ಝೆಲ್ ಝೆಲ್ ಅಂತಾ ಮನೆ ತುಂಬಾ ಸದ್ದು ಮಾಡ್ತಾ ಮಹಿಳೆ ಓಡಾಡ್ತಿದ್ದರೆ ಮನೆಯಲ್ಲೊಂದು ಧನಾತ್ಮಕ ಶಕ್ತಿಯ ಓಡಾಟವಿರುತ್ತದೆ. ಹಿಂದೂ ಧರ್ಮದಲ್ಲಿ ಬೆಳ್ಳಿ ಕಾಲ್ಗೆಜ್ಜೆಗೆ ಮಹತ್ವದ ಸ್ಥಾನವಿದೆ. ಬರೀ ಶಾಸ್ತ್ರ ದೃಷ್ಟಿಯಿಂದ ಮಾತ್ರವಲ್ಲ ಆರೋಗ್ಯ ದೃಷ್ಟಿಯಿಂದ ಇದನ್ನು ಧರಿಸಿದ್ರೆ ಲಾಭ ಹಲವು.
ಬೆಳ್ಳಿಯು ಸಮೃದ್ಧಿಯ ಸಂಕೇತವಾಗಿದೆ. ಭಾರತದಲ್ಲಿ ಅನೇಕ ಮಹಿಳೆಯರು ಬೆಳ್ಳಿಯ ಆಭರಣಗಳನ್ನು ಧರಿಸುತ್ತಾರೆ. ಸೊಂಟದ ಕೆಳ ಭಾಗಕ್ಕೆ ಬೆಳ್ಳಿ ಆಭರಣ ಧರಿಸುವುದು ಶುಭವೆಂದು ನಂಬಲಾಗಿದೆ. ವಿವಾಹಿತ ಮಹಿಳೆಯರು ಕಾಲುಂಗುರ ಮತ್ತು ಕಾಲ್ಗೆಜ್ಜೆಯನ್ನು ಧರಿಸಿದ್ರೆ ಮಕ್ಕಳು ಕಾಲ್ಗೆಜ್ಜೆಯನ್ನು ಧರಿಸ್ತಾರೆ. ಬೆಳ್ಳಿ ಕಾಲ್ಗೆಜ್ಜೆ ಕಾಲಿನ ಸೌಂದರ್ಯವನ್ನು ಮಾತ್ರ ಹೆಚ್ಚಿಸೋದಿಲ್ಲ, ಮಹಿಳೆಯರ ಆರೋಗ್ಯ ಕಾಪಾಡುವ ಕೆಲಸವನ್ನೂ ಮಾಡುತ್ತದೆ.
ಭಾರತ (India) ದಲ್ಲಿ ಬೆಳ್ಳಿ ಕಾಲ್ಗೆಜ್ಜೆಗೆ ಸಾಕಷ್ಟು ಬೇಡಿಕೆ ಇದೆ. ಬೆಳ್ಳಿ ಮಾರುಕಟ್ಟೆಯಲ್ಲಿ ಕಾಲ್ಗೆಜ್ಜೆ (Anklets) ಪಾಲು ಶೇಕಡಾ 34ಕ್ಕಿಂತ ಹೆಚ್ಚಿದೆ. ಕಾಲಿಗೆ ಕಾಲ್ಗೆಜ್ಜೆ ಧರಿಸುವುದ್ರಿಂದ ಸಾಕಷ್ಟು ಪ್ರಯೋಜನವಿದೆ. ಧನಾತ್ಮಕ ಶಕ್ತಿ, ರಕ್ತ ಪರಿಚಲನೆ ಮತ್ತು ಮುಟ್ಟಿನ ನೋವನ್ನು ಕಡಿಮೆ ಮಾಡಲು ಕಾಲ್ಗೆಜ್ಜೆ ಸಹಾಯ ಮಾಡುತ್ತದೆ. ಜ್ಯೋತಿಷ್ಯ (Astrology) ದ ಪ್ರಕಾರ, ಬೆಳ್ಳಿಯು ಚಂದ್ರನಿಗೆ ಸಂಬಂಧಿಸಿದೆ. ಬೆಳ್ಳಿಯು ಶಿವನ ಕಣ್ಣುಗಳಿಂದ ಹುಟ್ಟಿಕೊಂಡಿದೆ ಎಂದು ನಂಬಲಾಗಿದೆ. ಈ ಕಾರಣದಿಂದಾಗಿ ಬೆಳ್ಳಿಯನ್ನು ಸಮೃದ್ಧಿಯ ಸಂಕೇತವೆಂದು ಪರಿಗಣಿಸಲಾಗುತ್ತದೆ. ಭಾರತೀಯ ಸಂಸ್ಕೃತಿಯಲ್ಲಿ ಬೆಳ್ಳಿಯ ಕಾಲ್ಗೆಜ್ಜೆಗೆ ವಿಶೇಷ ಪ್ರಾಮುಖ್ಯತೆ ಇದೆ. ಈಜಿಪ್ಟ್ ಮತ್ತು ಮಧ್ಯಪ್ರಾಚ್ಯ ದೇಶಗಳಲ್ಲಿ ಇದನ್ನು ಆರೋಗ್ಯ ದೃಷ್ಟಿಯಿಂದ ನೋಡಲಾಗ್ತಿತ್ತು.
ಮನೆಯಲ್ಲಿ ಮಡದಿ ಹೀಗಿದ್ದರೆ ಲಕ್ ನಿಮಗೆ ಒಲಿಯೋದು ಗ್ಯಾರಂಟಿ ಅಂತಾನೆ ಚಾಣಕ್ಯ!
ಬೆಳ್ಳಿಯು ಪ್ರತಿಕ್ರಿಯಾತ್ಮಕ ಲೋಹವಾಗಿದೆ. ಅದು ಒಬ್ಬರ ದೇಹದಿಂದ ಹೊರಸೂಸುವ ಶಕ್ತಿಯನ್ನು ಪ್ರತಿಬಿಂಬಿಸುತ್ತದೆ ಮತ್ತು ಅದನ್ನು ಹಿಂತಿರುಗಿಸುತ್ತದೆ. ನಮ್ಮ ಹೆಚ್ಚಿನ ಶಕ್ತಿಯು ನಮ್ಮ ದೇಹವನ್ನು ಕೈ ಮತ್ತು ಪಾದಗಳ ಮೂಲಕ ಬಿಡುತ್ತದೆ ಮತ್ತು ಬೆಳ್ಳಿ, ಕಂಚಿನಂತಹ ಲೋಹಗಳು ತಡೆಗೋಡೆಯಾಗಿ ಕಾರ್ಯನಿರ್ವಹಿಸುತ್ತವೆ. ಇದು ಶಕ್ತಿಯು ನಮ್ಮ ದೇಹಕ್ಕೆ ಮರಳಲು ಸಹಾಯ ಮಾಡುತ್ತದೆ. ಇದು ಹೆಚ್ಚು ಸಕಾರಾತ್ಮಕತೆ ಮತ್ತು ಉತ್ಸಾಹವನ್ನು ಪಡೆಯಲು ಸಹಾಯ ಮಾಡುತ್ತದೆ. ಬೆಳ್ಳಿಯು ಬ್ಯಾಕ್ಟೀರಿಯಾ ವಿರೋಧಿ ಗುಣಲಕ್ಷಣಗಳನ್ನು ಕೂಡ ಹೊಂದಿದೆ. ಬೆಳ್ಳಿ ಕಾಲ್ಗೆಜ್ಜೆ ಧರಿಸುವುದ್ರಿಂದ ಆಗುವ ಲಾಭಗಳು ಯಾವುವು ಅಂತಾ ನಾವಿಂದು ಹೇಳ್ತೇವೆ.
ಮುಟ್ಟಿನ ನೋವಿಗೆ ಪರಿಹಾರ : ಮಹಿಳೆಯರು ಕಾಲ್ಗೆಜ್ಜೆ ಧರಿಸುವುದ್ರಿಂದ ಗರ್ಭಾಶಯದ ಆರೋಗ್ಯ ಸುಧಾರಿಸುತ್ತದೆ. ಇದು ಸಂತಾನೋತ್ಪತ್ತಿ ಪ್ರಕ್ರಿಯೆಯನ್ನು ಬಲಪಡಿಸುತ್ತದೆ. ಮುಟ್ಟಿನ ನೋವನ್ನು ಕಡಿಮೆ ಮಾಡುತ್ತದೆ.
ರಕ್ತ ಪರಿಚಲನೆಗೆ ಸಹಕಾರಿ : ಮಹಿಳೆಯರು ಅಡುಗೆಮನೆಯಲ್ಲಿ ದೀರ್ಘ ಕಾಲ ನಿಂತು ಮನೆಕೆಲಸ ಮಾಡ್ತಾರೆ. ಇದ್ರಿಂದ ಪಾದಗಳಲ್ಲಿ ಊತ ಅಥವಾ ನೋವು ಕಾಣಿಸಿಕೊಳ್ಳುತ್ತದೆ. ಕೆಳ ಬೆನ್ನಿನಿಂದ ಕಾಲುಗಳವರೆಗೆ ನೋವು ಕಾಣಿಸಿಕೊಳ್ಳುತ್ತದೆ. ನೀವು ಬೆಳ್ಳಿ ಕಾಲ್ಗೆಜ್ಜೆ ಧರಿಸುವುದ್ರಿಂದ ರಕ್ತ ಪರಿಚಲನೆಗೆ ಸಹಾಯ ಮಾಡುತ್ತದೆ. ಅದು ನಮ್ಮ ದೇಹದ ಆಧಾರವಾಗಿರುವ ನಮ್ಮ ಪಾದಗಳ ಮೇಲೆ ಇರುವುದರಿಂದ ಅದು ನಮ್ಮ ಪಾದಗಳ ದೌರ್ಬಲ್ಯವನ್ನು ಶಮನಗೊಳಿಸುತ್ತದೆ.
ರೋಗ ನಿರೋಧಕ ಶಕ್ತಿ (Immunity Power) ಹೆಚ್ಚಳ : ಬೆಳ್ಳಿ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ. ಹಾರ್ಮೋನ್ ಮಟ್ಟವನ್ನು ಸಮತೋಲನಗೊಳಿಸುತ್ತದೆ.
ತೂಕ ಇಳಿಸಿಕೊಳ್ಳಬೇಕಾ? ಬೆಳ್ಳುಳ್ಳಿ ಟೀ ಕುಡಿದು ನೋಡಿ, ಮಾಡುತ್ತೆ ಕಮಾಲ್!
ದೇಹದ ಉಷ್ಣತೆ ನಿಯಂತ್ರಣ (Body Temperature Control) : ಬೆಳ್ಳಿ ದೇಹವನ್ನು ತಂಪಾಗಿಡಲು ಸಹಾಯ ಮಾಡುತ್ತದೆ. ಬೆಳ್ಳಿಯ ಕಾಲ್ಗೆಜ್ಜೆ ದೇಹದ ಉಷ್ಣತೆಯನ್ನು ನಿಯಂತ್ರಿಸುತ್ತವೆ. ಅತಿ ಉಷ್ಣತೆಯಿಂದ ಬಳಲುವ ಮಹಿಳೆಯರು ಕಾಲ್ಗೆಜ್ಜೆಯನ್ಬನು ಧರಿಸಬೇಕು.
ಧನಾತ್ಮಕ ಶಕ್ತಿ ಹೆಚ್ಚಳ (Positive Energgy): ಕಾಲುಗಳಿಗೆ ಬಂಗಾರದ ಕಾಲ್ಗೆಜ್ಜೆ ಧರಿಸಿದ್ರೆ ಅದು ದೇಹದಲ್ಲಿ ವಿದ್ಯುತ್ ಅಲೆಗಳು ಉಂಟಾಗುತ್ತವೆ. ಇದು ನಕಾರಾತ್ಮಕ ಪರಿಣಾಮಗಳನ್ನು ಉಂಟುಮಾಡುತ್ತದೆ. ಅದೇ ಬೆಳ್ಳಿ ಕಾಲ್ಗೆಜ್ಜೆ ನಕಾರಾತ್ಮಕ ಅಲೆಯನ್ನು ನಿಯಂತ್ರಿಸಿ ಧನಾತ್ಮಕ ಶಕ್ತಿಯನ್ನು ಹೆಚ್ಚಿಸುತ್ತದೆ.
ಪ್ರೀತಿ (love) ಹೆಚ್ಚಳ : ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಬೆಳ್ಳೆಯನ್ನು ಪ್ರೀತಿ ಎಂದು ಕರೆಯಲಾಗುತ್ತದೆ. ಬೆಳ್ಳಿ ಲೋಹದ ಆಭರಣಗಳನ್ನು ಧರಿಸುವುದು ವೈವಾಹಿಕ ಜೀವನದಲ್ಲಿ ಪ್ರೀತಿಯನ್ನು ಕಾಪಾಡಿಕೊಳ್ಳಲು ಸಹಾಯ ಮಾಡುತ್ತದೆ. ಬೆಳ್ಳಿಯು ತಾಳ್ಮೆ ಮತ್ತು ಪರಿಶ್ರಮವನ್ನು ತರುತ್ತದೆ. ಜೀವನದಲ್ಲಿ ಸಮತೋಲನ ಮತ್ತು ಭದ್ರತೆಯನ್ನು ತರುವ ಕೆಲಸವನ್ನೂ ಬೆಳ್ಳಿ ಮಾಡುತ್ತದೆ.