Home Decoration: ಮನೆಯ ಅಂದಕ್ಕೆ ಚೇಂಜ್‌ ಬೇಕಾ? ಈ ಟ್ರಿಕ್ಸ್ ಟ್ರೈ ಮಾಡಿ

By Suvarna News  |  First Published Feb 17, 2022, 5:57 PM IST

ಮನೆಗೊಂದು ಅಂದದ ಲುಕ್‌ ನೀಡಬೇಕಾದರೆ ಕ್ರಿಯಾಶೀಲವಾಗಿ ಯೋಚಿಸಬೇಕು. ಮನೆಯ ವಾತಾವರಣ ಹೊಸದಾಗಿ ಕಾಣಲು, ಒಂದೇ ರೀತಿಯಲ್ಲಿರುವ ಬೇಸರ ಹೋಗಲಾಡಿಸಲು ಕೆಲವು ಕ್ರಮಗಳನ್ನು ಕೈಗೊಳ್ಳಬೇಕು. ಅದಕ್ಕಾಗಿ ಕೆಲವು ಟಿಪ್ಸ್. 
 


ಮನೆ(Home)ಯನ್ನು ಚೆಂದ ಕಾಣುವಂತೆ ಇಟ್ಟುಕೊಳ್ಳಬೇಕು ಎನ್ನುವುದು ಎಲ್ಲರ ಗೃಹಿಣಿಯರ ಆಸೆ. ಆದರೆ, ಮನೆಯ ವಿನ್ಯಾಸವೇ (Design) ಎನ್ನುವವರು ಇದ್ದಾರೆ. ಇದೊಂಥರ, ಕುಣಿಯಲು ಬಾರದವರು ನೆಲ ಡೊಂಕು ಅಂದಂತೆ! ಏಕೆಂದರೆ, ಆಸಕ್ತಿ ಇದ್ದರೆ ಮನೆಗೆ ಎಂಥದ್ದೇ ವಿನ್ಯಾಸವಿರಲಿ. ಅಲ್ಲಿಯೇ ತಮ್ಮ ಕೈಚಳಕ ತೋರಿಸಬಹುದು. ಇದಕ್ಕೆ ಬೇಕಿರುವುದು ಒಂದಿಷ್ಟು ಐಡಿಯಾಗಳಷ್ಟೆ. 

ಮನೆಯ ವಿನ್ಯಾಸ, ವಿಸ್ತಾರ (Space) ಚೆನ್ನಾಗಿದ್ದರೆ ಯಾರು ಬೇಕಿದ್ದರೂ ಮನೆಯ ಒಳಾಂಗಣವನ್ನು ಅಂದವಾಗಿಟ್ಟುಕೊಳ್ಳುತ್ತಾರೆ. ಇರುವ ಸೀಮಿತ ವ್ಯಾಪ್ತಿಯಲ್ಲೇ ಹೊಸದನ್ನು ಮಾಡಲು ಕ್ರಿಯಾಶೀಲತೆ (Creativity) ಬೇಕು. ಅಂತಹ ಕ್ರಿಯಾಶೀಲತೆ ನಿಮ್ಮದಾಗಲಿ. 

ಮನೆಯ ಪ್ರತಿಯೊಂದು ಮೂಲೆಯನ್ನೂ ಸಶಕ್ತವಾಗಿ ಬಳಕೆ ಮಾಡಿಕೊಳ್ಳಬೇಕು. ಸುಮ್ಮನೆ ಖಾಲಿ ಬಿಡುವ ಬದಲು ಅಥವಾ ಅಲ್ಲೇನೋ ಒಂದಿಷ್ಟು ಸಾಮಾನುಗಳನ್ನು ಇಡುವ ಬದಲು ಅವುಗಳನ್ನು ಸೂಕ್ತವಾಗಿ ಬಳಕೆ ಮಾಡಿಕೊಂಡರೆ ಮನೆಗೊಂದು ರಿಚ್‌ ಲುಕ್‌ ಬರುತ್ತದೆ. ಅಲ್ಲದೆ, ಮನೆಯೊಳಗೆ ಒಂದೇ ರೀತಿಯ ಸೆಟಪ್‌ ಕ್ರಮೇಣ ಬೋರೆನಿಸುತ್ತದೆ. ಅದನ್ನು ಬದಲಿಸುತ್ತಿರಬೇಕು. ಅದಕ್ಕಾಗಿ ನಿಮಗೊಂದಿಷ್ಟು ಟಿಪ್ಸ್. 

•    ಮೂಲೆಯನ್ನು ಓದುವ ಕಾರ್ನರ್‌ (Reading Corner) ಮಾಡಿ
ಇರುವ ಸ್ಥಳವನ್ನು ಸರಿಯಾಗಿ ಬಳಕೆ ಮಾಡಿಕೊಳ್ಳುವುದು ಜಾಣತನ. ಮನೆಯಲ್ಲಿ ಕೆಲವು ಜಾಗಗಳಿರುತ್ತವೆ. ಅಲ್ಲಿ, ಬೇರೆ ಯಾವುದೇ ಪ್ರಮುಖ ಕೆಲಸಗಳನ್ನು ಮಾಡುವಂತಿರುವುದಿಲ್ಲ. ಆ ಸ್ಥಳ ಯಾರಿಗೂ ಬೇಕಾಗಿಯೂ ಇರುವುದಿಲ್ಲ. ಹಾಗಾಗಿ, ಅಲ್ಲಿ ಬೇಡವಾದ ಸಾಮಾನುಗಳು ಕ್ರಮೇಣ ತುಂಬಿಕೊಳ್ಳುತ್ತವೆ. ನೀವು ಪುಸ್ತಕ, ಪತ್ರಿಕೆ ಸೇರಿದಂತೆ ಓದುಪ್ರಿಯರಾಗಿದ್ದರೆ ಅಂತಹ ಮೂಲೆಯನ್ನು ಓದುವ ಸ್ಥಳವನ್ನಾಗಿ ಪರಿವರ್ತಿಸಿಕೊಳ್ಳಬಹುದು. ಅಕಸ್ಮಾತ್‌ ಅಲ್ಲಿ ಲೈಟಿಂಗ್ಸ್‌  ಇಲ್ಲದಿದ್ದರೆ ಬೆಳಕಿನ ವ್ಯವಸ್ಥೆ ಮಾಡಿಕೊಳ್ಳಬೇಕಾಗುತ್ತದೆ. ದಿನದ ಸಮಯದಲ್ಲಿ ಸಹಜ ಬೆಳಕು ಬರುವಂತಿದ್ದರೆ ಇನ್ನೂ ಒಳ್ಳೆಯದು. ಆ ಮೂಲೆಯಲ್ಲಿ ಕಿರಿದಾದ ಎರಡು ಅಥವಾ ಮೂರು ಚೇರುಗಳು, ಟಿಪಾಯಿ, ಬೇಕಿದ್ದರೆ ಪುಟ್ಟದೊಂದು ರ್ಯಾಕ್‌ (Rack) ಇಟ್ಟು ಅದರಲ್ಲಿ ದೈನಂದಿನ ಪೇಪರ್ ಗಳನ್ನಿಡಬಹುದು. ಕೇವಲ ಮನೆಯ ಹಾಲ್‌ ನಲ್ಲಿ ಮಾತ್ರವೇ ಟಿಪಾಯ್‌ ಅಥವಾ ಪತ್ರಿಕೆಗಳನ್ನು ಇಡಬೇಕೆಂದಿಲ್ಲ. ಸ್ವಲ್ಪ ಪ್ರತ್ಯೇಖ ಸ್ಥಳದಲ್ಲಿದ್ದರೆ ನಿಮಗೆ ಓದಲೂ ಅನುಕೂಲವಾಗುತ್ತದೆ.  

•    ಮನೆಯಲ್ಲಿ ಹಸಿರು (Greenery) ವಾತಾವರಣ ಹೆಚ್ಚಿಸಿ
ಮನೆಯೊಳಗೇ ಬೆಳೆಸುವಂತಹ ಹೌಸ್‌ ಪ್ಲಾಂಟ್ ಗಳಿಂದ ಮನೆಗೆ ಅದ್ಭುತವಾದ ಲುಕ್‌ ದೊರೆಯುತ್ತದೆ. ಇದರಿಂದ ಮನೆಯೊಳಗಿನ ವಾತಾವರಣ ಹಸಿರಾಗಿ ಕಂಗೊಳಿಸುತ್ತದೆ. ಇದಕ್ಕಾಗಿ ಪುಟ್ಟ ಪುಟ್ಟ ಶೆಲ್ಫ್‌, ರ್ಯಾಕ್‌ ಗಳನ್ನು ಬಳಸಬಹುದು. ಮೊದಲಿಗೆ ಸುಲಭವಾಗಿ ಮೆಂಟೇನ್‌ ಮಾಡಲು ಸಾಧ್ಯವಾಗುವ ಗಿಡಗಳನ್ನು ಬೆಳೆಸಬೇಕು. ಬಿದಿರು, ಮನಿಪ್ಲಾಂಟ್‌, ಅಲೋವೆರಾ ಇತ್ಯಾದಿ ಬೆಳೆಸಲು ಅನುಕೂಲ. 

Parenting Tips: ಹದಿಹರೆಯದವರು ನಿಮ್ಮ ಮಾತು ಕೇಳಬೇಕು ಅಂದರೆ ಹೀಗೆ ಮಾಡಿ..

•    ಗೋಡೆಗೂ (Wall) ನಿಮ್ಮ ಪ್ರೀತಿ ಇರಲಿ!
ಮನೆಯ ಗೋಡೆಗಳಿಗೆ ಬೇರೆ ಪೇಂಟ್‌ ಮಾಡಿಸುವುದಾಗಲೀ ಅಥವಾ ಇನ್ನಷ್ಟು ಲುಕ್‌ ನೀಡುವಂತೆ ಬೇರೆ ಏನಾದರೂ ಮಾಡುವುದಾಗಲಿ ಎಲ್ಲವೂ ವೆಚ್ಚದಾಯಕವಾಗುತ್ತದೆ. ಬದಲಿಗೆ, ಗೋಡೆಗಳನ್ನು ಫ್ರೆಶ್‌ ಅಪ್‌ ಮಾಡಲು ಪೇಂಟಿಂಗ್ಸ್‌ ಅಥವಾ ಫ್ರೇಮ್‌ ಹಾಕಿದ ಫೋಟೊಗ್ರಾಫ್‌ ಗಳನ್ನು ಬಳಕೆ ಮಾಡಬಹುದು. ಅಥವಾ ಗೋಡೆಗಳಿಗೆ ವಿಭಿನ್ನ ಸ್ಟಿಕ್ಕರ್‌ ಗಳನ್ನು ಅಂಟಿಸಬಹುದು. ನಿಮ್ಮ ಆದ್ಯತೆಯಂತೆ ಆಯ್ಕೆ ಮಾಡಿಕೊಳ್ಳಲು ಸಾಧ್ಯ. 

•    ಬೆಳಕಿನೊಂದಿಗೆ (Lightings) ಪ್ರಯೋಗ
ಮನೆಯ ಅಂದವನ್ನು ಹೆಚ್ಚಿಸುವ ಸುಲಭದ ಮಾರ್ಗವೆಂದರೆ, ಬೆಳಕು ಸಂಯೋಜನೆ. ಫಾಲ್ಸ್‌ ಸೀಲಿಂಗ್‌, ಸ್ಮಾರ್ಟ್‌ ಲೈಟ್ ಗಳ ಮೂಲಕ ಬೆಳಕುಗಳನ್ನು ಅಂದವಾಗಿ ಸಂಯೋಜಿಸಿಕೊಂಡು ಮನೆಯ ಲುಕ್‌ ಹೆಚ್ಚಿಸಬಹುದು.

Past Relationship: ಹಳೆಯ ಸಂಬಂಧದ ಕಹಿ ಛಾಯೆ ಕಾಡಿದಾಗ..

•    ಫರ್ನಿಚರ್‌ (Furniture) ಸ್ಥಳ ಬದಲು
ಪೀಠೋಪಕರಣಗಳು ಒಂದೇ ಕಡೆ ಇದ್ದು ಇದ್ದು, ಮನೆಯ ನೋಟವೂ ಒಂದೇ ರೀತಿಯಲ್ಲಿರುತ್ತದೆ. ಅದನ್ನು ಬದಲಿಸಬೇಕೆಂದರೆ, ಅವುಗಳ ಸ್ಥಳ ಬದಲಾವಣೆ ಮಾಡುವುದು. ಇದು ಅತ್ಯಂತ ಸುಲಭದ ಹಾಗೂ ವೆಚ್ಚವೇ ಇಲ್ಲದ ಕೆಲಸ. ಆಯಾ ಸ್ಥಳಗಳಿಗೆ ಅನುಕೂಲವಾಗುವಂತೆ ಫರ್ನಿಚರ್‌ ಗಳನ್ನು ಬದಲಾವಣೆ ಮಾಡುವುದರಿಂದ ಮನೆಯ ಲುಕ್‌ ಆಗಾಗ ಬದಲಾಗಿ ಬೋರೆನಿಸುವುದಿಲ್ಲ. ಅಲ್ಲದೆ, ಮನೆಯನ್ನು ಹೇಗೆ ಗ್ರ್ಯಾಂಡ್‌ ಆಗಿಟ್ಟುಕೊಳ್ಳಬೇಕೆಂಬ ಐಡಿಯಾ ನಿಮಗೇ ಮೂಡುತ್ತದೆ. 

click me!