ಮೆಟರ್ನಿಟಿ ರಜೆ ಬಳಿಕ ಮತ್ತೆ ಗರ್ಭಿಣಿಯಾದ ಉದ್ಯೋಗಿ ವಜಾ, ಕಂಪನಿಗೆ 31 ಲಕ್ಷ ರೂ ದಂಡ!

By Chethan Kumar  |  First Published Oct 20, 2024, 5:50 PM IST

ಮೆಟರ್ನಿಟಿ ರಜೆ ಮುಗಿಸಿ ಬಂದ ಬೆನ್ನಲ್ಲೇ 2ನೇ ಮಗುವಿಗೆ ತಾಯಿಯಾಗುತ್ತಿರುವ ಗುಡ್ ನ್ಯೂಸ್ ಹಂಚಿಕೊಂಡ ಉದ್ಯೋಗಿಗೆ ಕಂಪನಿ ಶಾಕ್ ನೀಡಿದೆ. ನಿಯಮ ಉಲ್ಲಂಘಿಸಿದ ಕಂಪನಿಗೆ ಇದೀಗ ಟ್ರಿಬ್ಯನಲ್ ಬೋರ್ಡ್ ಇನ್ನೆಂದು ಈ ತಪ್ಪು ಮಾಡದಂತ ಶಾಕ್ ನೀಡಿದೆ. 


ಲಂಡನ್(ಅ.20) ಮಹಿಳೆಯರಿಗೆ  ತಾಯ್ತನದ ರಜೆ ಕಡ್ಡಾಯ. ಭಾರತದಲ್ಲಿ ಕನಿಷ್ಠ 6 ತಿಂಗಳ ವೇತನ ಸಹಿತ ರಜೆ ನೀಡಲಾಗುತ್ತದೆ. ಇದು ನಿಯಮ. ಹೀಗೆ ಮಹಿಳಾ ಉದ್ಯೋಗಿ ಮೊದಲ ಮಗುವಿಗೆ ಜನ್ಮ ಹಾಗೂ ಆರೈಕೆಗೆ ಮೆಟರ್ನಿಟಿ ಲೀವ್ ಪಡೆದಿದ್ದಾರೆ. ರಜೆ ಮುಗಿಸಿ ಕಚೇರಿಗೆ ಆಗಮಿಸಿದ ಉದ್ಯೋಗಿ ಸಂಭ್ರಮದಿಂದ ಗುಡ್ ನ್ಯೂಸ್ ಹಂಚಿಕೊಂಡಿದ್ದಾರೆ. 2ನೇ ಮಗುವಿಗೆ ತಾಯಿಯಾಗುತ್ತಿರುವ ಮಾಹಿತಿಯನ್ನು ಕಚೇರಿಗೆ ತಿಳಿಸಿದ್ದಾಳೆ. ಈಗಷ್ಟೇ ಮೆಟರ್ನಿಟಿ ರಜೆ ಮುಗಿಸಿ ಬಂದ ಬೆನ್ನಲ್ಲೇ ಗರ್ಭಿಣಿಯಾಗಿರುವ ಮಹಿಳಾ ಉದ್ಯೋಗಿಯನ್ನು ಕಂಪನಿ ಆರ್ಥಿಕ ನಷ್ಟದ ಕಾರಣ ನೀಡಿ ವಜಾಗೊಳಿಸಿದೆ. ಆದರೆ ನಿಯಮ ಉಲ್ಲಂಘಿಸಿದ ಕಂಪನಿಗೆ ಉದ್ಯೋಗ ಟ್ರಿಬ್ಯನಲ್ ಬೋರ್ಡ್ ತಕ್ಕ ಶಾಸ್ತಿ ಮಾಡಿದೆ. ಮಹಿಳಾ ಉದ್ಯೋಗಿಗೆ 31 ಲಕ್ಷ ರೂಪಾಯಿ ದಂಡದ ರೂಪದಲ್ಲಿ ನೀಡುವಂತೆ ಆದೇಶಿಸಿದ ಘಟನೆ ಲಂಡನ್‌ನಲ್ಲಿ ನಡೆದಿದೆ. 

ಯುಕೆಯಲ್ಲಿ ನೆಲೆಸಿರುವ ಭಾರತೀಯ ಮೂಲಕ ನಿಕಿತಾ ಟ್ವಿಚ್ಚನ್ ಮಹಿಳೆ ಮೊದಲ ಮಗುವಿನ ತಾಯಿಯಾಗಿದ್ದಾರೆ. ನಿಯಮ ಬದ್ಧವಾಗಿ ಕಂಪನಿಯಿಂದ ಮೆಟರ್ನಿಟಿ ರಜೆ ಪಡೆದುಕೊಂಡಿದ್ದಾರೆ. ಮೆಟರ್ನಿಟಿ ರಜೆ ಮುಗಿಸಿ ಕಚೇರಿಗೆ ಬಂದ  ನಿಕಿತಾ ಎರಡನೇ ಗುಡ್ ನ್ಯೂಸ್ ಕಚೇರಿಯಲ್ಲಿ ಹಂಚಿಕೊಂಡಿದ್ದಾರೆ.   

Latest Videos

undefined

ಮಹಿಳಾ ನೌಕರರಿಗೆ ಕೇಂದ್ರದ ಕೊಡುಗೆ, ಬಾಡಿಗೆ ತಾಯ್ತನದ ಸಂದರ್ಭದಲ್ಲಿ 6 ತಿಂಗಳ ರಜೆ!

ನಿಕಿತಾ ಮೆಟರ್ನಿಟಿ ರಜೆ ಮುಗಿಸಿ ಬಂದ ಬಳಿಕ ಕಂಪನಿ ಮೀಟಿಂಗ್ ನಡೆಸಿದೆ. ಮುಂದಿನ ಕೆಲಸ, ಟಾರ್ಗೆಟ್ ಸೇರಿದಂತೆ ಹಲವು ವಿಚಾರಗಳ ಕುರಿತು ಚರ್ಚೆ ನಡೆಸಿದೆ. ಇದೇ ವೇಳೆ ನಿಕಿತಾ ಮತ್ತೆ ಕೆಲಸಕ್ಕೆ ಹಾಜರಾಗಿರುವುದಕ್ಕೆ ಅಭಿನಂದನೆ ಸಲ್ಲಿಸಿ ಮತ್ತಷ್ಟು ಉತ್ಸಾಹದಿಂದ ಕೆಲಸ ಮಾಡಲು ಎಲ್ಲರಿಗೂ ಶುಭಹಾರೈಸಿದ್ದಾರೆ. ಇದೇ  ಮೀಟಿಂಗ್‌ನಲ್ಲಿ ನಿಕಿತಾ ತಮ್ಮ ಗುಡ್ ನ್ಯೂಸ್‌ನ್ನು ಬಾಸ್ ಹಾಗೂ ಇತರ ಹಿರಿಯ ಮ್ಯಾನೇಜರ್ ಜೊತೆ ಹಂಚಿಕೊಂಡಿದ್ದಾರೆ. ಅಲ್ಲೀವರೆಗೆ ಎಲ್ಲವೂ ಒಕೆ ಎನ್ನುವಂತಿದ್ದ ಮೀಟಿಂಗ್ ಒಂದೇ ಕ್ಷಣದಲ್ಲಿ ಬದಲಾಯಿತು. 

ಈಗಷ್ಟೇ ಮೆಟರ್ನಿಟಿ ರಜೆ ಮುಗಿಸಿಕೊಂಡು ಬಂದಿರುವ ಉದ್ಯೋಗಿ ಇದೀಗ ಗರ್ಭಿಣಿ ಅನ್ನೋ ಗುಡ್ ನ್ಯೂಸ್ ಕಂಪನಿಯ ಪಿತ್ತ ನೆತ್ತಿಗೇರುವಂತೆ ಮಾಡಿದೆ. ಮ್ಯಾನೇಜಿಂದ್ ಡೈರೆಕ್ಟರ್ ಜರ್ಮೆನಿ ಮಾರ್ಗನ್ ಹಾವ ಭಾವ ಬದಲಾಗಿದೆ. ಇಷ್ಟೇ ಅಲ್ಲ ನಿಕಿತಾ ಕೆಲಸದಿಂದ ವಜಾಗೊಂಡಿದ್ದಾರೆ. ಆರ್ಥಿಕ ಕಾರಣ ನೀಡಿ ನಿಕಿತಾರನ್ನು ಏಕಾಏಕಿ ಕೆಲಸದಿಂದ ವಜಾ ಮಾಡಲಾಗಿತ್ತು. ಈ ಕುರಿತು ಇಮೇಲ್ ಮೂಲಕ ಸ್ಪಷ್ಟನೆ ಕೇಳಿದ್ದ ನಿಕಿತಾಗೆ ಹಲವು ದಿನ ಯಾವುದೇ ಉತ್ತರ ಬಂದಿರಲಿಲ್ಲ. ಆದರೆ ಸತತ ಇಮೇಲ್‌ನಿಂದ ಆರ್ಥಿಕ ಸಮಸ್ಯೆ ಕಾರಣ ನೀಡಲಾಗಿತ್ತು. ಬಳಿಕ ನಿಕಿತಾ ಸ್ಥಾನಕ್ಕೆ ವಿಶೇಷ ಸಾಫ್ಟ್‌ವೇರ್ ಇನ್‌ಸ್ಟಾಲ್ ಮಾಡಲಾಗಿದೆ ಅನ್ನೋ ಕಾರಣ ನೀಡಲಾಗಿತ್ತು. ಆದರೆ ನಿಕಿತಾ ಸ್ಥಾನಕ್ಕೆ ಹಾಗೂ ಆ ಕೆಲಸಕ್ಕೆ ಯಾವುದೇ ಸಾಫ್ಟ್‌ವೇರ್ ಹಾಕಿರಲಿಲ್ಲ. 

ಹೀಗಾಗಿ ನಿಕಿತಾ ಉದ್ಯೋಗಿಗಳ ಟ್ರಿಬ್ಯುನಲ್‌ನಲ್ಲಿ ಕಂಪನಿ ನಿರ್ಧಾರ ಪ್ರಶ್ನಿಸಿದ್ದರು. ಇಮೇಲ್ ದಾಖಲೆ ಸೇರಿದಂತೆ ಇತರ ದಾಖಲೆ ನೀಡಲಾಗಿತ್ತು. ಟ್ರಿಬ್ಯುನಲ್ ಬೋರ್ಡ್ ಕಂಪನಿಯಿಂದ ಕೆಲ ದಾಖಲೆ ತರಿಸಿಕೊಂಡು ತನಿಖೆ ನಡೆಸಿ ಇದೀಗ ತೀರ್ಪು ನೀಡಿದೆ. ನಿಯಮ ಉಲ್ಲಂಘಿಸಿದ ಕಂಪನಿ, ನಿಕಿತಾಗೆ 31 ಲಕ್ಷ ರೂಪಾಯಿ ಪಾವತಿಸುವಂತೆ ಆದೇಶ ನೀಡಿದೆ. 

ಮುಟ್ಟಿನ ರಜೆ ಹಾಗೂ 18 ವರ್ಷ ಮೇಲ್ಪಟ್ಟ ವಿದ್ಯಾರ್ಥಿನಿಯರಿಗೆ 60 ದಿನ ಹೆರಿಗೆ ರಜೆ, ಕೇರಳ ಸರ್ಕಾರ ಘೋಷಣೆ
 

click me!