವರಿಸಿದ ಬ್ರಿಟಿಷ್ ರಾಜತಾಂತ್ರಿಕ ಅಧಿಕಾರಿ
ರೈಯಾನನ್ ಹ್ಯಾರಿಸ್ ಟ್ವಿಟರ್ ನಲ್ಲಿ ಪೋಸ್ಟ್ ಮಾಡಿದ ಚಿತ್ರ ವೈರಲ್
ದಕ್ಷಿಣ ಏಷ್ಯಾದಲ್ಲಿ ಇಂಗ್ಲೆಂಡ್ ನ ಡೆಪ್ಯುಟಿ ಟ್ರೇಡ್ ಕಮೀಷನರ್ ಆಗಿರುವ ರೈಯಾನನ್ ಹ್ಯಾರಿಸ್
 


ನವದೆಹಲಿ (ಫೆ.19): ಬ್ರಿಟನ್ ನ ರಾಜತಾಂತ್ರಿಕ ಅಧಿಕಾರಿಯೊಬ್ಬರು (UK diplomat) ಭಾರತೀಯ ಹುಡುಗನ್ನು ಪ್ರೀತಿಸಿ ಮದುವೆಯಾಗುವುದು ಸುಲಭವಾಗಿ ಆಗುವಂಥದ್ದಲ್ಲ. ಆದರೆ, ಪ್ರೀತಿ ಎನ್ನುವುದು ಹಾಗೆ. ನವದೆಹಲಿಯಲ್ಲಿ ದಕ್ಷಿಣ ಏಷ್ಯಾದ ಇಂಗ್ಲೆಂಡ್ ನ ಡೆಪ್ಯುಟಿ ಟ್ರೇಡ್ ಕಮೀಷನರ್ (Deputy Trade Commissioner for South Asia) ಆಗಿರುವ ರೈಯಾನನ್ ಹ್ಯಾರಿಸ್ (Rhiannon Harries) ಶುಕ್ರವಾರ  ತಾವು ಪ್ರೀತಿಸಿದ ಭಾರತೀಯ ಹುಡುಗ ಹಿಮಾಂಶು ಪಾಂಡೆಯನ್ನು (Himanshu Pandey) ವಿವಾಹವಾದರು. ವಿವಾಹದ ವೇಳೆ ಕೆಂಪು ಬಣ್ಣದ ಲೆಹೆಂಗಾ ಧರಿಸಿ, ದೇಸಿ ವಧುವಿನಂತೆ ಕಂಗೊಳಿಸಿರುವ ಚಿತ್ರವನ್ನು ಟ್ವಿಟರ್ ನಲ್ಲಿ ಪೋಸ್ಟ್ ಮಾಡಿದ್ದಾರೆ. ಈ ಚಿತ್ರದೊಂದಿಗೆ ಭಾವನಾತ್ಮಕ ಸಂದೇಶವನ್ನೂ ಬರೆದಿದ್ದಾರೆ. ಮೈಕ್ರೋಬ್ಲಾಗಿಂಗ್ ಸೈಟ್ ಟ್ವಿಟರ್ ನಲ್ಲಿ (Twitter) ಅವರ ಪೋಸ್ಟ್ ನಲ್ಲಿ ವೈರಲ್ ಆಗುತ್ತಿರುವುದು ಮಾತ್ರವಲ್ಲದೆ, ದೇಸಿ ವಧುವಿನ ಅಲಂಕಾರದಲ್ಲಿ ಬಹಳ ಅದ್ಭುತವಾಗಿ ಕಾಣುತ್ತಿದ್ದೀರಿ ಎನ್ನುವ ಕಾಮೆಂಟ್ ಗಳೂ ಬಂದಿವೆ.

ರೈಯಾನನ್ ಕೆಂಪು ಲೆಹೆಂಗಾದಲ್ಲಿ ತುಂಬಾ ಸುಂದರವಾಗಿ ಕಾಣುತ್ತಿರುವುದು ಮಾತ್ರವಲ್ಲ, ಭಾರತೀಯ ವಧುವಿನಂತೆಯೇ ಅದರೊಂದಿಗೆ ಸೊಗಸಾದ ಆಭರಣಗಳನ್ನು ಧರಿಸಿದ್ದರು ಮತ್ತು ತನ್ನ ವರನೊಂದಿಗೆ ಫೋಟೋಗೆ ಪೋಸ್ ಕೂಡ ನೀಡಿದ್ದಾರೆ.

ಭಾರತಕ್ಕ ಅಂದಾಜು ನಾನು ನಾಲ್ಕು ವರ್ಷಗಳ ಹಿಂದೆ ಬಂದಿದ್ದೆ. ಸಾಕಷ್ಟು ನಿರೀಕ್ಷೆಗಳು ಮತ್ತು ಕನಸುಗಳೂ ನನ್ನೊಂದಿಗೆ ಬಂದಿದ್ದವು. ಆದರೆ, ನನ್ನ ಜೀವನದ ಪ್ರೀತಿಯನ್ನು ಇಲ್ಲಿ ಕಂಡುಕೊಂಡು ಅವರನ್ನು ವಿವಾಹವಾಗುತ್ತೇನೆ ಎಂದು ಒಂದು ಕ್ಷಣವೂ ಎಣಿಕೆ ಮಾಡಿರಲಿಲ್ಲ. ಆದರೆ, ಈ ಅಪೂರ್ವ ಭಾರತದಲ್ಲಿ ಇಂಥದ್ದೊಂದು ಸಂತೋಷವನ್ನು ನಾನು ಕಂಡಿದ್ದೇನೆ. ಭಾರತ ಯಾವಾಗಲೂ ನನ್ನ ಮನೆಯಾಗಿರುತ್ತದೆ ಎನ್ನುವುದಕ್ಕೆ ನನಗೆ ಬಹಳ ಸಂತಸವಿದೆ' ಎಂದು ತಮ್ಮ ಪೋಸ್ಟ್ ನಲ್ಲಿ ಬರೆದುಕೊಂಡಿದ್ದಾರೆ. ರೈಯಾನನ್ ಹ್ಯಾರಿಸ್, ಚಿತ್ರ ನಿರ್ದೇಶಕ ಹಾಗೂ ಗೋಲ್ಡ್ ರಾಕ್ ಫಿಲ್ಮ್ ಸಂಸ್ಥಾಪಕ ಹಿಮಾಂಶು ಪಾಂಡೆ ಅವರನ್ನು ವಿವಾಹವಾಗಿದ್ದಾರೆ.

When I arrived in nearly 4 years ago, I had many hopes & dreams for my time here. But never did I imagine I would be meeting & marrying the love of my life. ❤️ I found such happiness in & so glad it will always be a home. 🇮🇳 pic.twitter.com/mfECCj3rWi

— Rhiannon Harries (@RhiannonUKGov)


ಟ್ವಿಟರ್ ನಲ್ಲಿ ಕೇವಲ 6 ಸಾವಿರ ಫಾಲೋವರ್ ಗಳನ್ನು ಹೊಂದಿರುವ ರೈಯಾನನ್ ಹ್ಯಾರಿಸ್ ಈ ಚಿತ್ರವನನು ಟ್ವಿಟರ್ ನಲ್ಲಿ ಪೋಸ್ಟ್ ಮಾಡಿದ ಬೆನ್ನಲ್ಲಿಯೇ 30 ಸಾವಿರಕ್ಕೂ ಅಧಿಕ ಲೈಕ್ ಗಳು ಬಂದಿವೆ. ನೆಟಿಜನ್ ಗಳು ಮುಂದಾದ ಚಿತ್ರವನ್ನು ಬಹಳ ಇಷ್ಟಪಟ್ಟಿರುವುದು ಮಾತ್ರವಲ್ಲ, ಅವರ ಮುಂದಿನ ಜೀವನ ಸುಖವಾಗಿರಲಿ ಎಂದು ಕಾಮೆಂಟ್ ಕೂಡ ಮಾಡಿದ್ದಾರೆ. 

Sofia Jirau : ಡೌನ್ ಸಿಂಡ್ರೋಮ್ ನಡುವೆಯೂ 'ವಿಕ್ಟೋರಿಯಾಸ್ ಸೀಕ್ರೆಟ್‌' ಸಂಸ್ಥೆಯ ಪ್ರಖ್ಯಾತ ಮಾಡೆಲ್
“ಕೆಂಪು ಡ್ರೆಸ್‌ನಲ್ಲಿ ನೀವು ತುಂಬಾ ಸುಂದರವಾಗಿ ಕಾಣುತ್ತಿದ್ದೀರಿ. ಭಾರತೀಯ ಕುಟುಂಬಕ್ಕೆ ಸುಸ್ವಾಗತ, ನಿಮ್ಮ ಪಾಲಿಗೆ ಎಂದಿಗೂ ಅಂತ್ಯಕಾಣದ ಸಂತೋಷಕ್ಕಾಗಿ ಶುಭಾಶಯಗಳು, ”ಎಂದು ಟ್ವಿಪಲ್ಸ್ ಒಬ್ಬರು ಬರೆದಿದ್ದಾರೆ.

Home Decoration: ಮನೆಯ ಅಂದಕ್ಕೆ ಚೇಂಜ್‌ ಬೇಕಾ? ಈ ಟ್ರಿಕ್ಸ್ ಟ್ರೈ ಮಾಡಿ
ಈ ಚಿತ್ರವು ಆನ್‌ಲೈನ್‌ನಲ್ಲಿ ಸಂಚಲನವನ್ನು ಸೃಷ್ಟಿಸುತ್ತಿದ್ದಂತೆ, ಅನೇಕರು ದಂಪತಿಗಳಿಗೆ ವೈವಾಹಿಕ ಜೀವನ ಸಂಭ್ರಮದಿಂದ ಕೂಡಿರಲಿ ಎಂದು ಹಾರೈಸಿದರು. ಭಾರತೀಯ ಉಡುಗೆಯಲ್ಲಿ ಬಹಳ  ಸುಂದರವಾಗಿ ಕಾಣುತ್ತಿದ್ದೀರಿ ಎಂದು ಹಲವರು ಟ್ವೀಟ್ ಮಾಡಿದ್ದಾರೆ. ಆಂಧ್ರಪ್ರದೇಶ ಮತ್ತು ತೆಲಂಗಾಣದಲ್ಲಿ ಬ್ರಿಟನ್‌ನ ಡೆಪ್ಯುಟಿ ಹೈಕಮಿಷನರ್ ಆಂಡ್ರ್ಯೂ ಫ್ಲೆಮಿಂಗ್ ಕೂಡ ವಿವಾಹಕ್ಕೆ ಶುಭ ಹಾರೈಸಿದ್ದಾರೆ.

Tap to resize

Latest Videos

click me!