92 ವರ್ಷದ ಅಜ್ಜಿಯೊಬ್ಬರು 7 ಅಡಿ ಎತ್ತರದ ಗೇಟ್ ಏರಿ ನರ್ಸಿಂಗ್ ಹೋಮ್‌ನಿಂದ ತಪ್ಪಿಸಿಕೊಂಡಿದ್ದಾರೆ. ಈ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಅಜ್ಜಿಯ ಗಟ್ಟಿತನಕ್ಕೆ ಎಲ್ಲೆಡೆ ಪ್ರಶಂಸೆ ವ್ಯಕ್ತವಾಗುತ್ತಿದೆ.
90ರಲ್ಲಿ ಗೇಟು ಗೇಟು ಹಾರುವುದು ಬಿಡಿ 35-45 ದಾಟಿದ ಹೆಚ್ಚಿನವರಿಗೆ ಕೂತಲ್ಲೇ ಸ್ವಲ್ಪ ಹೊತ್ತು ಕುಳಿತರೆ ಎದ್ದು ನಡೆದಾಡಲು ಕಷ್ಟಪಡುತ್ತಾರೆ. ಅಯ್ಯೋ ಅಮ್ಮ ಎಂದು ಹೇಳುತ್ತಾ ನೆಲದಿಂದ ಮೇಲೇಳುತ್ತಾರೆ. ಆದರೆ ಇಲ್ಲೊಬ್ಬರು 92 ವರ್ಷದ ಅಜ್ಜಿ ತಮ್ಮ 92ರ ಹರೆಯದಲ್ಲಿ 7 ಅಡಿ ಎತ್ತರದ ಗೇಟನ್ನು ಏರಿ ಎಸ್ಕೇಪ್ ಆಗಿದ್ದು, ಅವರ ಸ್ಟೋರಿ ಈಗ ಸಾಮಾಜಿಕ ಜಾಲತಾಣದಲ್ಲಿ ಸಂಚಲನ ಸೃಷ್ಟಿಸಿದೆ.
92 ವರ್ಷದ ಅಜ್ಜಿಯೊಬ್ಬರು ಕೇವ 24 ಸೆಕೆಂಡ್‌ನಲ್ಲಿ 7 ಅಡಿ ಎತ್ತರದ ಗೇಟ್ ಏರಿ ನರ್ಸಿಂಗ್ ಹೋಮ್‌ನಿಂದ ತಪ್ಪಿಸಿಕೊಂಡಂತಹ ಅಚ್ಚರಿಯ ಘಟನೆ ಪೂರ್ವ ಚೀನಾದಲ್ಲಿ ನಡೆದಿದ್ದು, ಇದರ ವೀಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ಜೊತೆಗೆ ಅಜ್ಜಿಯ ಗಟ್ಟಿತನಕ್ಕೆ ಎಲ್ಲೆಡೆ ಪ್ರಶಂಸೆ ವ್ಯಕ್ತವಾಗುತ್ತಿದ್ದು, ಅಜ್ಜಿಯ ಈ ವೀಡಿಯೋ ಚೀನಾದ ಸಾಮಾಜಿಕ ಜಾಲತಾಣದಲ್ಲಿ ಸಂಚಲನ ಸೃಷ್ಟಿಸಿದೆ. ಅಂದಹಾಗೆ ಇದು 2024ರ ಜುಲೈನಲ್ಲಿ ನಡೆದ ಘಟನೆಯಾಗಿದ್ದು, ಇದರ ವೀಡಿಯೋ ಈಗ ಸೋಶಿಯಲ್ ಮೀಡಿಯಾದಲ್ಲಿ ಹವಾ ಸೃಷ್ಟಿಸಿದೆ.
ದಿ ಸ್ಟ್ರೈಟ್ಸ್ ಟೈಮ್ಸ್ ವರದಿಯ ಪ್ರಕಾರ, ಈ ವೀಡಿಯೊವನ್ನು ಮೊದಲ ಬಾರಿಗೆ ಚೀನಾದ ಸಾಮಾಜಿಕ ಮಾಧ್ಯಮ ವೇದಿಕೆ ವೀಬೊದಲ್ಲಿ ಪೋಸ್ಟ್ ಮಾಡಲಾಗಿತ್ತು. ಇದರಲ್ಲಿ ವೃದ್ಧ ಮಹಿಳೆಯೊಬ್ಬರು ಎರಡೂವರೆ ಮೀಟರ್‌ನ ಅಂದರೆ ಸುಮಾರು 7 ಅಡಿ ಎತ್ತರದ ಕಬ್ಬಿಣದ ಗೇಟನ್ನು ಸಣ್ಣ ಮಕ್ಕಳಂತೆ ಸುಲಭವಾಗಿ ಏರಿ ಮತ್ತೊಂದು ಬದಿಗೆ ಇಳಿದು ಎಸ್ಕೇಪ್ ಆಗುವುದನ್ನು ನೋಡಬಹುದು. ಕೇವಲ 24 ಸೆಕೆಂಡ್‌ನಲ್ಲಿ ಈ ಘಟನೆ ನಡೆದಿದೆ.
ಚೀನಾದ ಶಾಂಡೋಂಗ್ ಪ್ರಾಂತ್ಯದಲ್ಲಿಈ ಘಟನೆ ನಡೆದಿದೆ. ಈ ವಿಚಾರಕ್ಕೆ ಸಂಬಂಧಿಸಿದಂತೆ ಚೀನಾದ ನ್ಯೂಸ್ ಪೇಪ್ ದಿ ಪೇಪರ್ ವರದಿ ಮಾಡಿದ್ದು, ಯಂತೈ ನಗರದಲ್ಲಿರುವ ವೃದ್ಧೆ ತಪ್ಪಿಸಿಕೊಂಡ ನರ್ಸಿಂಗ್ ಹೋಮ್‌ನ ನಿರ್ದೇಶಕ ಹೇಳಿಕೆಯನ್ನು ಪ್ರಕಟಿಸಿದೆ. ಅವರು ಹೇಳುವಂತೆ 1.6 ಮೀಟರ್ ಎತ್ತರ ಇರುವ ವೃದ್ಧ ಮಹಿಳೆ ತೀವ್ರವಾದ ಅಲ್ಜೈಮರ್ ಸಮಸ್ಯೆಯಿಂದ ಬಳಲುತ್ತಿದ್ದಾರೆ., ಈ ಅಜ್ಜಿಗೆ ವ್ಯಾಯಾಮ ಹಾಗೂ ಎತ್ತರವನ್ನು ಏರುವುದರಲ್ಲಿ ಬಹಳ ಆಸಕ್ತಿ ಇದೆ. ಹೀಗೆ ಗೇಟ್ ಏರಿ ನರ್ಸಿಂಗ್ ಹೋಮ್‌ನಿಂದ ತಪ್ಪಿಸಿಕೊಂಡು ಹೋದ ಈಕೆಯನ್ನು ಸಮೀಪದಲ್ಲೇ ನರ್ಸಿಂಗ್ ಹೋಮ್‌ನ ಸಿಬ್ಬಂದಿ ಪತ್ತೆ ಮಾಡಿದ್ದಾರೆ ಎಂದು ಮಾಹಿತಿ ನೀಡಿದ್ದಾರೆ.
ಆದರೆ ಈ ವೀಡಿಯೋಗೆ ನೆಟ್ಟಿಗರು ಸ್ವಾರಸ್ಯಕರ ಕಾಮೆಂಟ್ ಮಾಡಿದ್ದಾರೆ. ಅನೇಕರು 92ರ ಹರೆಯದಲ್ಲಿ ಅಜ್ಜಿಯ ಶಕ್ತಿ ಸಾಮರ್ಥ್ಯವನ್ನು ಪ್ರಶಂಸಿದ್ದಾರೆ. ಈ ರೀತಿ ಮಾಡಲು ನಿಮ್ಮ ದೇಹದ ಮೇಲ್ಬಾಗ ಎಷ್ಟು ಸಧೃಡವಾಗಿರಬೇಕು ಎಂಬುದು ನಿಮಗೆ ಗೊತ್ತಾ ಎಂದು ಒಬ್ಬರು ಕಾಮೆಂಟ್ ಮಾಡಿದ್ದಾರೆ. ಮತ್ತೆ ಕೆಲವರು ಯೂ ಗೋ ಗರ್ಲ್ ಎಂದು ಕಾಮೆಂಟ್ ಮಾಡಿದ್ದಾರೆ. ಮನಸ್ಸಿದಲ್ಲಿ ಮಾರ್ಗ ಎಂದು ಮತ್ತೊಬ್ಬರು ಕಾಮೆಂಟ್ ಮಾಡಿದ್ದಾರೆ. ಈ ಕಾರಣಕ್ಕಾದರೂ ನೀವು ವರ್ಕೌಟ್ ಮಾಡಲೇಬೇಕು. ಒಂದು ವೇಳೆ ನಿಮ್ಮ ಮನೆಯವರು ನಿಮ್ಮನ್ನು ನರ್ಸಿಂಗ್ ಹೋಮ್‌ನಲ್ಲಿ ಬಿಟ್ಟು ಬಿಟ್ಟರೆ ನೀವು ಆಗ ಹೀಗೆ ಗೇಟನ್ನು ಹಾರಿ ಬಂದು ಬಿಡಬಹುದು ಎಂದು ಒಬ್ಬರು ತಮಾಷೆಯಾಗಿ ಕಾಮೆಂಟ್ ಮಾಡಿದ್ದಾರೆ. ಅದೇನೆ ಇರಲಿ 92ನೇ ವಯಸ್ಸಿನಲ್ಲಿ ಅಜ್ಜಿಯ ಚುರುಕುತನ ಹಾಗೂ ಶಕ್ತಿ ಸಾಮರ್ಥ್ಯಕ್ಕೆ ಮೆಚ್ಚಲೇಬೇಕು ಈ ಬಗ್ಗೆ ನಿಮ್ಮ ಅಭಿಪ್ರಾಯವೇನು ಕಾಮೆಂಟ್ ಮಾಡಿ.
ಅಜ್ಜಿ ಗೇಟ್ ಏರಿ ಎಸ್ಕೇಪ್ ಆಗುತ್ತಿರುವ ವೀಡಿಯೋ ಇಲ್ಲಿದೆ ನೋಡಿ
92 year old woman climbed 2m high gate to escape a nursing home in China pic.twitter.com/POZVWGPfXC
— Women Posting W's (@womenpostingws)