
ಬಾಡಿಗೆ ವಾಹನವನ್ನು ಏರಿದಾಗ ನಾವು ಫೋನ್ ತೆಗೆದುಕೊಂಡು ಆಪ್ತರ ಜೊತೆ ಮಾತುಕತೆಗಿಳಿಯುತ್ತೇವೆ. ನಮ್ಮ ಜೊತೆ ಇನ್ನೊಬ್ಬರಿದ್ದರೆ ಇಬ್ಬರ ಮಧ್ಯೆ ಸಂಭಾಷಣೆ ಜೋರಾಗಿ ನಡೆದಿರುತ್ತದೆ. ವೈಯಕ್ತಿಕ ವಿಷ್ಯ, ಹಣಕಾಸಿನ ವಿಷ್ಯ ಎಲ್ಲವನ್ನೂ ಚರ್ಚೆ ಮಾಡ್ತಾವೆ. ಬ್ಯಾಗ್ ನಲ್ಲಿ ಹಣ ಅಥವಾ ಒಡವೆ ಕೊಂಡೊಯ್ಯುತ್ತಿದ್ದರೆ ಅದ್ರ ಬಗ್ಗೆಯೂ ಹೇಳಿರ್ತೇವೆ. ನಮ್ಮ ಮಾತನ್ನು ಇನ್ನೊಬ್ಬ ಅಪರಿಚಿತ ವ್ಯಕ್ತಿ ಕೇಳಿಸಿಕೊಳ್ತಿದ್ದಾನೆ ಎನ್ನುವ ಪರಿವೆ ನಮಗಿರೋದಿಲ್ಲ. ಈಗ ಬೆಂಗಳೂರಿನ ಮಹಿಳೆಯೊಬ್ಬಳು ಇದೇ ಕೆಲಸ ಮಾಡಿ 82 ಲಕ್ಷ ರೂಪಾಯಿ ಕಳೆದುಕೊಂಡಿದ್ದಾಳೆ. ಉಬರ್ ಚಾಲಕ ಮಹಿಳೆಗೆ ಸರಿಯಾಗಿ ಫಂಗನಾಮ ಹಾಕಿದ್ದಾನೆ. ಅಷ್ಟಕ್ಕೂ ಆಗಿದ್ದೇನು ಎನ್ನೋದನ್ನು ನಾವು ಹೇಳ್ತೇವೆ.
ಘಟನೆ ಬೆಂಗಳೂರಿ (Bangalore)ನಲ್ಲಿ ನಡೆದಿದೆ. ಮಹಿಳೆ 22 ಲಕ್ಷ ಕ್ಯಾಶ್ ಹಾಗೂ 960 ಗ್ರಾಂ ಬಂಗಾರ (Gold) ವನ್ನು ದೋಷಿದ್ದಾನೆ. ಕ್ಯಾಬ್ ಡ್ರೈವರ್ ಮಹಿಳೆಯನ್ನು ಬಾಲ್ಯದ ಸ್ನೇಹಿತ ಎಂದು ನಂಬಿಸಿದ್ದನಂತೆ. 35 ವರ್ಷದ ಕಿರಣ್ ಕುಮಾರ್ ವೃತ್ತಿಯಲ್ಲಿ ಉಬರ್ (Uber )ಚಾಲಕ. ಬಹಳ ಬುದ್ದಿವಂತಿಕೆಯಿಂದ ಮಹಿಳೆಯನ್ನು ಮೂರ್ಖಳನ್ನಾಗಿ ಮಾಡಿದ್ದಾನೆ ಕಿರಣ್ ಕುಮಾರ್. ಕ್ಯಾಬ್ ಹತ್ತಿದ ಮಹಿಳೆ ತನ್ನ ಸ್ನೇಹಿತನ ಜೊತೆ ಫೋನ್ ನಲ್ಲಿ ಮಾತನಾಡಿದ್ದಾಳೆ. ಅದನ್ನು ಕ್ಯಾಬ್ ಡ್ರೈವರ್ ಕೇಳಿಸಿಕೊಂಡಿದ್ದಾನೆ.
ಸುಧಾ ಮೂರ್ತಿ ಹೇಳಿದ ಮನಿ ಮಂತ್ರ, ಎಮರ್ಜೆನ್ಸಿ ಫಂಡ್ ಏಕಿರಬೇಕು?
ಇದಾದ್ಮೇಲೆ ಬಾಲ್ಯದ ಸ್ನೇಹಿತ ಅಂತ ಮಹಿಳೆ ಜೊತೆ ಮಾತುಕತೆ ಶುರು ಮಾಡಿದ್ದಾನೆ ಚಾಲಕ. ಮಹಿಳೆ ಆತನನ್ನು ನಂಬಿ ಮಾತನಾಡಿದ್ದಾಳೆ. ಒಂದು ದಿನ ತುರ್ತು ಅಗತ್ಯವಿದೆ ಎಂದು ನಂಬಿಸಿದ ವ್ಯಕ್ತಿ ಹಣ ನೀಡುವಂತೆ ಮಹಿಳೆಗೆ ಹೇಳಿದ್ದಾನೆ. ಪೂರ್ವಾಪರ ಆಲೋಚನೆ ಮಾಡದೆ ಮಹಿಳೆ 22 ಲಕ್ಷ ರೂಪಾಯಿಯನ್ನು ಆತನ ಖಾತೆಗೆ ಹಾಕಿದ್ದಾಳೆ. ಕೆಲ ದಿನಗಳ ನಂತ್ರ ಮತ್ತೆ ಹಣ ಕೇಳಿದ್ದಾನೆ ಕಿರಣ್. ಮಹಿಳೆ ತನ್ನ ಬಳಿ ಹಣವಿಲ್ಲ ಎಂದಿದ್ದಾಳೆ. ಬಂಗಾರ ನೀಡುವಂತೆ ಕೇಳಿದ್ದಾನೆ. ಇದಕ್ಕೆ ಒಪ್ಪಿದ ಮಹಿಳೆ ಬಂಗಾರ ತೆಗೆದುಕೊಂಡು ಹೋಗುವಂತೆ ಹೇಳಿದ್ದಾಳೆ. ಕ್ಯಾಬ್ ಚಾಲಕ ಮನೆಗೆ ಬಂದಾಗ ಮಹಿಳೆಗೆ ಆತ ತನ್ನ ಬಾಲ್ಯ ಸ್ನೇಹಿತನಲ್ಲ ಎಂಬ ಸತ್ಯ ಗೊತ್ತಾಗಿದೆ. ಆದ್ರೆ ಆಗ್ಲೇ ಸಮಯ ಮೀರಿತ್ತು. ಕ್ಯಾಬ್ ಚಾಲಕ ಮಹಿಳೆಗೆ ಬ್ಲಾಕ್ ಮೇಲ್ ಮಾಡಲು ಶುರು ಮಾಡಿದ್ದಾನೆ. ಅಲ್ಲದೆ ಆಕೆಯಿಂದ ಬಂಗಾರ ಪಡೆದಿದ್ದಾನೆ.
ಬ್ಲಾಕ್ಮೇಲ್ ಮಾಡಿದ ಚಾಲಕ : ಮಹಿಳೆ ಈ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಿದ್ರೆ ಆಕೆ ಕುಟುಂಬದ ಬಗ್ಗೆ ಹಾಗೂ ಆಕೆ ಬಗ್ಗೆ ಎಲ್ಲ ಮಾಹಿತಿಯನ್ನು ಸಾಮಾಜಿಕ ಜಾಲತಾಣದಲ್ಲಿ ಹಾಕ್ತೇನೆಂದು ಚಾಲಕ ಬ್ಲಾಕ್ ಮೇಲ್ ಮಾಡಿದ್ದಾನೆ. ಆಕೆ ಬಳಿ ಇದ್ದ 960 ಗ್ರಾಂ ಬಂಗಾರವನ್ನೂ ತೆಗೆದುಕೊಂಡಿದ್ದಾನೆ. ಉಬರ್ ಚಾಲಕನ ಮೋಸ ಇಲ್ಲಿಗೆ ನಿಲ್ಲಲಿಲ್ಲ. ಆಗಾಗ ಕರೆ ಮಾಡಿ ಹಣ ನೀಡುವಂತೆ ಕೇಳ್ತಿದ್ದ ಎನ್ನಲಾಗಿದೆ. ಇದ್ರಿಂದ ಬೇಸತ್ತ ಮಹಿಳೆ ಧೈರ್ಯ ಮಾಡಿ ಪೊಲೀಸರಿಗೆ ದೂರು ನೀಡಿದ್ದಾಳೆ. ಪ್ರಕರಣ ದಾಖಲಿಸಿಕೊಂಡು ಆರೋಪಿಯನ್ನು ಬಂಧಿಸಿದ್ದಾರೆ. ಅಷ್ಟೇ ಅಲ್ಲ ಮಹಿಳೆಗೆ ಆಕೆಯ ಬಂಗಾರವನ್ನು ವಾಪಸ್ ನೀಡಿದ್ದಾರೆ.
ಅಪ್ಪನನ್ನೇ ಮೀರಿಸಿದ ಮಗಳು: ರಿಲಯನ್ಸ್‌ನ ಎಲ್ಲ ಕಂಪನಿಗಳಿಗಿಂತ ರಿಲಯನ್ಸ್ ರೀಟೇಲ್ ಮೌಲ್ಯವೇ ಹೆಚ್ಚು!
ಎಚ್ಚರದಿಂದಿರಿ : ಸಾರ್ವಜನಿಕ ಪ್ರದೇಶದಲ್ಲಿ ಮಹಿಳೆಯರು ಸೇರಿದಂತೆ ಪ್ರತಿಯೊಬ್ಬರೂ ಎಚ್ಚರಿಕೆಯಿಂದ ವ್ಯವಹರಿಸಬೇಕು. ನಿಮ್ಮ ವೈಯಕ್ತಿಕ ವಿಷ್ಯಗಳನ್ನು ಎಂದಿಗೂ ಬಹಿರಂಗವಾಗಿ ಮಾತನಾಡಬಾರದು. ಕ್ಯಾಬ್,ಆಟೋ ಅಥವಾ ಸಾರ್ವಜನಿಕ ವಾಹನದಲ್ಲಿ ಚಲಿಸುವ ವೇಳೆ ಫೋನ್ ನಲ್ಲಿ ನೀವು ಮಾತನಾಡ್ತಿದ್ದರೆ ಸುತ್ತಮುತ್ತ ಜನರಿದ್ದಾರೆ, ನಿಮ್ಮ ಮಾತುಗಳನ್ನು ಆಲಿಸುತ್ತಿದ್ದಾರೆ ಎಂಬುದನ್ನು ಗಮನದಲ್ಲಿಟ್ಟುಕೊಂಡು ಮಾತನಾಡಿ. ಇಲ್ಲವೆಂದ್ರೆ ಈ ಮಹಿಳೆ ರೀತಿಯಲ್ಲೇ ನೀವು ಹಣ, ಒಡವೆ ಕಳೆದುಕೊಳ್ಳಬೇಕಾಗುತ್ತದೆ. ಬ್ಲಾಕ್ಮೇಲ್ ಗೆ ಒಳಗಾಗುವ ಸಾಧ್ಯತೆ ಇರುತ್ತದೆ.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.