ಭಲೇ ನಾರಿ..ಯುಕೆ ಮ್ಯಾರಥಾನ್‌ನಲ್ಲಿ ಸೀರೆಯುಟ್ಟು ಒಡಿದ ಒಡಿಯಾ ಮಹಿಳೆ!

By Vinutha PerlaFirst Published Apr 18, 2023, 4:24 PM IST
Highlights

ಸೀರೆಯುಟ್ಟ ನೀರೆಯನ್ನು ನೋಡೋದೇ ಚೆಂದ. ಆದ್ರೆ ಸೀರೆಯುಟ್ಟು ಬೇರೇನೂ ಕೆಲ್ಸ ಮಾಡೋಕಾಗಲ್ಲ. ಸುಮ್ನೆ ಕುಳಿತುಕೊಂಡಿರಬೇಕಷ್ಟೇ ಅನ್ನೋದು ಹಲವರ ದೂರು. ಆದ್ರೆ ಒಡಿಯಾದಲ್ಲಿ ಮಹಿಳೆಯೊಬ್ಬಳು ಸೀರೆಯನ್ನುಂಟುಕೊಂಡೇ ಬರೋಬ್ಬರಿ 42.5 ಕಿಮೀ ದೂರ ಓಡಿದ್ದಾರೆ.

ಹೆಣ್ಣು ಸೀರೆ ಉಟ್ಟರೆ ಪರಿಪೂರ್ಣ. ಭಾರತೀಯ ಸಂಸ್ಕೃತಿಯ ಪ್ರತೀಕವಾಗಿ ಸುಂದರವಾಗಿ ಕಾಣುತ್ತಾರೆ. ಆದ್ರೆ ಇತ್ತೀಚಿಗೆ ಸೀರೆ ಎಂಬುದು ಕೇವಲ ಹಬ್ಬ ಹರಿದಿನಗಳಿಗಷ್ಟೇ ಸೀಮಿತವಾಗಿದೆ. ಸೀರೆಯುಟ್ಟು ಯಾವುದೇ ಕೆಲಸ ಮಾಡೋಕೆ ಕಷ್ಟ ಅನ್ನೋ ಕಾರಣದಿಂದ ಬಹುತೇಕ ಹೆಣ್ಣುಮಕ್ಕಳು ಸಲ್ವಾರ್, ಜೀನ್ಸ್ ಮೊರೆ ಹೋಗಿದ್ದಾರೆ. ಸೀರೆಯುಟ್ಟು ಮನೆ ಕೆಲಸ ಮಾಡೋಕೆ ಆಗಲ್ಲ, ಉಟ್ಕೊಂಡು ಓಡಾಡೋಕು ಕಷ್ಟ ಅನ್ನೋ ಕಾರಣಗಳನ್ನು ಹೇಳ್ತಾರೆ. ಇನ್ನೂ ಸ್ಪೋರ್ಟ್ಸ್‌ ಚಟುವಟಿಕೆಗಳಿಗಳನ್ನಂತೂ ಸೀರೆಯುಟ್ಟು ಮಾಡೋದು ಕಷ್ಟಾನೇ ಸರಿ. ಹೀಗಾಗಿಯೇ ಕ್ರೀಡಾಂಗಣ ಚಟುವಟಿಕೆಗಳಿಗೆ ಸಾಮಾನ್ಯವಾಗಿ ಶಾರ್ಟ್ಸ್, ಬನಿಯನ್ ಹಾಕಿ ಮಾಡ್ತಾರೆ. ಆದರೆ ಇಲ್ಲೊಬ್ಬ ಮಹಿಳೆ ಮಾತ್ರ ಸೀರೆಯನ್ನುಂಟುಕೊಂಡು ಮ್ಯಾರಥಾನ್‌ನಲ್ಲಿ ಭಾಗವಹಿಸಿ ಎಲ್ಲರ ಹುಬ್ಬೇರುವಂತೆ ಮಾಡಿದ್ದಾರೆ.

ಹೌದು, ಅಚ್ಚರಿಯೆನಿಸಿದರೂ ಇದು ನಿಜ. ಅಸಂಬಲ್ಪುರಿ ಸೀರೆ (Saree)ಯುಟ್ಟ UK ಮೂಲದ ಒಡಿಯಾ ಮಹಿಳೆ (Odia woman) ಮ್ಯಾಂಚೆಸ್ಟರ್‌ನಲ್ಲಿ 42.5-ಕಿಲೋಮೀಟರ್ ಮ್ಯಾರಥಾನ್ ಓಡಿದರು. ಈ ಮ್ಯಾರಥಾನ್‌ನ್ನು ಅವರು ಗಂಟೆ 50 ನಿಮಿಷಗಳಲ್ಲಿ ಪೂರ್ಣಗೊಳಿಸಿದರು.

ಸಾರಿಯಲ್ಲಿ ನಾರಿಯ ಕರಾಮತ್ತು..ಸೀರೆಯುಟ್ಟು ಗೋಲ್ ಹೊಡೆದ ಮಹಿಳಾಮಣಿಗಳು

ನಲವತ್ತೊಂದು ವರ್ಷದ ಮಧುಸ್ಮಿತಾರಿಂದ ಸೀರೆಯಲ್ಲಿ ಮ್ಯಾರಥಾನ್‌
ಮ್ಯಾಂಚೆಸ್ಟರ್‌ನಲ್ಲಿ ಪ್ರೌಢಶಾಲಾ ಶಿಕ್ಷಕಿ (Teacher)ಯಾಗಿರುವ ನಲವತ್ತೊಂದು ವರ್ಷದ ಮಧುಸ್ಮಿತಾ ಜೆನಾ ಸೀರೆಯನ್ನುಂಟು ಕೊಂಡು ಮ್ಯಾರಥಾನ್‌ಗೆ ಬಂದಾಗ ಎಲ್ಲರೂ ಆಶ್ಚರ್ಯಚಕಿತರಾದರು. ಅದರಲ್ಲೂ ಸೀರೆಯುಟ್ಟು ಮಧುಸ್ಮಿತಾ ಓಡಿದ ರೀತಿ ಎಲ್ಲರೂ ಬೆರಗುಗೊಳ್ಳುವಂತೆ ಮಾಡಿತು. ಹಾಗೆಂದು ಇದು ಮಧುಸ್ಮಿತಾ ಓಡಿರುವ ಮೊದಲ ಮ್ಯಾರಥಾನ್ ಅಲ್ಲ. ಈ ಹಿಂದೆ ಅವರು ಜಗತ್ತಿನಾದ್ಯಂತ ಅನೇಕ ಮ್ಯಾರಥಾನ್‌ಗಳು ಮತ್ತು ಅಲ್ಟ್ರಾ-ಮ್ಯಾರಥಾನ್‌ಗಳಲ್ಲಿ ಭಾಗವಹಿಸಿದ್ದರು. ಆದರೆ ಸೀರೆ ಉಟ್ಟು ಮ್ಯಾರಥಾನ್‌ನಲ್ಲಿ ಭಾಗವಹಿಸಿದ್ದು ಇದೇ ಮೊದಲು. 

ಸೀರೆಯಲ್ಲಿ ನಡೆಯುವುದೇ ಕಷ್ಟ. ಹೀಗಿರುವಾಗ ಸೀರೆಯುಟ್ಟು ಓಡಿರುವ ಮಧುಸ್ಮಿತಾ ನಡೆಗೆ ಎಲ್ಲರೂ ಮೆಚ್ಚುಗೆ (Compliment) ಸೂಚಿಸಿದ್ದಾರೆ. ವಾಯುವ್ಯ ಇಂಗ್ಲೆಂಡ್ ಒಡಿಯಾ ಸಮುದಾಯದ ಸಕ್ರಿಯ ಸದಸ್ಯರಾಗಿದ್ದಾರೆ. ಕಳೆದ ವರ್ಷ, ಒಡಿಶಾ ಸೊಸೈಟಿ ಆಫ್ ಯುಕೆ ಸಮಾವೇಶದಲ್ಲಿ ಕ್ರೀಡಾ ಸಾಧನೆಗಾಗಿ ಅವರನ್ನು ಗೌರವಿಸಲಾಗಿತ್ತು. 

ದೇಶದ ಸಂಸ್ಕೃತಿ ಸಾರಲು ಮರಾಠಿ ಸೀರೆಯುಟ್ಟು ಬೈಕ್ ಸವಾರಿ ಮಾಡೋ ನಾರಿ

ಸೀರೆ ಉಟ್ಟುಕೊಂಡು ಮ್ಯಾರಥಾನ್ ಓಡಿದ ಏಕೈಕ ವ್ಯಕ್ತಿ ನಾನು ಎಂದಿದ್ದಾರೆ ಮಧುಸ್ಮಿತಾ. ಸೀರೆಯಲ್ಲಿ ತುಂಬಾ ಸಮಯ ಓಡುವುದು ಹೆಚ್ಚು ಕಷ್ಟ. ಆದರೆ ನಾನು 4.50 ಗಂಟೆಗಳಲ್ಲಿ ಪೂರ್ಣಗೊಳಿಸಿದ್ದು ನನಗೆ ಸಂತೋಷವಾಗಿದೆ ಎಂದು ಸಂತಸ (Happiness) ವ್ಯಕ್ತಪಡಿಸಿದ್ದಾರೆ. ಈ ಮ್ಯಾರಥಾನ್‌ಗೆ ತನ್ನ ತಾಯಿ ಮತ್ತು ಅಜ್ಜಿಯಿಂದ ಸ್ಫೂರ್ತಿ ಪಡೆದಿದ್ದಾಗೆ ತಿಳಿಸಿದ್ದಾರೆ. ಮಧುಸ್ಮಿತಾ ದಿನನಿತ್ಯ ಮನೆಯಲ್ಲಿಯೂ ಸೀರೆ ಉಡುತ್ತಾರಂತೆ. ಮಹಿಳೆಯರು ಸೀರೆಯನ್ನು ಧರಿಸಿ ಓಡಲಾರರು ಎಂದು ಹಲವರು ಹೇಳುತ್ತಾರೆ. ಆದರೆ ನಾನು ಸಂಬಲ್ಪುರಿ ಕೈಮಗ್ಗದ ಸೀರೆ ಧರಿಸಿ ಆರಾಮವಾಗಿ ಓಡಾಡಬಲ್ಲೆ, ಓಡಬಲ್ಲೆ ಎಂದು ಮಧುಸ್ಮಿತಾ ಹೇಳಿದರು. 

ಮಧುಸ್ಮಿತಾ ಅವರ ಪತಿ ಈಜಿಪ್ಟ್‌ನಲ್ಲಿ ಕೆಲಸ ಮಾಡುತ್ತಾರೆ ಮತ್ತು ಅವರಿಗೆ ಇಬ್ಬರು ಗಂಡು ಮಕ್ಕಳಿದ್ದಾರೆ. ಸೀರೆಯುಟ್ಟು ಮ್ಯಾರಥಾನ್‌ನಲ್ಲಿ ಭಾಗಿಯಾಗಿರುವ ತಮ್ಮ ಸಾಧನೆಯಿಂದ ಮಧುಸ್ಮಿತಾ UK ಮತ್ತು ಒಡಿಯಾಸ್‌ನ ಸಂಪೂರ್ಣ ಒಡಿಯಾ ಸಮುದಾಯವನ್ನು ಹೆಮ್ಮೆಪಡುವಂತೆ ಮಾಡಿದ್ದಾರೆ. 

ಕಳೆದ ವರ್ಷ ಒಡಿಶಾ ಸೊಸೈಟಿ ಆಫ್ ಯುಕೆ ಸಮಾವೇಶದಲ್ಲಿ ಕ್ರೀಡಾ ಕ್ಷೇತ್ರದ ಸಾಧನೆಗಾಗಿ ಮಧುಸ್ಮಿತಾ ಅವರನ್ನು ಗೌರವಿಸಲಾಗಿತ್ತು. ಮಧುಸ್ಮಿತಾ ಯಾವಾಗಲೂ ಹೊಸ ಸಾಹಸಗಳೊಂದಿಗೆ ನಮಗೆ ಸ್ಫೂರ್ತಿ ನೀಡುತ್ತಾರೆ. ಅದರಲ್ಲೂ ಈ ಬಾರಿ ಅವರು ಸೀರೆಯಲ್ಲಿ ಓಡುವ ಮೂಲಕ ಹೊಸ ದಾಖಲೆ ಮಾಡಿದ್ದಾರೆ. ಯುಕೆಯ ಇಡೀ ಒಡಿಯಾ ಸಮುದಾಯವು ಆಕೆಯ ಸಾಧನೆಗಳ ಬಗ್ಗೆ ಹೆಮ್ಮೆಪಡುತ್ತದೆ ಎಂದು ಯುಕೆ ಶ್ರೀ ಜಗನ್ನಾಥ್ ಸೊಸೈಟಿಯ ಟ್ರಸ್ಟಿ ಮತ್ತು ಯುಕೆ ಒಡಿಶಾ ಸೊಸೈಟಿಯ ಮಾಜಿ ಕಾರ್ಯದರ್ಶಿ ಸುಕಾಂತ್ ಕುಮಾರ್ ಸಾಹು ಹೇಳಿದ್ದಾರೆ. 

click me!