Mothers Day 2023: ಅಮ್ಮಂದಿರು ಯಾವ ವ್ಯಾಯಾಮ ಮಾಡೋದು ಬೆಸ್ಟ್‌

By Suvarna News  |  First Published May 13, 2023, 4:33 PM IST

ಅಮ್ಮನಾದವಳು ತನ್ನ ಫಿಟ್ನೆಸ್ ಮರೆಯಬಾರದು. ಆಕೆ ಮಕ್ಕಳು, ಕುಟುಂಬದ ಜೊತೆ ತನ್ನ ಆರೋಗ್ಯ, ಆಹಾರದ ಬಗ್ಗೆಯೂ ಗಮನ ನೀಡ್ಬೇಕು. ಅಮ್ಮಂದಿರ ದಿನದ ಈ ಸಂದರ್ಭದಲ್ಲಿ ಯಾವ ವ್ಯಾಯಾಮ ಬೆಸ್ಟ್ ಎಂದು ನಾವು ಹೇಳ್ತೇವೆ.


ಭಾನುವಾರ ಮೇ 14ರಂದು ತಾಯಂದಿರ ದಿನವನ್ನು ಆಚರಿಸಲಾಗುತ್ತದೆ. ಈ ದಿನ ತಾಯಂದಿರಿಗೆ ಶುಭಕೋರಲು, ಉಡುಗೊರೆ ನೀಡಲು ಮಕ್ಕಳು ತಯಾರಿ ನಡೆಸಿದ್ದಾರೆ. ಅಮ್ಮನಾದವಳು ತನ್ನೆಲ್ಲ ಜವಾಬ್ದಾರಿಯನ್ನು ಅಚ್ಚುಕಟ್ಟಾಗಿ ನಿಭಾಯಿಸುತ್ತಾಳೆ. ಮಕ್ಕಳ ಆರೋಗ್ಯ, ಆರೈಕೆ, ಶಿಕ್ಷಣಕ್ಕೆ ತನ್ನೆಲ್ಲ ಜೀವನವನ್ನು ತಾಯಿ ಸೆವೆಸುತ್ತಾಳೆ. ಈ ಎಲ್ಲ ಕೆಲಸದ ಮಧ್ಯೆ ಆಕೆ ತನ್ನ ಆರೋಗ್ಯವನ್ನು ಮರೆಯುತ್ತಾಳೆ. ಮಕ್ಕಳ ಜೊತೆ ಹೆಚ್ಚು ವರ್ಷ ಆರೋಗ್ಯವಾಗಿರಬೇಕೆಂದ್ರೆ ತಾಯಿಯಾದವಳು ತನ್ನ ಆರೈಕೆ ಮಾಡೋದನ್ನು ಮರೆಯಬಾರದು. ವಯಸ್ಸಾದಂತೆ ಮೈ – ಕೈ ನೋವು, ಹಾರ್ಮೋನ್ ಬದಲಾವಣೆಯಿಂದ ಕೆಲವೊಂದು ಆರೋಗ್ಯ ಸಮಸ್ಯೆ ಕಾಡುವ ಜೊತೆಗೆ ತೂಕ ಹೆಚ್ಚಾಗುತ್ತದೆ. ಹೊಟ್ಟೆಯ ಸುತ್ತ ಕೊಬ್ಬು ಸಂಗ್ರಹವಾಗುತ್ತದೆ. 

ಹೊಟ್ಟೆ (Stomach) ಯ ಕೊಬ್ಬು ಹೃದ್ರೋಗ, ಮಧುಮೇಹ, ಬೊಜ್ಜು ಮತ್ತು ಹಾರ್ಮೋನು (Hormone) ಗಳ ಅಸಮತೋಲನದ ಅಪಾಯಕ್ಕೆ ಕಾರಣವಾಗುತ್ತದೆ. ಹೊಟ್ಟೆಯ ಕೊಬ್ಬನ್ನು ಕರಗಿಸಿ, ಫಿಟ್ ಆಗಿರುವುದು ಎಲ್ಲ ವಯಸ್ಸಿನ ಮಹಿಳೆಯರಿಗೂ ಅಗತ್ಯ. ತಾಯಂದಿರ ದಿನದ ಸಂದರ್ಭದಲ್ಲಿ ಅಮ್ಮನಾದವಳು  ತೂಕ (Weight) ವನ್ನು ನಿಯಂತ್ರಣದಲ್ಲಿಡಲು ಯಾವ ವ್ಯಾಯಾಮ ಮಾಡ್ಬೇಕು ಎಂಬುದನ್ನು ನಾವಿಂದು ಹೇಳ್ತೇವೆ.  ಈ ವ್ಯಾಯಾಮ ಮಾಡಲು ನೀವು ಹೆಚ್ಚಿನ ಸಮಯ ವಿನಿಯೋಗಿಸಬೇಕಾಗಿಲ್ಲ. ಹಾಸಿಗೆಯಲ್ಲಿ ಮಲಗಿಯೇ ನೀವು ಈ ಮೂರು ವ್ಯಾಯಾಮವನ್ನು ಮಾಡ್ಬಹುದು. ಈ ವ್ಯಾಯಾಮಗಳು ಕೋರ್ ಸ್ನಾಯುಗಳನ್ನು ಬಲಪಡಿಸುತ್ತದೆ ಮತ್ತು ಕೊಬ್ಬನ್ನು ವೇಗವಾಗಿ ಕರಗಿಸುವ ಕೆಲಸವನ್ನು ಮಾಡುತ್ತದೆ. 

Latest Videos

undefined

Mothers Day : ಅಮ್ಮನಿಗೆ ಹೀಗ್ ಮಾಡಿದರೆ ಸ್ಪೆಷಲ್ ಫೀಲ್ ಆಗುತ್ತೆ

ಲೆಗ್ ಸರ್ಕಲ್ಸ್ (Leg Circles) : ಪ್ರತಿ ದಿನ ನೀವು ಲೆಗ್ ಸರ್ಕಲ್ಸ್ ಮಾಡೋದ್ರಿಂದ ತೂಕ ಕಡಿಮೆಯಾಗುತ್ತದೆ. ಹೊಟ್ಟೆಯ ಬೊಜ್ಜು ಕರಗುತ್ತದೆ. ಕಾಲು ಹಾಗೂ ತೊಡೆಯಲ್ಲಿರುವ ಕೊಬ್ಬು ಇಳಿಯುತ್ತದೆ. ಸ್ನಾಯುಗಳ ಬಲಗೊಳ್ಳುತ್ತವೆ.
ಈ ವ್ಯಾಯಾಮವನ್ನು ಮಾಡಲು ನೀವು ಹಾಸಿಗೆ ಮೇಲೆ ಬೆನ್ನು ಕೆಳಗೆ ಹಾಕಿ ಮಲಗಬೇಕು. ಕಾಲುಗಳು ನೇರವಾಗಿರಬೇಕು. ಕೈಗಳನ್ನು ಪಕ್ಕದಲ್ಲಿ ಇಡಬೇಕು. ನಂತ್ರ ಎರಡೂ ಕಾಲುಗಳನ್ನು ನೆಲದಿಂದ 3 ಇಂಚು ಎತ್ತರಕ್ಕೆ ಎತ್ತಬೇಕು. ಎರಡೂ ಕಾಲುಗಳನ್ನು ಕ್ಲಾಕ್ ವೈಜ್ ಹಾಗೂ ಎಂಟಿ ಕ್ಲಾಕ್ ವೈಜ್ ನಲ್ಲಿ ತಿರುಗಿಸಿ. ನಂತ್ರ ಕಾಲನ್ನು ಕೆಳಗಿಡಿ. ಕನಿಷ್ಠ 15 ಬಾರಿ ಇದೇ ವ್ಯಾಯಾಮವನ್ನು ಮಾಡಿ. 

ಬಟರ್ಫ್ಲೈ ಸಿಟ್ ಅಪ್ : ಮೊದಲು ಹಾಸಿಗೆ ಮೇಲೆ ಬೆನ್ನನ್ನು ಕೆಳಗೆ ಹಾಕಿ ಮಲಗಬೇಕು. ನಂತ್ರ ಮೊಣಕಾಲನ್ನು ಬಗ್ಗಿಸಿ ಎರಡೂ ಪಾದಗಳನ್ನು ಸೇರಿಸಬೇಕು. ಎರಡೂ ಕೈಗಳನ್ನು ಕತ್ತಿನ ಹಿಂದೆ ಹಿಡಿದುಕೊಳ್ಳಿ. ನಂತ್ರ ಕತ್ತನ್ನು ಎತ್ತಿ, ಬೆನ್ನನ್ನು ಬಾಗಿಸಿ ಕಾಲಿನ ತುದಿಯನ್ನು ಕೈಗಳಿಂದ ಮುಟ್ಟುವ ಪ್ರಯತ್ನ ಮಾಡಿ. ಮತ್ತೆ ಹಿಂದಿನ ಸ್ಥಿತಿಗೆ ಬನ್ನಿ. ಈ ವ್ಯಾಯಾಮವನ್ನೂ 15 ಬಾರಿ ಮಾಡಬೇಕು. ಈ ವ್ಯಾಯಾಮ ಕೋರ್ನ ಸ್ನಾಯುಗಳನ್ನು ಬಲಗೊಳಿಸುತ್ತದೆ. ಎಬಿಎಸ್ ಅನ್ನು ಟೋನ್ ಮಾಡಲು ಇದು ಅತ್ಯುತ್ತಮ ವ್ಯಾಯಾಮವಾಗಿದೆ.

Mothers Day: ಉದ್ಯೋಗ ಮಾಡುವ ತಾಯಂದಿರಿಗೆ ಸಂಶೋಧನೆ ನೀಡಿದ ಖುಷಿ ಸುದ್ದಿ

ಈ ವ್ಯಾಯಾಮ ಯಾರು ಮಾಡಬಾರದು ? : ಈ ವ್ಯಾಯಾಮಗಳು ಸ್ನಾಯು ಬಲಪಡಿಸಿ, ಬೊಜ್ಜು ಇಳಿಸುವ ಕೆಲಸ ಮಾಡುತ್ತದೆ. ಆದ್ರೆ ಎಲ್ಲರೂ ಈ ವ್ಯಾಯಾಮ ಮಾಡಲು ಸಾಧ್ಯವಿಲ್ಲ. ಕುತ್ತಿಗೆ ನೋವು, ಭುಜದ ನೋವು ಹಾಗೂ ಬೆನ್ನುಮೂಳೆಯ ಸಮಸ್ಯೆ ಇರುವ ಮಹಿಳೆಯರು ಈ ವ್ಯಾಯಾಮ ಮಾಡುವಂತಿಲ್ಲ. 

ಪೂರ್ವೋತ್ತನಾಸನ : ಈ ಯೋಗಾಸನವನ್ನು ಕೂಡ ನೀವು ಹಾಸಿಗೆ ಮೇಲೆಯೇ ಮಾಡಬಹುದು. ಇದು ಪುಶ್-ಅಪ್ ಸ್ಥಾನಕ್ಕೆ ವಿರುದ್ಧವಾಗಿದೆ. ಈ ಆಸನ ಬೆನ್ನು, ಭುಜ, ತೋಳು ಮತ್ತು ಬೆನ್ನುಮೂಳೆ, ಮಣಿಕಟ್ಟು ಹಾಗೂ ತೊಡೆಸಂದು ಸ್ನಾಯುಗಳಿಗೆ ವ್ಯಾಯಾಮ ನೀಡುತ್ತದೆ. ಅಲ್ಲಿನ ಬೊಜನ್ನು ಕರಗಿಸಲು ನೆರವಾಗುತ್ತದೆ. 

click me!