Relationship Coaching : ಪ್ರೀತಿಸುವ ಪರಿ ಹೇಳಿಕೊಡುವ ಮಾಡೆಲ್ ಪಡೀತಾಳೆ ಗಂಟೆಗೆ 30 ಸಾವಿರ ರೂ.!

Suvarna News   | Asianet News
Published : Feb 17, 2022, 04:43 PM IST
Relationship Coaching : ಪ್ರೀತಿಸುವ ಪರಿ ಹೇಳಿಕೊಡುವ ಮಾಡೆಲ್ ಪಡೀತಾಳೆ ಗಂಟೆಗೆ 30 ಸಾವಿರ ರೂ.!

ಸಾರಾಂಶ

ಸಮುದ್ರದ ಆಳ ತಿಳಿಯಬಹುದೇನೋ, ಹುಡುಗಿಯರ ಮನಸ್ಸು ಅರಿಯುವುದು ಕಷ್ಟ. ಹುಡುಗಿಯರಿಗೆ ಹುಡುಗಿಯರ ಮನಸ್ಸು ತಿಳಿದಿರುತ್ತದೆ. ಪ್ರೇಮ ನಿವೇದನೆಗೂ ಮುನ್ನ ಅನೇಕ ಹುಡುಗರು ತಮ್ಮ ಸ್ನೇಹಿತೆಯರ ಸಲಹೆ ಪಡೆಯುತ್ತಾರೆ. ಇದನ್ನೇ ಮಾಡೆಲ್ ಒಬ್ಬಳು ಬಂಡವಾಳ ಮಾಡಿಕೊಂಡು ಲಕ್ಷಾಂತರ ರೂಪಾಯಿ ಸಂಪಾದನೆ ಮಾಡ್ತಾಳೆ.  

ಹುಡುಗಿ (Girl)ಯರ ಮನಸ್ಸು ಗೆಲ್ಲುವುದು ಸುಲಭವಲ್ಲ. ಹುಡುಗಿಯರ ಜೊತೆ ಹೇಗೆ ಮಾತು (Speech) ಶುರು ಮಾಡ್ಬೇಕು, ಹುಡುಗಿಯರ ಜೊತೆ ಏನು ಚಾಟ್ ಮಾಡ್ಬೇಕು? ಹುಡುಗಿಯರ ಮನಸ್ಸು ಕದಿಯುವುದು ಹೇಗೆ? ಹೀಗೆ ಅನೇಕ ಪ್ರಶ್ನೆಗಳು ಹುಡುಗರನ್ನು ಕಾಡ್ತಿರುತ್ತದೆ. ಕೆಲವು ಬಾರಿ ಆತುರದ ಮಾತನಾಡಿ ಹುಡುಗಿಯನ್ನು ದೂರ ಮಾಡಿಕೊಳ್ಳುವವರಿದ್ದಾರೆ. ಮತ್ತೆ ಕೆಲವರು ಪ್ರೇಮ (Love )ನಿವೇದನೆ ಮಾಡಲು ನಿಧಾನ ಮಾಡಿ ಹುಡುಗಿಯನ್ನು ಕಳೆದುಕೊಳ್ತಾರೆ.  

ಅನೇಕ ಹುಡುಗರು ಲವ್ ಟ್ರೈನಿಂಗ್ (Love Training )ಸಿಕ್ಕಿದ್ರೆ ಎಂದುಕೊಳ್ತಾರೆ. ಕೆಲವರು ಅಲ್ಲಿ-ಇಲ್ಲಿ ಲವ್ ಟ್ರೈನಿಂಗ್ ಪಡೆಯುತ್ತಾರೆ. ಮತ್ತೆ ಕೆಲವರು ಇಂಟರ್ನೆಟ್ ಸಹಾಯ ಪಡೆದು ತರಬೇತಿ ಪಡೆಯುತ್ತಾರೆ. ಆದ್ರೂ ಹುಡುಗಿಯರು ಪ್ರೀತಿಯಲ್ಲಿ ಬೀಳುವುದಿಲ್ಲ. ಅಂಥವರಿಗೆ ಇಲ್ಲೊಂದು ಖುಷಿ ಸುದ್ದಿಯಿದೆ. ಬ್ರಿಟನ್ ಮಾಡೆಲ್ ಒಬ್ಬಳು ಪ್ರೀತಿಯ ಬಗ್ಗೆ ಟ್ಯೂಷನ್ ನೀಡ್ತಿದ್ದಾಳೆ. ಆಕೆ ಯಾವ ಟ್ಯೂಷನ್ ನೀಡ್ತಿದ್ದಾಳೆ,ಅದಕ್ಕೆ ಎಷ್ಟು ಶುಲ್ಕ ವಿಧಿಸುತ್ತಾಳೆ ಎಂಬುದನ್ನು ನಾವಿಂದು ಹೇಳ್ತೇವೆ.

ಡೇಟಿಂಗ್ ಟ್ಯೂಷನ್ ನೀಡುವ ಮಾಡೆಲ್ ಯಾರು ? :  ಡೇಟಿಂಗ್ ತರಬೇತಿ ನೀಡ್ತಿರುವ ಮಹಿಳೆ ಹೆಸರು ಕೆಜಿಯಾ ನೋಬಲ್ (Kezia Noble). ಆಕೆ ಡೇಟಿಂಗ್ ಹಾಗೂ ಅಟ್ರಾಕ್ಷನ್ ಸ್ಪೆಷಲಿಸ್ಟ್. 15ನೇ ವರ್ಷದಲ್ಲಿಯೇ ಕೆಜಿಯಾ ನೋಬಲ್ ಶಾಲೆ ಬಿಟ್ಟಿದ್ದಳು. ಕೆಜಿಯಾಳಿಂದ ಟ್ರೈನಿಂಗ್ ಪಡೆದ ಅನೇಕ ಹುಡುಗರು ಆಕೆಯನ್ನೇ ಪ್ರೀತಿಸಲು ಶುರು ಮಾಡಿದ್ದರು. ಕೆಲ ಹುಡುಗರು ಕೆಜಿಯಾ ನೋಬಲ್ ಳಿಂದ ತರಬೇತಿ ಪಡೆದು ಆಕೆಗೇ ಫ್ಲರ್ಟ್ ಮಾಡಲು ಪ್ರಯತ್ನಿಸಿದ್ದರಂತೆ.

RELATIONSHIP TIPS: ನಿಮ್ಮ ಸ್ಥಾನಕ್ಕೆ ಬೇರೊಬ್ಬಳು ಬಂದರೆ ನೀವೇನು ಮಾಡಬೇಕು?

ಹೇಗೆ ಶುರುವಾಯ್ತು ಕೆಜಿಯಾ ನೋಬೆಲ್ ಈ ವೃತ್ತಿ ಬದುಕು ? : 2006ರಲ್ಲಿ ಕೆಜಿಯಾ ನೋಬೆಲ್ ಭವಿಷ್ಯ ಬದಲಾಯ್ತು. ಆಗ ಕೆಜಿಯಾಗೆ 25 ವರ್ಷ ವಯಸ್ಸು. ಆಕೆ ಕ್ಲಬ್ ಒಂದರಲ್ಲಿ ಕುಳಿತಿದ್ದಳಂತೆ. ಅಲ್ಲಿಗೆ ಬಂದ ವ್ಯಕ್ತಿಯೊಬ್ಬ ಆಕೆಯ ಮೊಬೈಲ್ ನಂಬರ್ ಕೇಳಿದ್ದಾನೆ. ಆತ ಬೂಟ್‌ಕ್ಯಾಂಪ್ ನಡೆಸುತ್ತಿದ್ದನಂತೆ. ಬೂಟ್‌ಕ್ಯಾಂಪ್ ಗೆ ಬರುವ ಪುರುಷರಿಗೆ, ಹುಡುಗಿಯರ ಜೊತೆ ಹೇಗೆ ಮಾತನಾಡಬೇಕು ಎಂಬುದನ್ನು ಕಲಿಸಲು ಆತ ನಿರ್ಧರಿಸಿದ್ದನಂತೆ. ಹುಡುಗಿಯರ ಜೊತೆ ಹೇಗೆ ಮಾತನಾಡಬೇಕು ಎಂದು ಕೆಜಿಯಾಳನ್ನು ಆ ವ್ಯಕ್ತಿ ಪ್ರಶ್ನೆ ಮಾಡಿದ್ದನಂತೆ. ಕೆಜಿಯಾಗೆ ಈಗ 40 ವರ್ಷ ವಯಸ್ಸು. ಪ್ರತಿ ವಾರಾಂತ್ಯದಲ್ಲಿ ತರಬೇತಿಗೆ ಬರುವ ಹುಡುಗರು 20 ವರ್ಷ ವಯಸ್ಸಿನ ಹುಡುಗಿಯರ ಜೊತೆ ಹೇಗೆ ಮಾತನಾಡಬೇಕು ಎಂಬುದನ್ನು ಅಭ್ಯಾಸ ಮಾಡ್ತಾರಂತೆ.

ಪರ್ಸನಲ್ ಡೆವಲ್ಪಮೆಂಟ್ ಕೋಚಿಂಗ್ ಪಡೆದಿದ್ದ ಕೆಜಿಯಾ : ಕೆಜಿಯಾ ಪರ್ಸನಲ್ ಡೆವಲ್ಪಮೆಂಟ್ ಕೋಚಿಂಗ್ ಕೂಡ ಪಡೆದಿದ್ದಾಳೆ. ಪರ್ಸನಲ್ ಡೆವಲ್ಪಮೆಂಟ್ ಉದ್ಯಮವು 9 ಟ್ರಿಲಿಯನ್ ರೂಪಾಯಿಗಿಂತ ಹೆಚ್ಚಿದೆ. ಕೋಚಿಂಗ್ ಪಡೆದ ಒಂದು ವರ್ಷದ ನಂತ್ರ ಕೆಜಿಯಾಗೆ ವಾಸ್ತವದ ಅರಿವಾಗಿದೆ. ಈ ಉದ್ಯಮದಲ್ಲಿ ಮಹಿಳೆಯರ ಸಂಖ್ಯೆ ಕಡಿಮೆಯಿದೆ ಎಂಬುದು ಗೊತ್ತಾಗಿದೆ. ಅದ್ರಲ್ಲೂ ಮಹಿಳೆಯರ ಭಾವನೆಯನ್ನು ಪುರುಷರಿಗೆ ಹೇಳುವ ಮಹಿಳೆಯರ ಸಂಖ್ಯೆ ಬೆರಳೆಣಿಕೆಯಷ್ಟು ಎಂಬುದನ್ನು ಕೆಜಿಯಾ ಅರಿತಿದ್ದಾಳೆ. ನಂತ್ರ ಕೋಚಿಂಗ್ ಕ್ಷೇತ್ರಕ್ಕೆ ಕಾಲಿಟ್ಟಿದ್ದಾಳೆ. ಕೆಜಿಯಾ,ಯುಟ್ಯೂಬ್ ಚಾನೆಲ್ ಕೂಡ ನಡೆಸುತ್ತಿದ್ದಾಳೆ. ಆಕೆ ಯುಟ್ಯೂಬ್ ಚಾನೆಲ್ ನಲ್ಲಿ, ಹುಡುಗಿಯರ ಜೊತೆ ಮಾತನಾಡುವ ವೇಳೆ ಪುರುಷರು ಯಾವ ತಪ್ಪು ಮಾಡ್ತಾರೆ ಎಂಬುದನ್ನು ಹೇಳುತ್ತಾರೆ. 4 ಲಕ್ಷಕ್ಕೂ ಹೆಚ್ಚು ಸಬ್ಸ್ಕ್ರೈಬರ್ ಹೊಂದಿದ್ದಾಳೆ ಕೆಜಿಯಾ. 

Women Health : ಮಹಿಳೆಯರನ್ನು ಹೆಚ್ಚಾಗಿ ಕಾಡುತ್ತೆ ಈ ಐದು ಕ್ಯಾನ್ಸರ್

ಕೆಜಿಯಾ ಕೋಚಿಂಗ್ ಕ್ಲಾಸ್ ನಲ್ಲೇನಿದೆ? : ಕೆಜಿಯಾ 25 ಉದ್ಯೋಗಿಗಳನ್ನು ಹೊಂದಿದ್ದಾರೆ. ಡೇಟಿಂಗ್ ವರ್ಕ್ ಶಾಪ್ ನಡೆಸುತ್ತಾರೆ ಕೆಜಿಯಾ. ಒಂದು ಗಂಟೆ ಕೋಚಿಂಗ್ ಗೆ ಕೆಜಿಯಾ ಬರೋಬ್ಬರಿ 30 ಸಾವಿರ ರೂಪಾಯಿ ಪಡೆಯುತ್ತಾಳೆ. ಕೆಲವೊಮ್ಮೆ ಎರಡು ಗಂಟೆಯವರೆಗೂ ಕೋಚಿಂಗ್ ಕ್ಲಾಸ್ ನಡೆಸುತ್ತಾಳೆ ಕೆಜಿಯಾ. ಇದಲ್ಲದೆ ತನ್ನ ಉತ್ಪನ್ನಗಳ ಮಾರಾಟ ಮಾಡಿ ಆಕೆ ಈವರೆಗೆ 10 ಕೋಟಿ ಸಂಪಾದನೆ ಮಾಡಿದ್ದಾಳೆ. ಪುಸ್ತಕ, ಡಿವಿಡಿ, ವಿಡಿಯೋ ಡೌನ್ಲೋಡ್ ಮೂಲಕ ಆಕೆ ಸಾಕಷ್ಟು ಹಣ ಸಂಪಾದನೆ ಮಾಡಿದ್ದಾಳೆ. ಕೊರೊನಾ ಕಾರಣದಿಂದಾಗಿ ಆಕೆ ಉದ್ಯಮಕ್ಕೆ ಸ್ವಲ್ಪ ತೊಂದರೆಯಾಗಿತ್ತು. ಆದ್ರೆ ಆನ್ಲೈನ್ ಕ್ಲಾಸ್ ಮೂಲಕ ಉದ್ಯಮದಲ್ಲಿ ಚೇತರಿಕೆಯಾಗಿದೆ. ಸದ್ಯ ಕೆಜಿಯಾ ಸಿಂಗಲ್. ಆಕೆಯ 6 ವರ್ಷದ ಮಗ ತಂದೆ ಜೊತೆ ವಾಸವಾಗಿದ್ದಾನೆ.

PREV

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ರಶ್ಮಿಕಾ- ಸ್ಮೃತಿ ಇಬ್ಬರ ಎಂಗೇಜ್​ಮೆಂಟೂ ಮುರಿದುಬಿತ್ತು: ಮಂದಣ್ಣ- ಮಂಧಾನ ಹೆಸರಲ್ಲಿ ಏನಿದೆ ಗ್ರಹಚಾರ?
ನಾವ್ಯಾರಿಗೂ ಕಮ್ಮಿ ಇಲ್ಲ ಬ್ರೋ... ಆಹಾ ಭಾರತೀಯ ನಾರಿ ಕುಡಿದು ರಾಪಿಡೋ ಏರಿ ಬಿದ್ದಳು ಕೆಳಗೆ ಜಾರಿ: ವೀಡಿಯೋ